ಕರ್ನಾಟಕ ಬಜೆಟ್--2015. ಮುಖ್ಯಾಂಶಗಳು
ರಾಜ್ಯ ಸರ್ಕಾರದ ಬಜೆಟ್ ಮಂಡನೆಯಾಗಿದೆ. ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಘೋಷಣೆ ಮಾಡಿದ ಪ್ರಮುಖ ಅಂಶಗಳು ಇಲ್ಲಿವೆ.
2015-16ನೇ ಸಾಲಿನ ಬಜೆಟ್ ಗಾತ್ರ 1.42.534 ಕೋಟಿ
2014-15ರ ಬಜೆಟ್ ಗಾತ್ರ 1.38.008 ಕೋಟಿ
2015-16ನೇ ಸಾಲಿನ ಯೋಜನಾ ಗಾತ್ರ 72.597 ಕೋಟಿ
2014-15ರ ಯೋಜನಾ ಗಾತ್ರ 65.600 ಕೋಟಿ
ಕಳೆದ ವರ್ಷಕ್ಕಿಂತ 10.67ರಷ್ಟು ಏರಿಕೆ
ಕೃಷಿ – 3883 ಕೋಟಿ
ಮಣ್ಣಿನಿಂದ ಅನ್ನವ ತೆಗೆಯುವ ನಮ್ಮ ಕುಳಗಳು
ಸಗ್ಗವನೆ ದಿನವೂ ತೆರೆವ ಕೀಲಿ ಕೈಗಳು
ಕೃಷಿ ಸಮಗ್ರ ದೂರ ದೃಷ್ಟಿಗೆ ತಜ್ಞರ ವಿಷನ್ ಗ್ರೂಪ್ ರಚನೆ
ಲಘು ನೀರಾವರಿ ನೀತಿ 2015-16 ಜಾರಿ
ಉತೃಷ್ಟ ಜ್ಞಾನ ಕೇಂದ್ರ ರಚನೆ
ಬೆಳೆ ಸಮಸ್ಯೆ ನಿವಾರಣೆಗೆ ಕೃಷಿ ಅಭಿಯಾನ
ರೈತ ಸಂಪರ್ಕ ಕೇಂದ್ರದಲ್ಲಿ ಒಂದೇ ಸೂರಿನಲ್ಲಿ ಎಲ್ಲಾ ಸೇವೆ
78 ಹೊಸ ಸೇವಾ ಕೇಂದ್ರ ಆರಂಭ
ಭೂ ಸಮೃದ್ಧಿ ಕಾರ್ಯಕ್ರಮ – 4 ಜಿಲ್ಲೆಗಳಿಗೆ ವಿಸ್ತರಣೆ
ಕೆ.ಕಿಸಾನ್ ವಿದ್ಯುನ್ಮಾನ ಕೇಂದ್ರ ಸ್ಥಾಪನೆ – ರೈತ ಮಿತ್ರ ಕಾರ್ಡ್, ಮಣ್ಣು ಆರೋಗ್ಯ ಕಾರ್ಡ್ ನೀಡಿಕೆ
ಜಲಾನಯನ ನಿರ್ವಹಣೆಗೆ ಡಿಜಿಟಲ್ ಗ್ರಂಥಾಲಯ
ಸೂಕ್ತ ತಳಿ ಉತ್ತೇಜನಕ್ಕಾಗಿ ಸಂಶೋಧನೆ ಯೋಜನೆ
ಶಿವಮೊಗ್ಗ ಕೃಷಿ ವಿವಿಗೆ ಹೊಸ ಕ್ಯಾಂಪಸ್ ನಿರ್ಮಾಣ
ಮುಧೋಳ, ಮಂಡ್ಯದಲ್ಲಿ ಬೆಲ್ಲದ ಪಾರ್ಕ್ ಅಭಿವೃದ್ಧಿ
——————
ತೋಟಗಾರಿಕೆ – 760 ಕೋಟಿ
ಸಂಗ್ರಹಣಾ ಕೇಂದ್ರ, ಕೃಷಿ ಯಾಂತ್ರಿಕ ಸಲಕರಣೆಗಳಿಗೆ ಶೇಕಡ 90ರಷ್ಟು ಸಬ್ಸಿಡಿ
ರಾಷ್ಟ್ರೀಯ ತೋಟಗಾರಿಕಾ ಮಿಷನ್ ಅಡಿ ಕೃಷಿ ಉತ್ಪಾದಕ ಸಂಘಗಳ ಬಲಪಡಿಸುವಿಕೆ
ನೀರಾ ಇಳಿಸಲು ಅನುಮತಿ ನೀಡಲು ಅಬಕಾರಿ ನಿಯಮಕ್ಕೆ ತಿದ್ದುಪಡಿ
