★ ಐ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವಾಗಿ 'ಕನ್ನಡ ' :
★ ಕಡ್ಡಾಯ ಪತ್ರಿಕೆ :
ಐ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಕಡ್ಡಾಯ ಪತ್ರಿಕೆ ಒಂದು ಭಾಗವಾಗಿದ್ದಾಗ್ಯೂ ಅಭ್ಯರ್ಥಿಯ ಅರ್ಹತೆಯನ್ನು, ಆಯಾ ಭಾಷೆಗಳಲ್ಲಿ ಕನಿಷ್ಟ ಮಟ್ಟದ ಜ್ಞಾನವನ್ನು ಅಳೆಯಲು ಹಾಗೆಯೆ ಮೌಖಿಕ ಪರೀಕ್ಷೆಗೆ ಅರ್ಹತಾದಾಯಕನೆಂದು ನಿರ್ಧರಿಸಲು ಈ ಪತ್ರಿಕೆಯನ್ನು ಪರಿಗಣಿಸಲಾಗುತ್ತದೆ. ಆದರೆ ಅಭ್ಯರ್ಥಿಯು ಪಡೆಯುವ ಅಂಕಗಳನ್ನು ರೈಂಕಿಂಗ್ ನಿರ್ಧಾರಕ್ಕಾಗಿ ಸೇರಿಸಿಕೊಳ್ಳಲಾಗುವುದಿಲ್ಲ. ಇಲ್ಲಿ ಗಮನಿಸುವ ಅಂಶವೆಂದರೆ ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ಐಚ್ಛಿಕ ವಿಷಯಗಳ ಪತ್ರಿಕೆಗಳನ್ನು ತಿದ್ದಲಾಗುತ್ತದೆ.
★ ಐಚ್ಛಿಕ ವಿಷಯ :
— ಈ ಪತ್ರಿಕೆಯ ಉದ್ದೇಶವು ಕನ್ನಡದ ಗಂಭೀರ ಗ್ರಾಂಥಿಕ ಗದ್ಯವನ್ನು ಓದುವ ಮತ್ತು ಗ್ರಹಿಸುವ ಸಾಮರ್ಥ್ಯವನ್ನು ಹಾಗು ಕನ್ನಡದಲ್ಲಿ ಅಭ್ಯರ್ಥಿಯ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪರೀಕ್ಷಿಸುವುದಾಗಿದೆ. ಐಚ್ಛಿಕ ವಿಷಯದ ವ್ಯಾಪ್ತಿಯು ಬಹಳ ದೀರ್ಘವಾಗಿದ್ದು, ಆಳವಾಗಿ ಅಧ್ಯಯನ ಮಾಡಬೇಕಾಗಿರುವುದು.
ಉನ್ನತವಾದ ಈ ಪರೀಕ್ಷೆಯಲ್ಲಿ ಒಂದೇ ಒಂದು ಅಂಕವು ಸಹ ಮಹತ್ವದ ಪಾತ್ರ ನಿರ್ವಹಿಸುತ್ತದೆನ್ನುವುದು ಮರೆಯುವಂತಿಲ್ಲ. ಅಂದರೆ ಎಷ್ಟು ಪದಗಳಲ್ಲಿ ಉತ್ತರ ಬರೆಯಬೇಕೆಂಬುದು ಸೂಚಿಸಲಾಗಿರುತ್ತದೆ.
★ ಕನ್ನಡ ಸಾಹಿತ್ಯ ಪಠ್ಯಕ್ರಮ ★
ಪತ್ರಿಕೆ-1 ರ ಪಠ್ಯಕ್ರಮ
★ ಭಾಗ-I
★ ಕನ್ನಡ ಭಾಷೆಯ ಚರಿತ್ರೆ.
— ಭಾಷೆ ಎಂದರೇನು? ಭಾಷೆಯ ಸಮಾನ್ಯ ಲಕ್ಷಣಗಳು,
— ಭಾಷೆಯ ವ್ಯಾಕರಣ, ದ್ರಾವಿಡ ಭಾಷೆಗಳ ತೌಲನಿಕ ಮತ್ತು ವೈದೃಶ್ಯ ಲಕ್ಷಣಗಳು,
— ಕನ್ನಡ ಅಕ್ಷರಮಾಲೆ,
— ಕನ್ನಡ ವ್ಯಾಕರಣದ ಕೆಲುವು ಪ್ರಧಾನ ಲಕ್ಷಣಗಳು:
— ಲಿಂಗ, ವಚನ, ವಿಭಕ್ತಿ, ಕ್ರಿಯಾಪದ, ಧಾತೃ ಮತ್ತು ಸರ್ವನಾಮ.
