Saturday, 5 December 2015

ಕ್ರಿಕೆಟ್‌ ಇತಿಹಾಸದಲ್ಲಿ ನಡೆದ ಕೆಲವೊಂದು ಕುತೂಹಲಕಾರಿ ಘಟನೆಗಳು



ಕ್ರಿಕೆಟ್ಇತಿಹಾಸದಲ್ಲಿ ನಡೆದ ಕೆಲವೊಂದು ಕುತೂಹಲಕಾರಿ ಘಟನೆಗಳು

1. ಜಾವಗಲ್ ಶ್ರೀನಾಥ್ ಆಗ ತಾನೇ ಭಾರತ ಕ್ರಿಕೆಟ್ ತಂಡವನ್ನು ಪ್ರವೇಶಿಸಿದ್ದರು. ಬ್ರೇಕ್ ಟೈಮ್ನಲ್ಲಿ ಡ್ರೆಸ್ಸಿಂಗ್ ರೂಮಿನಲ್ಲಿ ಗೊತ್ತಿಲ್ಲದೆ ಶ್ರೀನಾಥ್ ಕಪಿಲ್ ದೇವ್ರವರ ಪ್ಯಾಂಟ್ ಧರಿಸಿ ಫೀಲ್ಡ್ಗೆ ಹೋಗಿ ಬಿಟ್ಟರು. ತನಗೆ ಸರಿಹೊಂದುವ ಪ್ಯಾಂಟ್ ಇಲ್ಲದೆ ಕಪಿಲ್ ಡ್ರೆಸ್ಸಿಂಗ್ ರೂಮಿನಲ್ಲಿ ಶ್ರೀನಾಥ್ಗಾಗಿ ಕಾದು ಕುಳಿತರು. ಆದರೆ ಅಂದು ಶ್ರೀನಾಥ್ ಲಗುಬಗೆಯಿಂದ 3 ವಿಕೆಟ್ ಪಡೆದು ಡ್ರೆಸ್ಸಿಂಗ್ ರೂಮಿಗೆ ಮರಳಿದರು!.

2. ತನ್ನ ಮೊದಲ ವರ್ಲ್ಡ್ಕಪ್ ಪಂದ್ಯದಲ್ಲಿ ಸುನೀಲ್ ಗವಾಸ್ಕರ್ ಬಾರಿಸಿದ್ದು 174 ಚೆಂಡುಗಳಲ್ಲಿ  36* (1X4) ರನ್! (ಪೂರಾ 60 ಓವರ್!!!) ಒಂದು ದಿನದ ಪಂದ್ಯಗಳಲ್ಲಿ ಕುಖ್ಯಾತಿಗೆ ಪಾತ್ರವಾದ ಇನ್ನಿಂಗ್ಸ್ ಪ್ರತ್ಯಕ್ಷ ದರ್ಶಿಗಳ ಪ್ರಕಾರ ಇದಕ್ಕೆ ಕಾರಣ, ಇಂಗ್ಲೆಂಡ್ ಬೌಲರ್ಗಳು ಆದಷ್ಟು ಬೌನ್ಸರ್ ಮತ್ತು ಲೆಗ್ ಸೈಡ್ ಬಾಲ್ಗಳನ್ನು ಎಸೆದರಂತೆ. ಆಗ ಇವುಗಳನ್ನು ವೈಡ್ ಎಂದು ಪರಿಗಣಿಸಲಾಗುತ್ತಿರಲಿಲ್ಲ. ಅದಕ್ಕೆ ಮುಂಬೈನ ಪತ್ರಿಕೆಯೊಂದು ಶೀರ್ಷಿಕೆ ನೀಡಿದ್ದು "ಇಂಗ್ಲೆಂಡಿನವರು ಜಯಿಸಿರಬಹುದು, ಆದರೆ ಅವರಿಗೆ ಗವಾಸ್ಕರನ್ನು ಔಟ್ ಮಾಡಲಾಗಲಿಲ್ಲ."!!!