ಹಾಪ್‍ಕಾಮ್ಸ್ ಅಭಿವೃದ್ಧಿಗೆ ಗಣಕೀಕರಣ
ರೈತೋತ್ಪಾದಕ ಕೇಂದ್ರಗಳು, ಏಜೆನ್ಸಿಗಳು ಸಾವಯವ ಕೃಷಿಯಲ್ಲಿ ರಾಜ್ಯ ಸರ್ಕಾರದೊಂದಿಗೆ ಪಾಲುದಾರಿಕೆ
ಹಾವೇರಿ ಕಾಲೇಜಿನ ದೇವಿ ಹೊಸೂರು ಗ್ರಾಮದಲ್ಲಿ ತೋಟಗಾರಿಕೆ ಕಾಲೇಜು
ಮೈಸೂರಿನ ಕುಪ್ಪಣ್ಣ ಪಾರ್ಕ್, ದಾವಣಗೆರೆ ಜಿಲ್ಲೆ ಶಾಮನೂರು ಗ್ರಾಮ, ಬಳ್ಳಾರಿಯಲ್ಲಿ ಗಾಜಿನ ಮನೆ
—————
ಪಶು ಸಂಗೋಪನೆ – 1882 ಕೋಟಿ
ಪಶು ಭಾಗ್ಯ
ವಾಣಿಜ್ಯ ಬ್ಯಾಂಕ್‍ಗಳಿಂದ 1.2 ಲಕ್ಷದ ವರೆಗೆ ಸಾಲ
ಎಸ್‍ಸಿಎಸ್‍ಟಿ ಶೇಕಡ 33 ರಷ್ಟು ಸಬ್ಸಿಡಿ, ಉಳಿದವರಿಗೆ ಶೇಕ 25ರಷ್ಟಿ ಸಬ್ಸಿಡಿ
ಹಸು, ಕುರಿ, ಆಡು, ಹಂದಿ, ಕೋಳಿ ಸಾಕಣೆಗೆ ಪಶು ಭಾಗ್ಯ
ಸಹಕಾರಿ ಬ್ಯಾಂಕ್‍ಗಳಲ್ಲಿ ಶೂನ್ಯದರದಲ್ಲಿ ಶೇಕಡ 50ರಷ್ಟು ಸಾಲ
ಕುರಿಗಾಹಿ ಸುರಕ್ಷಾ ಯೋಜನೆ ಮುಂದುವರಿಕೆ
ಕುರಿಗಾಹಿ ಸುರಕ್ಷಾ ಯೋಜನೆಗೆ ಹೆಚ್ಚುವರಿಯಾಗಿ 5 ಕೋಟಿ ಅನುದಾನ
ಹಿತ್ತಲ ಕೋಳಿ ಸಾಕಾನೆಗೆ ಉತ್ತೇಜನ
ಕರ್ನಾಟಕ ಕುರಿ, ಉಣ್ಣೆ ಅಭಿವೃದ್ಧಿ ನಿಗಮಕ್ಕೆ 4 ಪಟ್ಟು ಹೆಚ್ಚು ಅನುದಾನ – 25 ಕೋಟಿ ಅನುದಾನ
ಗೋಶಾಲೆಗಳಿಗೆ 7 ಕೋಟಿ ಅನುದಾನ
ಗೋಮಾಳ, ಕಾವಲ್ ಭೂಮಿಗಳಲ್ಲಿ ಮೇವು ಉತ್ಪಾದನೆಗೆ 10 ಕೋಟಿ
ಉತ್ತರ ಕರ್ನಾಟಕದಲ್ಲಿ ಮುಂದಿನ 3 ವರ್ಷಗಳಲ್ಲಿ ಹೊಸದಾಗಿ 750 ಹಾಲು ಉತ್ಪಾದಕರ ಸಂಘಗಳ ಸ್ಥಾಪನೆ – 16 ಕೋಟಿ ಅನುದಾನ
ದೇವಣಿ, ಮಲೆನಾಡು ಗಿಡ್ಡ ಹಸುಗಳ ಸಂರಕ್ಷಣೆಗಾಗಿ 10 ಕೋಟಿ ವೆಚ್ಚದಲ್ಲಿ ಗೋಕುಲ ಗ್ರಾಮ ಸ್ಥಾಪನೆ
ಸಂಚಾರಿ ರೋಗ ನಿರ್ಧಾರ ಪ್ರಯೋಗಾಲಯ ಸ್ಥಾಪನೆ
ಬೀದರ್ ಜಿಲ್ಲೆಯಲ್ಲಿ ಮಿಲ್ಕ್ ಶೆಡ್ ಪ್ರದೇಶಾಭಿವೃದ್ಧಿ – 8 ಲಕ್ಷ ಲೀಟರ್ ಹಾಲು ಉತ್ಪಾದನೆಗೆ ಕ್ರಮ
ಸಂಕಷ್ಟದಲ್ಲಿರುವ ಕುರಿ, ಉಣ್ಣೆ ಉತ್ಪಾದನಾ ಸಹಕಾರ ಸಂಘಗಳಿಗೆ ಪ್ರೋತ್ಸಾಹ ಮುಂದುವರಿಕೆ – 20 ಕೋಟಿ