— ಕನ್ನಡ ಭಾಷೆಯ ಕಾಲಗಣನಾ ಹಂತಗಳು.
— ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ.
— ಕನ್ನಡ ಭಾಷೆಗಳಲ್ಲಿರುವ ಉಪಭಾಷೆಗಳು. - ಕನ್ನಡ ಭಾಷಾ ಬೆಳವಣಿಗೆಯ ವಿವಿಧ ಪ್ರಾದೇಶಿಕ ಮತ್ತು ಸಾಮಾಜಿಕ ಅಂಶಗಳು.
— ಭಾಷಾ ಸ್ವೀಕರಣ ಮತ್ತು ಸ್ವರ ಭೇಧ - ಕನ್ನಡ ಭಾಷೆ ಮತ್ತು ಅದರ ಒಳಭೇಧಗಳು.
— ಕನ್ನಡ ಸಾಹಿತ್ಯಿಕ ಮತ್ತು ಆಡುಮಾತಿನ ಶೈಲಿ.
★ ಭಾಗ-II
A. ಕನ್ನಡ ಸಾಹಿತ್ಯ ಚರಿತ್ರೆ
* ಪ್ರಾಚೀನ ಕನ್ನಡ ಸಾಹಿತ್ಯ
— ಪ್ರಾಚೀನ ಕನ್ನಡ ಸಾಹಿತ್ಯದ ಉದಯ, ಅದರ ಪ್ರವ್ರತ್ತಿ, ಪ್ರಭಾವ, ಬೆಳವಣಿಗೆಗಳು
* ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿ 10, 12, 16, 17, 19 ಮತ್ತು 20ನೇಯ ಶತಮಾನದ ಸಾಹಿತ್ಯದ ಅಧ್ಯಯನ ಹಾಗೂ ಕೆಳಗೆ ಪಟ್ಟಿ ಮಾಡಲಾಗಿರುವ ಕವಿಗಳಿಗೆ ಸಂಭಂಧಿಸಿದ ಸಾಹಿತ್ಯ ರೂಪಗಳ ಹಿನ್ನೆಲೆಯಲ್ಲಿ ಅವುಗಳ ಮೂಲ, ಬೆಳವಣಿಗೆ ಮತ್ತು ಸಾಧನಗಳೊಂದಿಗೆ ವಿಮರ್ಷಾತ್ಮಕವಾಗಿ ಅಧ್ಯಯನ ಮಾಡುವುದು.
* ಚಂಪೂ ಸಾಹಿತ್ಯ : ಪಂಪ, ಜನ್ನ, ನಾಗಚಂದ್ರ.
* ವಚನ ನಾಹಿತ್ಯ : ಬಸವಣ್ಣ, ಅಕ್ಕ ಮಹಾದೇವಿ .
* ಮಧ್ಯಕಾಲಿನ ಕನ್ನಡ ಸಾಹಿತ್ಯ:
- ಅದರ ಪ್ರವ್ರತ್ತಿ, ಪ್ರಭಾವ,
* ಮಧ್ಯಕಾಲಿನ ಕಾವ್ಯ :
— ಹರಿಹರ, ರಾಘವಾಂಕ, ಕುಮಾರವ್ಯಾಸ.
* ದಾಸ ಸಾಹಿತ್ಯ:
— ಪುರಂದರ ದಾಸ ಮತ್ತು ಕನಕದಾಸ
* ಸಾಂಗತ್ಯ:
— ರತ್ನಾಕರವರ್ಣಿ.
C. ಆಧುನಿಕ ಕನ್ನಡ ಸಾಹಿತ್ಯ :
— ಪ್ರಭಾವ , ಪ್ರವೃತ್ತಿಗಳು.
— ನವೋದಯ, ಪ್ರಗತಿಶೀಲ, ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯ.
★ ಭಾಗ - III
A. ಕಾವ್ಯ ಮತ್ತು ಸಾಹಿತ್ಯಿಕ ವಿಮರ್ಶೆಗಳು
- ಕಾವ್ಯ ಮೀಮಾಂಸೆ ಮತ್ತು ವಿಮರ್ಶೆಯ ಔಪಚಾರಿಕ ಭೇದಗಳು,
- ಕಾವ್ಯದ ವ್ಯಾಖ್ಯೆಗಳು ಮತ್ತು ಗುರಿಗಳು.
