Friday, 30 May 2014

ರಾಷ್ಟ್ರೀಯ ಯುವ ನೀತಿ -2014

ರಾಷ್ಟ್ರೀಯ ಯುವ ನೀತಿ (National Youth Policy) - 2014 :


ರಾಷ್ಟ್ರೀಯ ನಿರ್ಮಾಣದ ಹೊಣೆಗಾರಿಕೆಯನ್ನು ಅರಿತುಕೊಳ್ಳುವ ಯುವಜನರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮಂತ್ರಿಮಂಡಲ 2014 ಜನೆವರಿ 9 ರಂದು ರಾಷ್ಟ್ರೀಯ ಯುವ ನೀತಿಯನ್ನು ಅಂಗೀಕರಿಸಿತು.

 * ರಾಷ್ಟ್ರೀಯ ಯುವ ನೀತಿ (NYP) ಯ ದೃಷ್ಟಿಕೋನ (Vision) :
ಭಾರತವು ರಾಷ್ಟ್ರಗಳ ಸಮುದಾಯದಲ್ಲಿ ಸೂಕ್ತ ಸ್ಥಾನ ಹೊಂದಲು ಅನುವಾಗುವಂತೆ ಯುವಜನರು ತಮ್ಮ ಪೂರ್ಣ ಸಾಮರ್ಥ್ಯವನ್ನು ಹೊರಹಾಕಿ ಗುರಿ ಸಾಧಿಸುವ ಧ್ಯೇಯ ಹೊಂದಿದೆ.

 * ಈ ದೃಷ್ಟಿಕೋನದ ಸಾಧನೆಗಾಗಿ ನೀತಿಯು 5 ಸರಿಯಾಗಿ ವ್ಯಾಖ್ಯಾನಿಸಲ್ಪಟ್ಟ ಧ್ಯೇಯೋದ್ದೇಶಗಳನ್ನು 11 ಆದ್ಯತಾ ವಲಯಗಳನ್ನು ಗುರುತಿಸಿ ಪ್ರತಿಯೊಂದು ವಲಯದಲ್ಲಿ ನೀತಿಯ ಮಧ್ಯಪ್ರವೇಶಕ್ಕೆ ಸಲಹೆ ಮಾಡಿದೆ.

 * ಗುರುತಿಸಿರುವ ಆದ್ಯತಾ ವಲಯಗಳು : ಶಿಕ್ಷಣ, ಕೌಶಲ್ಯವೃದ್ಧಿ, ಉದ್ಯೋಗ, ಉದ್ಯಮಶೀಲತೆ, ಆರೋಗ್ಯಯುತ ಜೀವನಶೈಲಿ, ಕ್ರೀಡೆ, ಸಾಮಾಜಿಕ ಮೌಲ್ಯಗಳು, ಸಾಮೂಹಿಕ ಪಾಲ್ಗೊಳ್ಳುವಿಕೆ, ರಾಜಕೀಯ ಮತ್ತು ಆಡಳಿತದಲ್ಲಿ ಆಸಕ್ತಿ, ಸಾಮಾಜಿಕ ನ್ಯಾಯ.

 * ಮುಖ್ಯಾಂಶಗಳು :
- ಈ ನೀತಿಯು ವಿದ್ಯಾವಂತ ಮತ್ತು ಆರೋಗ್ಯವಂತ ಯುವ ಸಮುದಾಯವನ್ನು ಕಾಣಲು ಬಯಸುತ್ತದೆ.
15-29 ವಯೋಮಾನದ ಎಲ್ಲ ಯುವಕರ ಸಂಖ್ಯೆ 2011 ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯ ಶೇ.27.5 ರಷ್ಟಿದ್ದು ಈ ವಯೋಮಾನದವರ ಸರ್ವತೋಮುಖ ಬೆಳವಣಿಗೆ ನೀತಿಗೆ ಒತ್ತು ಕೊಟ್ಟಿದೆ.

- ದೇಶದಲ್ಲಿ ಈಗ 33 ಕೋಟಿ ಯುವಕರಿದ್ದಾರೆ. ಇವರೆಲ್ಲರ ಭವಿಷ್ಯ ದೇಶದ ಭವಿಷ್ಯದೊಂದಿಗೆ ಜೋಡಿಸಲ್ಪಟ್ಟಿದೆ. ಯುವಕರು ತಮ್ಮ ಪೂರ್ಣ ಸಾಮರ್ಥ್ಯವನ್ನು ಹೊರಹಾಕಲು, ಅವರ ರಾಷ್ಟ್ರ ನಿರ್ಮಾಣದಲ್ಲಿ ಭಾಗವಹಿಸಲು, ತಮ್ಮ ಜೀವನವನ್ನು ಅರ್ಥಪೂರ್ಣವಾಗಿಸಲು ಸರಕಾರಗಳು ಮತ್ತು ಖಾಸಗಿ ಸಂಘ ಸಂಸ್ಥೆಗಳು ಗಮನಹರಿಸಬೇಕಾಗಿದೆ ಎಂದು ಈ ನೀತಿ ಅಭಿಪ್ರಾಯಪಡುತ್ತದೆ.


SRC TEAM, BELLARY.

Comptroller and Auditor General of India

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (Comptroller and Auditor General of India) :

* ನಮ್ಮ ದೇಶದ ಸಾರ್ವಜನಿಕ ಹಣಕಾಸು ನಿಯಂತ್ರಣದಲ್ಲಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಪಾತ್ರ ಅತ್ಯಂತ ಮಹತ್ವಪೂರ್ಣದ್ದಾಗಿದೆ.
* 2-G ಸೆಕ್ಟ್ರಮ್, ಕಾಮನ್ ವೆಲ್ತ್ ಗೇಮ್ಸ್ ಮತ್ತು ಕೋಲ್ ಗೇಟ್ ದಂಥ ಪ್ರಮುಖ ಅವ್ಯವಹಾರದ ಹಗರಣಗಳು ಬೆಳಕಿಗೆ ಬಂದಿದ್ದು ಮಹಾಲೆಕ್ಕ ಪರಿಶೋಧಕರಿಂದಲೇ.
* CAG ಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ( PAC - Public Account Committee ) ಯೊಂದಿಗೆ ಜೋಡಿಸಲಾಗಿತ್ತು. ಇದನ್ನು PAC ಯಿಂದ ಪ್ರತ್ಯೇಕಿಸಿ ಸ್ವತಂತ್ರವಾಗಿಸಿದವರು 2006 ರಿಂದ 2013 ರವರೆಗೆ CAG ಆಗಿದ್ದ ವಿನೋದ್ ರಾಯ್ ರವರು.
ಮುಖ್ಯಾಂಶಗಳು:
*  ಪ್ರಸ್ತುತ CAG ಶಶಿಕಾಂತ ಶರ್ಮಾ 2013 ರಿಂದ ಅಧಿಕಾರ ವಹಿಸಿಕೊಂಡಿದ್ದಾರೆ.

* ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ರಾಷ್ಟ್ರಪತಿಯವರು ನೇಮಿಸುತ್ತಾರೆ.

* ಸಂವಿಧಾನದ 148 ನೇ ಅನುಚ್ಛೇದದ ಪ್ರಕಾರ ಭಾರತಕ್ಕೆ ಒಬ್ಬ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಇರುತ್ತಾರೆ.

* ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರಾಗಿ ನೇಮಕಗೊಂಡ ಪ್ರತಿಯೊಬ್ಬ ವ್ಯಕ್ತಿಯು ತನ್ನ ಅಧಿಕಾರವನ್ನು ವಹಿಸಿಕೊಳ್ಳುವುದಕ್ಕೆ ಮುಂಚೆ ರಾಷ್ಟ್ರಪತಿಯ ಮುಂದೆ ಅಥವಾ ರಾಷ್ಟ್ರಪತಿಯು ಆ ಬಗ್ಗೆ ನೇಮಕ ಮಾಡಿದ ಒಬ್ಬ ವ್ಯಕ್ತಿಯ ಮುಂದೆ ಸಂವಿಧಾನದ 3 ನೇ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಗೆ ಅನುಸಾರವಾಗಿ ಪ್ರಮಾಣ ವಚನವನ್ನು ಸ್ವಿಕರಿಸತಕ್ಕದ್ದಾಗಿದೆ.

* ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ವೇತನ ಮತ್ತು ಸೇವೆಯ ಕರ್ತವ್ಯಗಳು ಸಂಸತ್ತು ಕಾನೂನಿನ ಮೂಲಕ ನಿರ್ಧರಿಸಬಹುದಾಗಿದ್ದು, ಅವುಗಳನ್ನು ಸಂವಿಧಾನದ 2 ನೇ ಅನುಸೂಚಿಯಲ್ಲಿ ತಿಳಿಸಲಾಗಿದೆ.

* ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರ ಅಧಿಕಾರಾವಧಿ 6 ವರ್ಷಗಳು ಅಥವಾ 65 ವರ್ಷ ಪೂರ್ಣಗೊಳ್ಳುವವರೆಗೆ ಸೇವೆ ಸಲ್ಲಿಸತಕ್ಕದ್ದು. ಇವರ ವೇತನ ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ವೇತನಕ್ಕೆ ಸಮನಾಗಿರುತ್ತದೆ ಹಾಗೂ ಇವರ ವೇತನ ಮತ್ತು ಇತರ ಸೇವಾ ನಿಯಮಗಳು ಸಂಸತ್ತಿನ ಕಾಯ್ದೆಯ ಪ್ರಕಾರ ಇರುತ್ತದೆ.

* ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ರಾಜ್ಯ ಮತ್ತು ಕೇಂದ್ರಕ್ಕೆ ಸಂಬಂಧಿಸಿದ ಅಕೌಂಟನ್ನು ಪರಿಶೀಲಿಸಿ ರಾಷ್ಟ್ರಪತಿಗಳಿಗೆ ವರದಿಯನ್ನು ಒಪ್ಪಿಸುತ್ತಾರೆ. ರಾಷ್ಟ್ರಪತಿಯವರು ಸಂಸತ್ತಿನ ಮುಂದಿಡುತ್ತಾರೆ.

* ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು (CAG) ಕೇಂದ್ರ ಮತ್ತು ರಾಜ್ಯಗಳ ಹಾಗೂ ಸಂಸತ್ತಿನ ಕಾಯ್ದೆಯನ್ವಯ ಸ್ಥಾಪಿತವಾದ ಇತರ ಯಾವುದೇ ಪ್ರಾಧಿಕಾರದ ಅಥವಾ ಮಂಡಳಿಯ, ಸರ್ಕಾರಿ ಕಂಪನಿಗಳ ಲೆಕ್ಕ ಖಾತೆಯನ್ನು ಸಹ ಆಡಿಟ್ ಮಾಡುತ್ತಾರೆ.

* (CAG) ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರನ್ನು ಪದವಿಯಿಂದ ತೆಗೆದುಹಾಕಬೇಕಾದರೆ ಸಂಸತ್ತಿನ ತೀರ್ಮಾನದ ಮೇಲೆ ರಾಷ್ಟ್ರಪತಿಗಳು ಕ್ರಮ ಕೈಗೊಳ್ಳಬಹುದು. ಪ್ರಧಾನಮಂತ್ರಿ ಮತ್ತು ಕೇಂದ್ರ ಕಾರ್ಯಾಂಗಕ್ಕೆ ಇವರನ್ನು ತೆಗೆಯುವ ಅಧಿಕಾರ ಇರುವುದಿಲ್ಲ. ಮಹಾಭಿಯೋಗದ ಮೂಲಕ ಮಾತ್ರ ತೆಗೆಯಬಹುದು.

* ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ನಿವೃ ತ್ತಿ ಹೊಂದಿದ ಮೇಲೆ ಭಾರತ ಸರ್ಕಾರದ ಅಥವಾ ರಾಜ್ಯ ಸರ್ಕಾರದ ಅಧೀನದಲ್ಲಿರುವ ಯಾವುದೇ ಹುದ್ದೆಗೆ ಅರ್ಹರಾಗಿರುವುದಿಲ್ಲ.

SRC TEAM, BELLARY.

Facts of Karnataka :

ನಮ್ಮ ಕರ್ನಾಟಕ: (Facts of Karnataka)
 ಗಮನಿಸಬೇಕಾದ ಅಂಶಗಳು: ( 2011 ರ ಜನಗಣತಿಯ ಪ್ರಕಾರ)

 * 1956 ರ ಏಕೀಕರಣದ ನಂತರ ವಿಶಾಲ ಮೈಸೂರು ರಾಜ್ಯ ಉದಯಿಸಿತು. ಆರಂಭದಲ್ಲಿ ಹತ್ತು ಜಿಲ್ಲೆಗಳನ್ನು ಒಳಗೊಂಡಿದ್ದ ಮೈಸೂರು ಪ್ರಾಂತ್ಯಕ್ಕೆ ಭಾಷೆಯ ಆಧಾರದಲ್ಲಿ 1956 ರಲ್ಲಿ ಬಳ್ಳಾರಿ ಜಿಲ್ಲೆ,
 ಮದ್ರಾಸ್ ಪ್ರಾಂತ್ಯದಿಂದ ದಕ್ಷಿಣ ಕನ್ನಡ ಜಿಲ್ಲೆ, ಬಾಂಬೆ ಪ್ರಾಂತ್ಯದಿಂದ - ಉತ್ತರ ಕನ್ನಡ, ಧಾರವಾಡ, ಬೆಳಗಾವಿ ಮತ್ತು ಬಿಜಾಪುರ ಜಿಲ್ಲೆಗಳು.
ಹೈದ್ರಾಬಾದ ಪ್ರಾಂತ್ಯದಿಂದ - ಬೀದರ, ಗುಲ್ಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ವಿಶಾಲ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಂಡವು.

 * 2011 ರ ಜನಗಣತಿಯ ಪ್ರಕಾರ ಭಾರತದಲ್ಲಿ ಒಟ್ಟು 1,21,01,93,422 ಜನರಿದ್ದಾರೆ. ಇದರಲ್ಲಿ 62,37,24,248 ಪುರುಷರು, 58,64,69,174 ಮಹಿಳೆಯರು ಇದ್ದಾರೆ. ಭಾರತದ ಒಟ್ಟುಜನಸಂಖ್ಯೆಯಲ್ಲಿ ಕರ್ನಾಟಕ ರಾಜ್ಯದ ಪಾಲು ಶೇ.5.05 ರಷ್ಟು. ಅಂದರೆ ಕರ್ನಾಟಕ ರಾಜ್ಯದಒಟ್ಟು ಜನಸಂಖ್ಯೆ 6,11,30,704. ಇದರಲ್ಲಿ 3,10,57,742 ಪುರುಷರು ಮತ್ತು 3,00,72,962 ಮಹಿಳೆಯರಿದ್ದಾರೆ.

 * 2001-11 ರ ದಶಕದ ವೃದ್ಧಿ ದರ ಭಾರತದಲ್ಲಿ ಶೇ.17.64, ಆದರೆ ಕರ್ನಾಟಕದಲ್ಲಿ ಶೇ.15.67 ಆಗಿದೆ.

 * ಭಾರತದಲ್ಲಿ ಜನಸಾಂದ್ರತೆ 382. ಪ್ರತಿ ಚದರ ಕಿ.ಮೀ. ಆದರೆ ಕರ್ನಾಟಕದಲ್ಲಿ 319 ಪ್ರತಿ ಚದರ ಕಿ.ಮೀ. ಆಗಿದೆ.

 * ಭಾರತದಲ್ಲಿ ಪ್ರತಿ 1000 ಪುರುಷರಲ್ಲಿ ಸ್ತ್ರೀಯರ ಲಿಂಗಾನುಪಾತ 940/1000, ಆದರೆ ಕರ್ನಾಟಕದಲ್ಲಿ 968/1000 ಆಗಿದೆ.

 * ಭಾರತದಲ್ಲಿ ಸಾಕ್ಷರತೆಯ ಪ್ರಮಾಣ ಶೇ.74.04 ಆದರೆ, ಕರ್ನಾಟಕದಲ್ಲಿ ಸಾಕ್ಷರತೆ ಪ್ರಮಾಣ ಶೇ. 75.60 ಆಗಿದೆ.

 * 0-6 ವರ್ಷದೊಳಗಿನ ಮಕ್ಕಳು ಭಾರತದಲ್ಲಿ 15,87,89,287 ಇದ್ದರೆ, ಕರ್ನಾಟಕದಲ್ಲಿ 68,55,801 ಮಕ್ಕಳಿದ್ದಾರೆ.

 * ಒಟ್ಟು ಕರ್ನಾಟಕದ ಜನಸಂಖ್ಯೆಯಲ್ಲಿ ಶೇ.38.57 ರಷ್ಟು ಜನರು ಗ್ರಾಮೀಣ ವಾಸಿಗಳಾಗಿದ್ದರೆ, ಶೇ.38.57 ರಷ್ಟು ಜನರು ನಗರವಾಸಿಗಳಾಗಿದ್ದಾರೆ.

 * ಒಟ್ಟಾರೆ ವಿಶಾಲ ಕರ್ನಾಟಕವನ್ನು ಆಡಳಿತ ಅನುಕೂಲಕ್ಕಾಗಿ 4 ಕಂದಾಯ ವಿಭಾಗಗಳಾಗಿ, 30 ಜಿಲ್ಲೆಗಳಾಗಿ, 177 ತಾಲ್ಲುಕುಗಳಾಗಿ, 747 ಹೋಬಳಿ ಅಥವಾ ಕಂದಾಯ ವೃತ್ತಗಳಾಗಿ, 5692 ಗ್ರಾಮ ಪಂಚಾಯತಿ ಗಳಾಗಿ ವಿಭಜಿಸಲಾಗಿದೆ.

* ಕರ್ನಾಟಕ ರಾಜ್ಯದಲ್ಲಿ 27,028 ವಾಸಿಸಲು ಯೋಗ್ಯವಾದ ಗ್ರಾಮಗಳು , 2362 ವಾಸಿಸಲು ಯೋಗ್ಯವಲ್ಲದ ಗ್ರಾಮಗಳು , 281 ಪಟ್ಟಣಗಳು, 7 ಮಹಾನಗರ ಪಾಲಿಕೆಗಳು ಇವೆ.

 * ಕರ್ನಾಟಕವನ್ನು ರಕ್ಷಣೆ ಮತ್ತು ಭದ್ರತೆಯ ಉದ್ದೇಶದಿಂದ 20 ಪೊಲೀಸ್ ಜಿಲ್ಲೆಗಳನ್ನಾಗಿ, 77 ಉಪ ವಿಭಾಗಗಳನ್ನಾಗಿ, 178 ವೃತ್ತಗಳನ್ನಾಗಿ ವಿಂಗಡಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ 4 ಮಹಾನಗರ ಪೊಲೀಸ್ ಆಯುಕ್ತ ವಲಯಗಳು (ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ), 696 ಪೊಲೀಸ್ ಠಾಣೆಗಳು ಮತ್ತು 317 ಪೊಲೀಸ್ ಹೊರ ಠಾಣೆಗಳಿವೆ.

 * ಕರ್ನಾಟಕ ರಾಜ್ಯದಲ್ಲಿರುವ ರೇಲ್ವೆ ಪೊಲೀಸ್ ವಲಯಗಳು. 1) ಕೇಂದ್ರೀಯ ವಲಯ - ಬೆಂಗಳೂರು. 2) ಪೂರ್ವ ವಲಯ - ದಾವಣಗೆರೆ. 3) ಉತ್ತರ ವಲಯ - ಗುಲ್ಬರ್ಗಾ. 4) ದಕ್ಷಿಣ ವಲಯ - ಮೈಸೂರು. 5) ಪಶ್ಚಿಮ ವಲಯ - ಮಂಗಳೂರು.

 * ಒಟ್ಟಾರೆ ಕರ್ನಾಟಕ ರಾಜ್ಯದಲ್ಲಿ 30 ಜಿಲ್ಲೆಗಳಿದ್ದು. 224 ವಿಧಾನ ಸಭಾ ಕ್ಷೇತ್ರಗಳು ಮತ್ತು 28 ಲೋಕಸಭಾ ಕ್ಷೇತ್ರಗಳಿವೆ.

 * ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ (95,88,910) ಹಾಗೂ ಬೆಳಗಾವಿ ಜಿಲ್ಲೆ (47,78,439) ದ್ವಿತೀಯ ಸ್ಥಾನದಲ್ಲಿದೆ.

 * ಕನಿಷ್ಟ ಜನಸಂಖ್ಯೆ ಹೊಂದಿರುವ ಜಿಲ್ಲೆಯೆಂದರೆ, ಕೊಡಗು (5,54,762).

 * ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಜನಸಾಂದ್ರತೆ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ ಜಿಲ್ಲೆ ( 4,378 ಪ್ರತಿ ಚದರ ಕಿ.ಮೀ.) ಹಾಗೂ ಅತೀ ಕಡಿಮೆ ಜನಸಾಂದ್ರತೆ ಹೊಂದಿರುವ ಜಿಲ್ಲೆ: ಕೊಡಗು ( 135 ಪ್ರತಿ ಚದರ ಕಿ.ಮೀ.)

 * ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ: ದಕ್ಷಿಣ ಕನ್ನಡ ಜಿಲ್ಲೆ (ಶೇ.88.62 ರಷ್ಟು. ) ಹಾಗೂ ಅತೀ ಕಡಿಮೆ ಸಾಕ್ಷರತೆ ಹೊಂದಿರುವ ಜಿಲ್ಲೆ: ಯಾದಗಿರಿ ಜಿಲ್ಲೆ ( ಶೇ. 52.36 ರಷ್ಟು. )

 * ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚು ಲಿಂಗಾನುಪಾತ ಹೊಂದಿರುವ ಜಿಲ್ಲೆ: ಉಡುಪಿ ಜಿಲ್ಲೆ (1,093/1000).ಹಾಗೂ ಅತೀ ಕಡಿಮೆ ಲಿಂಗಾನುಪಾತ ಹೊಂದಿರುವ ಜಿಲ್ಲೆ: ಬೆಂಗಳೂರು ನಗರ ಜಿಲ್ಲೆ (908/1000).

SRC TEAM, BELLARY.

ಭಾರತೀಯ ಪರಂಪರೆಯ ತಾಣಗಳು (Indian Heritage Sites) :

ಭಾರತೀಯ ಪರಂಪರೆಯ ತಾಣಗಳು (Indian Heritage Sites) :

 ಭಾರತ ದೇಶ ವೈವಿಧ್ಯಮಯ ಸಂಸ್ಕೃತಿ, ಧಾರ್ಮಿಕ ಪರಂಪರೆ, ಐತಿಹಾಸಿಕ ಕಟ್ಟಡಗಳಿಂದ ಪ್ರಸಿದ್ಧಿ ಪಡೆದಿದ್ದು, ವಿಶ್ವಪಟದಲ್ಲಿ ಗುರುತಿಸಿಕೊಂಡಿದೆ. ಭಾರತವನ್ನಾಳಿದ ದೊರೆಗಳು ನೀಡಿದ ಕೊಡುಗೆ, ಬ್ರಿಟಿಷರಕಾಲದಲ್ಲಿ ನಿರ್ಮಾಣಗೊಂಡ ಕೆಲವು ಸ್ಮಾರಕಗಳು ಇಂದಿಗೂ ಪ್ರವಾಸಿ ತಾಣಗಳಾಗಿ ಹೆಸರು ಪಡೆದಿವೆ. ವಿಶ್ವಪರಂಪರೆಯ ಪಟ್ಟಿಯಲ್ಲಿ ಸೇರಿಕೊಂಡಿವೆ.

1. ತಾಜ್ ಮಹಲ್, ಆಗ್ರಾ (Taj Mahal, Agra) :
ಆಗ್ರಾದ ತಾಜ್ ಮಹಲ್ ವಿಶ್ವದ ಏಳು ಅದ್ಭುತಗಳಲ್ಲಿ ಒಂದು. ಭವ್ಯ ಸ್ಮಾರಕದ ಹೊರತಾಗಿ ಹಲವು ವಿಸ್ಮಯಗಳನ್ನು ತೆರೆದಿಡುತ್ತದೆ. ಪಡೆದುಕೊಂಡ ಪ್ರೀತಿ, ಕಳೆದುಕೊಂಡು, ಅದಕ್ಕೆ ಕನಿಕರಪಟ್ಟು , ಮತ್ತೆ ಪ್ರೀತಿಸುವ ಆತ್ಮ ತಾಜ್‌ಮಹಲ್‌ನಲ್ಲಿದೆ. ಅಲ್ಲಿ ಪ್ರೀತಿಯೊಂದೇ ಅಲ್ಲ, ಪ್ರೀತಿಸುವ ಹೃದಯದ ಮಾತಿದೆ. ಮೊಘಲ್ ದೊರೆ ಶಾಹ್‌ಜಾನ್ ತನ್ನ ಪ್ರೀತಿಯ ಹೆಂಡತಿಗಾಗಿ ಕಟ್ಟಿಸಿದ ಭವ್ಯ ಸಮಾಧಿ. ಬರಿ ನೆನಪಾಗಿ ಉಳಿದ ಹೆಂಡತಿಯ ಹೆಸರಲ್ಲಿ ಅಂತಹ ಅದ್ಭುತ ತಾಜ್‌ಮಹಲ್‌ನ್ನು ಕಟ್ಟಿಸುತ್ತಾನೆ. ಈ ಪ್ರೀತಿಯ ಕಥೆಯನ್ನೊಳಗೊಂಡ ತಾಜ್ ಮಹಲ್ ವಿಶ್ವದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

2. ಅಜಂತಾ, ಎಲ್ಲೋರ ಗುಹೆಗಳು (Caves of Ajanta, Ellora) :
ಮಹಾರಾಷ್ಟ್ರದ ಔರಂಗಾಬಾದ್‌ನಿಂದ ಕೆಲವೇ ದೂರದಲ್ಲಿರುವ, ಅಜಂತಾ ಎಲ್ಲೋರಾ ಗುಹೆಗಳು ವಿಸ್ಮಯ ಮೂಡಿಸುತ್ತವೆ. 3ನೇ ಶತಮಾನದ ಈ ಗುಹೆಗಳು ಬೌದ್ಧ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಮೇರುಕೃತಿಗಳು ಎಂದು ಪರಿಗಣಿಸಬಹುದು. ಇವುಗಳು ಸ್ವಾಭಾವಿಕವಾಗಿ ರಚಿತಗೊಂಡಿರುವ ಗುಹೆಗಳಲ್ಲ. ಕೆಲವು ಸಾವಿರ ವರ್ಷಗಳ ಹಿಂದೆ ಬೌದ್ಧ ಸಂನ್ಯಾಸಿಗಳು ಸ್ವಾಭಾವಿಕ ಬಂಡೆ ಕಲ್ಲುಗಳ ಮೇಲೆ ಕೆತ್ತಿ ಗುಹೆಗಳನ್ನು ನಿರ್ಮಿಸಿದ್ದಾರೆ. ಮುಂಬೈನಿಂದ 400 ಕಿಮೀ ದೂರದಲ್ಲಿದೆ.