———————-
ರೇಷ್ಮೆ – 186 ಕೋಟಿ
ವಿಶಾಲ, ಜಿ-2, ಸುವರ್ಣ ಹಿಪ್ಪುನೇರಳೆ ತಳಿಗಳ ಅಭಿವೃದ್ಧಿ ಶೇಕಡ 75ರಷ್ಟು ಪ್ರೋತ್ಸಾಹ ಧನ
1 ಎಕರೆಗೆ 14 ಸಾವಿರ ರೂ.
ಉತ್ತರ ಕರ್ನಾಟಕದಲ್ಲಿ 2, ದಕ್ಷಿಣ ಕರ್ನಾಟಕದಲ್ಲಿ 3, ಒಟ್ಟು 5 ರೈತ ಉತ್ಪಾದಕ ಸಂಘಗಳ ಸ್ಥಾಪನೆ
ರಾಮನಗರ, ಶಿಡ್ಲಘಟ್ಟ, ಕೊಳ್ಳೇಗಾಲ ರೀಲೀಂಗ್ ಪಾರ್ಕ್ ಸ್ಥಾಪನೆ10 ಕೋಟಿ
ಉತ್ತರ ಕರ್ನಾಟಕದಲ್ಲಿ ರೀಲೀಂಗ್ ಯಂತ್ರ ಅಳವಡಿಕೆ
ಶೇಕಡ 90ರಷ್ಟು ಸಬ್ಸಿಡಿ
—————–
ಸಹಕಾರ – 1323 ಕೋಟಿ
ಶೂನ್ಯ ಬಡ್ಡಿದರದಲ್ಲಿ 3 ಲಕ್ಷದವರೆಗೆ ಅಲ್ಪಾವಧಿ ಕೃಷಿ ಸಾಲ
ಶೇಕಡ 3ರಷ್ಟು ಬಡ್ಡಿದರದಲ್ಲಿ 10 ಲಕ್ಷದವರೆಗೆ ಕೃಷಿ ಸಾಲ
23 ಲಕ್ಷ ರೈತರಿಗೆ 10 ಸಾವಿರ ಕೋಟಿ ಸಾಲ
ಯಶಸ್ವಿನಿ ಆರೋಗ್ಯ ರಕ್ಷಣಾ ಕವಚ ಯೋಜನೆಗೆ 110 ಕೋಟಿ
ಬಿಪಿಎಲ್ ಕುಟುಂಬದ ಸದಸ್ಯರು ಸಹಕಾರ ಸಂಘಗಳಿಗೆ ಸದಸ್ಯರಾದರೆ ಶೇರು ಧನದ ಮೊತ್ತ ಸರ್ಕಾರದಿಂದ ಭರಿಸುತ್ತೇ – 32 ಕೋಟಿ ಮೀಸಲು
ಕೃಷಿ ಉದ್ದೇಶದ ವಿಫಲ ಕೊಳವೆ ಬಾವಿಗಳ ಸಾಲ ಮನ್ನಾ – 2 ಕೋಟಿ
ಹಾವೇರಿ, ಚಾಮರಾಜನಗರದಲ್ಲಿ ಪ್ರತ್ಯೇಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸ್ಥಾಪನೆ
ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ ವಿಭಜನೆ
ದಾವಣಗೆರೆ, ಚಿತ್ರದುರ್ಗಕ್ಕೆ ಪ್ರತ್ಯೇಕ ಸಹಕಾರ ಹಾಲು ಒಕ್ಕೂಟ
650 ಕೋಟಿ ವೆಚ್ಚದಲ್ಲಿ 72 ಸ್ಥಳದಲ್ಲಿ ಹೊಸದಾಗಿ ಉಗ್ರಾಣ ಕೇಂದ್ರ ಸ್ಥಾಪನೆ
ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಉಡುಪಿ, ಬಳ್ಳಾರಿ, ಕಲಬುರಗಿ, ದಾವಣಗೆರೆ ಭಾನುವಾರದ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ – 7 ಕೋಟಿ
ನಿರ್ಮಲ ಮಾರುಕಟ್ಟೆ ಯೋಜನೆ ಆರಂಭ