3.ಸಚಿನ್ ಯಾವತ್ತಿಗು ತನ್ನ ಆರನೆ ಇಂದ್ರೀಯದ ಕರೆಗೆ ಓಗೂಡುತ್ತಿರುತ್ತಾರೆ. ಇದಕ್ಕೆ 2003 ರಲ್ಲಿ ಸೆಂಚೂರಿಯನ್ನಲ್ಲಿ ನಡೆದ ಪಂದ್ಯದಲ್ಲಿ ಅಲ್ಲಿಯವರೆಗೆ ಇನ್ನಿಂಗ್ಸ್ ಆರಂಭಿಸುತ್ತಿದ್ದ ಸೆಹ್ವಾಗ್ ಬದಲಿಗೆ ತಾನೇ ಸ್ಟ್ರೈಕರ್ ಕಡೆಗೆ ಹೋಗಿ ಬ್ಯಾಟ್ ಮಾಡುತ್ತೇನೆ ಎಂದು ಕಡೆಯ ಕ್ಷಣದಲ್ಲಿ ನಿರ್ಧರಿಸಿದರು. ಏಕೆಂದರೆ ಮುಂದೆ ಬಾಲ್ ಹಿಡಿದು ನಿಂತಿದ್ದು ವಾಸೀಮ್ ಅಕ್ರಮ್!!!!. ಮೊದಲ ಓವರಿನಲ್ಲಿ ಸಚಿನ್ ಬೌಂಡರಿ ಸಹಿತ 5 ರನ್ ಬಾರಿಸಿದರೆ, ಸೆಹ್ವಾಗ್ ಕಡೆಯ ಎಸೆತದಲ್ಲಿ ಬೌಂಡರಿ ಬಾರಿಸಿದರು.ಶೋಯೆಬ್ ಅಕ್ತರ್ ಎಸೆದ ಮುಂದಿನ ಓವರಿನಲ್ಲಿ ಸೆಹ್ವಾಗ್ ಎರಡು ರನ್ ( ವೈಡ್ +ಬೈ) ಗಳಿಸಿದರೆ ಸಚಿನ್ ಬಾರಿಸಿದ್ದು 15 ರನ್! ( 1x6 ,2X4).


4. ಸಚಿನ್ ಕ್ರಿಕೆಟ್ಗೆ ಮೊದಲ ರಂಗ ಪ್ರವೇಶ ಮಾಡಿದ್ದು, ಭಾರತ ತಂಡದ ಪರವಾಗಲ್ಲ, ಅದಕ್ಕೂ ಮೊದಲೆ 1987 .20 ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಮುಂಬೈನಲ್ಲಿ ನಡೆದ ಪ್ರದರ್ಶನ ಪಂದ್ಯದಲ್ಲಿ ಸಚಿನ್ ಪಾಕ್ ಪರ ಬದಲಿ ಫೀಲ್ಡರ್ ಆಗಿ ಕಣಕ್ಕಿಳಿದಿದ್ದರು.! ಆಗ ಸಚಿನ್ಗೆ ಕೇವಲ 13 ವರ್ಷ ವಯಸ್ಸು.