 3. ರಾಜಸ್ತಾನ ರಾಯಲ್ ಸ್ಟೇಟ್ (Rajasthan Royal State) :
ರಾಜಸ್ತಾನ ರಾಯಲ್ ಸ್ಟೇಟ್ ಎಂದು ಕರೆಸಿಕೊಂಡಿರೋ ರಾಜಸ್ತಾನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯಿದೆ. ಈ ರಾಜ್ಯದಲ್ಲಿ ನೋಡಬಹುದಾದ ಹಲವು ಸುಂದರ ಸ್ಥಳಗಳಿವೆ. ಸರೋವರಗಳ ನಗರ ಉದಯಪುರದಲ್ಲಿ ಮಾನವ ನಿರ್ಮಿತ ಸುಂದರ ಸರೋವರ, ವೈಭವದಿಂದ ಕೂಡಿದ ಅರಮನೆಗಳು ಹಾಗೂ ಬಿಷ್ಣೋಯ್ ಗ್ರಾಮ ಅನ್ನೋದು ಒಂದು ಕಲಾ ಗ್ರಾಮ. ಇಲ್ಲಿ ರಾಜಸ್ತಾನದ ಸ್ಥಳೀಯರನ್ನು ಭೇಟಿ ಮಾಡಿ, ವಿಭಿನ್ನ ಕಲೆಯನ್ನು ಕಲಿಯಬಹುದು.

 4. ಬುದ್ಧ ಗಯಾ (Budha Gaya) :
ಬೌದ್ಧ ಧರ್ಮ ಹುಟ್ಟಿದ್ದು ಬಿಹಾರದಲ್ಲಿ. ಬುದ್ಧ ಧ್ಯಾನಕ್ಕೆ ಕುಳಿತು ಜ್ಞಾನೋದಯವಾದ ಜಾಗವನ್ನು ಬುದ್ಧ ಗಯಾ ಎಂದು ಕರೆಯುತ್ತಾರೆ. ಇದು ವಿಶ್ವದ ಪ್ರಮುಖ ಬೌದ್ಧ ಕೇಂದ್ರಎನಿಸಿದೆ. ಇದನ್ನೇ ಬೋಧಿ ವೃಕ್ಷ ಎಂದು ಕರೆಯುತ್ತಾರೆ. ಇಲ್ಲಿ ಸರಳ ಜೀವನ ಶೈಲಿ, ಸಂನ್ಯಾಸ, ಪ್ರತಿಯೊಂದು ಜೀವದ ಮೇಲೂ ಅನುಭೂತಿ ತೋರುವ ಉಪದೇಶ ನೀಡಲಾಗುತ್ತದೆ. 'ವಿಹಾರ' ಎಂಬ ಪದದಿಂದ ವಿಹಾರ ಹುಟ್ಟಿಕೊಂಡಿದ್ದು. ಬೌದ್ಧ ಮಠಗಳನ್ನು 'ವಿಹಾರ' ಎಂದು ಕರೆಯಲಾಗುತ್ತಿತ್ತು. ಇಲ್ಲಿ ಹಲವು ಹಳೆಯ ಬೌದ್ಧ ದೇವಾಲಯಗಳಿವೆ. ನಲಂದ ವಿಶ್ವವಿದ್ಯಾಲಯ ಇರುವುದು ಇಲ್ಲಿಯೇ.

 5. ಗೋವಾ ಕ್ಯಾಥೆಡ್ರಲ್ಸ್ಗ್(Goa Cathedrals) :
 ಗೋವಾದಲ್ಲಿ ವಸಾಹತುಶಾಹಿಗಳ ಕೊಡುಗೆಹೆಚ್ಚು. ಪೋರ್ಚ್‌ಗೀಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಹಲವಾರು ಸುಂದರ ಚರ್ಚ್‌ಗಳಿದ್ದು, ಅವುಗಳಲ್ಲಿ ಹೆಚ್ಚಿನವು, ಹಳೆ ಗೋವಾಕ್ಕೆ ಸೇರ್ಪಡೆಗೊಂಡಿವೆ. ಓಲ್ಡ್ ಗೋವಾದ ಚರ್ಚುಗಳು, ರೋಮ್ ಚರ್ಚ್‌ಗಳವೈಭವವನ್ನು ಹೋಲುತ್ತವೆ.

* ಗೋವಾದಲ್ಲಿರುವ ಕೆಲವು ಪ್ರಮುಖ ಚರ್ಚುಗಳು:
ಸೈಂಟ್ ಕ್ಯಾಥೆಡ್ರಲ್ ಚರ್ಚ್, ಸೈಂಟ್ ಫ್ರಾನ್ಸಿಸ್ ಚರ್ಚ್, ಸೈಂಟ್ ಕ್ಯಾಥರಿನ್, ಬೆಸಿಲಿಕಾ ಆಫ್ ಜೀಸಸ್, ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್, ಡ್ಯೂಕ್ ಆಫ್ ಟುಸ್ಕಾನಿ, ಹೀಗೆ ಇನ್ನೂ ಹಲವಾರು ಚರ್ಚ್‌ಗಳನ್ನು ಇಲ್ಲಿ ನೋಡಬಹುದು.

 6. ಖಜುರಾಹೋ ಟೆಂಪಲ್ (Khajuraho Temples) :
ಭಾರತದ ದೇವಸ್ಥಾನಗಳ ವಾಸ್ತುಶಿಲ್ಪಗಳ ಪೈಕಿ ಖಜುರಾಹೋ ದೇವಸ್ಥಾನದ ವಾಸ್ತುಶಿಲ್ಪ ಅನನ್ಯ.ಮಧ್ಯ ಪ್ರದೇಶದಲ್ಲಿರುವ ಖಜುರಾಹೋ ದೇವಾಲಯದಲ್ಲಿ ಕಾಮಪ್ರಚೋದಕ ಶಿಲ್ಪಗಳಿವೆ. ಇದು ಸಾಂಪ್ರದಾಯಿಕ ಮನಸ್ಥಿತಿಯನ್ನು ಒಂದು ಕ್ಷಣ ಬದಲಾಯಿಸಿಬಿಡುತ್ತದೆ. ಈ ದೇವಾಲಯ ಯುನೆಸ್ಕೋ ವಿಶ್ವಪರಂಪರೆಯ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಕೆಲವು ವಾಸ್ತುಶಿಲ್ಪಗಳು ಶಿಲ್ಪಿಯ ಕೌಶಲವನ್ನು ಹೇಳುತ್ತದೆ. ಚಂದ್ರನ ವಂಶಸ್ಥ ಈ ವಾಸ್ತುಶಿಲ್ಪವನ್ನು ರಚಿಸಿದ ಎಂಬುದು ನಂಬಿಕೆ.

 7. ಹಂಪಿ (Hampi) :
14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇದು ವಿಜಯನಗರ ಸಾಮ್ರಾಜ್ಯದ ವೈಭವದ ದಿನಗಳನ್ನು ನೆನಪಿಸುತ್ತದೆ. ಆ ಕಾಲದ ವಾಣಿಜ್ಯ ಹಾಗೂ ಆಡಳಿತದ ಪ್ರಮುಖ ಕೇಂದ್ರವಾಗಿತ್ತು. 25ಕಿಮೀ ವಿಸ್ತೀರ್ಣದಲ್ಲಿ ಸುಮಾರು 500ಕ್ಕೂಹೆಚ್ಚು ಸ್ಮಾರಕಗಳಿವೆ. ಇಲ್ಲಿರುವ ವಿಠ್ಠಲ ದೇವಸ್ಥಾನ ಫೇಮಸ್. ಇದರ ದೊಡ್ಡ ಸಭಾಂಗಣ 56 ಕಂಬಗಳನ್ನೊಳಗೊಂಡಿದ್ದು, ಇದನ್ನು ತಟ್ಟಿದಾಗ ಸಂಗೀತ ಹೊರಹೊಮ್ಮುತ್ತದೆ. ಪ್ರತಿವರ್ಷ ಇಲ್ಲಿ ಹಂಪಿ ಉತ್ಸವ ನಡೆಯುತ್ತದೆ. ಬೆಂಗಳೂರಿನಿಂದ 350 ಕಿಮೀ ದೂರದಲ್ಲಿದೆ.

ಭಾರತದಲ್ಲಿ ಹೆಚ್ಚಿದ ತೈಲ ಬಿಕ್ಕಟ್ಟು

ಭಾರತದಲ್ಲಿ ಹೆಚ್ಚಿದ ತೈಲ ಬಿಕ್ಕಟ್ಟು -

ಪ್ರಗತಿಯ ಗತಿಯ ಮೇಲೆ ಅದರ ಪರಿಣಾಮ . ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ಭಾರತವು ಇಂದು ತೈಲ ಬಿಕ್ಕಟ್ಟನ್ನು ಎದುರಿಸುತ್ತಿದೆ.ಇದು ದೇಶದ ಪ್ರಗತಿಪರ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

 ಇದಕ್ಕೆ ಹಲವಾರು ಕಾರಣಗಳನ್ನು ನಾವು ಗಮನಿಸಬಹುದು.

* ಯುರೋಪ್ ನ ಆರ್ಥಿಕ ಬಿಕ್ಕಟ್ಟು
*ಕುಸಿಯುತ್ತಿರುವ ರೂಪಾಯಿ ಮೌಲ್ಯ
,* ಹೆಚ್ಚುತ್ತಿರುವ ವಿತ್ತೀಯ ಕೊರತೆ ಮತ್ತು
* ಆಮದಿಗೆ ಬೇಕಾಗಿರುವ ಡಾಲರ್‌ನ ಅಭಾವ ದೇಶದಲ್ಲಿ ತೈಲ ಬಿಕ್ಕಟ್ಟನ್ನುಸೃಷ್ಟಿಸುತ್ತಿದೆ.

* ಯುರೋಪ್ ನ ಆರ್ಥಿಕ ಬಿಕ್ಕಟ್ಟಿನಿಂದ ಡಾಲರ್ ಹೆಚ್ಚು ಸದೃಢವಾಗಿದೆ. ಇದರಿಂದ ಭಾರತದ ಷೇರುಪೇಟೆ ಋಣಾತ್ಮಕ ಪ್ರಭಾವ ಬೀರಿದೆ.

* ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಕಚ್ಚಾ ತೈಲದ ಆಮದಿಗೆ ನೀಡಬೇಕಿರುವ ಡಾಲರ್‌ನಪ್ರಮಾಣವೂ ಹೆಚ್ಚಾಗುತ್ತಿದ್ದು, ಕೇಂದ್ರ ಸರಕಾರ ಅನಿವಾರ್ಯವಾಗಿ ತೈಲ ವೆಚ್ಚದ ಮೇಲೆ ನಿರ್ಬಂಧ ಹೇರಲು ಯೋಚಿಸುತ್ತಿದೆ. ಸಮಸ್ಯೆ ಮಾತ್ರ ಹಾಗೇ ಉಳಿದಿದೆ.ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ತೈಲ ಬಹುಮುಖ್ಯ ಚಾಲಕ ಶಕ್ತಿ. ಅದರ ಮೇಲಿನ ನಿರ್ಬಂಧ ಹೇರುವುದೆಂದರೆ, ಅಭಿವೃದ್ಧಿಗೆ ಹಾಕಿದ ಕಡಿವಾಣವೆಂದೇ ಅರ್ಥ.

* ಬೇಡಿಕೆ ಇದ್ದಷ್ಟು ಪ್ರಮಾಣದಲ್ಲಿ ದೇಶೀಯವಾಗಿ ತೈಲ ಉತ್ಪಾದನೆಯಾಗುತ್ತಿಲ್ಲ. ಬಹುಪಾಲು ತೈಲ ವಿದೇಶಗಳಿಂದ ಡಾಲರ್ ಕೊಟ್ಟು ಆಮದು ಮಾಡಿಕೊಳ್ಳಬೇಕು. ಬೇಕಾದಷ್ಟು ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳಲು ದೇಶದ ಬಳಿ ಅಗತ್ಯವಾದಷ್ಟು ಡಾಲರ್ ಸಂಗ್ರಹ ಇಲ್ಲ. ಹೀಗಾಗಿಯೇ ಬಿಕ್ಕಟ್ಟು.

* ತೈಲ ಬಳಕೆ ಕಡಿಮೆ ಮಾಡಿದರೆ ಸ್ವಲ್ಪವಾದರೂ ಒತ್ತಡ ಕಡಿಮೆ ಕಡಿಮೆಯಾಗುತ್ತದೆ ನಿಜ. ಆದರೆ, ಹಾಗೆ ಮಾಡಲು ಸಾಧ್ಯವಿಲ್ಲದಂಥ ಸ್ಥಿತಿ ದೇಶದಲ್ಲಿ ಇದೆ .

* ರಫ್ತು ಹೆಚ್ಚಿಸುವ ಮತ್ತು ವಿದೇಶಿ ಬಂಡವಾಳ ಆಕರ್ಷಿಸುವ ಮೂಲಕ ಅಧಿಕ ಡಾಲರ್ ಸಂಗ್ರಹ ಮಾಡುವಮೂಲಕ ಸಮಸ್ಯೆ ನಿಭಾಯಿಸಬಹುದು. ಆದರೆ, ಅದು ಶೀಘ್ರ ಆಗುವಂಥದ್ದಲ್ಲ. ಹೀಗಾಗಿ, ಸರಕಾರ ದಿಢೀರ್ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿ ಬಂದಿದೆ.

* ತೈಲ ಆಮದಿನ ವಿಚಾರದಲ್ಲಿ ಭಾರತ ಕಳೆದ ಎರಡು ದಶಕಗಳಿಂದ ಸಮಸ್ಯೆಯನ್ನು ಎದುರಿಸುತ್ತಾ ಬಂದಿದೆ. ಅಮೆರಿಕ ಮತ್ತು ತೈಲ ಉತ್ಪಾದನಾ ದೇಶಗಳ ನಡುವಣ ಸಂಬಂಧಗಳು ಭಾರತಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತಿವೆ.ಪರಮಾಣು ಅಸ್ತ್ರ ವಿವಾದದಿಂದಾಗಿ ಇರಾನ್ ಮತ್ತು ಅಮೆರಿಕ ನಡುವಣ ಸಂಬಂಧ ಕೆಟ್ಟಿದೆ. ಈ ಬೆಳವಣಿಗೆ ಭಾರತಕ್ಕೆ ಪೂರೈಸಲಾಗುತ್ತಿದ್ದ ತೈಲದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ

ಪರಿಹಾರ ಕ್ರಮಗಳು: .

* ಇದೀಗ, ಸಿರಿಯಾ ಮೇಲೆ ಅಮೆರಿಕ ದಾಳಿ ನಡೆಸಿದರೆ ಭಾರತ ಮತ್ತಷ್ಟು ತೈಲ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಭಾರತವು ಅಮೆರಿಕದ ಒತ್ತಡವನ್ನು ಕಡೆಗಣಿಸಿ, ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದು ಅನಿವಾರ್ಯ. ಇದರಿಂದಾಗುವ ಅನುಕೂಲವೆಂದರೆ, ರೂಪಾಯಿ ನೀಡಿ ಇರಾನ್‌ನಿಂದ ತೈಲ ಕೊಳ್ಳಲು ಸಾಧ್ಯವಿರುವುದು. ಆದರೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಕಡೆಗಣಿಸಿ ಇರಾನ್‌ನಿಂದ ತೈಲ ಕೊಳ್ಳುವುದು ಸುಲಭವಲ್ಲ. ಆದರೆ, ಅಂಥ ಒಂದು ಧೈರ್ಯದ ಹೆಜ್ಜೆ ಇಡುವುದು ಈಗ ಅನಿವಾರ್ಯವಾಗಿದೆ. ಇದು ತೈಲ ಬಿಕ್ಕಟ್ಟನ್ನು ಎದುರಿಸಲು ಅನುಸರಿಸಬಹುದಾದ ಒಂದು ಕ್ರಮ ಅಷ್ಟೆ.

* ಭಾರತೀಯ ರಿಜರ್ವ್ ಬ್ಯಾಂಕ್ ದೇಶದ ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಸಟ್ಟಾ ವ್ಯವಹಾರದ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.

* ಕಚ್ಚಾತೈಲ ಆಮದು ಪಾವತಿಗೆ ಅಗತ್ಯವಾದ ಡಾಲರ್ ಗಳನ್ನು ತೈಲ ಕಂಪನಿಗಳು ಸರ್ಕಾರಿ ಸ್ವಾಮ್ಯದ ಒಂದೇ ಬ್ಯಾಂಕಿನಿಂದ ಪಡೆದುಕೊಳ್ಳಬೇಕು. ಇದೇ ರೀತಿ ಇನ್ನೂ ಹಲವು ಕ್ರಮಗಳನ್ನು ಸರಕಾರ ತೆಗೆದುಕೊಂಡರೆ ಮಾತ್ರ ತೈಲ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯ.

SRC TEAM, BELLARY

ಭಾರತದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳು

ಭಾರತದ ವಿದ್ಯುತ್ ಕ್ಷೇತ್ರದ ಸಮಸ್ಯೆಗಳು:

 ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಬಡದೇಶವಾಗಿದ್ದ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ ಈಗ ಅಧಿಕ ವಾಗಿದ್ದು ಶ್ರೀಮಂತಿಕೆಯತ್ತ ದಾಪುಗಾಲಿರಿಸಿದೆ. ಆದರೆ ಭಾರತವನ್ನು ವಿದ್ಯುಚ್ಛಕ್ತಿ ಕೊರತೆ ಕಾಡುತ್ತಿದ್ದು ಪ್ರಗತಿಗೆ ಅಡಚಣೆಯಾಗಿ ಪರಿಣಮಿಸಿದೆ. ಭಾರತದ ತಲಾವಾರು ವಿದ್ಯುಚ್ಛಕ್ತಿ ಬಳಕೆಯ ಪ್ರಮಾಣ ಕೇವಲ 700 ಮೇಗಾವ್ಯಾಟ್ ಮಾತ್ರ. ದೇಶದ ಶೇ.20 ರಷ್ಟು ಮಂದಿಗೆ ವಿದ್ಯುತ್ ಲಭಿಸುತ್ತಿಲ್ಲ. ಜಗತ್ತಿನಲ್ಲೇ ಅತೀ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿರುವವರು ಭಾರತದ ಪ್ರಜೆಗಳು. ಭಾರತದ ವಿದ್ಯುತ್ ಕೊರತೆಯನ್ನು ನಿವಾರಿಸಲು ವಷ೯ಕ್ಕೆ 30 ರಿಂದ 40 ಸಾವಿರ ಮೇಗಾವ್ಯಾಟ್ ನಷ್ಟು ವಿದ್ಯುತ್ ಅಧಿಕವಾಗಿ ಉತ್ಪಾದನೆಯಾಗಬೇಕು. ಆದರೆ ಕಳೆದ ನಾಲ್ಕೈದು ವಷ೯ಗಳಲ್ಲಿ ಭಾರತದಲ್ಲಿ ಉತ್ಪಾದನೆಯಾಗಿರುವ ವಿದ್ಯುತ್ 550000 ಮೆಗಾವಾಟ್ ಗಳು. ಅಂದರೆ ಸನ್ನಿವೇಶದ ಜಟಿಲತೆ ಅರಿವಾಗಬಹುದು.

ಅಮೇರಿಕದೊಂದಿಗೆ ಮಾಡಿಕೊಂಡ ನಾಗರಿಕ ಪರಮಾಣು ಸಹಕಾರ ಒಪ್ಪಂದದ ಫಲಿತಾಂಶಗಳಿಗೆ 2020ನೇ ಇಸ್ವಿವರೆಗಿನ ಕಾಲಾವಧಿ ಬೇಕಾಗುತ್ತದೆ. ಹಾಗೆ ಪ್ರಯೋಜನ ದೊರೆತರೂ ಸಿಗುವ ಹೆಚ್ಚಿನ ವಿದ್ಯುತ್ ಪ್ರಸಕ್ತ ಶೇ3ಕ್ಕೆ ಮತ್ತೆ ಶೇ3 ರಷ್ಟು ಸೇರಿ ಶೇ6 ರಷ್ಟು ಮಾತ್ರವಾಗುತ್ತದೆ. ಆದರೆ ಜನಸಂಖ್ಯಾ ಸ್ಫೋಟ ಮತ್ತು ವಿದ್ಯುತ್ ಬೇಡಿಕೆಯ ಆಧಿಕ್ಯ ಗಮನಿಸಿದರೆ ಈ ಪ್ರಮಾಣ ಏನೇನೂ ಅಲ್ಲ. ಇದರೊಂದಿಗೆ ಪ್ರಸರಣ ತೊಂದರೆ ಮತ್ತು ಕೆಲವೊಮ್ಮೆ ಸಂಭವಿಸುವ ತಾಂತ್ರಿಕ ಅಡಚಣೆಗಳು ಮತ್ತು ಅವುಗಳ ದುರಸ್ತಿಗೆ ಬೇಕಾಗುವ ವಿದ್ಯುತ್ ವೆಚ್ಚ ಮತ್ತಷ್ಟು ಆತಂಕವನ್ನುಂಟುಮಾಡಿವೆ.

 2012ರ ಜುಲೈ 30 ಮತ್ತು 31 ರಂದು ಉತ್ತರ ಭಾರತದ 22 ರಾಜ್ಯಗಳಲ್ಲಿ ವಿದ್ಯುತ್ ನಿಲುಗಡೆಯಾಗಿ ಸುಮಾರು 70 ಕೋಟಿಯಷ್ಟು ಜನರು ಇದರ ಭಾಧೆಗೊಳಗಾದರು. ಭಾರತದ ಪವರ್ ಗ್ರೀಡ್ ಗಳಲ್ಲಿ ತಲೆದೂರಿದ ತಾಂತ್ರಿಕ ಅಡಚಣೆಯಿಂದಾಗಿ ಈ ಭಾರೀ ವಿದ್ಯುತ್ ವ್ಯತ್ಯಯವಾಗಿತ್ತು. ಭಾರತದಲ್ಲಿ ಸರ್ಕಾರಿ ಸೇವೆಗೆ ಸಹಸ್ರಾರು ಎಂಜಿನಿಯರ್ ಗಳು ಸೇರ್ಪಡೆಗೊಳ್ಳುತ್ತಾರೆ. ಆದರೆ ಇವರ ತಾಂತ್ರಿಕ ಪ್ರತಿಭೆಯ ಪ್ರಯೋಜನ ಸಾರ್ವಜನಿಕರಿಗೆ ಲಭಿಸುವುದಿಲ್ಲ. ಏಕೆಂದರೆ ಈ ಇಂಜನಿಯರ್ ಗಳಿಂದ ಗುಮಾಸ್ತರ ಇಲ್ಲವೇ ಅಡಳಿತಾತ್ಮಕ ಸೇವೆ ಪಡೆಯುವ ಸರ್ಕಾರ ತಾಂತ್ರಿಕ ಕರ್ತವ್ಯದ ಜವಾಬ್ದಾರಿಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸುತ್ತದೆ. ಎಂಜಿನಿಯರ್ ಗಳಿಗೆ ತಾಂತ್ರಿಕ ಹೊಣೆಗಾರಿಕೆಗಳನ್ನು ವಹಿಸಿದಾಗ ಮಾತ್ರ ಅವರ ಕೌಶಲ್ಯ ವ್ರದ್ದಿಗೊಂಡು ದೇಶವಾಸಿಗಳಿಗೆ ಅದರ ಪೂರ್ಣ ಪ್ರಯೋಜನ ಲಭಿಸುತ್ತದೆ.
 ಇದಲ್ಲದೆ ವಿದ್ಯುತ್ ಕೊರತೆ ನೀಗಲು ಮತ್ತಷ್ಟು ಮಾರ್ಗೋಪಾಯಗಳಿವೆ.

 * ಭಾರತವು ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಲು ಸಮರ್ಥವಾಗಿದೆ. ಆ ನಿಟ್ಟಿನಲ್ಲಿ ಗಮನ ಹರಿಸುವುದು ಅಗತ್ಯ.

 * ಭಾರತ ದೇಶವು ನೈಸರ್ಗಿಕ ಸಂಪನ್ಮೂಲವಾದ ಕಲ್ಲಿದ್ದಲನ್ನು ಬಳಸಿ ಶಾಖೋತ್ಪನ್ನ ವಿದ್ಯುತ್ ತಯಾರಿಸುತ್ತಿದೆ. ಆದರೆ ಮುಂದೆ ಕಲ್ಲಿದ್ದಲು ನಿಕ್ಷೇಪ ಬರಿದಾಗುವ ಸಾಧ್ಯತೆಯಿದೆ. ಇದರ ಬದಲಾಗಿ ಪ್ರಾಕ್ರತೀಕವಾಗಿ ಲಭಿಸುವ ಸೌರಶಕ್ತಿಯ ಸದ್ಬಳಕೆ ಮಾಡಿಕೊಂಡರೆ ಅಗತ್ಯವಿರುವ ಪ್ರಮಾಣದ ವಿದ್ಯುಚ್ಛಕ್ತಿ ಪಡೆಯಲು ಸಾಧ್ಯವಾಗುತ್ತದೆ.

* ಸೌರಶಕ್ತಿಯ ಉತ್ಪಾದನೆಯ ವೆಚ್ಚವೂ ಕಡಿಮೆ ಎಂಬ ಅಂಶ ಗಮನಾರ್ಹ. ಇದಲ್ಲದೆ ಸಕಲ ಪ್ರಾದೇಶಿಕ ವಿದ್ಯುಚ್ಛಕ್ತಿ ಜಾಲವನ್ನು ಬೆಸೆಯುವ ರಾಷ್ಟೀಯ ಗ್ರೀಡ್ ಸ್ಥಾಪನೆಗೆ ಸರ್ಕಾರ ಆದ್ಯ ಗಮನ ನೀಡಬೇಕು.