ಮೈಸೂರು, ಶಿವಮೊಗ್ಗ, ಬಿಜಾಪುರ, ಬೆಂಗಳೂರಿನ ಸಿಂಗೇನ ಅಗ್ರಹಾರ ಪ್ರಮುಖ ಮಾರುಕಟ್ಟೆಗಳಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕ
ರೈತರಿಗೆ ಶುದ್ಧ ಕುಡಿಯುವ ನೀರು ನೀಡಲು – ಶುದ್ಧ ಕುಡಿಯುವ ನೀರಿನ ಘಟಕ
ಹುಬ್ಬಳ್ಳಿ, ತುಮಕೂರು, ಬೆಂಗಳೂರಿನ ದಾಸನಪುರ ಮಾರುಕಟ್ಟೆಯಲ್ಲಿ ಶೀತಲ ಗೃಹ ಘಟಕ
ಆಯ್ದ ಎಪಿಎಂಸಿಗಳಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ಮಿನಿ ಸೈಲೋಸ್ ನಿರ್ಮಾಣ
ಮೈಸೂರು, ತುಮಕೂರು, ಹುಬ್ಬಳ್ಳಿ, ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 3 ಕೋಟಿ ವೆಚ್ಚದಲ್ಲಿ ವೈಜ್ಞಾನಿಕ ವಿಶ್ಲೇಷಣಾ ಪ್ರಯೋಗಾಲಯ
ಕೇಂದ್ರೀಕೃತ ಪರ್ಮಿಮ್ ಪರಿಶೀಲನೆ ವ್ಯವಸ್ಥೆಗೆ – ಇ-ಪರ್ಮಿಟ್ ಪದ್ಧತಿ
————–
ಜಲಸಂಪನ್ಮೂಲ -12.956 ಕೋಟಿ
– ಭಾರಿ ಮತ್ತು ಮಧ್ಯಮ ನೀರಾವರಿ
ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರ ಅನುಷ್ಠಾನ – ಈ ಯೋಜನೆಯ 9 ಉಪಯೋಜನೆಗಳಲ್ಲಿ 8 ಉಪಯೋಜನೆಗಳಾದ ಮುಳವಾಡ ಚಿಮ್ಮಲಗಿ, ಇಂಡಿ, ರಾಂಪುರ, ಮಲ್ಲಾಬಾದ್, ಕೊಪ್ಪಳ ಹಾಗೂ ಹೆರಕಲ್ ಏತ ನೀರಾವರಿ, ನಾರಾಯಣ ಬಲದಂಡೆ ಕಾಲುವೆ ವಿಸ್ತರಣೆ
ಶಿಂಶಾ ಅಣೆಕಟ್ಟು ಬಲದಂಡೆ ನಾಲೆ ಆಧುನೀಕರಣ
ವೃಷಭಾವತಿ ಕಣಿವೆಯಲ್ಲಿ ಹರಿಯುವ ನೀರನ್ನು ಸಂಸ್ಕರಿಸಿ ರಾಮನಗರ ಜಿಲ್ಲೆಯ ಬೈರಾಮಂಗಲ ಕೆರೆ ತುಂಬಿಸುವ ಯೋಜನೆ
ಕೆ.ಆರ್.ಎಸ್. ಜಲಾಶಯದ ಬೃಂದಾವನ ಉದ್ಯಾನವನ ಆಧುನಿಕ ತಂತ್ರಜ್ಞಾನ ಬಳಸಿ ವಿಶ್ವದರ್ಜೆಗೆ
ಕಬ್ಬು ಬೆಳೆಗೆ ಹನಿನೀರಾವರಿ ಪದ್ಧತಿ
ಪ್ರಥಮ ಹಂತದಲ್ಲಿ ಆಯ್ದ ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಯೋಜನೆ ಜಾರಿ