5. ಒಮ್ಮೆ ಪಾಕಿಸ್ತಾನದ ಖ್ಯಾತ ಆಲ್-ರೌಂಡರ್ ಇಮ್ರಾನ್ ಖಾನ್ ಅಲನ್ ಬಾರ್ಡರ್ ಅನೌಪಚಾರಿಕವಾಗಿ ಮಾತನಾಡುತ್ತಿದ್ದರು. ಆಗ ಇಮ್ರಾನ್ ಖಾನ್ ಹೇಳಿದರು "ಎಬಿ, ನನಗೆ ಭಾರತದಿಂದ ಸುನೀಲ್ ಗವಾಸ್ಕರ್ ಮತ್ತು ಬಿ.ಎಸ್.ಚಂದ್ರಶೇಖರ್ರವರನ್ನು ಕೊಡು, ಆಗ ನಾನು ಆಸ್ಟ್ರೇಲಿಯಾವನ್ನು ಸೋಲಿಸುತ್ತೇನೆ ನೋಡು". ಎಂದರು. ಅದಕ್ಕೆ ಅಲನ್ ಬಾರ್ಡರ್, "ಇಮ್ರಾನ್ ನನಗೆ ಪಾಕಿಸ್ತಾನದ ಇಬ್ಬರು ಅಂಪೈರ್ಗಳನ್ನು ನೀಡು, ನಾನು ಇಡೀ ವಿಶ್ವವನ್ನೆ ಸೋಲಿಸುತ್ತೇನೆ" ಎಂದರು!. ಇದರಿಂದ ಇಮ್ರಾನ್ ಖಾನ್ಗೆ ಮಾತೇ ಹೊರಡಲಿಲ್ಲ. ಮುಂದೆ ಇದು ವಿವಾದವಾಗಿ ಬಾರ್ಡರ್ ಬಹಿರಂಗವಾಗಿ ಕ್ಷಮೆಯಾಚಿಸಿದರು.

6. ಭಾರತ ತಂಡವು ಭಾರತ ದೇಶದಲ್ಲಿ ಆಡುವಾಗ ಉಪ-ನಾಯಕನನ್ನು ಹೊಂದಿರುವುದಿಲ್ಲವಂತೆ. ನಮ್ಮ ತಂಡ ವಿದೇಶ ಪ್ರವಾಸ ಮಾಡಿದಾಗ ಮಾತ್ರ ಉಪ-ನಾಯಕನನ್ನು ಅಧಿಕೃತವಾಗಿ ಹೊಂದಿರುತ್ತದೆಯಂತೆ! ಇದನ್ನು ಹೇಳಿದವರು ಸುನೀಲ್ ಗವಾಸ್ಕರ್.


7. ಸ್ಲೆಡ್ಜಿಂಗ್ಮಾಡುವುದರಲ್ಲಿ "ಮರ್ವ್ ಹ್ಯೂಸ್" (ಆಸ್ಟ್ರೇಲಿಯಾ) ಕುಖ್ಯಾತಿ ಪಡೆದಿದ್ದರು. ಈತನ ಸೊಂಟದ ಕೆಳಗಿನ ಭಾಷೆ ಕ್ರಿಕೆಟಿಗರಲ್ಲಿ ಅಸಹ್ಯವನ್ನುಂಟು ಮಾಡುತ್ತಿತ್ತು. ಆದರೆ ಅಂತಹವನನ್ನೆ ಕೆಣಕಿ ಮೇಲೆ ಬಿಟ್ಟುಕೊಂಡವನು ಮಿಯಾಂದಾದ್, ಒಮ್ಮೆ ಆತ " ಹೇ ಮರ್ವ್ ನೀನು ದಪ್ಪಗಿರುವ ಒಬ್ಬ ಬಸ್ ಕಂಡಕ್ಟರ್" ಎಂದು ಹೀಯಾಳಿಸಿದ. ಕೆಲವು ಬಾಲ್ಗಳ ಅಂತರದಲ್ಲಿ ಮರ್ವ್ ಆತನ ವಿಕೆಟ್ ಕಿತ್ತ್ತು ಹೇಳಿದ "ಟಿಕೆಟ್ ಪ್ಲೀಸ್".