 * ಸಮುದ್ರದ ಅಲೆಗಳಿಂದಲೂ ವಿದ್ಯುತ್ ಉತ್ಪಾದನೆ ಸಾಧ್ಯ. ಭಾರತವು 7000km ನಷ್ಟು ಉದ್ದದ ಕರಾವಳಿ ತೀರ ಹೊಂದಿದೆ. ಇಂಥಾ ಸಮ್ರದ್ದ ಸಂಪನ್ಮೂಲದ ಸದ್ಬಳಕೆ ಸರ್ಕಾರದ ಪ್ರಥಮಾದ್ಯತೆ ಆಗಬೇಕಾಗಿದೆ.


SRC TEAM, BELLARY.

ಮೇಘ ಸ್ಫೋಟ (Cloud Burst)

ಮೇಘ ಸ್ಫೋಟ (Cloud Burst) : -

 ನೈಸರ್ಗಿಕ ವಿಕೋಪದ ಒಂದು ರೂಪ ಇದಾಗಿದ್ದು, ವಾತಾವರಣದಲ್ಲಿ ಮೋಡಕ್ಕೆ ಮೋಡವೇ ಸ್ಫೋಟಗೊಂಡು ಭೂಮಿಗೆ

ಎರಗುವ ಜಲಧಾರೆ. ಚಂಡಮಾರುತ ಉಂಟಾದಾಗ ಸಾಕಷ್ಟು ಪ್ರಮಾಣದ ನೀರಿನ ಅಂಶವನ್ನು ಇರಿಸಿಕೊಂಡ ಗಾಳಿಯ

ಅಲೆಗಳು ಬೆಟ್ಟ ಕಣಿವೆಯ ನಡುವೆ ಸಿಲುಕಿಕೊಂಡು ಸ್ತಬ್ಧವಾಗಿ ಬಿಡುತ್ತವೆ. ಹಾಗೆ ಗಾಳಿ ಸ್ಥಗಿತಗೊಂಡಾಗ ಮೋಡಗಳ ಮೇಲೆ

ವಿಪರೀತ ಒತ್ತಡ ಉಂಟಾಗಿ ಮೋಡ ಸ್ಫೋಟವಾಗುತ್ತದೆ.

ಮಳೆಯ ರಭಸ ಪ್ರತಿ ಗಂಟೆಗೆ 10 cm ಗಿಂತ ಹೆಚ್ಚಾಗಿರುತ್ತದೆ. ಇದರ ಪ್ರಭಾವ ಸುಮಾರು 20-80 km ವ್ಯಾಪ್ತಿ ತನಕ

ಇರುತ್ತದೆ.

SRC TEAM, BELLARY.

ಪ್ರಸ್ತುತ ಅಂಕಿ-ಅಂಶ ಮಾಹಿತಿ ಕಣಜ

 ಪ್ರಸ್ತುತ ಅಂಕಿ-ಅಂಶ ಮಾಹಿತಿ ಕಣಜ :

 ★ ಭಾರತೀಯ ಕ್ರೈಂ ದಾಖಲೆ ಬ್ಯೂರೊ ನೀಡಿರುವ ವರದಿಯ ಪ್ರಕಾರ ೨೦೦೯ ರಿಂದ ೨೦೧೧ ರವರೆಗೆ ದೇಶದಲ್ಲಿ ಸುಮಾರು ೬೮,೦೦೦ ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ! ಸರಾಸರಿ ಪ್ರತಿ ನಿಮಿಷಕ್ಕೊಂದು ಅತ್ಯಾಚಾರದ ಪ್ರಯತ್ನ ನಡೆಯುತ್ತಲೇ ಇರುತ್ತದೆಎಂದು ಸಹ ಹೇಳಲಾಗುತ್ತಿದೆ.( ಜನೆವರಿ 2013 )

★ ಟ್ರಾನ್ಸ್ ಪರೆನ್ಸಿ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರಕಾರ ಪ್ರಪಂಚದ ಪ್ರತಿ 4 ಮಂದಿಯಲ್ಲಿ ಒಬ್ಬರು ಸಾರ್ವಜನಿಕ ಸೇವೆ ಪಡೆಯಲು ಲಂಚ ನೀಡುತ್ತಿದ್ದಾರೆ ಹಾಗೂ ಜಾಗತಿಕವಾಗಿ ಶೇ. 28 ರಷ್ಟು ಪುರುಷರು ಮತ್ತೂ ಶೇ. 25 ರಷ್ಟು ಮಹಿಳೆಯರು ಲಂಚ ನೀಡುತ್ತಿದ್ದಾರೆ.

★ ಕರ್ನಾಟಕದಲ್ಲಿ 99014 ಹೆಕ್ಟೇರ್ ಅರಣ್ಯ ಪ್ರದೇಶ ಅಕ್ರಮವಾಗಿ ಒತ್ತುವರಿಗೆ ಒಳಗಾಗಿದೆ. .( ಜನೆವರಿ 2013 )

★ Global Financial Integrity ಸಂಸ್ಥೆಯ ವರದಿ ಪ್ರಕಾರ ಕಪ್ಪು ಹಣದ ಹಾವಳಿಯಿಂದ ಭಾರತವು ಕಳೆದ 10 ವರ್ಷಗಳಲ್ಲಿ 123 ಶತಕೋಟಿ ಡಾಲರ್ (676500 ಕೋಟಿ ರೂ.) ನಷ್ಟ ಅನುಭವಿಸಿದೆ..( ಜನೆವರಿ 2013 )

★ ಇಂದು ದೇಶದ 543 ಸದಸ್ಯರಲ್ಲಿ (MP) 162 MP ಗಳು ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ. ರಾಜ್ಯಗಳ MLA, MLC ಗಳ ಪೈಕಿ 1258 ( 4032 ಸದಸ್ಯರು ) ಕ್ರಿಮಿನಲ್ ಕೇಸ್ ನಲ್ಲಿ ಸಿಕ್ಕಿಕೊಂಡಿದ್ದಾರೆ. ( ನವಂಬರ್ 2013 ).

★ ಸರ್ಕಾರಿ ದಾಖಲೆಗಳ ಪ್ರಕಾರ 2011-12 ರಲ್ಲಿ ಮನೆಗೆಲಸಕ್ಕಾಗಿ ನಿಯೋಜಿಸಲೆಂದು ಕಳ್ಳಸಾಗಣೆ ಮಾಡುವ 126,321 ಚಿಕ್ಕ ಹೆಣ್ಣುಮಕ್ಕಳನ್ನು ರಕ್ಷಿಸಲಾಗಿದೆ. ಈ ಕಳ್ಳಸಾಗಣೆ ಪ್ರಮಾಣ 2010 ನೇ ಸಾಲಿಗಿಂತ ಶೇ.27 ರಷ್ಟು ಹೆಚ್ಚು. (ಡಿಸಂಬರ್ 2013).

★ ಕಳೆದ 8 ವರ್ಷಗಳಿಂದ ಈಚೆಗೆ ದೇಶಾದ್ಯಂತ 1000 ಕ್ಕೂ ಹೆಚ್ಚು ಕೋಮು ಗಲಭೆಗಳು ಸಂಭವಿಸಿವೆ. ಇವಕ್ಕೆ ಸುಮಾರು 1000 ಮಂದಿ ಬಲಿಯಾಗಿದ್ದಾರೆ. 2005-13 ರ ಅವಧಿಯನ್ನ ಪರಿಗಣಿಸಿದರೆ ಪ್ರತಿ 10 ಲಕ್ಷ ಜನಸಂಖ್ಯೆಗೆ ಅತೀ ಹೆಚ್ಚು ಕೋಮು ಗಲಭೆಗೆ ಒಳಗಾಗಿರುವ ಮೊದಲ 5 ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ ಹಾಗೂ ಕೇರಳ ಸ್ಥಾನ ಪಡೆದಿವೆ. ಕೋಮು ಗಲಭೆಗಳ ವಿಚಾರದಲ್ಲಿ ಕರ್ನಾಟಕ 2 ನೇ ಸ್ಥಾನ ಪಡೆದಿದೆ. (ನವೆಂಬರ್ 2013).

 ★ ನ್ಯೂಯಾರ್ಕ್ ಮೂಲದ ' ವಿಶ್ವ ಸ್ಮಾರಕ ನಿಧಿ ' (WMF- Word Monuments Fund) ಸಂಸ್ಥೆ 2014 ನೇ ಸಾಲಿನ ಅಂತರ್ರಾಷ್ಟ್ರೀಯ ಸ್ಮಾರಕಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿತು. ಅದರಲ್ಲಿ 41 ದೇಶಗಳ 67 ಸ್ಮಾರಕಗಳು ಸ್ಥಾನ ಪಡೆದಿವೆ. ಈ ಸಂಸ್ಥೆಯಿಂದ ಆಯ್ಕೆಯಾಗಿರುವ ಕರ್ನಾಟಕದ ಸ್ಥಳ ' ಬೀದರ್ ಜಿಲ್ಲೆ '. ಇದರ ಜೊತೆಗೆ ' ಉತ್ತರ ಪ್ರದೇಶದ ಫತೇಪುರ ಸಿಕ್ರಿ, ರಾಜಸ್ಥಾನದ ಡುಂಗರ ಪುರದ ಜನಮಹಲ್ ಸಹ ಸ್ಥಾನ ಪಡೆದಿವೆ. (ನವೆಂಬರ್ 2013).

 ★ ಕ್ರಿ.ಶ. 2050 ರ ವೇಳೆಗೆ ಭಾರತದ ಜನಸಂಖ್ಯೆ 160 ಕೋಟಿ ಆಗಲಿದ್ದು, ಚೀನಾದ ಜನಸಂಖ್ಯೆ130 ಕೋಟಿ ಮತ್ತೂ ಒಟ್ಟಾರೆ ವಿಶ್ವದ ಜನಸಂಖ್ಯೆ970 ಕೋಟಿ ಇರುತ್ತದೆ ಎಂದು ಫ್ರೆಂಚ್ ಅಧ್ಯಯನದ ವರದಿ ತಿಳಿಸಿದೆ. (ನವೆಂಬರ್ 2013).

★ ತೈಲೋತ್ಪನ್ನಗಳ ಸದ್ಯದ ದರದ ಅನ್ವಯ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ಪ್ರಸಕ್ತ ವರ್ಷ ಆಗಬಹುದಾದ ನಷ್ಟದ ಅಂದಾಜು ಮೊತ್ತ 156000 ಕೋಟಿ ರೂ. (ನವೆಂಬರ್ 2013).

★ ಹಣಕಾಸು ಸಚಿವಾಲಯ ಒಟ್ಟು 2000 ಕೋಟಿ ರೂ. ಮೌಲ್ಯದ ವಿದೇಶಿ ನೇರ ಬಂಡವಾಳ ಹೂಡಿಕೆಯ 15 ಪ್ರಸ್ತಾವಗಳಿಗೆ ಅನುಮೋದನೆ ನೀಡಿತು. (ನವೆಂಬರ್ 2013).

 ★ ಪ್ರತಿ ದಿನಸಾಮಾಜಿಕ ಜಾಲತಾಣ, ಇ-ಮೇಲ್ ಮತ್ತು ಇ-ಶಾಪಿಂಗ್ ಬಳಕೆ ಮಾಡುವ ಭಾರತೀಯ ಮಹಿಳೆಯರ ಸರಾಸರಿ ಸಂಖ್ಯೆ: 24,00,000.

 ★ ಒಬ್ಬ ಮನುಷ್ಯನ 70 ವರ್ಷ ಆಯುಸ್ಸಿನಲ್ಲಿ ಸುಮಾರು 2391480000 ಸಾರಿ ಹೃದಯ ಬಡಿತವುಂಟಾಗುವುದು.

★ ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಟಾನ ಸಚಿವಾಲಯದ 2011-12 ರ ಸಮೀಕ್ಷೆಯ ಪ್ರಕಾರ ಭಾರತದ ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರೂ ತಿಂಗಳಿಗೆ ತಮ್ಮ ವ್ಯಸನಗಳಿಗಾಗಿ ( ಸಿಗರೇಟು, ಬೀಡಿ, ತಂಬಾಕು ಇತ್ಯಾದಿ ) ಸರಾಸರಿ 1430 ರೂ. ಖರ್ಚು ಮಾಡುತ್ತಾರೆ. ಇದು ನಗರವಾಸಿಗಳಿಗಿಂತ ಹೆಚ್ಚು.

 ★ ಒಂದು ಅಧಿಕೃತ ಮಾಹಿತಿಯ ಪ್ರಕಾರ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ 9000 ಕೋಟಿ ರೂ. 2012 ರ ಅಂತ್ಯದಲ್ಲಿ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಮತ್ತು ಸಂಸ್ಥೆಗಳು 1.34 ಶತಕೋಟಿ ರೂ. ಮೊತ್ತವನ್ನು ನೇರವಾಗಿ ಮತ್ತೂ 77 ದಶಲಕ್ಷ ರೂ. ಮೊತ್ತವನ್ನು ಬೇನಾಮಿ ಹೆಸರಿನಲ್ಲಿ ಠೇವಣಿ ಇರಿಸಿದ್ದು ಈಗ ಠೇವಣಿಯ ಮೊತ್ತದಲ್ಲಿ ಶೇ. 35 ರಷ್ಟು ಇಳಿಕೆಯಾಗಿದೆ. 2007 ರ ಮಾಹಿತಿಯ ಪ್ರಕಾರ ವಿಶ್ವದ ಇತರ ರಾಷ್ಟ್ರಗಳ ನಾಗರಿಕರು ರಹಸ್ಯವಾಗಿ ಇರಿಸಿರುವ ಮೊತ್ತ 2.6 ಶತಕೋಟಿ ರೂ.

★ 2012 ರಲ್ಲಿ ಭಾರತದ ಕೋಟ್ಯಾಧಿಪತಿಗಳ ಸಂಖ್ಯೆಯಲ್ಲಿ ಶೇ. 22.2 ರಷ್ಟು ಹೆಚ್ಚಳವಾಗಿದೆ. ಸಿರಿವಂತರ ಏರಿಕೆಯ ವಿಚಾರದಲ್ಲಿ ಭಾರತ ವಿಶ್ವದಲ್ಲಿ ಎರಡನೇಯ ಸ್ಥಾನದಲ್ಲಿದೆ. ಹಾಂಕಾಂಗ್ ಮೊದಲ ಸ್ಥಾನದಲ್ಲಿದೆ.

★ ಕರ್ನಾಟಕ ರಾಜ್ಯದಲ್ಲಿ 247 ಉಪ ನೊಂದಣಿ ಕಚೇರಿಗಳಿದ್ದು, ಅವುಗಳಲ್ಲಿ ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 43 ಉಪ ನೊಂದಣಿ ಕಛೇರಿಗಳಿವೆ.

★ ರಾಜ್ಯದಲ್ಲಿ ಕೃಷಿಯನ್ನು ಅವಲಂಬಿಸಿದವರ ಪ್ರಮಾಣ 1991 ರಲ್ಲಿ. ಶೇ. 57.78 ರಷ್ಟಿತ್ತು. 2011 ರಲ್ಲಿ ಅದು ಶೇ. 49.28 (137.36 ಲಕ್ಷ ) ರಷ್ಟು. ಕೃಷಿಯನ್ನು ಅವಲಂಬಿಸಿದವರ ಪ್ರಮಾಣ ಕಡಿಮೆಯಾಗಲು ಪ್ರಮುಖ ಕಾರಣವೆಂದರೆ ಕೃಷಿ ನಿರ್ವಹಿಸಲಾಗದೆ ಬದುಕನ್ನು ನಡೆಸುವುದು ಕಷ್ಟವಾಗಿ ಬಡವರು ಕೃಷಿಯನ್ನು ಮತ್ತು ಗ್ರಾಮಗಳನ್ನು ತ್ಯಜಿಸಿ ಹೊಟ್ಟೆಪಾಡಿಗಾಗಿ ನಗರಗಳನ್ನು ಸೇರುತ್ತಿರುವುದಾಗಿದೆ. ಜೊತೆಗೆ ಸರ್ಕಾರದ ಬೇಜವಾಬ್ದಾರಿ ನಿರ್ಧಾರಗಳಿಂದ ಕೃಷಿ ಭೂಮಿಗೆ ಕೊಡಲಿ ಏಟು ಬೀಳುತ್ತಿರುವುದು. ರಾಜ್ಯದಲ್ಲಿ 71.56 ಲಕ್ಷ ಭೂರಹಿತ ದಿನಗೂಲಿ ದುಡಿಮೆಗಾರರು ಅತ್ಯಂತ ಅಭದ್ರತೆಯ ಬದುಕನ್ನು ದೂಡುತ್ತಿದ್ದಾರೆ.

SRC TEAM, BELLARY.

ಸುಗ್ರೀವಾಜ್ಞೆ (Ordinance)

 ಸುಗ್ರೀವಾಜ್ಞೆ (Ordinance) : --

ಇದೊಂದು ಕಾನೂನು ಆದೇಶ. ರಾಜ್ಯಪಾಲರು, ರಾಷ್ಟ್ರಪತಿಗಳು ಈ ರೀತಿಯ ಆದೇಶ ಹೊರಡಿಸುವ ಅಧಿಕಾರ

ಹೊಂದಿರುತ್ತಾರೆ. ಭಾರತದ ಸಂವಿಧಾನದ ಪ್ರಕಾರ ಕಾನೂನು ರಚಿಸುವ ಅಧಿಕಾರ ಇರುವುದು ಶಾಸನ ಸಭೆಗೆ. ಅದು ಬಿಟ್ಟರೆ

ತುರ್ತು ಸಂಧರ್ಭಗಳಲ್ಲಿ ರಾಷ್ಟ್ರಪತಿ ಅಥವಾ ರಾಜ್ಯಪಾಲರಿಗೆ ಈ ರೀತಿಯ ಆದೇಶಗಳನ್ನು ನೀಡುವ ವಿಶೇಷ ಅಧಿಕಾರ

ನೀಡಲಾಗಿದೆ. ಆದರೆ ಈ ರೀತಿಯ ಸುಗ್ರೀವಾಜ್ಞೆಗಳನ್ನು ತುರ್ತು ಸಂಧರ್ಭದಲ್ಲಿ ಮಾತ್ರ ಹೊರಡಿಸಬಹುದು ಎಂದು

ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಶಾಸನಸಭೆ ನಡೆಯುತ್ತಿದ್ದ ವೇಳೆ ಸುಗ್ರೀವಾಜ್ಞೆ ಹೊರಡಿಸಲು ರಾಷ್ಟ್ರಪತಿ, ರಾಜ್ಯಪಾಲರಿಗೆ

ಅಧಿಕಾರವಿಲ್ಲ.


SRC TEAM, BELLARY.

SIBN ಎಂದರೇನು ? ಭಾರತ ಮತ್ತು ಸೌದಿ ಅರೇಬಿಯಾ ದೇಶಗಳ ನಡುವಣ ವಾಣಿಜ್ಯ ಸಂಬಂಧ ಕುರಿತು ಸಂಕ್ಷಿಪ್ತವಾಗಿ ವಿವರಿಸಿರಿ

SIBN ಎಂದರೇನು ? ಭಾರತ ಮತ್ತು ಸೌದಿ ಅರೇಬಿಯಾ ದೇಶಗಳ ನಡುವಣ ವಾಣಿಜ್ಯ ಸಂಬಂಧ ಕುರಿತು ಸಂಕ್ಷಿಪ್ತವಾಗಿ ವಿವರಿಸಿರಿ.


 * SIBN- ಅಂದರೆ “ಸೌದಿ-ಇಂಡಿಯಾ ಬಿಸಿನೆಸ್ ನೆಟ್ ವರ್ಕ್ ವ್ಯವಸ್ಥೆ ” (SIBN—Saudi-India Business Network) ಎಂಬುದಾಗಿದೆ. SIBN ಭಾರತ ಮತ್ತು ಸೌದಿ ರಾಷ್ಟ್ರಗಳ ನಡುವಣ ಪರಸ್ಪರ ವಾಣಿಜ್ಯ,ವ್ಯಾಪಾರ, ಬಂಡವಾಳ ಹೂಡಿಕೆ ಸಂಬಂಧಗಳನ್ನು ಪ್ರೋತ್ಸಾಹ ನೀಡುವ ಒಂದು ತಟಸ್ಥ ವ್ಯವಸ್ಥೆಯಾಗಿದೆ.

 * ಈ SIBN ಉದ್ದೇಶಿತ ವ್ಯವಸ್ಥೆಯಲ್ಲಿ ಸದಸ್ಯತ್ವ ಪಡೆಯಲು ಭಾರತ ಮತ್ತು ಸೌದಿ ರಾಷ್ಟ್ರಗಳ ಎಲ್ಲಾ ಉದ್ಯಮಿಗಳಿಗೂ ಸಮಾನ ಅವಕಾಶವಿದ್ದು, ಉಭಯ ದೇಶಗಳ ಉದ್ಯಮಿಗಳು, ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯ ಮಂಡಳಿ ಸದಸ್ಯರು ಭಾಗಿಯಾಗಿ ಪರಸ್ಪರ ವಿಚಾರ ವಿನಿಮಯ, ನಿರ್ಣಯಗಳನ್ನು ಕೈಗೊಳ್ಳುವರು.


★ ಭಾರತ-ಸೌದಿ ಅರೇಬಿಯಾ ನಡುವಣ ವಾಣಿಜ್ಯ ಸಂಬಂಧ:

 *.ಸೌದಿ ಅರೇಬಿಯಾ ಭಾರತದೊಂದಿಗೆ ವಾಣಿಜ್ಯ ಸಂಬಂಧ ಹೊಂದಿರುವ ರಾಷ್ಟ್ರಗಳ ಪೈಕಿ 4ನೇ ಅತಿ ದೊಡ್ಡ ದೇಶವಾಗಿದೆ.

 *.ಸೌದಿ ಅರೇಬಿಯಾ ಭಾರತಕ್ಕೆ ಪೆಟ್ರೋಲಿಯಂ ಕಚ್ಚಾ ತೈಲವನ್ನು ಒದಗಿಸುವ ಅತೀ ದೊಡ್ಡ ದೇಶವಾಗಿದೆ.ಇದು ಭಾರತದ ತೈಲ ಬೇಡಿಕೆಯ ಶೇ. 17 ರಷ್ಟನ್ನು ನೀಗಿಸುತ್ತಿದೆ.

 *.ಸೌದಿ ಅರೇಬಿಯಾ ಭಾರತದ ಉತ್ಪನ್ನಗಳ ಬಹುದೊಡ್ಡ ಮಾರುಕಟ್ಟೆಯಾಗಿದೆ, ಅಲ್ಲದೆ ಭಾರತದ ರಫ್ತು ಉದ್ಯಮದ ಶೇ.1.86 ರಷ್ಟು ಪಾಲನ್ನು ಹೊಂದಿದೆ

 *.ಭಾರತ ಸೌದಿ ಅರೇಬಿಯಾ ಉತ್ಪನ್ನಗಳ 5 ನೇ ಬಹುದೊಡ್ಡ ಮಾರುಕಟ್ಟೆಯಾಗಿದೆ

 * ಭಾರತ ಮತ್ತು ಸೌದಿ ಅರೇಬಿಯಾ ವಾಣಿಜ್ಯ ಸಂಬಂಧ ವೃ ದ್ಧಿಗೆ “ಸೌದಿ-ಇಂಡಿಯಾ ಬಿಸಿನೆಸ್ ನೆಟ್ ವರ್ಕ್” ಭಾರತ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳು “ಸೌದಿ-ಇಂಡಿಯಾ ಬಿಸಿನೆಸ್ ನೆಟ್ ವರ್ಕ್” (SIBN—Saudi-India Business Network) ವ್ಯವಸ್ಥೆಯನ್ನು ಪ್ರತ್ಯೇಕವಾಗಿ ರಿಯಧ್ ಮತ್ತು ದಮಾಮ್ ನಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ.


SRC TEAM, BELLARY.

Teeka Express programme

“ಟೀಕಾ ಎಕ್ಸ್ ಪ್ರೆಸ್ ಯೋಜನೆ (Teeka Express programme)”

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೂಡಿ  ಈ  “ಟೀಕಾ ಎಕ್ಸ್ ಪ್ರೆಸ್” ಯೋಜನೆಯನ್ನು ಜಾರಿಗೆ ತಂದಿದ್ದು, ಎಳೆ ವಯಸ್ಸಿನಲ್ಲಿ ಮಕ್ಕಳಿಗೆ ಕಾಡುವ ಕಾಯಿಲೆಗಳಿಂದ ರಕ್ಷಿಸುವುದು ಈ ಯೋಜನೆಯ  ಉದ್ದೇಶವಾಗಿದೆ.

* ಏನಿದು ಟೀಕಾ ಎಕ್ಸ್ ಪ್ರೆಸ್ ಯೋಜನೆ:

ಅಗತ್ಯವಿರುವ ಔಷಧಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಮಹತ್ವಾಕಾಂಕ್ಷಿ ಯೋಜನೆಯೇ ಟೀಕಾ ಎಕ್ಸ್ ಪ್ರೆಸ್ ಯೋಜನೆ.

ಈ ಯೋಜನೆಯಡಿ ಲಸಿಕೆ ಹಾಕಿಸುವ ಸ್ಥಳಕ್ಕೆ ಔಷಧಿ ಸಂರಕ್ಷಣಾ ಕೇಂದ್ರದಿಂದ ಇದಕ್ಕಾಗಿಯೇ ಮೀಸಲಿಡಲಾದ ಟೀಕಾ ಎಕ್ಸ್ ಪ್ರೆಸ್ ವಾಹನದಲ್ಲಿ ಸಾಗಿಸಲಾಗುವುದು.

*.ಔಷಧಿ ವಿತರಣೆಯಲ್ಲಿ ಆಗುತ್ತಿರುವ ವಿಳಂಬ, ಸಮರ್ಪಕ ಬಳಕೆ ಮತ್ತು ಬಳಕೆಯಾಗದೇ ಇರುವ ಔಷಧಗಳನ್ನು ಪುನಃ ಹಿಂದಕ್ಕೆ ಕೊಂಡ್ಯೊಯ್ಯುವ ಮೂಲಕ ಔಷಧಿಗಳು ವಿನಾಃ ಕಾರಣ ವ್ಯರ್ಥವಾಗುವುದನ್ನು ತಪ್ಪಿಸಬಹುದಾಗಿದೆ.