ಮೇಕೆದಾಟು ಮೇಲ್ಭಾಗ ಸಮತೋಲನ ಜಲಾಶಯ ನಿರ್ಮಾಣಕ್ಕೆ ವಿವರವಾದ ವರದಿ ನೀಡಲು 25 ಕೋಟಿ
ಬರಪೀಡಿತ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯಪುರ, ಹಾವೇರಿ, ಬಾಗಲಕೋಟೆ, ಗದಗದಲ್ಲಿ 12 ಪ್ರಮುಖ ಯೋಜನೆಗೆ ಸೂಕ್ಷ್ಮ ನೀರಾವರಿ ಪದ್ಧತಿ
ಕರ್ನಾಟಕ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ ಮತ್ತು ವಾಲ್ಮಿ ಸಂಸ್ಥೆಗಳ ಬಲವರ್ಧನೆ
ಟೀ. ನರಸೀಪುರ ತಾಲೂಕಿನ ತಲಕಾಡಿನಲ್ಲಿ ಮಾಧವ ಮಂತ್ರಿ ಅಣೆಕಟ್ಟು ಆಧುನೀಕರಣ
ಹೇಮಾವತಿ, ಕಬಿನಿ ಅಣೆಕಟ್ಟೆ ಕೆಳಭಾಗದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಉದ್ಯಾನವನ ನಿರ್ಮಾಣ
ಚನ್ನಗಿರಿ ತಾಲೂಕು ಸಂತೆಬೆನ್ನೂರು ಮತ್ತು ಕಸಬಾ ಹೋಬಳಿ ಏತನೀರಾವರಿ ಯೋಜನೆಗೆ 267 ಕೋಟಿ
ಚನ್ನಗಿರಿ, ಮಾಯಕೊಂಡ, ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ 77 ಕೆರೆ ತುಂಗಭದ್ರಾ ನದಿ ನೀರಿನಿಂದ ತುಂಬಿಸಲು 50 ಕೋಟಿ
ಸಣ್ಣ ನೀರಾವರಿ
ನೈಸರ್ಗಿಕ ನದಿ ಕೊಳ್ಳಗಳಿಗೆ ಸರಣಿಯಲ್ಲಿ ಪಿಕಪ್ ನಿರ್ಮಾಣ – 100 ಕೋಟಿ
ರಾಯಚೂರು, ಬಾಗಲಕೋಟೆ, ಚಿತ್ರದುರ್ಗ, ತುಮಕೂರು, ರಾಮನಗರ ಜಿಲ್ಲೆಯಲ್ಲಿ ಪಿಕಪ್ ನಿರ್ಮಾಣ
ಕೆರೆ ಅಭಿವೃದ್ಧಿ ನಾಡಿನ ಶ್ರೇಯೋಭೀವೃದ್ಧಿ – 190 ಕೆರೆಗಳ ಸಮಗ್ರ ಅಭಿವೃದ್ಧಿ
ಕೆರೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಒತ್ತುವರಿ ತೆರವು ಅಭಿಯಾನ, ಕೆರೆಗಳ ಪೋಷಕ ಕಾಲುವೆ/ರಾಜಾಕಾಲುವೆ ದುರಸ್ತಿಗೆ 100 ಕೋಟಿ
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ಕೋರಮಂಗಲ ಚನ್ನಘಟ್ಟ ಕಣಿವೆಯಿಂದ ಹರಿಯುವ ಕೊಳಚೆ ನೀರು ಸಂಸ್ಕರಣೆ – ಈ ನೀರನ್ನು ಏತ ನೀರಾವರಿ ಮೂಲಕ ಕೈಗೊಳ್ಳಲು ಯೋಜನಾ ವರದಿ ಸಿದ್ಧ – ಶೀಘ್ರ ಯೋಜನೆ ಜಾರಿ