- ಹಲವಾರು ಕಾವ್ಯ ಪಂಥಗಳ ಪ್ರತಿಪಾದನೆಯ ನಿರೂಪಣೆ.
- ಅಲಂಕಾರ, ರೀತಿ, ರಸ, ವಕ್ರೋಕ್ತಿ, ಧ್ವನಿ ಮತ್ತು ಔಚಿತ್ಯ,
- ರಸ ಸೂತ್ರದ ಅರ್ಥವಿವರಣೆ.
- ಕನ್ನಡ ಸಾಹಿತ್ಯಿಕ ವಿಮರ್ಶೆಯ ಇತ್ತೀಚಿನ ರೂಪಗಳು, ಪ್ರವೃತ್ತಿಗಳು, ಔಪಚಾರಿಕ, ಐತಿಹಾಸಿಕ, ಮಾರ್ಕ್ಸವಾದಿ, ಮಹಿಳಾಪರ, ಪೂರ್ವ ವಸಾಹತುಶಾಹಿ ವಿಮರ್ಶೆಗಳು.
B. ಕರ್ನಾಟಕ ಸಾಂಸ್ಕೃತಿಕ ಚರಿತ್ರೆ:
★ ಭಾರತೀಯ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕೃತಿ,
- ಕರ್ನಾಟಕ ಸಂಸ್ಕೃತಿಯ ಪುರಾತನತೆ.
★ ಕರ್ನಾಟಕ ರಾಜಮನೆತನಗಳ ವಿಸ್ತೃತ ಅಧ್ಯಯನ:
- ಬಾದಾಮಿಯ ಚಾಲುಕ್ಯರು ಮತ್ತು ಕಲ್ಯಾಣದ ಚಾಲುಕ್ಯರು ,
- ರಾಷ್ಟ್ರಕೂಟರು,
- ಹೊಯ್ಸಳರು,
- ವಿಜಯ ನಗರದ ದೊರೆಗಳು ಮತ್ತು ಅವರ ಸಾಹಿತ್ಯಿಕ ಸ್ಥಿತಿಗತಿಗಳು.
★ ಕರ್ನಾಟಕದ ಪ್ರಮುಖ ಧರ್ಮಗಳು ಮತ್ತು ಅವುಗಳ ಸಾಂಸ್ಕೃತಿಕ ಕೊಡುಗೆಗಳು.
★ ಧಾರ್ಮಿಕ ಚಳುವಳಿಗಳು, ಸಾಮಾಜಿಕ ಸ್ಥಿತಿಗತಿಗಳು.
★ ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ :
- ಸಾಹಿತ್ಯಿಕ ಸಂಧರ್ಭದಂತೆ ಶಿಲ್ಪಕಲೆ , ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ.
★ ಕರ್ನಾಟಕ ಸ್ವಾತಂತ್ರ ಚಳುವಳಿ .
ಕರ್ನಾಟಕದ ಏಕೀಕರಣ - ಕನ್ನಡ ಸಾಹಿತ್ಯದ ಮೇಲೆ ಅದರ ಪ್ರಭಾವ.
___________________________________________________________________________________
ಪತ್ರಿಕೆ-II ರ ಪಠ್ಯಕ್ರಮ
Section-A.
A. ಹಳೆಗನ್ನಡ ಸಾಹಿತ್ಯ
1. ಪಂಪನ ವಿಕ್ರಮಾರ್ಜುನ ವಿಜಯ (cantos 12 & 13), ( ಪ್ರಕಾಶಕರು ಮೈಸೂರು ವಿಶ್ವವಿದ್ಯಾಲಯ )
2. ವಡ್ಡಾರಾಧನೆ ( ಸುಕುಮಾರ ಸ್ವಾಮಿಯ ಕಥೆ, ವಿದ್ದ್ಯುಚ್ಛೋರನ ಕಥೆ)
B. ಮಧ್ಯಕಾಲಿನ ಕನ್ನಡದ ಸಾಹಿತ್ಯ :
1. ವಚನ ಕಮ್ಮಟ,
Ed: ಕೆ. ಮರುಳ ಸಿದ್ದಪ್ಪ , ಕೆ. ಆರ್. ನಾಗರಾಜ್.