*.ಸೂಕ್ತ ಆರೋಗ್ಯ ಚಿಕಿತ್ಸೆ ಇಲ್ಲದ ಸ್ಥಳಗಳಲ್ಲಿ ಇದು ಮೊಬೈಲ್ ಕ್ಲಿನಿಕ್ ಆಗಿ ಸೇವೆ ನಿರ್ವಹಸಲಿದೆ. ಅಲ್ಲದೇ ಬಳಕೆಯಾದ ಔಷಧಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಇದು ಅನುಕೂವಾಗಲಿದೆ.

*.ಮೊದಲ ಹಂತದಲ್ಲಿ ಈ ಯೋಜನೆಯನ್ನು ಅತಿ ಅಗತ್ಯವಿರುವ 69 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಇದಕ್ಕಾಗಿ 1,850 ವಾಹನಗಳನ್ನು ಖರೀದಿಸಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.

*.ಈ ಯೋಜನೆಯ ಅನುಷ್ಠಾನಕ್ಕೆ ತಗುಲುವ ವೆಚ್ಚವನ್ನು “ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್” ಅಡಿ ಭರಿಸಲಾಗುವುದು.

SRC ತಂಡ, ಬಳ್ಳಾರಿ.

ಕ್ರಯೋಜೆನಿಕ್ ತಂತ್ರಜ್ಞಾನ ಎಂದರೇನು? ರಾಕೆಟ್ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಧನದ ಬಳಕೆ ಹೇಗೆ ? ಅದರ ಇತರ ಉಪಯೋಗಗಳ ಕುರಿತು ವಿಶ್ಲೇಷಿಸಿರಿ.

ಕ್ರಯೋಜೆನಿಕ್ ತಂತ್ರಜ್ಞಾನ ಎಂದರೇನು? ರಾಕೆಟ್ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಧನದ ಬಳಕೆ ಹೇಗೆ ?
 ಅದರ ಇತರ ಉಪಯೋಗಗಳ ಕುರಿತು ವಿಶ್ಲೇಷಿಸಿರಿ.
( What do you mean by Cryogenic Technology ? How the Cryogenic Fuel works in Rocket Launcher ? Analyse the significance of Cryogenic Technology)

 ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ತಂತ್ರಜ್ಞಾನದ ಮೂಲಕ ಅಭಿವೃದ್ದಿ ಪಡಿಸಿದ ಜಿಎಸ್ಎಲ್‌ವಿ’ ಡಿ5 ಉಪಗ್ರಹ ವಾಹಕ ಯಶಸ್ವಿ ಉಡಾವಣೆಯು ಭಾರತಕ್ಕೆ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರತಿಷ್ಠಿತ ಸ್ಥಾನ ತಂದುಕೊಟ್ಟಿವೆ. ಈ ಯಶಸ್ಸಿನ ಹಿನ್ನೆಲೆಯಲ್ಲಿ ಕ್ರಯೋಜೆನಿಕ್ ರಾಕೆಟ್ ಎಂಜಿನ್ ಕುರಿತ ಕೆಲವು ಮಾಹಿತಿಗಳು ಇಲ್ಲಿವೆ.

 * ಕ್ರಯೋಜೆನಿಕ್ ಇಂಧನ (Cryogenic Fuel) ಎಂದರೇನು?
 — ಕ್ರಯೋಜೆನಿಕ್ ಇಂಧನವು ಅತ್ಯಧಿಕ ಪ್ರಮಾಣದಲ್ಲಿ ತಂಪಾಗಿಸಿದ ಜಲಜನಕ ಮತ್ತು ಆಮ್ಲಜನಕದ ಸಂಯೋಜನೆಯಾಗಿದೆ. (ಅಂದರೆ –253 ಡಿಗ್ರಿ ಸೆಲ್ಸಿಯಸ್‌ನಷ್ಟು ಜಲಜನಕ ಮತ್ತು –183 ಡಿಗ್ರಿ ಸೆಲ್ಸಿಯಸ್‌ನಷ್ಟು ಆಮ್ಲಜನಕ).

 * ಕ್ರಯೋಜೆನ್ (Cryogen) ಹಾಗೆಂದರೇನು?
— ‘ಕ್ರಯೋಜೆನ್’ ಎಂದರೆ ಶೀತಲೀಕರಣದ ಉತ್ಪತ್ತಿ ಎಂದರ್ಥ. ಅಂದರೆ –150 (ಮೈನಸ್‌) ಡಿಗ್ರಿ ಸೆಲ್ಸಿಯಸ್‌, –238 ಡಿ.ಎಫ್ (ಡಿಗ್ರಿ ಫ್ಯಾರನ್‌ಹೀಟ್‌) ಅಥವಾ 123 ಕೆ. (ಕೆಲ್ವಿನ್) ಗಿಂತ ಕಡಿಮೆ ತಾಪಮಾನ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ.ಇಂದು ಕ್ರಯೋಜೆನಿಕ್ ಪದವು ಅತ್ಯಂತ ‘ಕಡಿಮೆ ತಾಪಮಾನ’ ಎಂಬ ಅರ್ಥದಲ್ಲಿ ಬಳಕೆಯಲ್ಲಿದೆ.

- ಭೌತವಿಜ್ಞಾನದ ಪ್ರಕಾರ ಕಡಿಮೆ ತಾಪಮಾನದಲ್ಲಿ ವಸ್ತುಗಳ ಭೌತಿಕ ರೂಪ ಬದಲಾವಣೆ ಮತ್ತು ಉತ್ಪಾದನೆಯ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಕ್ರಯೋಜೆನಿಕ್ ಎನ್ನುತ್ತಾರೆ. ಇದನ್ನು ಅಧ್ಯಯನ ನಡೆಸುವವರಿಗೆ ಕ್ರಯೋಜೆನಿಸ್ಟ್ ಎಂದು ಕರೆಯಲಾಗುತ್ತದೆ.

 ಇನ್ನೂ ಸರಳವಾಗಿ ಹೇಳುವುದಾದರೆ, ಆಹಾರ ಪದಾರ್ಥಗಳು, ಕೆಲವು ಔಷಧಿಗಳು ಮತ್ತು ಲಸಿಕೆಗಳನ್ನು ಕೆಡದಂತೆ ಇರಿಸಲು ಬಳಸುವ ಶೀತಲೀಕರಣ (ಫ್ರಿಡ್ಜ್) ವ್ಯವಸ್ಥೆಯ ಬಹಳಷ್ಟು ಸುಧಾರಿತ ತಂತ್ರಜ್ಞಾನದಂತೆ ಕ್ರಯೋಜೆನ್ ಸಹ ಕೆಲಸ ಮಾಡುತ್ತದೆ.

 ಹೀಗಿದ್ದೂ, ಎರಡರ ನಡುವೆಯೂ ಸಾಕಷ್ಟು ವ್ಯತ್ಯಾಸಗಳಿವೆ. ಫ್ರಿಡ್ಜ್‌ ಒಳಗೆ ತಂಪು ವಾತಾವರಣ ನಿರ್ಮಿಸಲು ಹೊರಗಿನಿಂದ ಶಾಖವನ್ನು(ವಿದ್ಯುತ್, ರಸಾಯನಿಕ ವ್ಯವಸ್ಥೆ ಮೂಲಕ) ನೀಡಲಾಗುತ್ತದೆ. ಆದರೆ ಕ್ರಯೋಜೆನಿಕ್‌ ತಂತ್ರಜ್ಞಾನ ಫ್ರಿಡ್ಜ್‌ಗಿಂತ ಬಹಳ ಭಿನ್ನವಾದ ರೀತಿಯಲ್ಲಿ ಹೆಚ್ಚಿನ ಕೆಲಸ ನಿರ್ವಹಿಸುತ್ತದೆ. ಶೀತಲೀಕರಿಸಿದ ಆಹಾರವನ್ನು ಹೆಚ್ಚು ದಿನಗಳವರೆಗೆ ಸಂರಕ್ಷಿಸಲು ಸಾಧ್ಯವಾಗಿರುವುದೇ ಇದಕ್ಕೆ ಉತ್ತಮ ಉದಾಹರಣೆ.

 — ಕ್ರಯೋಜೆನಿಕ್ ತಂಪಾಗಿಸಿದ ದ್ರವ ಇಂಧನ, ಅಂದರೆ ಜಲಜನಕ ಮತ್ತು ಆಮ್ಲಜನಕವನ್ನು ಒಳಗೊಂಡಿದೆ. ಹೀಗಾಗಿ ಅತ್ಯಂತ ಕಡಿಮೆ ತಾಪಮಾನದಿಂದ ಕೂಡಿದೆ.ಕ್ರಯೋಜೆನಿಕ್ ವೈಶಿಷ್ಟ್ಯಶಾಖ ಪ್ರಕ್ರಿಯೆಯಲ್ಲಿ ಒಂದು ಲೋಹಕ್ಕೆ ಶಾಖ ನೀಡಿ ಅದನ್ನು ತಣಿಸಿದ ಮೇಲೂ ಶಾಖದ ಪ್ರಮಾಣ ಸ್ಪಲ್ಪ ಉಳಿದಿರುತ್ತದೆ. ಆದರೆ ಕ್ರಯೋಜೆನಿಕ್ ಪ್ರಕ್ರಿಯೆಯಲ್ಲಿ ಲೋಹವನ್ನು ತಣ್ಣಗಾಗಿಸಿದ ನಂತರ ಉಳಿಯುವ ಉಷ್ಣತೆಯನ್ನೂ ತಗ್ಗಿಸುವ ಸಾಮರ್ಥ್ಯವಿದೆ.

 * ಕ್ರಯೋಜೆನಿಕ್ ತಾಪಮಾನ ಮಾಪಕ :—  ಸಾಮಾನ್ಯವಾಗಿ ತಾಪಮಾನವನ್ನು ಅಳೆಯಲು ಸಾಪೇಕ್ಷ ತಾಪಮಾನ ಮಾಪಕಗಳಾದ ಸೆಲ್ಸಿಯಸ್ ಮತ್ತು ಫ್ಯಾರನ್‌ಹೀಟ್ ಬಳಸಲಾಗುತ್ತದೆ.ಆದರೆ ಕ್ರಯೋಜೆನಿಕ್ ತಾಪಮಾನದ ಅಧ್ಯಯನ ನಡೆಸಲು ವಿಜ್ಞಾನಿಗಳು ನಿರಪೇಕ್ಷ ತಾಪಮಾನ ಮಾಪಕಗಳಾದ ಕೆಲ್ವಿನ್ ಮತ್ತು ರಾಂಕಿನ ಮಾಪಕಗಳನ್ನು ಬಳಸಿದ್ದಾರೆ.

— ಈ ಕ್ರಯೋಜೆನಿಕ್ ಇಂಧನವನ್ನು ದ್ರವರೂಪದಲ್ಲಿ ಅತ್ಯಂತ ತಂಪಾದ ವಾತಾವರಣದಲ್ಲಿ ಇಡಲು ಜೇಮ್ಸ್ ಡೆವರ್‌ ಎಂಬ ವಿಜ್ಞಾನಿ ಅಭಿವೃದ್ಧಿಪಡಿಸಿರುವ ‘ಡೆವರ್‌ ಫ್ಲಾಸ್ಕ್’ ನಲ್ಲಿ (Dewar flasks) ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.

 * ಕ್ರಯೋಜೆನಿಕ್ ತಂತ್ರಜ್ಞಾನದ ಇತಿಹಾಸ : —  ‘ಕ್ರಯೋಜೆನಿಕ್’ ಪದವನ್ನು ಗ್ರೀಕ್ ಪದವಾದ ‘kyros’ ಅಂದರೆ ‘ಶೀತ’ ಅಥವಾ ‘ಘನೀಕರಿಸು’ ಎಂದು, ಮತ್ತು ‘genes’ ಅಂದರೆ ‘ಹುಟ್ಟು’ ಅಥವಾ ‘ಉತ್ಪತ್ತಿ’ ಎಂಬ ಅರ್ಥದಿಂದ ಕೂಡಿದೆ. ವಿಶ್ವದ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನ ಕ್ಷೇತ್ರ ಪ್ರಗತಿ ಕಂಡಿತು. ಸ್ವತಂತ್ರವಾಗಿ ಶಕ್ತಿಶಾಲಿ ರಾಕೆಟ್ ಎಂಜಿನ್ ನಿರ್ಮಾಣ ಮಾಡಬಲ್ಲ ಜರ್ಮನ್, ಅಮೆರಿಕ ಮತ್ತು ಸೋವಿಯತ್ ರಷ್ಯಾದ ಎಂಜಿನಿಯರ್‌ಗಳು ರಾಕೆಟ್ ಎಂಜಿನ್ನಿಗೆ ಹೆಚ್ಚಿನ ವೇಗ ನೀಡಲು ಉತ್ಕರ್ಷಣಕಾರಿ (oxidizer) ಪ್ರಕ್ರಿಯೆ ಮತ್ತು ಇಂಧನದ ಅವಶ್ಯಕತೆ ಇದೆ ಎಂಬುದನ್ನು ಕಂಡುಕೊಂಡರು.ಆಗ ಅವರು ಬಳಸಿದ ಜಲಜನಕ ಮತ್ತು ಹೈಡ್ರೋಕಾರ್ಬನ್‌ನ ಮಿಶ್ರ ಇಂಧನವು ರಾಕೆಟ್‌ನ ದಕ್ಷತೆಯನ್ನೇ ತೀವ್ರವಾಗಿ ಕಡಿಮೆ ಮಾಡಿತು. ಇದರಿಂದ ರಾಕೆಟನ್ನು ಮೇಲಕ್ಕೆ ಹೊತ್ತೊಯ್ಯಲು ಕ್ರಯೋಜೆನಿಕ್ ತಾಪಮಾನದಿಂದ (ಅಂದರೆ –150 ಡಿ. ಸೆ, –238 ಡಿ. ಎಫ್‌ಗಿಂತಲೂ ಕಡಿಮೆ) ಮಾತ್ರವೇ ಸಾಧ್ಯ ಎಂಬುದನ್ನು ಕಂಡುಕೊಂಡರು.

 * ರಾಕೆಟ್ ಉಡಾವಣೆ - ಒಂದಿಷ್ಟು ಮಾಹಿತಿ: —  ರಾಕೆಟ್ ಗಳಲ್ಲಿ ಘನ, ದ್ರವ, ಘನ-ದ್ರವದ ಮಿಶ್ರಣ, ಮತ್ತು ಪರಮಾಣು ಇಂಧನ ಹೊಂದಿರುವ ಎಂಜಿನ್ ಗಳಿವೆ.ಘನ ರಾಕೆಟ್ ಎಂಜಿನ್ ಕಡಿಮೆ ವೆಚ್ಚದ ಇಂಧನ ಮತ್ತು ಉತ್ಕರ್ಷಣಕಾರಿಯ ಸಮ್ಮಿಶ್ರಣವಾಗಿದೆ. ಘನ ಇಂಧನ ಎಂದ ಕೂಡಲೆ ಕಟ್ಟಿಗೆ, ಇದ್ದಿಲು ನೆನಪಾಗುತ್ತದೆ. ಆದರೆ ರಾಕೆಟ್ ಎಂಜಿನ್ ಗೆ ಅಲ್ಯೂಮಿನಿಯಂ ಪುಡಿಯನ್ನು ಇಂಧನವಾಗಿ ಅಮೋನಿಯಂ ಪರ್ಕ್ಲೋರೇಟ್ ಅನ್ನು ಉತ್ಕರ್ಷಣಕಾರಿಯಾಗಿ ಬಳಸಲಾಗುತ್ತದೆ. ಈ ಎಂಜಿನ್ ಗೆ ಒಮ್ಮೆ ಬೆಂಕಿ ತಾಕಿಸಿದರೆ ಇಂಧನ ಮುಗಿಯುವವರೆಗೂ ನಿಲ್ಲದೇ ಉರಿಯುತ್ತದೆ. ಹೀಗಾಗಿ ಅತ್ಯಾಧುನಿಕ ರಾಕೆಟ್ ಗಳು ಘನ ಮತ್ತು ದ್ರವ ಇಂಧನದ ಸಂಯೋಜನೆಯಿಂದ ಕೂಡಿರುತ್ತದೆ.ಆರಂಭದ ಉಡಾವಣೆ ಹಂತಕ್ಕೆ ಘನ ಇಂಧನ ಬಳಸಲಾಗುತ್ತದೆ. ಯಾವಾಗ ರಾಕೆಟ್ ನಿಗದಿತ ವೇಗ ಪಡೆದುಕೊಳ್ಳುತ್ತದೆಯೋ ಆ ಹಂತದಲ್ಲಿ ದ್ರವ ಇಂಧನವು ರಾಕೇಟಿನ ಭಾರಕ್ಕೆ ಅನುಗುಣವಾಗಿ ವೇಗೋತ್ಕರ್ಷವನ್ನು ಮತ್ತಷ್ಟು ಹೆಚ್ಚಿಸಿ, ಸರಿಯಾದ ಪಥವನ್ನು ತಲುಪಲು ಸಹಾಯ ಮಾಡುತ್ತದೆ.

ಹೀಗಿದ್ದೂ, ಈ ಮೊದಲು ಉಪಗ್ರಹ ಉಡಾವಣೆಗೆ ಬಳಸುತ್ತಿದ್ದ ‘ಪಿಎಸ್ಎಲ್‌ವಿ’(PSLV) ಗೆ (ಪೊಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಹೆಚ್ಚು ಭಾರವಾದ ಉಪಗ್ರಹ ಹೊರುವ ಸಾಮರ್ಥ್ಯ ಇರಲಿಲ್ಲ. ಈ ಕೊರತೆ ನೀಗಿಸಲು ‘ಜಿಎಸ್ಎಲ್‌ವಿ’(GSLV) (ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ವ್ಯವಸ್ಥೆ ಬಳಸಲಾಯಿತು. ಮುಖ್ಯವಾಗಿ ಅತ್ಯಧಿಕ ಪ್ರಮಾಣದಲ್ಲಿ ತಂಪಾಗಿಸಿದ ದ್ರವ ಕ್ರಯೋಜೆನಿಕ್ ಇಂಧನ ಬಳಸಲಾಗಿದೆ.

 * ರಾಕೆಟ್ ಉಡಾವಣೆಯಲ್ಲಿ ಕ್ರಯೋಜೆನಿಕ್ ಇಂಧನದ ಬಳಕೆ ಹೇಗೆ ?
— ಕ್ರಯೋಜೆನಿಕ್ ರಾಕೆಟ್ ಎಂಜಿನ್ನಿನಲ್ಲಿ ಕ್ರಯೋಜೆನಿಕ್ ಇಂಧನ ಅಥವಾ ಉತ್ಕರ್ಷಣಕಾರಿ (oxidizer) ಇಲ್ಲವೇ ಎರಡೂ ಬಗೆಯ ಇಂಧನಗಳನ್ನೂ ದ್ರವೀಕೃತಗೊಳಿಸಿ ಅತ್ಯಂತ ಕಡಿಮೆ ತಾಪಮಾನದಲ್ಲಿ ಶೇಖರಿಸಲಾಗುತ್ತದೆ. ಈ ಇಂಧನವನ್ನು ಎಂಜಿನ್ ನ ಉರಿ ಕೊಳವೆಗೆ ಕಳುಹಿಸಿದಾಗ 2ರಿಂದ 2.5 ಟನ್ ಭಾರೀ ತೂಕದ ಉಪಕರಣವನ್ನು ಬಾಹ್ಯಾಕಾಶಕ್ಕೆ ತಳ್ಳಲು ಅಗತ್ಯವಾದ ಹೆಚ್ಚಿನ ಪ್ರಮಾಣದ (ಸೆಕೆಂಡಿಗೆ 4.4 ಕಿ.ಮೀ ವೇಗ) ಶಕ್ತಿ ಉತ್ಪಾದನೆ ಆಗುತ್ತದೆ.

 * ಕ್ರಯೋಜೆನಿಕ್ ರಾಕೆಟ್ ಎಂಜಿನ್:— ಕ್ರಯೋಜೆನಿಕ್ ರಾಕೆಟ್ ಎಂಜಿನ್ ತಯಾರಿಕೆಯಲ್ಲಿ ದ್ರವರೂಪದ ಜಲಜನಕ ಇಂಧನ ಮತ್ತು ಆಮ್ಲಜನಕದ ಸಂಯೋಗ ಹೆಚ್ಚು ಬಳಕೆಯಲ್ಲಿದೆ.ಈ ಎರಡೂ ಪದಾರ್ಥಗಳು ಸುಲಭವಾಗಿ ಮತ್ತು ಅಗ್ಗವಾಗಿ ದೊರೆಯತ್ತವೆ. ಈ ಕ್ರಯೋಜೆನಿಕ್ ಇಂಧನ ವ್ಯವಸ್ಥೆಯನ್ನು ರಾಕೆಟ್ ಎಂಜಿನ್ನಿನಲ್ಲಿ ಬಳಸಲು 1940ರಲ್ಲಿ ಆಸ್ಟ್ರೇಲಿಯಾದ ಬಾಹ್ಯಾಕಾಶ ಎಂಜಿನಿಯರ್ ಯೂಜೆನ್ ಸ್ಯಾಂಗರ್ ಅವರು ಮೊದಲುಸಲಹೆ ನೀಡಿದರು.1996ರಲ್ಲಿ ‘cryogenic hardening’ ಸಿದ್ಧಾಂತದ (–185 ಡಿಗ್ರಿ ಸೆಲ್ಸಿಯಸ್‌ಗೆ ಲೋಹವನ್ನು ತಂಪಾಗಿಸುವುದು) ಆಧಾರದ ಮೇಲೆ ಎಡ್ವರ್ಡ್ ಬಾಷ್ ಅವರು ಕ್ರಯೋಜೆನಿಕ್ ಪ್ರಕ್ರಿಯೆ (cryogenic processing) ಕೈಗಾರಿಕೆ ಆರಂಭಿಸಿದರು.ಇಲ್ಲಿ ಲೋಹಗಳ ಬಾಳಿಕೆ ಹೆಚ್ಚಿಸಲು ಶಾಖದಿಂದ ಮೃಧುವಾಗಿಸುವ (heat treating) ವಿಧಾನಕ್ಕೆ ಬದಲಾಗಿ ಕ್ರಯೋಜೆನಿಕ್ ಪ್ರಕ್ರಿಯೆಯಡಿ ಹದಗೊಳಿಸುವಿಕೆ ವಿಧಾನ ಅಳವಡಿಸಿದರು.

 * ಕ್ರಯೋಜೆನಿಕ್ ಬಳಕೆ ಅಥವಾ ಉಪಯೋಗಗಳು :
—  ದ್ರವೀಕೃತ ಅನಿಲಗಳಾದ ದ್ರವ ಸಾರಜನಕ ಮತ್ತು ದ್ರವ ಹೀಲಿಯಂ ಅನ್ನು ಹಲವು ಕ್ರಯೋಜೆನಿಕ್ ತಂತ್ರಜ್ಞಾನದಲ್ಲಿ ಬಳಸಬಹುದು. ಅವುಗಳಲ್ಲಿ ಕೆಲವು ಇಲ್ಲಿವೆ.

 - ವಿದ್ಯುಚ್ಛಕ್ತಿ ಸರಬರಾಜಿಗೆ ಮಹಾನಗರಗಳಲ್ಲಿ ನೆಲದಡಿ ಕೇಬಲ್‌ಗಳು ಬಿಸಿಯಾಗಿ ವಿದ್ಯುತ್ ವ್ಯಯವಾಗುತ್ತದೆ. ಹೀಗಾಗಿ ನೆಲದಡಿಯಲ್ಲಿ ಮಿಶ್ರ ಲೋಹ ಹೊಂದಿರುವ ಕೇಬಲ್‌ಗಳನ್ನು ಹೆಚ್ಚು ತಂಪಾಗಿರಿಸಿ, ವಿದ್ಯುತ್ ಪ್ರವಹಿಸುವ ಸಾಮರ್ಥ್ಯ ಹೆಚ್ಚಿಸಲು ಸಾರಜನಕ ಅಥವಾ ಹೀಲಿಯಂನಂತಹ ಕ್ರಯೋಜೆನಿಕ್ ದ್ರವ್ಯಗಳನ್ನು ಬಳಸಲಾಗುತ್ತದೆ.

 - ಆಹಾರ ರಕ್ಷಣೆಗೆಮೀನು, ಮಾಂಸದಂತಹ ಶೀತಲೀಕರಿಸಿದ ಆಹಾರ ಪದಾರ್ಥಗಳನ್ನು ಸಾಗಿಸಲೂ ಸಹ ಕ್ರಯೋಜೆನಿಕ್ ಅನಿಲವನ್ನು ಬಳಸಲಾಗುತ್ತದೆ.

 - ಯುದ್ಧಭೂಮಿ, ಭೂಕಂಪ ಪೀಡಿತ ಪ್ರದೇಶಕ್ಕೆ ಶೀತಲೀಕರಿಸಿದ ಆಹಾರ ಪದಾರ್ಥಗಳನ್ನು ಸಾಗಿಸುವಾಗ ಕೆಡದಂತೆ ಇಡಲು ಕ್ರಯೋಜೆನಿಕ್ ಫುಡ್ ಫ್ರೀಜಿಂಗ್ ವಿಧಾನ ಅನುಸರಿಸಲಾಗುತ್ತದೆ. ಹಾಗಾಗಿಯೇ ಇದು ಆಹಾರ ಸಂಸ್ಕರಣಾ ಕೈಗಾರಿಕೆಗಳಿಗೂ ಹೆಚ್ಚು ಉಪಯುಕ್ತವಾಗಿದೆ.

 - ಕೆಲವು ಅಪರೂಪದ ರಕ್ತದ ಗುಂಪುಗಳನ್ನು ಅತೀ ಕಡಿಮೆ –165 ಡಿಗ್ರಿ ಸೆಲ್ಸಿಯಸ್‌ ತಾಪಮಾನದಲ್ಲಿ ಸಂಗ್ರಹಿಸಿಡಲಾಗುತ್ತದೆ. ಇಂತಹ ಚಟುವಟಿಕೆಗೂ ಕ್ರಯೋಜೆನಿಕ್‌ ತಂತ್ರಜ್ಞಾನದ ಪ್ರಯೋಜನೆ ಪಡೆದುಕೊಳ್ಳಲಾಗುತ್ತದೆ.