ಆನೇಕಲ್ ತಾಲೂಕಿನ 60 ಕೆರೆಗಳಿಗೆ ದಕ್ಷಿಣ ಪಿನಾಕಿನಿ ನದಿಗೆ ಹರಿಯುವ ಸಂಸ್ಕರಿಸಿದ ಕೊಳಚೆ ನೀರು ತುಂಬಿಸಲು ಮುತ್ತಸಂದ್ರ ಗ್ರಾಮದ ಸಮೀಪ ಏತ ನೀರಾವರಿ ಯೋಜನೆ
—————-
ಅರಣ್ಯ, ಪರಿಸರ, ಜೀವಿಶಾಸ್ತ್ರ – 1757 ಕೋಟಿ
ತಾಲೂಕಿಗೊಂದು ಹಸಿರು ಗ್ರಾಮ – 3 ಕೋಟಿ
ಪ್ರತಿ ತಾಲೂಕಿನ ಆಯ್ಕೆ ಗ್ರಾಮದಲ್ಲಿ ಅರಣ್ಯ ಪ್ರದೇಶಾಭಿವೃದ್ಧಿ, ಔಷಧಿ ಸಸ್ಯ ಬೆಳೆಸುವುದು
ಪರ್ಯಾಯ ಇಂಧನ ಮೂಲದಿಂದ ಅಭಿವೃದ್ಧಿ ಪಡಿಸಿದ ವಿದ್ಯುತ್ ಒದಗಿಸುವುದು
ಕಾಂಪೋಸ್ಟಿಂಗ್, ಎರೆಹುಳು ಗೊಬ್ಬರ ತಯಾರಿಕಾ ತರಬೇತಿ
ವಿದ್ಯಾರ್ಥಿಗಳಿಗೆ ಅರಣ್ಯ, ಪರಿಸರದ ಅರಿವು ಮೂಡಿಸಲು 2 ಹೊಸ ಯೋಜನೆ
ತಾಲೂಕಿಗೊಂದು ಹಸಿರು ಶಾಲಾವನ –
ಚಿಣ್ಣರ ವನ ದರ್ಶನ ಯೋಜನೆ
ತಾಲೂಕಿಗೊಂದು ಹಸಿರು ಶಾಲಾವನ – ಪ್ರತಿ ತಾಲೂಕಿನಲ್ಲಿ 3ರಿಂದ 5 ಎಕರೆ ಪ್ರದೇಶದಲ್ಲಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನು ತೊಡಗಿಸಿ ಮರ, ಗಿಡ ಬೆಳೆಸಲು 2.25 ಕೋಟಿ – 5 ವರ್ಷಗಳ ಯೋಜನೆ
ಚಿಣ್ಣರ ವನ ದರ್ಶನ ಯೋಜನೆ
ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ 10 ಸಾವಿರ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು 5 ಕೋಟಿ ಯೋಜನೆ
ಹುಲಿ ಸಂರಕ್ಷಿತ ಪ್ರದೇಶ, ವನ್ಯ ಜೀವಿ ಧಾಮ, ರಾಷ್ಟ್ರೀಯ ಉದ್ಯಾನವನದ ಅರಣ್ಯವಾಸಿಗಳ ಸ್ಥಳಾಂತರಕ್ಕೆ ಪುನರ್ವಸತಿ ಘಟಕ ಸ್ಥಾಪನೆ
ಜೀವ ವೈವಿಧ್ಯ ಉದ್ಯಾನಗಳ ಅಭಿವೃದ್ಧಿ – ಮಡಿವಾಳ ಕೆರೆ ಜೀವ ವೈವಿಧ್ಯ ಉದ್ಯಾನ ಅಭಿವೃದ್ಧಿಗೆ 24.72 ಕೋಟಿ
ಹವಾಮಾನ ಬದಲಾವಣೆಯ ರಾಜ್ಯದ ಕ್ರಿಯಾ ಯೋಜನೆಗೆ ಕೇಂದ್ರದ ಮಂಜೂರಾತಿ ಯೋಜನೆ ಅನುಷ್ಠಾನಕ್ಕೆ 2 ಕೋಟಿ