9. ಒಮ್ಮೆ ಸ್ಟೀವ್ ವಾ ರನ್ನು ಸಂದರ್ಶನದಲ್ಲಿ ಕೇಳಿದರು " ನಿಮ್ಮ ಮೆಚ್ಚಿನ ಪ್ರಾಣಿ ಯಾವುದು"? ಸ್ವೀವ್ ಉತ್ತರಿಸಿದ್ದು " ಮರ್ವ್ ಹ್ಯೂಸ್" ಇಂತಹ ಮರ್ವ್ ಹ್ಯೂಸ್ನನ್ನು ಬೌಲಿಂಗಿನಲ್ಲಿ ಅಷ್ಟೇ ಅಲ್ಲ ಸ್ಲೆಡ್ಜಿಂಗ್ನಲ್ಲಿ ಸಹ ಆದರ್ಶವಾಗಿ ತೆಗೆದುಕೊಂಡವನು ಗ್ಲೆನ್ ಮೆಕ್ಗ್ರಾಥ್. ಒಮ್ಮೆ ಆತ ವೆಸ್ಟ್ ಇಂಡೀಸ್ ವಿರುದ್ಧ ಬೌಲಿಂಗ್ ಮಾಡುವಾಗ ರಾಮ್ ನರೇಶ್ ಸರವಣ್ಗೆ ಒಂದು ಬೌನ್ಸರ್ ಎಸೆದ. ಅದು ಸರವಣ್ ಮೂಗಿನ ಸಮೀಪದಲ್ಲಿಯೇ ಹಾರಿಹೋಯಿತು. ಆಗ ಮೆಕ್ಗ್ರಾಥ್ " ಹೇಗಿದೆ ಲಾರಾನ **** ರುಚಿ ಎಂದು ಕೇಳಿದ". ಅದಕ್ಕೆ ಅಷ್ಟೇ ಕೂಲಾಗಿ ಸರವಣ್ ಹೇಳಿದ "ನನ್ನನ್ನೇನು ಕೇಳುತ್ತೀಯಾ ಹೋಗಿ ನಿನ್ನ ಹೆಂಡತಿಯನ್ನು ಕೇಳು". ಮಾತು ಇಬ್ಬರ ನಡುವೆ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ, ಅಂಪೈರುಗಳು ಸಮಾಧಾನ ಮಾಡಿದರು.


10. ಇಂತಹ ಮೆಕ್ಗ್ರಾಥ್ ಕೆಲವೊಮ್ಮೆ ಭವಿಷ್ಯ ಸಹ ನುಡಿಯುತ್ತಿದ್ದ. 2003 ವಿಶ್ವಕಪ್ ಫೈನಲ್ನಲ್ಲಿ ಟಾಸ್ ಗೆದ್ದ ಭಾರತದ ನಾಯಕ ಸೌರವ್ ಗಂಗೂಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಾಗ, ಡ್ರೆಸ್ಸಿಂಗ್ ರೂಮಿನ ಬಾಲ್ಕನಿಯಲ್ಲಿ ನಿಂತಿದ್ದ ಮೆಕ್ಗ್ರಾಥ್ ಹೇಳಿದ್ದು " ಅದು ಮೊದಲನೆ ತಪ್ಪು", ಹಾಗೆಯೇ ಆಯಿತು ಫೈನಲ್ನಲ್ಲಿ ಭಾರತ 125 ರನ್ನಿಂದ ಸೋತಿತು.