- ಅಲ್ಲದೆ, ಇನ್‌ಫ್ರಾರೆಡ್‌ ಕ್ಯಾಮೆರಾದ ಡಿಟೆಕ್ಟರ್ ಅನ್ನು ಶಿಲೀಂಧ್ರದಿಂದ ರಕ್ಷಿಸಲು ಕ್ರಯೋಜೆನಿಕ್ ಬಳಸಲಾಗುತ್ತದೆ.
ಇದರ ಎಲ್ಲ ಕಾರ್ಯಸಾಧ್ಯತೆಗಳ ಕುರಿತು ಹಲವು ಅಧ್ಯಯನಗಳು ನಡೆದಿದ್ದು, ಅಂತರರಾಷ್ಟ್ರೀಯ ಶಕ್ತಿ ಸಂಸ್ಥೆಯ ಒಪ್ಪಂದ ದೊರೆಯಬೇಕಿದೆ.

 *- ಎಂಆರ್‌ಐ ಸ್ಕ್ಯಾನಿಂಗ್ (MRI Scanning) ಹಾಗೆಂದರೇನು?
 - ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಸ್ಕ್ಯಾನಿಂಗ್ ತಂತ್ರಜ್ಞಾನದಲ್ಲಿ (ರೋಗಿಯ ದೇಹದ ಸಮಗ್ರ ವೈದ್ಯಕೀಯ ತಪಾಸಣೆಗೆ ಬಳಸುವ ತಂತ್ರಜ್ಞಾನ) ಕ್ರಯೋಜೆನಿಕ್ ಬಳಕೆ ಮಾಡಲಾಗುತ್ತದೆ.

SRC ತಂಡ, ಬಳ್ಳಾರಿ.

★ ಭಾರತದ ರಾಜಕೀಯ ವ್ಯವಸ್ಥೆಗೆ ಅನಿವಾರ್ಯವಾದ ಪ್ರಮುಖ ಚುನಾವಣಾ ಸುಧಾರಣೆಗಳನ್ನು ಗುರುತಿಸಿರಿ

ಭಾರತದ ರಾಜಕೀಯ ವ್ಯವಸ್ಥೆಗೆ ಅನಿವಾರ್ಯವಾದ ಪ್ರಮುಖ ಚುನಾವಣಾ ಸುಧಾರಣೆಗಳನ್ನು ಗುರುತಿಸಿರಿ. (in 250 words)
★ ಭಾರತದ ರಾಜಕೀಯ ವ್ಯವಸ್ಥೆಗೆ ಅನಿವಾರ್ಯವಾದ ಪ್ರಮುಖ ಚುನಾವಣಾ ಸುಧಾರಣೆಗಳನ್ನು ಗುರುತಿಸಿರಿ.


 * ಭಾರತದಲ್ಲಿನ ಇಂದಿನ ಜನಪ್ರತಿನಿಧಿಗಳು 30 ಅಥವಾ 40 ವರ್ಷಗಳ ಹಿಂದೆ ಇದ್ದ ಜನಪ್ರತಿನಿಧಿಗಳಿಗಿಂತ ಭಿನ್ನವಾಗಿದ್ದಾರೆ.

ರಾಜ್ಯ ಶಾಸನ ಸಭೆಗಳಲ್ಲಿ ಬಡಿದಾಟಗಳು ಸಾಮಾನ್ಯ ದೃಶ್ಯವಾಗಿವೆ. ಸಂಸತ್ತಿನಲ್ಲಿ ಅಸಂಸದೀಯ ನಡುವಳಿಕೆಗಳು

ಅಧಿಕವಾಗಿವೆ. ಸಂಶಯಿತ ಹಿನ್ನೆಲೆಯ ವ್ಯಕ್ತಿಗಳು ಶಾಸನ ಸಭೆಗಳಲ್ಲಿ ಅಧಿಕವಾಗುತ್ತಿದ್ದಾರೆ. ಜನಪ್ರತಿನಿಧಿಗಳು

ಚಲಾವಣೆಯಾದ ಮತದ ಅಲ್ಪಸಂಖ್ಯಾತ ಮತಗಳನ್ನು ಮಾತ್ರ ಪಡೆದರೂ ಆಯ್ಕೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ

ಗೋಸ್ವಾಮಿ ಸಮಿತಿ ಚುನಾವಣಾ ಆಯೋಗವು ಸೇರಿದಂತೆ ಅನೇಕ ಮೂಲೆಗಳಿಂದ ಅನೇಕ ಸಲಹೆಗಳು ಬಂದಿವೆ,

ಬರುತ್ತಲೂ ಇವೆ. ಈ ನಿಟ್ಟಿನಲ್ಲಿ ನಿಜವಾದ ಪ್ರಜಾಪ್ರಭುತ್ವದ ಸ್ಥಾಪನೆಗೆ ನಾವು ಎಲ್ಲಾ ಮೂಲೆಗಳಿಂದ ಬರುವ ಸಲಹೆಗಳನ್ನು

ಸ್ವೀಕರಿಸಿ ಅಳವಡಿಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಪಂಚಾಯತ್ ರಾಜ್ ಸಂಸ್ಥೆಗಳನ್ನುಳಿದು ಉಳಿದ ಸದನಗಳಿಗೆ ಪರೋಕ್ಷ

ಚುನಾವಣೆಯನ್ನು ರದ್ದು ಮಾಡಬೇಕು. ವಿಜೇತ ಅಭ್ಯರ್ಥಿಯು ಶೇ.50 ಕ್ಕಿಂತ ಅಧಿಕ ಮತಗಳನ್ನು ಪಡೆಯುವುದನ್ನು ಕಡ್ಡಾಯ

ಮಾಡಬೇಕು. ಚುನಾವಣೆಯಲ್ಲಿ ಹಣ ಮತ್ತು ತೋಳ್ಬಲದ ಪ್ರಭಾವ ಕುಗ್ಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.

 ರಾಜಕೀಯ ರಂಗ ಅಪರಾಧೀಕರಣ ಆಗುವುದನ್ನು ಇದರಿಂದ ತಡೆಯಬಹುದು. ಯಾವುದೇ ಅಪರಾಧಿ ಹಿನ್ನೆಲೆಯಿರುವ

ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ನಿಷೇಧಿಸಬೇಕು. ಚುನಾವಣೆಯಲ್ಲಿ ಹಣದ ಪ್ರಭಾವ ತಪ್ಪಿಸಲು ರಾಜ್ಯವೇ

ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಭರಿಸಬೇಕು. ಚುನಾವಣಾ ಆಕ್ರಮಗಳನ್ನು ಕಡಿಮೆ ಮಾಡಲು ಎಲೆಕ್ಟ್ರಾನಿಕ್

ಮತಯಂತ್ರಗಳನ್ನು ಕಡ್ಡಾಯವಾಗಿ ಬಳಸಿ, ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಬೇಕು. ರಾಜ್ಯಗಳಲ್ಲಿ ಚುನಾವಣಾ

ಸಮಯದಲ್ಲಿ ಆಡಳಿತ ಪಕ್ಷದಿಂದ ಆಡಳಿತ ಯಂತ್ರ ದುರುಪಯೋಗವಾಗದಂತೆ ತಡೆಯಲು, ಚುನಾವಣಾ ಸಮಯದಲ್ಲಿ

ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಬೇಕು ಹಾಗೂ ಚುನಾವಣಾ ಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ಕೈಗೊಂಡಿರುವ

ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಸರ್ಕಾರಿ ಯಂತ್ರವನ್ನು ದುರುಪಯೋಗವಾಗದಂತೆ

ತಡೆಹಿಡಿಯುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಯಲ್ಲಿ ತರಬೇಕು.


ಚೋಳರಾಜ್, ಬಳ್ಳಾರಿ.

Mega Food Park :

 “ಮೆಗಾ ಪುಡ್ ಪಾರ್ಕ್ ”
 (Mega Food Park) :
(ಟಿಪ್ಪಣಿ ಬರಹ)

 ಆಹಾರ ಭದ್ರತೆ ಕಾಯ್ದುಕೊಳ್ಳುವುದಕ್ಕಾಗಿ ಮತ್ತು ಆಹಾರ ಪದಾರ್ಥಗಳ ಸಂಸ್ಕರಣ ಸಾಮರ್ಥ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ, ದೇಶದಲ್ಲಿ 12 ಮೆಗಾ ಪುಡ್ ಪಾರ್ಕ್ ಗಳ ನಿರ್ಮಾಣಕ್ಕೆ ಕೇಂದ್ರ ಆರ್ಥಿಕ ವ್ಯವಹಾರಗಳ ಮೇಲಿನ ಸಚಿವ ಸಂಪುಟ ಸಮ್ಮತಿ ಸೂಚಿಸಿದ್ದು, 11 ನೇ ಪಂಚವಾರ್ಷಿಕ ಯೋಜನೆಯಲ್ಲಿ ಜಾರಿಗೊಳಿಸಲಾದ ಸಹಾಯ ನೀತಿ ಮಾದರಿಯಲ್ಲಿ ಈ ಮೆಗಾ ಪುಡ್ ಪಾರ್ಕ್ ಗಳನ್ನು ಸ್ಥಾಪಿಸಲಾಗುವುದು.

 *.12 ನೇ ಪಂಚವಾರ್ಷಿಕ ಯೋಜನೆಯಡಿ ಮೆಗಾ ಪುಡ್ ಪಾರ್ಕ್ ಗಳನ್ನು ರೂ 1714 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು.

 *.ಅನುಮೋದನೆ ಪಡೆದು ಅಂತಿಮ ಅಧಿಸೂಚನೆ ಹೊರಡಿಸಿದ 30 ತಿಂಗಳ ಕಾಲವಕಾಶದೊಳಗೆ ಈ ಪಾರ್ಕ್ ಗಳನ್ನು ಸ್ಥಾಪಿಸಬೇಕು.


 ★ ಅನುಕೂಲಗಳು:

*.ಕೃಷಿ ಉತ್ಪನ್ನ ಸಂಸ್ಕರಣೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಇದರಿಂದ ಸೂಕ್ತ ಸಂಸ್ಕರಣೆ ಸೌಲಭ್ಯವಿಲ್ಲದೇ ಕೃಷಿಉತ್ಪನ್ನಗಳನ್ನು ಹಾಳಾಗುವುದನ್ನು ತಡೆಯಬಹುದಾಗಿದೆ.

 *.ಈ ಯೋಜನೆಯಿಂದ ಸುಮಾರು 6,000 ರೈತರಿಗೆ ನೇರವಾಗಿ ಹಾಗೂ 25000-30000 ರೈತರಿಗೆ ಪರೋಕ್ಷವಾಗಿ ನೆರವಾಗಲಿದೆ.

 *.ಪ್ರತಿ ಒಂದು ಮೆಗಾ ಪುಡ್ ಪಾರ್ಕ್ ಗಳಿಂದ ನೇರ ಮತ್ತು ಪರೋಕ್ಷವಾಗಿ 40,000 ಉದ್ಯೋಗಗಳು ಸೃಷ್ಟಿಯಾಗಲಿವೆ.

SRC TEAM, BELLARY.

ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ ಏಕೆ?


★ ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ ಏಕೆ?

— ಪ್ರಪಂಚದ ಅರ್ಧದಷ್ಟು ವಿಸ್ತಾರದ ಪ್ರದೇಶದಲ್ಲಿ ಗಂಟೆಗೆ ೧೫ ರಿಂದ ೨೫ ಕಿ.ಮೀ ವೇಗವಾಗಿ ಬೀಸುವ ವಾಣಿಜ್ಯ ಮಾರುತಗಳು ಕಡಿಮೆ ಉಷ್ಣಾಂಶವನ್ನು ಹೊಂದಿದ ಪ್ರದೇಶದಿಂದ ಹೆಚ್ಚು ಉಷ್ಣಾಂಶದ ಪ್ರದೇಶಗಳ ಕಡೆಗೆ ಬೀಸುವುದರಿಂದ ಅವುಗಳ ಉಷ್ಣಾಂಶವು ಹೆಚ್ಚುತ್ತಾ ಹೋಗಿ ಜಲಾಂಶವನ್ನು ಹೊಂದುವ ಅವುಗಳ ಸಾಮರ್ಥ್ಯವೂ ಸಹ ಹೆಚ್ಚುತ್ತಾ ಹೋಗುವುದು.  ಇದರಿಂದ ಇವುಗಳು ತಮ್ಮ ಮಾರ್ಗದಲ್ಲಿ ಮುಂದುವರೆದಂತೆಲ್ಲ ಮಳೆ ನೀಡದೇ ಆ ಪ್ರದೇಶಗಳಲ್ಲಿನ ಜಲಭಾಗಗಳನ್ನೂ ಸಹ ಬತ್ತಿಸಿ ಆಲಿಯ ರೂಪದಲ್ಲಿ ಮುಂದೆ ಕೊಂಡೊಯ್ಯುತ್ತವೆ.

— ಈ ಮಾರುತಗಳು ಹೆಚ್ಚು ಎತ್ತರವಾದ ಪರ್ವತಗಳಿಂದ ತಡೆಯಲ್ಪಟ್ಟಾಗ ಮಾತ್ರ ಮಳೆ ನೀಡುತ್ತವೆ. ಇದರಿಂದ ವಾಣಿಜ್ಯ ಮಾರುತಗಳು ಬೀಸುವ ಭೂ ರಾಶಿಗಳ ಪೂರ್ವ ಭಾಗಗಳು ಮಳೆ ಪಡೆಯುತ್ತವೆ.  ಆದರೆ ಪಶ್ಚಿಮದ ಕಡೆಗೆ ಬಂದಂತೆ ಮಳೆಯ ಪ್ರಮಾಣವು ಕಡಿಮೆಯಾಗುತ್ತಾ ಹೋಗುವುದು.  ಇದರಿ೦ದ ಈ ವಲಯದ ಭೂ ರಾಶಿಗಳ ಪಶ್ಚಿಮ ಭಾಗಗಳು ಮರಭೂಮಿ ಹಾಗೂ ಅರೆ ಮರಭೂಮಿಗಳಾಗಿ ಪರಿಣಮಿಸಿವೆ.

ಇದರಿಂದಾಗಿಯೇ 'ಉಷ್ಣವಲಯದ ಎಲ್ಲಾ ಮರಭೂಮಿಗಳೂ ಭೂ ರಾಶಿಗಳ ಪಶ್ಚಿಮ ಭಾಗದಲ್ಲಿಯೇ ಕಂಡು ಬರುತ್ತವೆ


SRC TEAM, BELLARY.

ಟ್ರೋಲಿಂಗ್ (Trolling)

ಟ್ರೋಲಿಂಗ್ (Trolling) :

*  ಅಂತರ್ಜಾಲದಲ್ಲಿ ಆಕ್ಷೇಪಾರ್ಹ, ಚಿತ್ರ ಸಂದೇಶ ಹರಿಬಿಡುವುದನ್ನು ಟ್ರೋಲಿಂಗ್ ಎಂದು ಕರೆಯುತ್ತಾರೆ. ದ್ವೇಷ ಜನಾಂಗೀಯ ಜಗಳ ಮೊದಲಾದ ಸಮಾಜ ವಿರೋಧಿ ಭಾವನೆಗಳನ್ನು ಬಿತ್ತುವ ಕೆಟ್ಟ ವಿಚಾರ ಉದ್ದೇಶ ಇದರದ್ದಾಗಿದೆ.

* ಕೆಲವೊಮ್ಮೆ ಆನ್ ಲೈನ್ ವೇದಿಕೆಗಳ ಚರ್ಚೆಗಳನ್ನು ಹೈಜಾಕ್ (Hijack) ಮಾಡಿ ತಮ್ಮ ವಿಚಾರಗಳನ್ನು ಹೇರುವ ಹೇಯ ಕೃತ್ಯಗಳನ್ನು ಇವರು ನಡೆಸುತ್ತಾರೆ.


SRC TEAM, BELLARY.

ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನ , ಸಂತತಿಗಳ ಸಂಕ್ಷಿಪ್ತ ಇತಿಹಾಸ ಪರಿಚಯ

ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನ , ಸಂತತಿಗಳ ಸಂಕ್ಷಿಪ್ತ ಇತಿಹಾಸ ಪರಿಚಯ  :

ಭಾರತದ 8ನೇ ಅತೀ ದೊಡ್ಡ ರಾಜ್ಯವಾಗಿರುವ ಕರ್ನಾಟಕವು ಶ್ರೀಮಂತ ಇತಿಹಾಸವನ್ನು ಹೊಂದಿದ್ದು,  ಹಲವಾರು ಶತಮಾನಗಳವರೆಗೆ ಹಬ್ಬಿದೆ.


೧) ಮೌರ್ಯರು :
ರಾಜ್ಯದ ನಾನಾ ಭಾಗಗಳಲ್ಲಿ ದೊರೆತಿರುವ ಶಾಸನಗಳು ಕನ್ನಡನಾಡು ಉತ್ತರದ ಮೌರ್ಯರ ಆಡಳಿತಕ್ಕೆ ಕ್ರಿ.ಪೂ. 3ನೇ ಶತಮಾನದಲ್ಲಿ ಒಳಪಟ್ಟಿತ್ತು ಎಂದು ಸಾರುತ್ತವೆ.  ಮೌರ್ಯರ ಹೆಸರಾಂತ ದೊರೆ ಅಶೋಕ (ಕ್ರಿ.ಪೂ. 273-233) ನ ಶಾಸನಗಳು ರಾಜ್ಯದ 11 ಸ್ಥಳಗಳಲ್ಲಿ ಕಂಡು ಬಂದಿವೆ.

* ಚಂದ್ರಗುಪ್ತ ಮೌರ್ಯನು ತನ್ನ ಗುರು ಭದ್ರಬಾಹುವಿನೊಡನೆ ಕರ್ನಾಟಕದ ಶ್ರವಣ ಬೆಳಗೊಳದಲ್ಲಿ ಬಂದು ನೆಲೆಸಿದ್ದನು.

* ಅಶೋಕನ ಕರ್ನಾಟಕದ ಪ್ರಾಂತ್ಯಗಳ ರಾಜಧಾನಿಗಳು  :
ಸುವರ್ಣಗಿರಿ,  ಇಸಿಲ,  ತೊಸಿಲ,  ಸಂಪ.

* ಕರ್ನಾಟಕದಲ್ಲಿ ಅಶೋಕನ ಶಾಸನಗಳು ದೊರೆತ ಸ್ಥಳಗಳು :
- ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ,  ಅ.ಸಿದ್ದಾಪುರ,  ಜಿ.ರಾಮೇಶ್ವರ.
- ರಾಯಚೂರು ಜಿಲ್ಲೆಯ ಗವಿಮಠ,ಮಾಸ್ಕಿ,  ಪಾಲ್ಕಿಗುಂಡು,  ಕೊಪ್ಪಳ.
- ಗುಲ್ಬರ್ಗಾ ಜಿಲ್ಲೆಯ ಸನ್ನತಿ.
- ಬಳ್ಳಾರಿ ಜಿಲ್ಲೆಯ ನಿಟ್ಟೂರು,  ಉದೇಗೊಳ್ಳಂ


೨)  ಶಾತವಾಹನರು (ಕ್ರಿ.ಪೂ. 238 - ಕ್ರಿ.ಶ 225) :
ಮೌರ್ಯರ ಸಾಮಂತರಾಗಿದ್ದ ಇವರು, ಮೌರ್ಯರ ನಂತರ ಸ್ವತಂತ್ರರಾಗಿ,  (ಕ್ರಿ.ಪೂ. 225 ರವರೆಗೆ ಆಳ್ವಿಕೆ ನಡೆಸಿದರು.
* ಇವರ ರಾಜಧಾನಿ  :  ಪೈತಾನ್ ಅಥವಾ ಪ್ರತಿಷ್ಠಾನ.
* ಇವರ ಲಾಂಛನ :  ವರುಣ.
* ಇವರೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆಯನ್ನು ಪ್ರಾರಂಭಿಸಿದವರು.
* ಶಾತವಾಹನರ ಮೂಲ ಪುರುಷ  :  ಸಿಮುಖ.
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ
* ಶಾತವಾಹನರನ್ನು ' ಶಾತಕರ್ಣಿಗಳೆಂದು' ಕರೆಯುತ್ತಾರೆ.


೩)  ಬನವಾಸಿಯ ಕದಂಬರು (ಕ್ರಿ.ಶ 345 - 540)
* ಈ ಸಂತತಿಯ ಸ್ಥಾಪಕ  :ಮಯೂರವರ್ಮ (ಮಯೂರಶರ್ಮ)  (345-360)
* ಕದಂಬರ ರಾಜಧಾನಿ :  ಬನವಾಸಿ (ಉ.ಕನ್ನಡ ಜಿಲ್ಲೆಯಲ್ಲಿದೆ)
* ಬನವಾಸಿಗೆ ವನವಾಸಿ,  ವೈಜಯಂತಿ,  ಬೈಜಾಂಟಾಯಿನ್ ಎಂಬ ಹೆಸರುಗಳಿದ್ದವು.
* ಇವರ ಲಾಂಛನ :  ಸಿಂಹ.
* ಕದಂಬರಲ್ಲಿ ಹಾನಗಲ್, ಚಂದಾವರ,  ಗೋವೇ ಕದಂಬ ರೆಂದು ಮೂರು ಶಾಖೆಗಳಿದ್ದವು.
* ಕದಂಬರ ಮೂಲದ ಬಗ್ಗೆ 'ಶಾಂತಿವರ್ಮನ ತಾಳಗುಂದ ಶಾಸನ' ತಿಳಿಸುತ್ತದೆ.
* ಕನ್ನಡದ ಪ್ರಪ್ರಥಮ ಶಾಸನ - ಕಾಕುತ್ಸವರ್ಮನ ಹಲ್ಮಿಡಿ ಶಾಸನ.


೪)  ತಲಕಾಡಿನ ಗಂಗರು  (ಕ್ರಿ.ಶ 350- 999)
* ದಡಿಗ ಮತ್ತು ಮಾದವರು ಗಂಗ ವಂಶದ ಸ್ಥಾಪಕರು.
* ಈ ಸಂತತಿಯ ಮೊದಲ ದೊರೆ : ದಡಿಗ (350 -400)
* ಇವರ ಮೊದಲ ರಾಜಧಾನಿ :  ಕೋಲಾರ ಬಳಿಯ ಕುವಲಾಲ
* ಇವರ ಎರಡನೆಯ ರಾಜಧಾನಿ : ತಲಕಾಡು
* ತಲಕಾಡಿನ ಮತ್ತೊಂದು ಹೆಸರು  :  ತಲವನಪುರ.
* ಇವರ ಮೂರನೇ ರಾಜಧಾನಿ :  ಚೆನ್ನಪಟ್ಟಣ ಬಳಿಯ ಮಾಕುಂದ
* ಇವರ ಲಾಂಛನ : ಆನೆ(ಮದಗಜ)
* ಈ ಸಂತತಿಯ ಅತ್ಯಂತ ಪ್ರಸಿದ್ಧ  ದೊರೆ : ದುರ್ವಿನೀತ (540-600)
* ಶ್ರವಣಬೆಳಗೊಳದಲ್ಲಿ ಬಾಹುಬಲಿ ವಿಗ್ರಹವನ್ನು ಕೆತ್ತಿಸಿದ ಚಾವುಂಡರಾಯ ಗಂಗರ ಆಸ್ಥಾನದಲ್ಲಿ ಮಂತ್ರಿ ಹಾಗೂ ದಂಡನಾಯಕನಾಗಿದ್ದನು.
* ಚಾವುಂಡರಾಯನು 4ನೇ ರಾಚಮಲ್ಲನ ಪ್ರಧಾನಮಂತ್ರಿಯಾಗಿದ್ದನು.


೫) ಬಾದಾಮಿಯ ಚಾಲುಕ್ಯರು (ಕ್ರಿ.ಶ 500- 757) :
* ಈ ಸಂತತಿಯ ಸ್ಥಾಪಕ  :  ಜಯಸಿಂಹ
* ಇವರ ರಾಜಧಾನಿ  : ಬಾದಾಮಿ ಅಥವಾ ವಾತಾಪಿ (ಬಿಜಾಪುರ ಜಿಲ್ಲೆಯಲ್ಲಿದೆ)
* ಈ ಸಂತತಿಯ ಅತ್ಯಂತ ಪ್ರಸಿದ್ಧ  ದೊರೆ :  ಇಮ್ಮಡಿ ಪುಲಕೇಶಿ (609-642)
* ಇವರ ರಾಜ ಲಾಂಛನ  : ವರಹ.
* ಇಮ್ಮಡಿ ಪುಲಕೇಶಿಯ ಆಸ್ಥಾನಕ್ಕೆ ಭೇಟಿಯಿತ್ತ ವಿದೇಶಿ ಪ್ರವಾಸಿಗ :  ಚೀನಾದ ಬೌದ್ಧ ಯಾತ್ರಿಕ  ಹ್ಯೂಯನ್ ತ್ಸಾಂಗ್.
* ಬಾದಾಮಿಯ ಚಾಲುಕ್ಯರ ನಿರ್ಮಿತ ಐಹೊಳೆಯನ್ನು 'ಭಾರತೀಯ ದೇವಾಲಯದ ವಾಸ್ತುಶಿಲ್ಪದ ತೊಟ್ಟಿಲು ' ಎನ್ನುವರು.


೬) ಮಾನ್ಯಖೇಟದ ರಾಷ್ಟ್ರಕೂಟರು  (ಕ್ರಿ.ಶ 345 - 540) :
* ಈ ಸಂತತಿಯ ಸ್ಥಾಪಕ : ದಂತಿದುರ್ಗ
* ಇವರ ರಾಜಧಾನಿ :  ಮಾನ್ಯಖೇಟ ಅಥವಾ ಮಾಲಖೇಡವಾಗಿತ್ತು.
* ಇವರ ಲಾಂಛನ : ಗರುಡ
* ಈ ಸಂತತಿಯ ಅತ್ಯಂತ ಹೆಸರಾಂತ   ದೊರೆ :ಅಮೋಘವರ್ಷ ನೃಪತುಂಗ (814-878)
* ಕ್ರಿ.ಶ 851 ರಲ್ಲಿ ಅರಬ್ ಪ್ರವಾಸಿ ಸುಲೈಮಾನ್ ನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.


೭) ಕಲ್ಯಾಣದ ಚಾಲುಕ್ಯರು (ಕ್ರಿ.ಶ 973-1156 ಹಾಗೂ 1183-1200)
* ಇಮ್ಮಡಿ ತೈಲಪ ಕಲ್ಯಾಣದ ಚಾಲುಕ್ಯ ಸಂಸ್ಥಾನದ ಸ್ಥಾಪಕ
* ಇವರ ರಾಜಧಾನಿ : ಕಲ್ಯಾಣ
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ (1076-1126)
* 1156 ರಲ್ಲಿ ಸಿಂಹಾಸನವನ್ನು ಕಳೆದುಕೊಂಡ ಇವರ ದೊರೆಗಳು ಪುನಃ 1183 ರಿಂದ 1200 ರವರೆಗೆ ರಾಜ್ಯಭಾರ ನಡೆಸಿದರು.