ಮಹಾನಗರ ಪ್ರದೇಶಗಳ ಕೆರೆಗಳ ರಕ್ಷಣೆ, ಕೆರೆಗಳ ಅಭಿವೃದ್ಧಿ, ಕೆರೆಗಳ ಸೌಂದರ್ಯವೃದ್ಧಿಗೆ 5.56 ಕೋಟಿ
———————–
ಪ್ರಾಥಮಿಕ-ಪ್ರೌಢಶಿಕ್ಷಣ – 16204 ಕೋಟಿ
ಸರ್ಕಾರಿ ಶಾಲಾ,ಕಾಲೇಜುಗಳಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಹೊಸ ಕಟ್ಟಡ, ಹೆಚ್ಚುವರಿ ಕಟ್ಟಡ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಗೆ 110 ಕೋಟಿ
ಟೆಲಿ ಶಿಕ್ಷಣ ಕಾರ್ಯಕ್ರಮ ಸಾವಿರ ಶಾಲೆಗಳಿಗೆ ವಿಸ್ತರಣೆ
ಶಾಲೆಗಾಗಿ ನಾವು ನೀವು ಯೋಜನೆ – ಶಾಲಾ, ಕಾಲೇಜುಗಳ ಮೂಲಭೂತ ಸೌಕರ್ಯ, ಶೈಕ್ಷಣಿಕ ಅಭಿವೃದ್ಧಿಗೆ ಸಿಎಸ್‍ಆರ್ ಸಮಿತಿ(ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ)
54.54 ಲಕ್ಷ ಮಕ್ಕಳಿಗೆ 1 ಜೊತೆ ಶೂ, 1 ಜೊತೆ ಸಾಕ್ಸ್ ಒದಗಿಸಲು 120 ಕೋಟಿ
ಡಿಎಸ್‍ಇಆರ್‍ಟಿ, ಸಿಟಿಇ, ಡಯಟ್ ಮೇಲ್ದರ್ಜೆಗೆ
ಶಿಕ್ಷಣ ಸೇವಾ ಕೇಂದ್ರ ಸ್ಥಾಪನೆ
ರಾಜ್ಯದಲ್ಲಿ ಗ್ರೀನ್ ಪವರ್ ಶಾಲೆ ಆರಂಭ
ವಿದ್ಯುತ್ ಉಳಿಸಲು ಸೋಲಾರ್ ವಿದ್ಯುತ್ ಉಪಕರಣ ಅಳವಡಿಕೆ
100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ,
100 ಸರ್ಕಾರಿ ಹಿರಿಯ ಪ್ರೌಢಶಾಲೆ,
100 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೋಲಾರ್ ಎಜುಕೇಷನ್ ಕಿಟ್
ಸ್ಪರ್ಧಾಕಲಿ ಕಾರ್ಯಕ್ರಮ ಜಾರಿ
ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಲ್ಲಿ ಶೈಕ್ಷಣಿಕ ಕಲಿಕೆಯ ಅರಿವು ಮೂಡಿಸಲು ಯೋಜನೆ
ಚಿಕ್ಕಬಳ್ಳಾಪುರ ಬಿಇಡಿ ಕಾಲೇಜು ಉನ್ನತೀಕರಣ
ಮುದ್ರಣ ಲೇಖನ ಸಾಮಗ್ರಿ, ಪ್ರಕಟಣೆ ಇಲಾಖೆ ಗಣಕೀಕರಣ
ಅಬಕಾರಿ ಇಲಾಖೆಯ ಭದ್ರತಾ ಚೀಟಿ ಸರ್ಕಾರಿ ಮುದ್ರಣಾಲಯದಲ್ಲೇ ಮುದ್ರಣ