(ಪ್ರಕಾಶಕರು: ಬೆಂಗಳೂರು ವಿಶ್ವವಿದ್ಯಾಲಯ )
2. ಜನಪ್ರೀಯ ಕನಕ ಸಂಪುಟ,
Ed. ಡಾ| ಜವರೇಗೌಡ ( ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ಬೆಂಗಳೂರು )
3. ನಂಬಿಯಣ್ಣನ ರಗಳೆ,
Ed., ಟಿ.ಎನ್. ಶ್ರೀಕಂಠಯ್ಯ (ಟ.ವೆಂ. ಸ್ಮಾರಕ ಗ್ರಂಥ ಮಳಿಗೆ, ಮೈಸೂರು )
4. ಕುಮಾರವ್ಯಾಸ ಭಾರತ : ಕರ್ಣ ಪರ್ವ (ಮೈಸೂರು ವಿಶ್ವವಿದ್ಯಾಲಯ)
5. ಭರತೇಶ ವೈಭವ ಸಂಗ್ರಹ
Ed. ತ. ಸು. ಶಮಾ ರಾವ್
(ಮೈಸೂರು ವಿಶ್ವವಿದ್ಯಾಲಯ )
Section-B
A. ಆಧುನಿಕ ಕನ್ನಡ ಸಾಹಿತ್ಯ.
1. ಕಾವ್ಯ :
★ ಹೊಸಗನ್ನಡ ಕವಿತೆ
Ed :ಜಿ.ಎಚ್. ನಾಯಕ್
(ಕನ್ನಡ ಸಾಹಿತ್ಯ ಪರಿಷತ್ತು , ಬೆಂಗಳೂರು )
2. ಕಾದಂಬರಿ :
★ ಬೆಟ್ಟದ ಜೀವ-ಶಿವರಾಂ ಕಾರಂತ.
★ ಮಾಧವಿ -ಅರುಪಮಾ ನಿರಂಜನ.
★ ಒಡಲಾಳ -ದೇವನೂರ ಮಹಾದೇವ.
3. ಚಿಕ್ಕ ಕಥೆ:
★ ಕನ್ನಡದ ಸಣ್ಣ ಕಥೆಗಳು,
Ed :ಜಿ.ಎಚ್. ನಾಯಕ್
(ಕನ್ನಡ ಸಾಹಿತ್ಯ ಪರಿಷತ್ತು , ನವ ದೆಹಲಿ)
4. ನಾಟಕ :
★ ಶೂದ್ರ ತಪಸ್ವಿ - ಕುವೆಂಪು.
★ ತುಘಲಕ್ - ಗಿರೀಶ್ ಕಾರ್ನಾಡ್.
5. ವಿಚಾರ ಸಾಹಿತ್ಯ :
★ ದೇವರು - ಎ.ಎನ್. ಮೂರ್ತಿರಾವ್
( ಪ್ರಕಾಶಕರು: ಡಾ| ವಿ.ಕೆ. ಮೂರ್ತಿ, ಮೈಸೂರು)
B. ಜಾನಪದ ಸಾಹಿತ್ಯ :
1. ಜನಪದ ಸ್ವರೂಪ - ಡಾ| ಎಚ್.ಎಮ್. ನಾಯಕ (ಟ.ವೆಂ. ಸ್ಮಾರಕ ಗ್ರಂಥ ಮಳಿಗೆ , ಮೈಸೂರು )
2. ಜಾನಪದ ಗೀತಾಂಜಲಿ -
Ed. ಡಾ| ಜವರೇಗೌಡ. ( ಪ್ರಕಾಶಕರು: ಸಾಹಿತ್ಯ ಅಕಾಡೆಮಿ, ನವ ದೆಹಲಿ)
3. ಕನ್ನಡದ ಜನಪದ ಕಥೆಗಳು -
Ed. ಜಿ.ಎಸ್. ಪರಮಶಿವಯ್ಯ.
(ಮೈಸೂರು ವಿಶ್ವವಿದ್ಯಾಲಯ )
4. ಬೀದಿ ಮಕ್ಕಳು ಬೆಳೆದೂ
Ed. ಕಳೆಗೌಡ ನಾಗವರ.
(ಪ್ರಕಾಶಕರು: ಬೆಂಗಳೂರು ವಿಶ್ವವಿದ್ಯಾಲಯ )
5. ಸಾವಿರದ ಒಗಟುಗಳು -
Ed : ಎಸ್.ಜಿ. ಇಮ್ರಾಪುರ. --
ನಿಮ್ಮ ಅನಿಸಿಕೆ ಗಳನ್ನು ತಿಳಿಸಿ.
No comments:
Post a Comment
Thanking You For Your Valuable Comment. Keep Smile