೮) ಕಲ್ಯಾಣಿಯ ಕಲಚೂರಿಗಳು  (ಕ್ರಿ.ಶ 1156 - 1183)
* ಕೇವಲ ಸಾಮಂತರಾಗಿ ಅಧಿಕಾರ ನಡೆಸುತ್ತಿದ್ದ  ಕಲ್ಯಾಣಿಯ ಕಲಚೂರಿಗಳು ಬಿಜ್ಜಳ (1156-1168) ನಿಂದಾಗಿ ಅಲ್ಪಕಾಲ ಸ್ವತಂತ್ರವಾಗಿ ರಾಜ್ಯಭಾರ ನಡೆಸಿದರು.
* ಹೆಸರಾಂತ ಸಮಾಜ ಸುಧಾಕರ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.


೯) ದ್ವಾರಸಮುದ್ರದ ಹೊಯ್ಸಳರು  (ಕ್ರಿ.ಶ 985 - 1346) :
* ಈ ಸಂತತಿಯ ಮೂಲ ಪುರುಷ  : ಸಳ.
* ಇವರ ರಾಜಧಾನಿ : ಹಳೇಬೀಡು ಅಥವಾ ದ್ವಾರಸಮುದ್ರವಾಗಿತ್ತು.
* ಈ ಸಂತತಿಯ ಅತ್ಯಂತ ಪ್ರಮುಖ ದೊರೆ : ವಿಷ್ಣುವರ್ಧನ ಅಥವಾ ಬಿಟ್ಟಿದೇವ (1108-1152)
* ಬೇಲೂರಿನ ಚೆನ್ನಕೇಶವ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಗಳು ಹೊಯ್ಸಳರ ಕೊಡುಗೆಗಳಾಗಿವೆ.


೧೦) ವಿಜಯನಗರ ಸಾಮ್ರಾಜ್ಯ  (ಕ್ರಿ.ಶ 1336 - 1565) :
* ವಿದ್ಯಾರಣ್ಯರ ಸಹಾಯದಿಂದ ಹಕ್ಕ -ಬುಕ್ಕ ಸಹೋದರರಿಂದ ಸ್ಥಾಪಿತವಾದ ಈ ಸಾಮ್ರಾಜ್ಯವನ್ನು ಹಲವಾರು ಸಂತತಿಯ ರಾಜರು ವೈಭವದಿಂದ ಆಳಿದರು.
* ಇವರ ರಾಜಧಾನಿ : ಹಂಪಿ
* ತುಳುವ ಸಂತತಿಯ ಕೃಷ್ಣದೇವರಾಯ (1519 - 1529) ವಿಜಯನಗರ ಸಾಮ್ರಾಜ್ಯದ  ಅತ್ಯಂತ ಪ್ರಬಲ ಹಾಗೂ ಖ್ಯಾತ ದೊರೆ.
* 1565 ರ ತಾಳೀಕೋಟೆ ಯುದ್ಧದಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು.


೧೧) ಬಹಮನಿ ಸಾಮ್ರಾಜ್ಯ (ಕ್ರಿ.ಶ 1347 - 1527)
* ಈ ಬಹಮನಿ ಸಾಮ್ರಾಜ್ಯದ ಸ್ಥಾಪಕ: ಅಲ್ಲಾವುದ್ದೀನ್ ಹಸನ್ ಬಹಮನ್ ಷಾ.
* ಈ ಮುಸ್ಲಿಂ ಸಾಮ್ರಾಜ್ಯದ ರಾಜಧಾನಿಗಳು :  ಗುಲ್ಬರ್ಗಾ ಹಾಗೂ ಬೀದರ್.


SRC TEAM, BELLARY.

ಬೌದ್ಧಧರ್ಮದಲ್ಲಿ ಉದಯಿಸಿದ ಬೌದ್ಧ ಪಂಥಗಳ ಕುರಿತು ಬರೆಯಿರಿ.

ಬೌದ್ಧಧರ್ಮದಲ್ಲಿ ಉದಯಿಸಿದ ಬೌದ್ಧ ಪಂಥಗಳ ಕುರಿತು ಬರೆಯಿರಿ.
(100 ಶಬ್ದಗಳಲ್ಲಿ)
 (Write about Buddhist sects which raised in emerging Buddhism)

ಬುದ್ಧನ ನಿಧನದ ನಂತರ ಕುಶಾಣ ದೊರೆ ಕನಿಷ್ಕನ ಆಶ್ರಯದಲ್ಲಿ ನಾಲ್ಕನೆಯ ಬೌದ್ದ ಮಹಾಸಭೆಯಲ್ಲಿ ಬೌದ್ದ ಧರ್ಮದ ಆಚರಣೆಯಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮಾಡಿದ ಪ್ರಯತ್ನ ವಿಫಲವಾಗಿದ್ದರಿಂದ ಬೌದ್ದ ಧರ್ಮದಲ್ಲಿ ಹಿನಾಯಾನ ಮತ್ತು ಮಹಾಯಾನ ಎಂಬ ಪಂಥಗಳು ಉದಯಿಸಿದವು.

 1. ಮಹಾಯಾನ (ಶ್ರೇಷ್ಠಮಾರ್ಗ):
ಮಹಾಯಾನ ಪಂಥವನ್ನು 'ಶ್ರೇಷ್ಠ ಮಾರ್ಗ' ಎಂದು ತಿಳಿಯಲಾಗಿದೆ. ಇದು ಹಿಂದೂ ಧರ್ಮದ ಪ್ರಭಾವಕ್ಕೆ ಒಳಗಾಗಿದ್ದು, ಬುದ್ಧನನ್ನು ದೇವರ ಸ್ವರೂಪವೆಂದು ತಿಳಿದು ಮೂರ್ತಿ ಪೂಜೆ ಪ್ರಾರಂಭಿಸಿತು. ಬುದ್ಧನ ತತ್ವಗಳಿಗಿಂತ ಬುದ್ಧನಲ್ಲಿ ನಂಬಿಕೆ ಹೂಂದಿತ್ತು.ಬುದ್ಧನು ದೇವರ ಅವತಾರವಗಿದ್ದು, ಅವನ ಆರಾದನೆ ಮೋಕ್ಷಕ್ಕೆ ಮಾರ್ಗವಾಗುತ್ತೆಂದು ತಿಳಿಯಲಾಯಿತು. ಹೂವು, ಬುದ್ಧನ ವಿಗ್ರಹ , ದೀಪ, ಕೂಡೆಗಳನ್ನು ಭಕ್ತಿಯಿಂದ ಪೂಜಿಸುತ್ತಿದ್ದರು. ಇವರು ಬುದ್ದನು ಪುನಃ ಜನ್ಮತಾಳುತ್ತಾನೆಂದು ನಂಬಿದರು.

 2. ಹಿನಾಯಾನ (ಕನಿಷ್ಠ ಮಾರ್ಗ):
ಹಿನಾಯಾನ ಪಂಥವನ್ನು 'ಕನಿಷ್ಟ ಮಾರ್ಗ' ವೆಂದು ತಿಳಿಯಲಾಗಿದೆ. ಬುದ್ದನ ತತ್ವಗಳನ್ನು ಈ ಪಂಥವು ನಿಷ್ಠೆಯಿಂದ ಪಾಲಿಸುತ್ತಿತ್ತು. ಇದು ಪರಿಶುದ್ದ ಬೌದ್ದಧರ್ಮವಾಗಿತ್ತು. ಇದರ ಗ್ರಂಥಗಳು ಪಾಲಿ ಭಾಷೆಯಲ್ಲಿ ರಚನೆಯಾದವು. ಮಾನವನ ನಿರ್ವಾಣವು ಸ್ವಪ್ರಯತ್ನದಿಂದ ಸಾಧ್ಯವಾಗುತ್ತದೆಂದು ತಿಳಿದಿದ್ದರು. ಇವರು ಕಮಲ, ಆನೆ, ಧರ್ಮಚಕ್ರಗಳನ್ನು ಆರಾಧಿಸುತ್ತಿದ್ದರು.


SRC TEAM, BELLARY.

ಬೌದ್ಧ ಧರ್ಮದ ಬೆಳವಣಿಗೆಗಾಗಿ ನಡೆದ ಬೌದ್ಧ ಮಹಾಸಭೆಗಳ ಕುರಿತು ಚರ್ಚಿಸಿ.

ಬೌದ್ಧ ಧರ್ಮದ ಬೆಳವಣಿಗೆಗಾಗಿ ನಡೆದ ಬೌದ್ಧ ಮಹಾಸಭೆಗಳ ಕುರಿತು ಚರ್ಚಿಸಿ.
(250 ಶಬ್ಧಗಳಲ್ಲಿ)
 ( Discuss about the Buddhist conferences those were held for development of the Buddhist religion.)

 ವಿಶಾಲ ದೃಷ್ಟಿಕೋನ ಮತ್ತು ಹೊಂದಾಣಿಕೆಯ ಪ್ರವೃತ್ತಿಯಿಂದ ಜಾತಿ, ಲಿಂಗ, ಭಾಷೆ, ಜನಾಂಗಗಳ ಭೇಧವೆನಿಸದೆ 1200 ವರ್ಷಗಳ ಕಾಲ ಪ್ರಭಾವಶಾಲಿಯಾಗಿ ಬಾಳಿದ ಬೌದ್ಧ ಧರ್ಮದ ಬೆಳವಣಿಗೆಗಾಗಿ, ಬುದ್ಧನ ಮರಣದ ನಂತರ ಅವನ ಶಿಷ್ಯವರ್ಗ ನಾಲ್ಕು ಬೌದ್ಧ ಮಹಾಸಭೆಗಳನ್ನು ನಡೆಸಿದರು. ಅವುಗಳನ್ನು `ಬೌದ್ಧ ಮಹಾಸಮ್ಮೇಳನ`ಗಳೆಂದು ಕರೆಯಲಾಗಿದೆ.

 * ಪ್ರಥಮ ಬೌದ್ದ ಮಹಾಸಭೆ:
ಪ್ರಥಮ ಮಹಾಸಭೆಯು ಕ್ರಿ. ಪೂ. 487 ರಲ್ಲಿ ಮಗಧ ರಾಜ್ಯದ ರಾಜಧಾನಿ ರಾಜಗೃಹದಲ್ಲಿ ನಡೆಯಿತು. ಮಹಾಕಷ್ಯಪನು ಮಹಾಸಭೆಯ ಅಧ್ಯಕ್ಷತೆವಹಿಸಿದ್ದನು. ಸಭೆಯಲ್ಲಿ ಬುದ್ದನ ಶಿಷ್ಯರಾದ ಆನಂದ, ಉಪಾಲಿ, ಸುಬದ್ದರು ಭಾಗವಹಿಸಿದ್ದರು.
 — ಈ ಸಭೆಯಲ್ಲಿ ಬುದ್ದನ ಧಾರ್ಮಿಕ ಸಿಧ್ಧಾಂತಗಳನ್ನು ಮತ್ತು ಸನ್ಯಾಸ ನಿಯಮಗಳನ್ನು ಸಂಗ್ರಹಿಸಿ ಗ್ರಂಥ ರೂಪದಲ್ಲಿ ಹೊರತರಲಾಯಿತು. ಅವುಗಳನ್ನು ಧರ್ಮಪಿಟಕ ಮತ್ತು ವಿನಯ ಪಿಟಕಗಳೆಂದು ಕರೆಯಲಾಗಿದೆ.

 * ದ್ವಿತೀಯ ಬೌದ್ದ ಮಹಾಸಭೆ:
 ಎರಡನೆಯ ಮಹಾಸಭೆಯು ಕ್ರಿ. ಪೂ. 387 ರಲ್ಲಿ ವೈಶಾಲಿಯಲ್ಲಿ ನಡೆಯಿತು.ಈ ಸಮ್ಮೇಳನದಲ್ಲಿ ವಿನಯ ಪಿಟಕದ ಬಗ್ಗೆ ವಿರೋಧಭಾಸಗಳು ಉಂಟಾದವು. ನಿಯಮಗಳನ್ನು ಸಡಿಲಗೊಳಿಸಬೇಕೆಂದು ಮತ್ತು ಸಡಿಲಗೊಳಿಸಬಾರದೆಂಬ ಭಿನ್ನಾಭಿಪ್ರಾಯಗಳುಂಟಾದವು.
 — ಇದರಿಂದ ಮಹಾಸಂಘಿಕರು ಮತ್ತು ಸ್ಥಾವರವಾದಿಗಳು ಎಂಬ ಎರಡು ಗುಂಪುಗಳು ಹುಟ್ಟಿಕೊಂಡವು.

 * ತೃತಿಯ ಬೌದ್ಧ ಮಹಾಸಭೆ:
ಮೂರನೆಯ ಮಹಾಸಭೆಯು ಕಾಕವರ್ಣಿಯ ಆಶ್ರಯದಲ್ಲಿ ಮೌರ್ಯ ರಾಜಧಾನಿ ಪಾಟಲಿಪುತ್ರದಲ್ಲಿ ಕ್ರಿ. ಪೂ. 234 ರಲ್ಲಿ ನಡೆಯಿತು. ಮೊಗ್ಗಲಿ ಪುತ್ರ ತಿಸ್ಸನು ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದನು. ಬುದ್ದನ ತತ್ವಗಳಲ್ಲಿ ಎಕತೆಯನ್ನು ತರಲು ಮಹಾಸಭೆ ಪ್ರಯತ್ನಿಸಿತು. ಬುದ್ದನ ತತ್ವಗಳನ್ನು ನಿಷ್ಠೆಯಿಂದ ಪಾಲಿಸಬೇಕೆಂದು ನಿರ್ಣಯಿಸಲಾಯಿತು ಮತ್ತು ಬೌದ್ಧ ಧರ್ಮ ಪ್ರಸಾರದ ರೊಪರೇಷೆಗಳನ್ನು ಸಿದ್ದಪಡಿಸಲಾಯಿತು.
 — ಈ ಮಹಾಸಭೆಯಲ್ಲಿ ಬುದ್ಧನ ಬೋದನೆಗಳನ್ನೊಳಗೊಂಡ 'ಅಭಿದಮ್ಮ ಪಿಟಕ' ಎಂಬ ಕೃತಿಯನ್ನು ಹೊರತರಲಾಯಿತು.

 * ಚತುರ್ಥ ಬೌದ್ಧ ಮಹಾಸಭೆ:
 ನಾಲ್ಕನೆಯ ಬೌದ್ದ ಮಹಾಸಭೆಯು ಕುಶಾಣದೊರೆ ಕನಿಷ್ಕನ ಆಶ್ರಯದಲ್ಲಿ ಕ್ರಿ. ಶ. 100 ರಲ್ಲಿ ಕಾಶ್ಮೀರದ ಕುಂಡಲ ವನದಲ್ಲಿ ನಡೆಯಿತು. ವಸುಮಿತ್ರ ಎಂಬ ಬೌದ್ಧಸನ್ಯಾಸಿ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದನು. ಉಪಾಧ್ಯಕ್ಷತೆಯನ್ನು ಅಶ್ವಘೋಷ ವಹಿಸಿದನು. ನಾಗಾರ್ಜುನ ಎಂಬ ಬೌದ್ಧ ವಿದ್ವಾಂಸನು ಮಹಾಸಭೆಯಲ್ಲಿ ಭಾಗವಹಿಸಿದ್ದನು. ತ್ರಿಪಿಟಕಗಳ ಬಗ್ಗೆ ಮಹಾ ಭಾಷೆಗಳನ್ನು ಬರೆಯಲಾಯಿತು.
 — ಸಭೆಯು ಬೌದ್ದ ಧರ್ಮದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮಾಡಿದ ಪ್ರಯತ್ನ ವಿಫಲವಾಗಿದ್ದರಿಂದ ಬೌದ್ದ ಧರ್ಮದಲ್ಲಿ ಹಿನಾಯಾನ ಮತ್ತು ಮಹಾಯಾನ ಎಂಬ ಪಂಥಗಳು ಉದಯಿಸಿದವು.

 * ಪಂಚಮ ಬೌದ್ದ ಮಹಾಸಭೆ:
 ಪಂಚಮ ಬೌದ್ದ ಮಹಾಸಭೆ ಹರ್ಷವರ್ಧನನ ಉಪರಾಜಧಾನಿ ಕನೋಜದಲ್ಲಿ ಕ್ರಿ. ಶ. 643 ರಲ್ಲಿ ಹ್ಯೂಯನತ್ಸಾಂಗನ ಅಧ್ಯಕ್ಷತೆಯಲ್ಲಿ ನಡೆಯಿತು. ಮಹಾಯಾನ ತತ್ವಗಳಿಗೆ ಪ್ರಚಾರ ಕೂಡುವುದು ಈ ಸಮ್ಮೇಳನದ ಉದ್ದೇಶವಾಗಿತ್ತು.
 — ಈ ಸಭೆಗೆ ಕಾಮರೂಪದ ದೂರೆ ಭಾಸ್ಕರವರ್ಮ, ಪಲ್ಲವಿಯ ದೂರೆ ಧೃವಸೇನ ಸೇರಿದಂತೆ 20 ಜನರಾಜರು 1000 ಬೌದ್ಧ ವಿದ್ವಾಂಸರು, 3000ಸಾವಿರ ಬೌದ್ಧ ಭಿಕ್ಷುಕರು, 3000 ಬ್ರಾಹ್ಮಣರು ಭಾಗವಹಿಸಿದರು.

SRC TEAM, BELLARY,

ಬಾಡಿಗೆ ತಾಯ್ತನ'

ಬಾಡಿಗೆ ತಾಯ್ತನ' ದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿರಿ. (50 ಶಬ್ದಗಳಲ್ಲಿ) (Briefly discuss about 'Surrogate Motherhood')
★ 'ಬಾಡಿಗೆ ತಾಯ್ತನ' ದ ಕುರಿತು ಸಂಕ್ಷಿಪ್ತವಾಗಿ ಚರ್ಚಿಸಿರಿ. (50 ಶಬ್ದಗಳಲ್ಲಿ)
 (Briefly discuss about 'Surrogate Motherhood')

 * ಮಕ್ಕಳನ್ನು ಬಯಸುವ ದಂಪತಿಗಳಿಗಾಗಿ ಮಹಿಳೆಯೊಬ್ಬಳು ಮಗು ಹೆತ್ತುಕೊಡುವುದನ್ನು ಬಾಡಿಗೆ ತಾಯ್ತನ ಎನ್ನುತ್ತಾರೆ. ಮಗುವನ್ನು ಹೆತ್ತುಕೊಡುವ ಮಹಿಳೆ, ಮಗುವಿನ ಜೈವಿಕ ತಾಯಿ ಆಗಿದ್ದಿರಬಹುದು ಅಥವಾ ಆಗಿರದೆಯೂ ಇರಬಹುದು.

 * ಬಾಡಿಗೆ ತಾಯ್ತನ ಪ್ರಕ್ರಿಯೆಯ ಭ್ರೂಣದಹಂತ ನೈಸರ್ಗಿಕವಾಗಿರದ ಕಾರಣ ಹಲವು ನೀತಿ ಸಂಹಿತೆ, ಕಾನೂನು ಮತ್ತು ಆರೋಗ್ಯ ವಿಚಾರಗಳನ್ನು ಒಳಗೊಂಡಿದೆ. ಈ ಪ್ರಕ್ರಿಯೆ ಮಹಿಳೆಯ ಶೋಷಣೆಗೂ ಕಾರಣವಾಗಬಹುದೆಂಬ ಭೀತಿ ಉಂಟಾಗಿದ್ದು ಕಟ್ಟುನಿಟ್ಟಾದ ಶಾಸನ ತರುವ ಮೂಲಕ ನಿರ್ಬಂಧಿತ ಪ್ರಕ್ರಿಯೆಯನ್ನಾಗಿಸಲು ಯತ್ನಗಳು ನಡೆದಿವೆ.

 * ಭಾರತದಲ್ಲಿ ಬಾಡಿಗೆ ತಾಯ್ತನ ಅತಿ ದೊಡ್ಡ ವಾಣಿಜ್ಯಿಕ ಚಟುವಟಿಕೆಯಾಗುತ್ತಿದ್ದು ಬಡಮಹಿಳೆಯರು ಶೋಷಣೆಗೊಳಗಾಗುವ ಭೀತಿ ಒಡ್ಡಿದೆ. ಈ ಹಿನ್ನೆಲೆಯಲ್ಲಿ ನೆರವಿನ ಪ್ರಜನನ ತಂತ್ರಜ್ಞಾನ ವಿಧೇಯಕ ತರಲು ಸರ್ಕಾರ ಪ್ರವೃತ್ತವಾಗಿದೆ.

SRC TEAM, BELLARY.

(Bitcoin) ಬಿಟ್ಕೊ ನ್ ಎಂದರೇನು?

 (Bitcoin) ಬಿಟ್ಕೊ ನ್ ಎಂದರೇನು? ಆನ್ ಲೈನ್ ನಲ್ಲಿ ಇದರ ಬಳಕೆ ಕುರಿತು ವಿಶ್ಲೇಷಿಸಿ.
(What is Bitcoin? Analyze its uses in on-line. (150 ಶಬ್ದಗಳಲ್ಲಿ)

 ಬಿಟ್ಕೊ ನ್, ಕೆಲವು ಆನ್ ಲೈನ್ ಬಳಕೆದಾರರು ಬಳಸುತ್ತಿರುವ ಅಭೌತಿಕ ಹಣವಾಗಿದೆ. ಬಿಟ್ಕೊ ನ್ ಅನ್ನು ವಿಶಿಷ್ಟ ಆನ್ಲೈನ್ ನೊಂದಣಿ ಸಂಖ್ಯೆಯ ಆಧಾರದ ಮೇಲೆ ನಮೂದಿಸಲಾಗುತ್ತದೆ.

 * ಪ್ರಸ್ತುತ 11 ದಶಲಕ್ಷ ಬಿಟ್ಕೊ ನ್ ಗಳು ಚಾಲ್ತಿಯಲ್ಲಿವೆ. `ಮೈನಿಂಗ್' ಎಂದು ಕರೆಯಲಾಗುವ ಪ್ರಕ್ರಿಯೆಯಲ್ಲಿ ಕಂಪ್ಯೂಟರ್ ಮೂಲಕ ಗಣಿತ ಸಮಸ್ಯೆಯನ್ನು 64 ಅಂಕೆಗಳ ರೂಪದಲ್ಲಿ ಬಿಡಿಸಲಾಗುತ್ತದೆ / ಪರಿಹರಿಸಲಾಗುತ್ತದೆ. ಈ ರೀತಿ ಸಮಸ್ಯೆ ಬಿಡಿಸುವ ಕಂಪ್ಯೂಟರ್ ಮಾಲೀಕರಿಗೆ 25 ಬಿಟ್ಕೊ ನ್ ನೀಡಲಾಗುತ್ತದೆ. ಈ ರೀತಿ ಕಂಪ್ಯೂಟರ್ ಮೂಲಕ ಪ್ರೋಗ್ರಾಂ ಪರಿಹಾರ ಒದಸುವವರಿಗಾಗಿ ಸದ್ಯ ಪ್ರತಿ ದಿನ ಒಟ್ಟು 3600 ಬಿಟ್ಕೊನ್ ವಿತರಣೆ ಆಗುತ್ತಿದೆ. ಸಮಸ್ಯೆಗೆ ಪರಿಹಾರ ಒದಗಿಸಲು ಬಯಸುವವರು ಮೊದಲು ತಮ್ಮನ್ನು / ಕಂಪ್ಯೂಟರನ್ನು ನಮೂದಿಸಿಕೊಳ್ಳಬೇಕಾಗುತ್ತದೆ. ಆಗ ದೊರಕುವ ಬಿಟ್ಕೊನ್ ವಿಳಾಸ ಖಾತೆ (27 ರಿಂದ 34 ಅಕ್ಷರ ಇರುತ್ತದೆ) ಬಿಟ್ಕೊ ನ್ ಪಡೆಯಲು ಅಭೌತಿಕ ಅಂಚೆ ಪೆಟ್ಟಿಗೆಯಾಗಿ ಕಾರ್ಯನಿರ್ವಹಿಸುತ್ತದೆ.

 * ಸತೋಷಿನತ ಮೊಟೊ, ಬಿಟ್ಕೊ ನ್ ತಂತ್ರಾಂಶವನ್ನು ಮೊದಲು ರೂಪಿಸಿದ ವ್ಯಕ್ತಿ. 2009 ರಲ್ಲಿ ಈ ವಿಚಿತ್ರ ಯೋಜನೆ ಪ್ರಾರಂಭವಾಯಿತು. ಇದಕ್ಕೆ ವಿನಿಮಯ ಮೌಲ್ಯವೂ ಇದೆಯೆಂದು ನಂಬಲಾಗಿದೆ. ಆದರೆ ಇದಕ್ಕೆ ಕೇಂದ್ರೀಯ ಹಣಕಾಸು ಪ್ರಾಧಿಕಾರ ಇಲ್ಲದಿರುವ ಕಾರಣ ನೈಜ ಹಣದ ರೂಪ ಇಲ್ಲ. ಇದರ ಚಲಾವಣೆ ಅನಿಯಂತ್ರಿತವಾಗಿದೆ. ಇದು ಯಾವುದೇ ರೀತಿಯ ಖೊಟ್ಟಿ ವ್ಯವಹಾರಕ್ಕೂ ಕಾರಣವಾಗ ಬಹುದು. ಆದರೆ. ಕೆಲವು ವೆಬ್ ಸೈಟ್ ಗಳು ಬಿಟ್ಕೊ ನ್ ವಿನಿಮಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿವೆ. ಬಿಟ್ಕೊನ್ ಗೆ ಯಾವುದೇ ಅಧಿಕೃತ ಸ್ವರೂಪ ಇರದೇ ಗೌಪ್ಯವಾಗಿರುವ ಕಾರಣ ಇದು ಮಾದಕ ದ್ರವ್ಯ ಕಳ್ಳಸಾಗಣೆಗಳಂತಹ ಅಕ್ರಮ ಜಾಲದಲ್ಲಿ ನಡೆಯುವ ಅಭೌತಿಕ ಕರೆನ್ಸಿ ಎಂದು ಭಾವಿಸಲಾಗಿದೆ.

SRC TEAM, BELLARY.