11. ಇಂತಹ ಭವಿಷ್ಯಗಳು ಅಪರೂಪಕ್ಕೆ ನಿಜವಾಗುತ್ತಿರುತ್ತವೆ. "1999 ವಿಶ್ವಕಪ್ ಸೂಪರ್ ಸಿಕ್ಸ್ ಘಟ್ಟದಲ್ಲಿ ಕೈಯಲ್ಲಿ ಹಿಡಿದ ಕ್ಯಾಚನ್ನು ಸಂಭ್ರಮಾಚರಣೆಯಲ್ಲಿ ಕೆಳಗಿ ಬಿಟ್ಟನು ಹರ್ಷೆಲ್ ಗಿಬ್ಸ್. ಆಗ ಸ್ವೀವ್ ಹೇಳಿದ್ದು " ನೀನು ವಿಶ್ವಕಪ್ಪನ್ನು ಕೈ ಜಾರಿ ಬಿಟ್ಟು ಬಿಟ್ಟೆ ಗೆಳೆಯ". ಆಗ ಸ್ಟೀವ್ 59 ರನ್ ಗಳಿಸಿದ್ದರು. ಮುಂದೆ ಸ್ಟೀವ್ ಪಂದ್ಯದ ದಿಕ್ಕು ಬದಲಿಸಿದ ಮತ್ತು ಜೀವಮಾನದ ವೈಯುಕ್ತಿಕ ಗರಿಷ್ಠ ಮೊತ್ತ 120* ಗಳಿಸಿ ಪಂದ್ಯವನ್ನು ಗೆಲ್ಲಿಸಿದರು. ಇದೇ ಗೆಲುವು ಸೆಮಿ-ಫೈನಲ್ನಲ್ಲಿ .ಆಫ್ರಿಕಾಕ್ಕೆ ಮುಳುವಾಯಿತು.
12. ಇಂತಹ ಸ್ಟಿವ್ ವಾ ತನ್ನ ವೃತ್ತಿ ಜೀವನದ ಕಡೆಯ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದರು. ಆಗ ಅವರನ್ನು ಕೆಣಕಿದ್ದು ನಮ್ಮ ಪಾರ್ಥೀವ್ ಪಟೇಲ್ " ಕಮ್ ಆನ್ ಸ್ಟೀವ್ ಕೇವಲ ಇನ್ನೊಂದು ಶಾಟ್ ನಿನ್ನ ಜನಪ್ರಿಯ ಸ್ಲಾಗ್ ಸ್ವೀಪ್ ಬಾರಿಸಿ ಹೋಗು, ಹೋಗುವ ಮುನ್ನ" ಎಂದು ಅಣಕಿಸಿದರು.  ಅದಕ್ಕೆ ಸ್ಟೀವ್ ವಾ " ನೋಡು ಮಗು, ಸ್ವಲ್ಪ ಗೌರವ ತೋರಿಸು, ನಾನು ಹದಿನೆಂಟು ವರ್ಷದ ಹಿಂದೆ ನನ್ನ ಮೊದಲ ಟೆಸ್ಟ್ ಪಂದ್ಯವಾಡಿದಾಗ ನೀನಿನ್ನು ಲಂಗೋಟಿಯಲ್ಲಿದ್ದೆ" ಎಂದನು. ಇದು ಭಾರತ ತಂಡದಲ್ಲಿದ್ದ ಹಿರಿಯ ಆಟಗಾರರ ಮನಸ್ಸಿಗೆ ನೋವುಂಟು ಮಾಡಿತು. ಅಂದು ಸಂಜೆ ಪಾರ್ಥೀವ್ ಪಟೇಲರನ್ನು ಸಚಿನ್, ಗಂಗೂಲಿ, ದ್ರಾವಿಡ್, ಲಕ್ಷ್ಮಣ್ ಎಲ್ಲಾ ಸೇರಿ ಹಸುಗೂಸಿನಂತೆ ಬಟ್ಟೆ ಹಾಕಿ (ಲಂಗೋಟಿ!!!) ಸುತ್ತಿಸುವ ಮೂಲಕ ದಂಡನೆ ನೀಡಲಾಯಿತಂತೆ.