ಸ್ಟೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ತರಬೇತಿ, ಶಿಬಿರ ಕೇಂದ್ರಕ್ಕೆ 5 ಕೋಟಿ
————–
ಉನ್ನತ ಶಿಕ್ಷಣ – 3896 ಕೋಟಿ
ಸಹಭಾಗಿತ್ವ ಯೋಜನೆ ಆರಂಭ
ಸರ್ಕಾರಿ ಪಾಲಿಟೆಕ್ನಿಕ್, ಸರ್ಕಾರಿ ಕಾಲೇಜುಗಳು, ವಿವಿಗಳಲ್ಲಿ ಸಹಭಾಗಿತ್ವದ ಯೋಜನೆ – 10 ಕೋಟಿ
ಜ್ಞಾನಸಂಗಮ ಯೋಜನೆಯಡಿ ಹಂತ ಹಂತವಾಗಿ ಮೂಲಭೂತ ಸೌಕರ್ಯ ಒದಗಿಸಲು ಕ್ರಮ
ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಐಪಿಆರ್ ಅರಿವಿಗೆ ಪ್ರೋತ್ಸಾಹ ನೀಡಲು ಸ್ವಾವಲಂಬನೆ ಯೋಜನೆ ಆರಂಭ
ಜ್ಞಾನ ಪ್ರಸಾರ ಯೋಜನೆಯಡಿ ಅಧ್ಯಾಪಕರ ಕೊರತೆ ನೀಗಿಸಲು ಕ್ರಮ
ವಿಜ್ಞಾನ-ಸುಜ್ಞಾನ ಯೋಜನೆ ಮೂಲಕ ಪದವಿ, ಸ್ನಾತಕ ಮಟ್ಟದಲ್ಲಿ ವಿಜ್ಞಾನ ಕೋರ್ಸ್ ಆರಂಭ – 10 ಕೋಟಿ ರೂ.
ಹಿರಿಮೆ-ಗರಿಮೆ ಯೋಜನೆಯಡಿ 100, 75, 50 ವರ್ಷ ಪೂರ್ಣಗೊಳಿಸಿದ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯ ಪೂರೈಸಲು 10 ಕೋಟಿ ರೂ
ಮೈಸೂರು ವಿವಿ ಶತಮಾನೋತ್ಸವ ಆಚರಣೆಗೆ 50 ಕೋಟಿ ರೂ.
ಅಭ್ಯಾಸ ಯೋಜನೆ – ಹಿಂದುಳಿದ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಿಕಾ ಪರಿಣಾಮ ಉಂಟುಮಾಡಲು ಪ್ರೋತ್ಸಾಹ – 40 ಕೋಟಿ
ಮಂಗಳೂರು ವಿವಿಯಲ್ಲಿ ರಾಣಿ ಅಬ್ಬಕ್ಕ ಪೀಠ ಸ್ಥಾಪನೆಗೆ 1 ಕೋಟಿ ರೂ.
ಬೆಂಗಳೂರು ವಿವಿಯಲ್ಲಿ ನೆಹರೂ ಚಿಂತನಾ ಕೇಂದ್ರಕ್ಕೆ 3 ಕೋಟಿ ರೂ.
ಮೈಸೂರು ವಿವಯಲ್ಲಿ ಅನಂತಮೂರ್ತಿ ಪೀಠಕ್ಕೆ 1 ಕೋಟಿ ರೂ.
ಕೆಂಗೇರಿಯ ಗಾಣಕಲ್ ಗ್ರಾಮದಲ್ಲಿ ಚಿತ್ರಕಲಾ ಪರಿಷತ್ ಹೊರಾವರಣ ಕೇಂದ್ರ ಸ್ಥಾಪನೆ – 20 ಕೋಟಿ ವಿಶೇಷ ಅನುದಾನ
ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿ ನಳಂದಾ ಬೌದ್ಧ ಅಧ್ಯಯನ ಕೇಂದ್ರ ಸ್ಥಾಪನೆಗೆ 5 ಕೋಟಿ.