Thursday, 29 May 2014

ಎಲ್ ನಿನೋ (ElNiNo) ಎಂದರೇನು?

★ ಎಲ್ ನಿನೋ (ElNiNo) ಎಂದರೇನು?:
(ಟಿಪ್ಪಣಿ ಬರಹ)

 ಇತ್ತೀಚಿನ ದಶಕಗಳಲ್ಲಿ ಭಾರತದ ಮಾನ್ಸೂನ್ ವಾಯುಗುಣದ ಮುನ್ಸೂಚನೆ ನೀಡಲು ಪರಿಗಣಿಸಲಾಗಿರುವ ೧೬ ಅಂಶಗಳಲ್ಲಿ ಎಲ್ ನಿನೋ  ಪ್ರಭಾವವನ್ನು ಪ್ರಧಾನವಾಗಿ ಗಮನಿಸಲಾಗುತ್ತಿದೆ. ಭಾರತದಲ್ಲಿ ಮಾನ್ಸೂನ್ ಮಾರುತಗಳ ಆಗಮನ, ಮಳೆಯ ಪ್ರಮಾಣ, ಬರಗಾಲ ಮೊದಲಾದವುಗಳಿಗೆ ಸಮೀಕರಿಸಿ ವಿವರಿಸಲಾಗುತ್ತಿದೆ.

— ಎಲ್ ನಿನೋ (ElNiNo) ಎಂದರೆ ' ಮಗು ಕ್ರಿಸ್ತ ' (Baby Christ) ಎಂದರ್ಥ. ಇದು ಸ್ಪಾನಿಷ್ ಭಾಷೆಯಿಂದ ಬಳಕೆಗೆ ಬಂದಿದೆ. ದಕ್ಷಿಣ ಅಮೆರಿಕದ ಪಶ್ಚಿಮ ತೀರದಲ್ಲಿ ಸಾಮಾನ್ಯವಾಗಿ ಪೆರು ದೇಶದ ಪಶ್ಚಿಮ ತೀರದಲ್ಲಿ ಕ್ರಿಸ್ ಮಸ್ ಅವಧಿಯಲ್ಲಿ ಕಾಣಿಸಿಕೊಳ್ಳುವ ಉಷ್ಣೋದಕ ಪ್ರವಾಹವನ್ನು ಈ ಎಲ್ ನಿನೋ ಹೆಸರಿನಿಂದ ಕರೆಯಲಾಗಿದೆ. ಇದನ್ನು ಸುಮಾರು ಕ್ರಿ.ಶ ೧೫೬೭ರಲ್ಲಿ ಮೊದಲು ಗಮನಿಸಲಾಯಿತು.


* ಎಲ್ ನಿನೋ ಪ್ರವಾಹದ ಹುಟ್ಟು:

 ಫೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ ನೀರಿನ ಎತ್ತರ ಹೆಚ್ಚಾಗಿದ್ದು, ಈ ಹೆಚ್ಚು
ಉಷ್ಣಾಂಶದ ನೀರು ಪೂರ್ವದ ಕಡೆಗೆ ನಾಲಿಗೆಯಂತೆ ಚಾಚಿ ಮುಂದುವರಿಯುವುದು. ಈ ಹೆಚ್ಚು ನೀರಿನ ಉಷ್ಣಾಂಶದ ನೀರು ಪೂರ್ವದ ಕಡೆಗೆ ಮುಂದುವರಿದಂತೆ 'ಥರ್ಮೋಕ್ಲೈನ್' (Thermocline) ನ ಆಳವು ಸಹ ಹೆಚ್ಚುವುದು.  ಇದಕ್ಕಿಂತ ಕೆಳಭಾಗದಲ್ಲಿ ಸಾಗರದ ನೀರಿನ ಉಷ್ಣಾಂಶವು ಅತಿ ಕಡಿಮೆ.  ಥರ್ಮೋಕ್ಲೈನ್ ಹೆಚ್ಚು ಆಳದಲ್ಲಿರುವುದರಿಂದ ಹೆಚ್ಚು ಉಷ್ಣಾಂಶ ಹಾಗೂ ಕೆಳಭಾಗದ ಕಡಿಮೆ ಉಷ್ಣಾಂಶದ ನೀರಿನ ಮಿಶ್ರಣವು ಕಡಿಮೆಯಿದ್ದು, ಹೆಚ್ಚು ಉಷ್ಣಾಂಶದ ಅಗಾಧ ಪ್ರಮಾಣದ ನೀರು ಪೂರ್ವದ ಕಡೆಗೆ ಹರಿಯುವುದು.  ಇದೇ ಎಲ್ ನಿನೋ (ElNiNo).
                                 
 ನಿಮ್ಮ ಅನಿಸಿಕೆ ತಿಳಿಸಿ.

SRCತಂಡ

No comments:

Post a Comment

Thanking You For Your Valuable Comment. Keep Smile