About SRC

“S.R.C ಸಂಸ್ಥೆಯನ್ನು  ಕುರಿತು”

        S.R. ಕೆ.ಎ.ಎಸ್  &  ಐ.ಎ.ಎಸ್  ತರಬೇತಿ  ಕೇಂದ್ರವು  ಬಳ್ಳಾರಿ  ಜಿಲ್ಲೆಯಲ್ಲಿ
 ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಆರಂಭಗೊಂಡ  ಏಕೈಕ   ಕೇಂದ್ರವಾಗಿದ್ದು,
ಸ್ಪರ್ಧಾತ್ಮಕ  ವಿದ್ಯಾರ್ಥಿಗಳಿಗೆ ಸೃಜನಾತ್ಮಕವಾಗಿ  ಹಾಗೂ  ಕ್ರಿಯಾತ್ಮಕವಾಗಿ ಸ್ಪರ್ಧಾತ್ಮಕ  ಪರೀಕ್ಷೆಗಳಿಗೆ  ಗುಣಮಟ್ಟದ ತರಬೇತಿಯನ್ನು  ನೀಡುತ್ತಾ  ಬರುತ್ತಿದೆ.   ಪ್ರತಿ  ವರ್ಷ  KPSC  (ಕರ್ನಾಟಕ   ಪಬ್ಲಿಕ್   ಸರ್ವಿಸ್   ಕಮಿಷನ್)   

&   UPSC  (ಯೂನಿಯನ್ ಪಬ್ಲಿಕ್  ಸರ್ವಿಸ್  ಕಮಿಷನ್)  ರವರು   ಸಿವಿಲ್   ಪರೀಕ್ಷೆಯನ್ನು ನಿಯೋಜಿಸುತ್ತಾರೆ.  KAS,  IAS,  IPS  ಹಾಗೂ   ಇತರ   ಗೌರವಾನ್ವಿತ   ಹುದ್ದೆಗಳಿಗೆ   ಸೂಕ್ತ    ಅಭ್ಯರ್ಥಿಗಳನ್ನು   ಆಯ್ಕೆ   ಮಾಡುತ್ತಾರೆ.  ಪದವಿ   ಮುಗಿದ   ಕೆಲವು   ವಿದ್ಯಾರ್ಥಿಗಳು   ಖಾಸಗಿ   ಉದ್ಯೋಗವನ್ನು  ಆರಿಸಿಕೊಳ್ಳುತ್ತಾರೆ.   ಇನ್ನೂ  ಕೆಲವು   ವಿದ್ಯಾರ್ಥಿಗಳು   ಗೌರವನ್ವಿತ   ಇಂಡಿಯನ್ / ಕರ್ನಾಟಕ    ಸಿವಿಲ್   ಸರ್ವಿಸ್   ಪರೀಕ್ಷೆ ತೆಗೆದುಕೊಳ್ಳುತ್ತಾರೆ.

              ನಮ್ಮ  ಸಂಸ್ಥೆಯಲ್ಲಿ  ಬೋಧಿಸುವ   ಉಪನ್ಯಾಸಕರು  ಕೆ.ಎ.ಎಸ್  &  ಐ.ಎ.ಎಸ್  ಹಾಗೂ ಇತರ    ಸ್ಪರ್ಧಾತ್ಮಕ  ಪರೀಕ್ಷೆಗಳ  ಬಗ್ಗೆ  ಅಪಾರವಾದ  ಜ್ಞಾನವನ್ನು  ಹೊಂದಿದ್ದು ಪ್ರಮುಖವಾಗಿ     Exam Oriented  ಪಠ್ಯಕ್ರಮವನ್ನು  ಬೋಧಿಸಿ  ವಿದ್ಯಾರ್ಥಿಗಳ  ಮನಗೆದ್ದಿದ್ದಾರೆ.

       ನಮ್ಮ   SR   ಸಂಸ್ಥೆಯು   KAS/IAS/IPS   ಪರೀಕ್ಷೆಗೆ   ಸಿದ್ದತೆ   ನಡೆಸುವ   ವಿದ್ಯಾರ್ಥಿಗಳಿಗೆ   ವಿದ್ಯಾರ್ಥಿ  ಕೇಂದ್ರಿತ  ಬೋಧನಾವಿಧಾನ  ಹಾಗೂ  ಆಧುನಿಕ  ತಂತ್ರಜ್ಞಾನ ವನ್ನು ಬಳಸಿ   ಸೂಕ್ತ  ತರಬೇತಿ   ಕೊಡುವುದರಲ್ಲಿ   ಉತ್ತಮ   ಸಂಸ್ಥೆಯಾಗಿ ಬೆಳೆಯುತ್ತಿದೆ.   ಹಾಗೂ   ನಮ್ಮ   ಸಂಸ್ಥೆಯು   ಸ್ಪರ್ಧಾತ್ಮಕ   ಪರೀಕ್ಷೆಯ   ಬಗ್ಗೆ  ವಿದ್ಯಾರ್ಥಿಗಳಿಗಿರುವ   ಭಯ,  ಆತಂಕ, ಅನುಮಾನಗಳನ್ನು   ದೂರ   ಮಾಡಿ   ಯಶಸ್ಸಿನತ್ತ  ಕೊಂಡೊಯ್ಯುವಲ್ಲಿ  ಸಫಲವಾಗಿದೆ.   ಇದೇ   ರೀತಿ  ಇನ್ನೂ   ಮುಂದೆಯೂ   ಸಹ  SR  ಸಂಸ್ಥೆಯು   ಇನ್ನಷ್ಟು   ವಿದ್ಯಾರ್ಥಿಗಳಿಗೆ   ತಮ್ಮ  ಕನಸನ್ನು  ನನಸು   ಮಾಡಿಕೊಳ್ಳುವಲ್ಲಿ   ಸಹಾಯ   ಮಾಡುತ್ತದೆ.

                                

                                                        ಎಸ್. ಆರ್.ಸಿ.ತಂಡ.

No comments:

Post a Comment

Thanking You For Your Valuable Comment. Keep Smile