ಭಾರತದಲ್ಲಿ ಪಂಚಾಯಿತಿ ರಾಜ್ ವ್ಯವಸ್ಧೆಯ ಉಗಮದ ಕುರಿತು ವಿವರಿಸಿ. ಪಂಚಾಯಿತಿ ರಾಜ್ ವ್ಯವಸ್ಧೆಯಲ್ಲಿ 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಮಹತ್ವವೇನು?

 ಭಾರತದಲ್ಲಿ ಪಂಚಾಯಿತಿ ರಾಜ್ ವ್ಯವಸ್ಧೆಯ ಉಗಮದ ಕುರಿತು ವಿವರಿಸಿ. ಪಂಚಾಯಿತಿ ರಾಜ್ ವ್ಯವಸ್ಧೆಯಲ್ಲಿ 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಮಹತ್ವವೇನು?
 (Explain the origins of the Panchayati Raj system in India and the significance of the 73rd Constitutional Amendment in Panchayati Raj systems)

ಪಂಚಾಯಿತಿಗಳು ಅಥವಾ ಗ್ರಾಮಸಭೆಗಳಿಗೆ ಭಾರತದಲ್ಲಿ ಒಂದು ದೀರ್ಘ ಇತಿಹಾಸವೇ ಇದೆ. ಸಾಂಪ್ರದಾಯಿಕ ಪಂಚಾಯಿತಿಗಳು ಅನೌಪಚಾರಿಕ ಅಧಿಕಾರ ಕೇಂದ್ರಗಳಾಗಿದ್ದರೂ ಗ್ರಾಮದ ಸಕಲ ವ್ಯವಹಾರಗಳನ್ನು ನಡೆಸುವ, ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುವ ಹಾಗೂ ಶಾಂತಿ-ಸುವ್ಯವಸ್ಧೆಗಳನ್ನು ಕಾಪಾಡುವ ಜವಾಬ್ದಾರಿ ಅವುಗಳ ಮೇಲಿದ್ದದ್ದು ಗಮನಾರ್ಹ.

 ಗ್ರಾಮ ಮಟ್ಟದ, ಅಥವಾ ನೆರೆಹೊರೆಯ ಗ್ರಾಮಗಳ ಒಂದು ಘಟಕವಾಗಿ ಕಾರ್ಯನಿರ್ವಹಿಸುತ್ತಿದ್ದ ಗ್ರಾಮ ಪಂಚಾಯತಿಗಳೇ ಅಲ್ಲದೆ ಜಾತಿ ಪಂಚಾಯತಿಗಳೂ ಕೌಟುಂಬಿಕ ಹಾಗೂ ಜಾತಿ ಸಂಬಂಧಿ ವಿಚಾರಗಳನ್ನು ಕುರಿತಂತೆ ತೀರ್ಮಾನಗಳನ್ನು ನೀಡುವ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಬ್ರಿಟೀಷರು ಭಾರತಕ್ಕೆ ಬಂದ ನಂತರ ಪಂಚಾಯಿತಿ ವ್ಯವಸ್ಧೆಗೆ ಒಂದು ಔಪಚಾರಿಕ ಸ್ವರೂಪ ದೊರೆಯಿತು. ಪಂಚಾಯಿತಿಗಳ ಸ್ವಾಯತ್ತತೆಯನ್ನು ಕಾಪಾಡುವ ಮನಸ್ಸಿಲ್ಲದ ಬ್ರಿಟೀಷರು ಅವುಗಳನ್ನು ಪ್ರಧಾನವಾಗಿ ಆದಾಯ ಸಂಗ್ರಹಣಾ ಮೂಲಗಳಾಗಿ ನೋಡಿದರೂ, ಗ್ರಾಮ ಮಟ್ಟದಲ್ಲಿ ಸ್ಧಳೀಯ ಆಡಳಿತ ಸಂಸ್ಧೆಗಳಾಗಿ ಅವು ರೂಪುಗೊಂಡವು.

ಇಪ್ಪತ್ತನೇ ಶತಮಾನದ ಆರಂಭ ಕಾಲದಲ್ಲಿ ಪ್ರಜಾಸತ್ತಾತ್ಮಕ ಸ್ವರೂಪವನ್ನು ಈ ಸಂಸ್ಧೆಗಳಿಗೆ ನೀಡಲು ಬ್ರಿಟೀಷರಿಂದಲೇ ಪ್ರಯತ್ನಗಳು ನಡೆದು Royal Committee On Decentralized , (ರಾಯಲ್ ಕಮಿಟಿ ಆನ್ ಡಿಸೆಂಟ್ರಲಾಯೀಡ್ಜ್) ಎಂಬ ಸಮಿತಿಯ ನೇಮಕವಾದಾಗ, ಗ್ರಾಮ ಸ್ಧಳೀಯ ಸಂಸ್ಧೆಗಳಾಗಿ ಪಂಚಾಯಿತಿಗಳು ಉಗಮವಾಗಲು ಪೂರಕವಾದ ವಾತಾವರಣ ನಿರ್ಮಾಣವಾಯಿತು.

 ಮಹಾತ್ಮಗಾಂಧೀಜಿಯವರು ಈ ಸಂಸ್ಥೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಗೋಚರತೆ, ಹಾಗೂ ಸ್ಧಳೀಯ ಅಗತ್ಯಗಳನ್ನು ಪೂರೈಸುವ ಅಧಿಕಾರವನ್ನು ಪಂಚಾಯಿತಿಗಳಿಗೇ ನೀಡಬೇಕೆಂಬ ಮಾಡಿದ ಒತ್ತಾಸೆ, ಅವುಗಳು ಸ್ಧಳೀಯ ಸರ್ಕಾರಗಳ ಸ್ವರೂಪವನ್ನು ಪಡೆಯಲು ಕಾರಣವಾದ ಮತ್ತೊಂದು ಪ್ರಮುಖ ಅಂಶ.

 * 73ನೇ ತಿದ್ದುಪಡಿ - 'ಮೌನಕ್ರಾಂತಿ':
ಭಾರತದಲ್ಲಿ ಪಂಚಾಯಿತಿ ರಾಜ್ ವ್ಯವಸ್ಧೆಗೆ ಒಂದು ದಿಕ್ಕು ದೊರೆತು, ಪಂಚಾಯತ್ ಸಂಸ್ಥೆಗಳು ಸ್ಧಳೀಯ ಹಾಗೂ ಸ್ವಯಂ-ಆಡಳಿತ ತತ್ವಗಳನ್ನು ರೂಢಿಸಿಕೊಳ್ಳುವಂಥ ಅವಕಾಶ ದೊರೆತದ್ದು 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಕಾರಣದಿಂದಾಗಿ. ಈ ತಿದ್ದುಪಡಿಯನ್ನು ವಿಕೇಂದ್ರೀಕರಣದ ಇತಿಹಾಸದಲ್ಲಿ 'ಮೌನಕ್ರಾಂತಿ' ಎಂದು ಬಣ್ಣಿಸಲಾಗಿದೆ. ಸ್ಧಳೀಯ ಸಂಸ್ಧೆಗಳಿಗೆ ಪ್ರಜಾಸತ್ತಾತ್ಮಕ ಅಧಿಕಾರವನ್ನು ನೀಡಿ ಗ್ರಾಮೀಣ ಸಾಮಾಜಿಕ ಅಭಿವೃದ್ಧಿಯಲ್ಲಿ ಪಾಲುದಾರರಾಗಲು ಒಂದು ನಿಜವಾದ ಅರ್ಥದಲ್ಲಿ ಸ್ಧಾನ ದೊರೆತಿದ್ದೇ 73ನೇ ಸಂವಿಧಾನಾತ್ಮಕ ತಿದ್ದುಪಡಿಯ ಮೂಲಕ.


SRC TEAM, BELLARY.

ಓಝೋನ್ ಪದರ' ಎಂದರೇನು ?

ಓಝೋನ್ ಪದರ' ಎಂದರೇನು ?
(Ozone Layer) (ಟಿಪ್ಪಣಿ ಬರಹ)

*.ಓಝೋನ್ ಪದರ ವಾತಾವರಣದ ಸ್ಟ್ರಾಟೋಸ್ಪೀಯರ್ ನಲ್ಲಿ ಕಂಡುಬರುವ ಅತ್ಯಂತ ಸೂಕ್ಷ್ಮ ಪದರ.ಓಝೋನ್ ನ ರಾಸಾಯನಿಕ ಹೆಸರು O3.

*.ಭೂಮಿಯ ಮೇಲೆ ಸುಮಾರು 10 ಕಿ.ಮೀ ಯಿಂದ 40 ಕಿ.ಮೀ ಯ ವ್ಯಾಪ್ತಿಯಲ್ಲಿ ಕಂಡು ಬರುವ ಓಝೋನ್ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸೂರ್ಯನಿಂದ ಹೊರ ಬರುವ ಅತಿ ನೇರಳಾತೀತ ಕಿರಣಗಳನ್ನು ವಾತಾವರಣದಲ್ಲಿ ಹೀರಿಕೊಳ್ಳುವ ಮೂಲಕ ಪ್ರಾಣಿ ಸಂಕುಲದ ಮೇಲಾಗುವ ದುಷ್ಪರಿಣಾಮವನ್ನು ತಡೆಯುವಲ್ಲಿ ಓಝೋನ್ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ.

SRC TEAM, BELLARY.

ಮಾಂಟ್ರಿಯಲ್ ಪ್ರೋಟೊಕಲ್' ಎಂದರೇನು ?

ಮಾಂಟ್ರಿಯಲ್ ಪ್ರೋಟೊಕಲ್' ಎಂದರೇನು ?
(Montreal Protocol): (ಟಿಪ್ಪಣಿ ಬರಹ)

*.ಮಾನವ ಪ್ರೇರಿತ ಚಟುವಟಿಕೆಗಳಿಂದ ಓಝೋನ್ ಪದರ ಅತಿ ವೇಗವಾಗಿ ಹಾಳುಗುತ್ತಿರುವುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ ಮೇಲೆ ಓಝೋನ್ ಪದರದ ಸಂರಕ್ಷಣೆ ಬಗ್ಗೆ ವಿಶ್ವದ ಪ್ರಮುಖ ರಾಷ್ಟ್ರಗಳು ಮುಕ್ತವಾಗಿ ಚರ್ಚಿಸಲು ಮುಂದಾದವು. ಅದರ ಹಿನ್ನಲೆಯಲ್ಲಿ ಜಾರಿಗೆ ಬಂದಿದೆ ಮಾಂಟ್ರಿಯಲ್ ಪ್ರೋಟೊಕಲ್.

*.ಓಝೋನ್ ಪದರವನ್ನು ಹಾಳು ಮಾಡಬಲ್ಲ ಕ್ಲೋರೋ ಪ್ಲೋರೋ ಕಾರ್ಬನ್ ನಂತಹ ಹಾನಿಕಾರಕ ಅನಿಲಗಳ ಬಳಕೆಯನ್ನು ಕಾಲಕ್ರಮೇಣ ಕಡಿಮೆಗೊಳಿಸುವುದು ಈಪ್ರೋಟೊಕಲ್ ನ ಮುಖ್ಯ ಉದ್ದೇಶ.*.ಮಾಂಟ್ರಿಯಲ್ ಪ್ರೋಟೊಕಲ್ ಅನ್ನು ಸೆಪ್ಟೆಂಬರ್ 16, 1987 ರಲ್ಲಿ ಸಹಿ ಹಾಕಲಾಯಿತು. ಜನವರಿ 1, 1989 ರಿಂದ ಜಾರಿಗೆ ಬಂದಿದೆ.

SRC TEAM, BELLARY.

ಮಾರುತಗಳು (Winds) ಎಂದರೇನು?

ಮಾರುತಗಳು (Winds) ( ಟಿಪ್ಪಣಿ ಬರಹ)

★ ಮಾರುತಗಳು (Winds) ಎಂದರೇನು? :
(ಟಿಪ್ಪಣಿ ಬರಹ)

ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ ಭೂ ಮೇಲ್ಮೈಯಲ್ಲಿ ಸಮಾನಾಂತರವಾಗಿ ಚಲಿಸುವ ವಾಯುವಿಗೆ 'ಮಾರುತ' ವೆಂದು ಕರೆಯಲಾಗುವುದು.

— ವಾಯುಮಂಡಲದಲ್ಲಿನ ಒತ್ತಡದ ಹಂಚಿಕೆಯು ಮಾರುತಗಳ ದಿಕ್ಕು ಹಾಗು ವೇಗವನ್ನು ನಿರ್ಧರಿಸುವುದು.
— ಭೂ ಮೇಲ್ಮೈಯಲ್ಲಿ ಉಷ್ಣಾಂಶ ಮತ್ತು ಒತ್ತಡದ ಅಸಮತೆಯನ್ನು ಸರಿದೂಗಿಸುವ ಪ್ರಮುಖ ಮಾಧ್ಯಮಗಳಾಗಿ ಮಾರುತಗಳು ವರ್ತಿಸುತ್ತವೆ.
— ಹವಾಮಾನದ ಪರಿಸ್ಥಿತಿಯ ಮೇಲೆ ಪ್ರತ್ಯಕ್ಷವಾಗಿ ಮಾರುತಗಳ ಪ್ರಭಾವ ಅಪಾರ. ಇದು ಉಷ್ಣಾಂಶ, ತೇವಾಂಶ ಹಾಗೂ ವೃಷ್ಟಿಯ ಮೇಲೆ ಹೆಚ್ಚು ಪ್ರಭಾವವನ್ನು ಬೀರುತ್ತವೆ. ಆದ್ದರಿಂದ ವಾಯುಗುಣದ ಮೂಲಾಂಶಗಳಲ್ಲಿ ಮಾರುತಗಳು ಸಹ ಪ್ರಮುಖವಾಗಿವೆ.


* ಇತರೇ ಅಂಶಗಳು:

— ಗಾಳಿಯು ಬೀಸುವ ದಿಕ್ಕನ್ನು ತಿಳಿಯಲು ಬಳಸುವ ಉಪಕರಣ:
('ಪವನ ದಿಕ್ಸೂಚಿ' (Wind Vane))
— ಗಾಳಿಯ ವೇಗವನ್ನು ಅಳೆಯಲು ಬಳಸುವ ಮಾಪಕ:
(Anemometer. )
— ಗಾಳಿಯ ವೇಗವನ್ನು ಅಳೆಯುವ ಮಾನ:
('ನಾಟ್' (Knot) ಅಥವ  ಕಿ.ಮೀ )
— ಒಂದು 'ನಾಟ್' (Knot) ಎಂದರೆ ಒಂದು ನಾಟಿಕಲ್ ಮೈಲಿ (೬೦೮೦ ಆಡಿಗಳು)
— ಒಂದು ನಾಟಿಕಲ್ ಮೈಲಿ ಎಂದರೆ ೧.೮೫ ಕಿ.ಮೀ ಗೆ ಸಮನಾಗಿರುವುದು.
— ಒಂದು ಪ್ರದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಮಾರುತಗಳು ಸ್ಥಳೀಯವಾಗಿ ವಿವಿಧ ದಿಕ್ಕಿನಿಂದ ಬೀಸುವುವು.  ಇದನ್ನು 'ವಿಂಡ್ ರೋಸ್ (Wind Rose) ಮೂಲಕ ನಿರೂಪಿಸಲಾಗುವುದು.

SRC  ತಂಡ, ಬಳ್ಳಾರಿ.

Carbon Trading

Carbon Trading (ಕಾರ್ಬನ್ ಟ್ರೇಡಿಂಗ್) - ಇಂಗಾಲ ವ್ಯಾಪಾರ : (ಟಿಪ್ಪಣಿ ಬರಹ)
★ Carbon Trading (ಕಾರ್ಬನ್ ಟ್ರೇಡಿಂಗ್) - ಇಂಗಾಲ ವ್ಯಾಪಾರ :
(ಟಿಪ್ಪಣಿ ಬರಹ)

 ವಿವಿಧ ದೇಶಗಳ ವಾತಾವರಣಕ್ಕೆ ಇಂಗಾಲಾಮ್ಲ ಅಥವಾ ಹಸಿರು ಮನೆ ಅನಿಲ ಬಿಡುವ ಹಕ್ಕಿನ ಕೊಡು - ಕೊಳ್ಳುವಿಕೆಗೆ ಕಾರ್ಬನ್ ಟ್ರೇಡಿಂಗ್ ಎಂದು ಕರೆಯಲಾಗುತ್ತಿದೆ. ಜಪಾನ್ನಲ್ಲಿ 1997 ರಲ್ಲಿ ನಡೆದ ಕ್ಯುಟೊ ಶಿಷ್ಟಾಚಾರ ಒಪ್ಪಂದದ ನಂತರ ಈ ವ್ಯಾಪಾರ ಆರಂಭವಾಯಿತು. ವಿಶ್ವದ 180 ದೇಶಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ.

SRC ತಂಡ, ಬಳ್ಳಾರಿ.

ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವ ಉದ್ದೇಶವೇನು?

ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವ ಉದ್ದೇಶವೇನು? (Why Rights are emboied in the Constitution?)
★ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವ ಉದ್ದೇಶವೇನು?
 (Why Rights are emboied in the Constitution?)

 ಭಾರತದ ಸಂವಿಧಾನದ ೩ನೇ ಭಾಗದಲ್ಲಿ ೧೨ನೇ ಪರಿಚ್ಛೇದದಿಂದ ೩೫ನೇ ಪರಿಚ್ಛೇದದವರೆಗೆ ಮೂಲಭೂತ ಹಕ್ಕುಗಳ ವಿವರಣೆಯನ್ನು ಕೊಡಲಾಗಿದೆ. ಈ ಹಕ್ಕುಗಳನ್ನು ೮ ಭಾಗಗಳಾಗಿ ವಿಂಗಡಿಸಲಾಗಿದ್ದು ಅವು ಒಟ್ಟು ೨೪ ಪರಿಚ್ಛೇದಗಳನ್ನು ಒಳಗೊಂಡಿವೆ. ಅಷ್ಟೇ ಅಲ್ಲ, ಇನ್ನೂ ಅನೇಕ ರಾಷ್ಟ್ರಗಳ ಸಂವಿಧಾನಗಳಲ್ಲೂ ಮೂಲಭೂತ ಹಕ್ಕುಗಳನ್ನು ಸೇರಿಸಲಾಗಿದೆ.

ಇಂಥ ಸೇರ್ಪಡೆಯ ಉದ್ದೇಶವೇನೆಂದರೆ;

 ೧) ಅಧಿಕಾರದಲ್ಲಿ ಇದ್ದವರಿಗೆ ಅಧಿಕಾರ ದುರುಪಯೋಗ ಮಾಡಿಕೊಳ್ಳುವ ಪ್ರವೃತ್ತಿ ಸಹಜವಾಗಿ ಇರುತ್ತದೆ. ಅದರಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಅಳವಡಿಸುವುದರ ಮೂಲಕ ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ಪ್ರವೃತ್ತಿಯನ್ನು ತಡೆಗಟ್ಟಬಹುದು. ಇದರಿ೦ದ ಅವುಗಳಿಗೆ ಕಾನೂನಿನ ರಕ್ಷಣೆ ದೊರಕುತ್ತದೆ.

 ೨) ಶಾಸಕಾಂಗದಲ್ಲಿ ಬಹುಮತ ಪಡೆದಿರುವ ಪಕ್ಷ ಅಲ್ಪಸಂಖ್ಯಾತರ ಹಿತಗಳನ್ನು ಗಣನೆಗೆ ತೆಗೆದುಕೊಳ್ಳದೆ, ತನಗೆ ಬೇಕಾದ ಕಾಯ್ದೆಗಳನ್ನು ಮಾಡಬಹುದು. ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಸೇರಿಸಿ ಅಲ್ಪ ಸಂಖ್ಯಾತರ ಹಿತಾಸಕ್ತಿಗಳ ವಿರುಧ್ಧ ಕಾನೂನು ಮಾಡುವುದನ್ನು ತಡೆಗಟ್ಟಬಹುದು. ಇದರಿಂದ ಶಾಸಕಾಂಗದ ಸರ್ವಾಧಿಕಾರವನ್ನು ತಡೆಗಟ್ಟಬಹುದು.

 ೩) ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಸೇರಿಸುವುದರಿಂದ ಪೌರರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವುಂಟಾಗುತ್ತದೆ

          S R C TEAM, BELLARY.

Thursday, 29 May 2014

ಥರ್ಮೋಕ್ಲೈನ್' (Thermocline) ಎಂದರೇನು?

ಥರ್ಮೋಕ್ಲೈನ್' (Thermocline) ಎಂದರೇನು?

— 'ಥರ್ಮೋಕ್ಲೈನ್' ಎಂದರೆ ಸಾಗರದಲ್ಲಿ ಮೇಲ್ಮೈನ ಹೆಚ್ಚು ಉಷ್ಣಾಂಶದ ಹಾಗೂ ಒಳಗಿನ ಕಡಿಮೆ ಉಷ್ಣಾಂಶದ ನೀರನ್ನು ಬೇರ್ಪಡಿಸುವ ವಲಯ.

SRC ತಂಡ

ಎಲ್ ನಿನೋ (ElNiNo) ಎಂದರೇನು?

★ ಎಲ್ ನಿನೋ (ElNiNo) ಎಂದರೇನು?:
(ಟಿಪ್ಪಣಿ ಬರಹ)

 ಇತ್ತೀಚಿನ ದಶಕಗಳಲ್ಲಿ ಭಾರತದ ಮಾನ್ಸೂನ್ ವಾಯುಗುಣದ ಮುನ್ಸೂಚನೆ ನೀಡಲು ಪರಿಗಣಿಸಲಾಗಿರುವ ೧೬ ಅಂಶಗಳಲ್ಲಿ ಎಲ್ ನಿನೋ  ಪ್ರಭಾವವನ್ನು ಪ್ರಧಾನವಾಗಿ ಗಮನಿಸಲಾಗುತ್ತಿದೆ. ಭಾರತದಲ್ಲಿ ಮಾನ್ಸೂನ್ ಮಾರುತಗಳ ಆಗಮನ, ಮಳೆಯ ಪ್ರಮಾಣ, ಬರಗಾಲ ಮೊದಲಾದವುಗಳಿಗೆ ಸಮೀಕರಿಸಿ ವಿವರಿಸಲಾಗುತ್ತಿದೆ.

— ಎಲ್ ನಿನೋ (ElNiNo) ಎಂದರೆ ' ಮಗು ಕ್ರಿಸ್ತ ' (Baby Christ) ಎಂದರ್ಥ. ಇದು ಸ್ಪಾನಿಷ್ ಭಾಷೆಯಿಂದ ಬಳಕೆಗೆ ಬಂದಿದೆ. ದಕ್ಷಿಣ ಅಮೆರಿಕದ ಪಶ್ಚಿಮ ತೀರದಲ್ಲಿ ಸಾಮಾನ್ಯವಾಗಿ ಪೆರು ದೇಶದ ಪಶ್ಚಿಮ ತೀರದಲ್ಲಿ ಕ್ರಿಸ್ ಮಸ್ ಅವಧಿಯಲ್ಲಿ ಕಾಣಿಸಿಕೊಳ್ಳುವ ಉಷ್ಣೋದಕ ಪ್ರವಾಹವನ್ನು ಈ ಎಲ್ ನಿನೋ ಹೆಸರಿನಿಂದ ಕರೆಯಲಾಗಿದೆ. ಇದನ್ನು ಸುಮಾರು ಕ್ರಿ.ಶ ೧೫೬೭ರಲ್ಲಿ ಮೊದಲು ಗಮನಿಸಲಾಯಿತು.


* ಎಲ್ ನಿನೋ ಪ್ರವಾಹದ ಹುಟ್ಟು:

 ಫೆಸಿಫಿಕ್ ಸಾಗರದ ಪಶ್ಚಿಮ ಭಾಗದಲ್ಲಿ ನೀರಿನ ಎತ್ತರ ಹೆಚ್ಚಾಗಿದ್ದು, ಈ ಹೆಚ್ಚು
ಉಷ್ಣಾಂಶದ ನೀರು ಪೂರ್ವದ ಕಡೆಗೆ ನಾಲಿಗೆಯಂತೆ ಚಾಚಿ ಮುಂದುವರಿಯುವುದು. ಈ ಹೆಚ್ಚು ನೀರಿನ ಉಷ್ಣಾಂಶದ ನೀರು ಪೂರ್ವದ ಕಡೆಗೆ ಮುಂದುವರಿದಂತೆ 'ಥರ್ಮೋಕ್ಲೈನ್' (Thermocline) ನ ಆಳವು ಸಹ ಹೆಚ್ಚುವುದು.  ಇದಕ್ಕಿಂತ ಕೆಳಭಾಗದಲ್ಲಿ ಸಾಗರದ ನೀರಿನ ಉಷ್ಣಾಂಶವು ಅತಿ ಕಡಿಮೆ.  ಥರ್ಮೋಕ್ಲೈನ್ ಹೆಚ್ಚು ಆಳದಲ್ಲಿರುವುದರಿಂದ ಹೆಚ್ಚು ಉಷ್ಣಾಂಶ ಹಾಗೂ ಕೆಳಭಾಗದ ಕಡಿಮೆ ಉಷ್ಣಾಂಶದ ನೀರಿನ ಮಿಶ್ರಣವು ಕಡಿಮೆಯಿದ್ದು, ಹೆಚ್ಚು ಉಷ್ಣಾಂಶದ ಅಗಾಧ ಪ್ರಮಾಣದ ನೀರು ಪೂರ್ವದ ಕಡೆಗೆ ಹರಿಯುವುದು.  ಇದೇ ಎಲ್ ನಿನೋ (ElNiNo).
                                 
 ನಿಮ್ಮ ಅನಿಸಿಕೆ ತಿಳಿಸಿ.

SRCತಂಡ

ಲಾನಿನಾ (Lanina) ಎಂದರೇನು?

★ ಲಾನಿನಾ (Lanina) ಎಂದರೇನು? :  (ಟಿಪ್ಪಣಿ ಬರಹ)


ಪ್ರಪಂಚದ ವಾಯುಗುಣದ ವಿಶ್ಲೇಷಣೆಯಲ್ಲಿ ಇಂದು ಎಲ್ ನಿನೋ (ElNiNo) ಮತ್ತು ಲಾನಿನಾ (Lanina) ಪ್ರವಾಹಗಳ ಪ್ರಭಾವವನ್ನು ಹೆಚ್ಚು ಪರಿಗಣಿಸಲಾಗುತ್ತಿದೆ.  ಇವುಗಳೆರಡೂ ಪ್ರಪಂಚದಾದ್ಯಂತ ವಿವಿಧ ಪ್ರದೇಶಗಳ ಸಾಮಾನ್ಯ ವಾಯುಗುಣ ಪರಿಸ್ಥಿತಿಗಳು ಏರುಪೇರಾಗಲು ಕಾರಣಗಳೆಂದು ವಿವರಿಸಲಾಗಿದೆ.

— ಲಾನಿನಾ (Lanina) ಎಂದರೆ 'ಚಿಕ್ಕ ಹುಡುಗಿ' (Little Girl) ಎಂದರ್ಥ.  ಇದನ್ನು 'ಓಲ್ಡ್ ಮ್ಯಾನ್' (Old Man) ಎಂತಲೂ ಕರೆಯುತ್ತಾರೆ. ಇದು ಕೂಡಾ ಎಲ್ ನಿನೋ ನಂತೆ ಸಮಭಾಜಕ ವೃತ್ತ ವಲಯದ ಫೆಸಿಫಿಕ್ ಸಾಗರದಲ್ಲಿ ಆಗಿಂದಾಗ್ಗೆ ಕಂಡುಬರುವ ಉಷ್ಣಾಂಶದ ಬದಲಾವಣೆಗೆ ಕಾರಣೀಕೃತವಾಗಿದೆ.

— ಲಾನಿನಾ ಪ್ರವಾಹವು ಎಲ್ ನಿನೋ (ElNiNo) ಉಷ್ಣೋದಕ ಪ್ರವಾಹಕ್ಕೆ ಸಂಪೂರ್ಣವಾಗಿ ವಿರುದ್ಧವಾದದ್ದು, ಉಷ್ಣವಲಯದ ಫೆಸಿಫಿಕ್ ಸಾಗರದಲ್ಲಿ ಪಶ್ಚಿಮದಿಂದ ಪೂರ್ವದ ಕಡೆಗೆ ಪ್ರವಹಿಸುವ ಶೀತ ಪ್ರವಾಹವಾಗಿದೆ.


* ಲಾನಿನಾ ಪ್ರವಾಹದ ಹುಟ್ಟು:

ಮಧ್ಯ ಫೆಸಿಫಿಕ್ ಸಾಗರದ ನೀರು ಪೂರ್ವದಲ್ಲಿ ಅಮೆರಿಕ ಖಂಡಗಳಿಗೆ ಅಪ್ಪಳಿಸಿ, ಶಬ್ಧದ ಅಲೆಗಳಂತೆ ಹಿಂತಿರುಗುತ್ತವೆ (Rebound or Bounce). ದಕ್ಷಿಣಾರ್ಧಗೋಳದ ಉಪ ಉಷ್ಣವಲಯದ ಅಧಿಕ ಒತ್ತಡ ಪಟ್ಟಿ ಉಷ್ಣಾಂಶದ ನೀರು ಪಶ್ಚಿಮದ ಕಡೆಗೆ ಸೆಳೆದೊಯ್ಯಲ್ಪಡುವುದು. ಇದರ ಪರಿಣಾಮವಾಗಿ ಆಳದಿಂದ ಹೆಚ್ಚು ತಂಪಾದ ನೀರು ಮೇಲೇರುವುದು.  ಇದನ್ನೇ 'ಆಪ್ ವೆಲ್ಲಿಂಗ್' ಎಂದು ಕರೆಯುವರು. ಇದರಿಂದ ಸಾಗರ ಮೇಲ್ಮೈನ ನೀರಿನ ಉಷ್ಣಾಂಶವು ಮತ್ತಷ್ಟು ಕಡಿಮೆಯಾಗುವುದು. ಪೂರ್ವ ಫೆಸಿಫಿಕ್ ಸಾಗರದಿಂದ ಹರಿಯುವ ಈ ಶೀತವಾದ ನೀರಿನ ಪ್ರವಾಹವನ್ನೇ 'ಲಾನಿನಾ' ಎಂದು ಕರೆಯುವರು.

ನಿಮ್ಮ ಅನಿಸಿಕೆ ತಿಳಿಸಿ.

SRCತಂಡ

ಹವಾಮಾನ ಮತ್ತು ವಾಯುಗುಣಗಳ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಗುರುತಿಸಿ

★ ಹವಾಮಾನ ಮತ್ತು ವಾಯುಗುಣಗಳ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಗುರುತಿಸಿ. (೧೦೦ ಶಬ್ಧಗಳಲ್ಲಿ) (The main differences between Weather and Climate)

★ ಹವಾಮಾನ ಮತ್ತು ವಾಯುಗುಣಗಳ ನಡುವಣ ಪ್ರಮುಖ ವ್ಯತ್ಯಾಸಗಳನ್ನು ಗುರುತಿಸಿ.  (೧೦೦ ಶಬ್ಧಗಳಲ್ಲಿ)
(The main differences between Weather and Climate)

ಹವಾಮಾನ ಮತ್ತು ವಾಯುಗುಣ ಈ ಎರಡೂ ಪದಗಳನ್ನು ವಾಯುಮಂಡಲದ ಪರಿಸ್ಥಿತಿಯನ್ನು ವಿವರಿಸಲು ಬಳಸುವರಾದರೂ,  ಅವುಗಳು ಅನ್ವಯಿಸುವ ಕಾಲ, ಪ್ರದೇಶದ ವಿಸ್ತಾರ, ವಾಯುಮಂಡಲದ ಸ್ಥಿತಿಯನ್ನು ಸೂಚಿಸುವ ರೀತಿ, ಮುಂತಾದವುಗಳಲ್ಲಿ ಸ್ಪಷ್ಟ ವ್ಯತ್ಯಾಸಗಳನ್ನು ಕಾಣಬಹುದು.

೧)  ಹವಾಮಾನವು ಯಾವುದೇ ಒಂದು ನಿರ್ದಿಷ್ಟ ಕಾಲದ ವಾಯುಮಂಡಲದ ಪರಿಸ್ತಿತಿ.
—ವಾಯುಗುಣವು ಧೀರ್ಘ ಅವಧಿಯ ಹವಾಮಾನದ ಸರಾಸರಿ.


೨) ಹವಾಮಾನವು ವಾಯುಮಂಡಲವು ಆಂತರಿಕವಾಗಿ ಒಳಗೊಂಡಿರುವ ಘಟಕಗಳಾದ ಉಷ್ಣಾಂಶ, ಒತ್ತಡ, ಮಾರುತಗಳು, ತೇವಾಂಶ ಮತ್ತು ವೃಷ್ಟಿಗಳಿಂದ ನಿರ್ಧರಿಸಲ್ಪಡುವುದು.
— ವಾಯುಗುಣವು ವಾಯುಮಂಡಲದ ಹೊರಗಿನ ಅಥವಾ ಬಾಹ್ಯ ಅಂಶಗಳಿಂದ ನಿರ್ಧರಿಸಲ್ಪಡುವುದು.  ಈ ಬಾಹ್ಯ ನಿರ್ಧಾರಕ ಅಂಶಗಳೆಂದರೆ ಅಕ್ಷಾಂಶ,  ಸಮುದ್ರದಿಂದ ಇರುವ ಎತ್ತರ,  ಸಮುದ್ರದಿಂದ ಇರುವ ದೂರ, ಮಾರುತಗಳ ದಿಕ್ಕು , ಸಾಗರ ಪ್ರವಾಹಗಳು ಮತ್ತು ಭೂ ಮೇಲ್ಮೈ ಲಕ್ಷಣಗಳು ಇತ್ಯಾದಿ.


೩) ಹವಾಮಾನವನ್ನು ಸೂಚಿಸಲು ಚಳಿ, ಸೆಖೆ, ಮೋಡ ತುಂಬಿದ,  ಆಹ್ಲಾದಕರ, ಬಿರುಗಾಳಿಯಿಂದ ಕೂಡಿದ ಮುಂತಾದ ಪದಗಳನ್ನು ಬಳಸುವರು.
— ವಾಯುಗುಣವನ್ನು ಸೂಚಿಸಲು ಉಷ್ಣ,  ಶೀತ, ಒಣ, ತೇವಯುತ,  ಆರ್ದ್ರತೆ ಮುಂತಾದ ಪದಗಳನ್ನು ಬಳಸುವರು.


೪)  ಹವಾಮಾನವು ಒಂದು ನಿರ್ದಿಷ್ಟ ಸ್ಥಳ ಹಾಗೂ ಅಲ್ಪಾವಧಿಯ ಸೂಚಕ.
— ವಾಯುಗುಣವು ಧೀರ್ಘಾವಧಿಯ ಹಾಗೂ ವಿಸ್ತಾರವಾದ ಪ್ರದೇಶಕ್ಕೆ ಅನ್ವಯಿಸುವುದು.

ಐ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವಾಗಿ 'ಕನ್ನಡ '


★ ಐ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಐಚ್ಛಿಕ ವಿಷಯವಾಗಿ 'ಕನ್ನಡ ' :

★ ಕಡ್ಡಾಯ ಪತ್ರಿಕೆ  :

ಐ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಕನ್ನಡ ಕಡ್ಡಾಯ ಪತ್ರಿಕೆ  ಒಂದು ಭಾಗವಾಗಿದ್ದಾಗ್ಯೂ ಅಭ್ಯರ್ಥಿಯ  ಅರ್ಹತೆಯನ್ನು, ಆಯಾ ಭಾಷೆಗಳಲ್ಲಿ ಕನಿಷ್ಟ ಮಟ್ಟದ ಜ್ಞಾನವನ್ನು ಅಳೆಯಲು ಹಾಗೆಯೆ ಮೌಖಿಕ ಪರೀಕ್ಷೆಗೆ ಅರ್ಹತಾದಾಯಕನೆಂದು ನಿರ್ಧರಿಸಲು ಈ ಪತ್ರಿಕೆಯನ್ನು  ಪರಿಗಣಿಸಲಾಗುತ್ತದೆ. ಆದರೆ ಅಭ್ಯರ್ಥಿಯು ಪಡೆಯುವ ಅಂಕಗಳನ್ನು ರೈಂಕಿಂಗ್ ನಿರ್ಧಾರಕ್ಕಾಗಿ ಸೇರಿಸಿಕೊಳ್ಳಲಾಗುವುದಿಲ್ಲ.  ಇಲ್ಲಿ ಗಮನಿಸುವ ಅಂಶವೆಂದರೆ ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಮುಂದಿನ ಐಚ್ಛಿಕ ವಿಷಯಗಳ ಪತ್ರಿಕೆಗಳನ್ನು ತಿದ್ದಲಾಗುತ್ತದೆ.

★ ಐಚ್ಛಿಕ ವಿಷಯ :

— ಈ ಪತ್ರಿಕೆಯ ಉದ್ದೇಶವು ಕನ್ನಡದ ಗಂಭೀರ ಗ್ರಾಂಥಿಕ ಗದ್ಯವನ್ನು ಓದುವ ಮತ್ತು ಗ್ರಹಿಸುವ ಸಾಮರ್ಥ್ಯವನ್ನು ಹಾಗು ಕನ್ನಡದಲ್ಲಿ ಅಭ್ಯರ್ಥಿಯ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ಮತ್ತು ಸರಿಯಾಗಿ ವ್ಯಕ್ತಪಡಿಸುವ ಸಾಮರ್ಥ್ಯವನ್ನು ಪರೀಕ್ಷಿಸುವುದಾಗಿದೆ.   ಐಚ್ಛಿಕ ವಿಷಯದ ವ್ಯಾಪ್ತಿಯು ಬಹಳ ದೀರ್ಘವಾಗಿದ್ದು,  ಆಳವಾಗಿ ಅಧ್ಯಯನ ಮಾಡಬೇಕಾಗಿರುವುದು.
ಉನ್ನತವಾದ ಈ ಪರೀಕ್ಷೆಯಲ್ಲಿ ಒಂದೇ ಒಂದು ಅಂಕವು ಸಹ ಮಹತ್ವದ ಪಾತ್ರ ನಿರ್ವಹಿಸುತ್ತದೆನ್ನುವುದು ಮರೆಯುವಂತಿಲ್ಲ.  ಅಂದರೆ ಎಷ್ಟು ಪದಗಳಲ್ಲಿ ಉತ್ತರ ಬರೆಯಬೇಕೆಂಬುದು ಸೂಚಿಸಲಾಗಿರುತ್ತದೆ.

★ ಕನ್ನಡ ಸಾಹಿತ್ಯ ಪಠ್ಯಕ್ರಮ ★

 ಪತ್ರಿಕೆ-1 ರ ಪಠ್ಯಕ್ರಮ

★ ಭಾಗ-I
★ ಕನ್ನಡ ಭಾಷೆಯ ಚರಿತ್ರೆ.
— ಭಾಷೆ ಎಂದರೇನು? ಭಾಷೆಯ ಸಮಾನ್ಯ ಲಕ್ಷಣಗಳು,
— ಭಾಷೆಯ ವ್ಯಾಕರಣ, ದ್ರಾವಿಡ ಭಾಷೆಗಳ ತೌಲನಿಕ ಮತ್ತು ವೈದೃಶ್ಯ  ಲಕ್ಷಣಗಳು,
— ಕನ್ನಡ ಅಕ್ಷರಮಾಲೆ,
— ಕನ್ನಡ ವ್ಯಾಕರಣದ ಕೆಲುವು ಪ್ರಧಾನ ಲಕ್ಷಣಗಳು:
— ಲಿಂಗ, ವಚನ, ವಿಭಕ್ತಿ, ಕ್ರಿಯಾಪದ,  ಧಾತೃ ಮತ್ತು ಸರ್ವನಾಮ.
— ಕನ್ನಡ ಭಾಷೆಯ ಕಾಲಗಣನಾ ಹಂತಗಳು.
— ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ.
— ಕನ್ನಡ ಭಾಷೆಗಳಲ್ಲಿರುವ ಉಪಭಾಷೆಗಳು. - ಕನ್ನಡ ಭಾಷಾ ಬೆಳವಣಿಗೆಯ ವಿವಿಧ ಪ್ರಾದೇಶಿಕ ಮತ್ತು ಸಾಮಾಜಿಕ  ಅಂಶಗಳು.
— ಭಾಷಾ ಸ್ವೀಕರಣ ಮತ್ತು ಸ್ವರ ಭೇಧ - ಕನ್ನಡ ಭಾಷೆ ಮತ್ತು ಅದರ ಒಳಭೇಧಗಳು.
— ಕನ್ನಡ ಸಾಹಿತ್ಯಿಕ ಮತ್ತು ಆಡುಮಾತಿನ ಶೈಲಿ.

★ ಭಾಗ-II
A. ಕನ್ನಡ ಸಾಹಿತ್ಯ ಚರಿತ್ರೆ

* ಪ್ರಾಚೀನ ಕನ್ನಡ ಸಾಹಿತ್ಯ
— ಪ್ರಾಚೀನ ಕನ್ನಡ ಸಾಹಿತ್ಯದ ಉದಯ, ಅದರ ಪ್ರವ್ರತ್ತಿ, ಪ್ರಭಾವ, ಬೆಳವಣಿಗೆಗಳು

* ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿ 10, 12, 16, 17, 19 ಮತ್ತು 20ನೇಯ  ಶತಮಾನದ ಸಾಹಿತ್ಯದ ಅಧ್ಯಯನ  ಹಾಗೂ ಕೆಳಗೆ ಪಟ್ಟಿ ಮಾಡಲಾಗಿರುವ ಕವಿಗಳಿಗೆ ಸಂಭಂಧಿಸಿದ ಸಾಹಿತ್ಯ ರೂಪಗಳ ಹಿನ್ನೆಲೆಯಲ್ಲಿ ಅವುಗಳ ಮೂಲ, ಬೆಳವಣಿಗೆ ಮತ್ತು ಸಾಧನಗಳೊಂದಿಗೆ ವಿಮರ್ಷಾತ್ಮಕವಾಗಿ  ಅಧ್ಯಯನ  ಮಾಡುವುದು.

* ಚಂಪೂ ಸಾಹಿತ್ಯ : ಪಂಪ, ಜನ್ನ, ನಾಗಚಂದ್ರ.
* ವಚನ ನಾಹಿತ್ಯ : ಬಸವಣ್ಣ, ಅಕ್ಕ ಮಹಾದೇವಿ .
* ಮಧ್ಯಕಾಲಿನ ಕನ್ನಡ ಸಾಹಿತ್ಯ:
 - ಅದರ ಪ್ರವ್ರತ್ತಿ, ಪ್ರಭಾವ,
 * ಮಧ್ಯಕಾಲಿನ ಕಾವ್ಯ :
— ಹರಿಹರ,  ರಾಘವಾಂಕ,  ಕುಮಾರವ್ಯಾಸ.
* ದಾಸ ಸಾಹಿತ್ಯ:
— ಪುರಂದರ ದಾಸ ಮತ್ತು ಕನಕದಾಸ
* ಸಾಂಗತ್ಯ:
— ರತ್ನಾಕರವರ್ಣಿ.

C. ಆಧುನಿಕ ಕನ್ನಡ ಸಾಹಿತ್ಯ :
— ಪ್ರಭಾವ , ಪ್ರವೃತ್ತಿಗಳು.
— ನವೋದಯ,  ಪ್ರಗತಿಶೀಲ,  ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯ.

★ ಭಾಗ - III
A. ಕಾವ್ಯ ಮತ್ತು ಸಾಹಿತ್ಯಿಕ ವಿಮರ್ಶೆಗಳು
- ಕಾವ್ಯ ಮೀಮಾಂಸೆ ಮತ್ತು ವಿಮರ್ಶೆಯ ಔಪಚಾರಿಕ ಭೇದಗಳು,
- ಕಾವ್ಯದ ವ್ಯಾಖ್ಯೆಗಳು ಮತ್ತು ಗುರಿಗಳು.
- ಹಲವಾರು ಕಾವ್ಯ ಪಂಥಗಳ ಪ್ರತಿಪಾದನೆಯ ನಿರೂಪಣೆ.
- ಅಲಂಕಾರ,  ರೀತಿ,  ರಸ, ವಕ್ರೋಕ್ತಿ,  ಧ್ವನಿ ಮತ್ತು ಔಚಿತ್ಯ,
- ರಸ ಸೂತ್ರದ ಅರ್ಥವಿವರಣೆ.
- ಕನ್ನಡ ಸಾಹಿತ್ಯಿಕ ವಿಮರ್ಶೆಯ ಇತ್ತೀಚಿನ ರೂಪಗಳು,  ಪ್ರವೃತ್ತಿಗಳು, ಔಪಚಾರಿಕ,  ಐತಿಹಾಸಿಕ,  ಮಾರ್ಕ್ಸವಾದಿ,  ಮಹಿಳಾಪರ, ಪೂರ್ವ ವಸಾಹತುಶಾಹಿ ವಿಮರ್ಶೆಗಳು.

B. ಕರ್ನಾಟಕ ಸಾಂಸ್ಕೃತಿಕ ಚರಿತ್ರೆ:
★ ಭಾರತೀಯ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕೃತಿ,
- ಕರ್ನಾಟಕ ಸಂಸ್ಕೃತಿಯ ಪುರಾತನತೆ.

★ ಕರ್ನಾಟಕ ರಾಜಮನೆತನಗಳ ವಿಸ್ತೃತ ಅಧ್ಯಯನ:
 - ಬಾದಾಮಿಯ ಚಾಲುಕ್ಯರು ಮತ್ತು ಕಲ್ಯಾಣದ ಚಾಲುಕ್ಯರು ,
- ರಾಷ್ಟ್ರಕೂಟರು,
- ಹೊಯ್ಸಳರು,
- ವಿಜಯ ನಗರದ ದೊರೆಗಳು ಮತ್ತು ಅವರ ಸಾಹಿತ್ಯಿಕ ಸ್ಥಿತಿಗತಿಗಳು.
★ ಕರ್ನಾಟಕದ ಪ್ರಮುಖ ಧರ್ಮಗಳು ಮತ್ತು ಅವುಗಳ ಸಾಂಸ್ಕೃತಿಕ ಕೊಡುಗೆಗಳು.

★ ಧಾರ್ಮಿಕ ಚಳುವಳಿಗಳು, ಸಾಮಾಜಿಕ ಸ್ಥಿತಿಗತಿಗಳು.

★ ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ :
- ಸಾಹಿತ್ಯಿಕ ಸಂಧರ್ಭದಂತೆ  ಶಿಲ್ಪಕಲೆ , ವಾಸ್ತುಶಿಲ್ಪ,  ಚಿತ್ರಕಲೆ, ಸಂಗೀತ,  ನೃತ್ಯ.

★ ಕರ್ನಾಟಕ ಸ್ವಾತಂತ್ರ ಚಳುವಳಿ .
ಕರ್ನಾಟಕದ ಏಕೀಕರಣ - ಕನ್ನಡ ಸಾಹಿತ್ಯದ ಮೇಲೆ ಅದರ ಪ್ರಭಾವ.
___________________________________________________________________________________

ಪತ್ರಿಕೆ-II ರ ಪಠ್ಯಕ್ರಮ

Section-A.
A. ಹಳೆಗನ್ನಡ ಸಾಹಿತ್ಯ

1. ಪಂಪನ ವಿಕ್ರಮಾರ್ಜುನ ವಿಜಯ  (cantos 12 & 13), ( ಪ್ರಕಾಶಕರು ಮೈಸೂರು ವಿಶ್ವವಿದ್ಯಾಲಯ )

2. ವಡ್ಡಾರಾಧನೆ  ( ಸುಕುಮಾರ ಸ್ವಾಮಿಯ ಕಥೆ,  ವಿದ್ದ್ಯುಚ್ಛೋರನ ಕಥೆ)

B. ಮಧ್ಯಕಾಲಿನ ಕನ್ನಡದ ಸಾಹಿತ್ಯ :

1. ವಚನ ಕಮ್ಮಟ,
Ed: ಕೆ. ಮರುಳ ಸಿದ್ದಪ್ಪ ,  ಕೆ. ಆರ್.  ನಾಗರಾಜ್.
(ಪ್ರಕಾಶಕರು: ಬೆಂಗಳೂರು ವಿಶ್ವವಿದ್ಯಾಲಯ )

2. ಜನಪ್ರೀಯ ಕನಕ ಸಂಪುಟ,
Ed. ಡಾ| ಜವರೇಗೌಡ ( ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ,  ಬೆಂಗಳೂರು )

3. ನಂಬಿಯಣ್ಣನ ರಗಳೆ,
Ed., ಟಿ.ಎನ್.  ಶ್ರೀಕಂಠಯ್ಯ (ಟ.ವೆಂ. ಸ್ಮಾರಕ ಗ್ರಂಥ ಮಳಿಗೆ,  ಮೈಸೂರು )

4. ಕುಮಾರವ್ಯಾಸ ಭಾರತ  : ಕರ್ಣ ಪರ್ವ  (ಮೈಸೂರು ವಿಶ್ವವಿದ್ಯಾಲಯ)

5. ಭರತೇಶ ವೈಭವ ಸಂಗ್ರಹ
Ed. ತ. ಸು. ಶಮಾ ರಾವ್
(ಮೈಸೂರು ವಿಶ್ವವಿದ್ಯಾಲಯ )


Section-B
A. ಆಧುನಿಕ ಕನ್ನಡ ಸಾಹಿತ್ಯ.

1. ಕಾವ್ಯ :
★ ಹೊಸಗನ್ನಡ ಕವಿತೆ
 Ed :ಜಿ.ಎಚ್.  ನಾಯಕ್
(ಕನ್ನಡ ಸಾಹಿತ್ಯ ಪರಿಷತ್ತು , ಬೆಂಗಳೂರು )

2. ಕಾದಂಬರಿ :
★ ಬೆಟ್ಟದ ಜೀವ-ಶಿವರಾಂ ಕಾರಂತ.
★ ಮಾಧವಿ -ಅರುಪಮಾ ನಿರಂಜನ.
★ ಒಡಲಾಳ -ದೇವನೂರ ಮಹಾದೇವ.

3. ಚಿಕ್ಕ ಕಥೆ:
★ ಕನ್ನಡದ ಸಣ್ಣ ಕಥೆಗಳು,
Ed :ಜಿ.ಎಚ್.  ನಾಯಕ್
(ಕನ್ನಡ ಸಾಹಿತ್ಯ ಪರಿಷತ್ತು , ನವ ದೆಹಲಿ)

4. ನಾಟಕ :
★ ಶೂದ್ರ ತಪಸ್ವಿ - ಕುವೆಂಪು.
★ ತುಘಲಕ್ - ಗಿರೀಶ್ ಕಾರ್ನಾಡ್.

5. ವಿಚಾರ ಸಾಹಿತ್ಯ :
★ ದೇವರು - ಎ.ಎನ್.  ಮೂರ್ತಿರಾವ್
( ಪ್ರಕಾಶಕರು: ಡಾ| ವಿ.ಕೆ. ಮೂರ್ತಿ,  ಮೈಸೂರು)

B. ಜಾನಪದ ಸಾಹಿತ್ಯ :
1. ಜನಪದ ಸ್ವರೂಪ - ಡಾ| ಎಚ್.ಎಮ್.  ನಾಯಕ (ಟ.ವೆಂ. ಸ್ಮಾರಕ ಗ್ರಂಥ ಮಳಿಗೆ , ಮೈಸೂರು )

2. ಜಾನಪದ ಗೀತಾಂಜಲಿ -
 Ed. ಡಾ| ಜವರೇಗೌಡ. ( ಪ್ರಕಾಶಕರು: ಸಾಹಿತ್ಯ ಅಕಾಡೆಮಿ, ನವ ದೆಹಲಿ)

3. ಕನ್ನಡದ ಜನಪದ ಕಥೆಗಳು -
Ed. ಜಿ.ಎಸ್. ಪರಮಶಿವಯ್ಯ.
(ಮೈಸೂರು ವಿಶ್ವವಿದ್ಯಾಲಯ )

4. ಬೀದಿ ಮಕ್ಕಳು ಬೆಳೆದೂ
Ed. ಕಳೆಗೌಡ ನಾಗವರ.
(ಪ್ರಕಾಶಕರು: ಬೆಂಗಳೂರು ವಿಶ್ವವಿದ್ಯಾಲಯ )

5. ಸಾವಿರದ ಒಗಟುಗಳು -
Ed : ಎಸ್.ಜಿ. ಇಮ್ರಾಪುರ. --
   
     ನಿಮ್ಮ  ಅನಿಸಿಕೆ ಗಳನ್ನು ತಿಳಿಸಿ.

                                         SRC ತಂಡ