13. ಸಚಿನ್ ಪದಾರ್ಪಣೆ ಮಾಡಿದ ಮರು ಪಂದ್ಯದಲ್ಲಿ ಪಾಕಿಸ್ತಾನದ ಖ್ಯಾತ ಲೆಗ್ ಸ್ಪಿನ್ನರ್ ಮುಷ್ತಾಕ್ ಅಹಮದ್ಗೆ ಒಂದೇ ಓವರಿನಲ್ಲಿ ಎರಡು ಸಿಕ್ಸರ್ ಬಾರಿಸಿದರು. ಆಗ ಆತನ ಗುರು ಅಬ್ದುಲ್ ಖಾದಿರ್ ಬಾಲ್ ತೆಗೆದುಕೊಂಡು ಸಚಿನ್ಗೆ ಹೇಳಿದ್ದು " ಬಚ್ಚೋಂಕೋ  ಕ್ಯೂಂ ಮಾರ್ ರಹೇ ಹೋ? ಹಮೇ ಮಾರ್ ಕೆ ದಿಖಾವ್". ಸಚಿನ್ ಸ್ಲೆಡ್ಜಿಂಗನ್ನು ವಿನಯವಾಗಿ ಸ್ವೀಕರಿಸಿದರು. ಅಲ್ಲದೆ ಓವರಿನಲ್ಲಿ ನಾಲ್ಕು ಸಿಕ್ಸರ್, ಒಂದು ಬೌಂಡರಿ ಬಾರಿಸಿ ಅಬ್ದುಲ್ ಖಾದಿರ್ ಆಸೆಯನ್ನು ಪೂರೈಸಿದರು.

14. 2003ರಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯದಲ್ಲಿ ಸಚಿನ್ ನೀಡಿದ ಕ್ಯಾಚನ್ನು ಅಬ್ದುಲ್ ರಜಾಕ್ ಬಿಟ್ಟಾಗ ವಾಸೀಂ ಅಕ್ರಮ್ ಕಿರಿಚಿದ್ದು "ಲೇ ಬೇ**** ಯಾರ ಕ್ಯಾಚ್ ಬಿಟ್ಟಿದ್ದೀಯಾ ಅನ್ನೋ ಪ್ರಜ್ಞೆ ನಿನಗಿದಿಯಾ?" ದಿನ ಸಚಿನ್ ಮ್ಯಾಚ್ ವಿನ್ನಿಂಗ್ 98 ರನ್ ಬಾರಿಸಿದರು.

15. ಸಭ್ಯತೆ ಸ್ಲೆಡ್ಜಿಂಗ್ಗೆ ಉದಾಹರಣೆಯಾಗಿ ನಿಂತಿರುವುದು ವಿವಿಯನ್ ರಿಚರ್ಡ್ಸ್ ಮತ್ತು ಗವಾಸ್ಕರ್ ನಡುವಿನ ಘಟನೆ. ಆಗ ಗವಾಸ್ಕರ್ ಫಾರಂನಲ್ಲಿರಲಿಲ್ಲ. ತಾನೇ ಸ್ವತಃ 4 ನೇ ಕ್ರಮಾಂಕದಲ್ಲಿ ಆಡುವೆ ಎಂದು ಹೇಳಿದ್ದರು. ಅಂದಿನ ಪಂದ್ಯದಲ್ಲಿ ಶೂನ್ಯಕ್ಕೆ ಅಗ್ರ ಮೂವರು ದಾಂಡಿಗರು ಔಟಾದರು ಆಗ ಗವಾಸ್ಕರ್ ನಾಲ್ಕನೆ ಕ್ರಮಾಂಕದಲ್ಲಿ ಆಡಲು ಬಂದರು. ಭಾರತ 0/3!!! ವಿಕೆಟ್, ಸ್ಲಿಪ್ನಲ್ಲಿದ್ದ ವಿವಿಯನ್ ರಿಚರ್ಡ್ಸ್ ಗವಾಸ್ಕರ್ಗೆ ಹೇಳಿದರು, " ಸನ್ನಿ ನೀನು ಯಾವ ಕ್ರಮಾಂಕದಲ್ಲಿ ಆಡಲು ಬಂದರೂ, ನಿನ್ನ ತಂಡದ ಸ್ಕೋರ್ ಜೀರೋ ಆಗಿರುತ್ತದೆ." ಅಂದು ಸುನೀಲ್ ಸೆಂಚೂರಿ ಬಾರಿಸಿದರು!.


16. ಮತ್ತೊಂದು ಐತಿಹಾಸಿಕ ಸ್ಲೆಡ್ಜಿಂಗ್ ನಡೆದಿದ್ದು ವಿವಿಯನ್ ರಿಚರ್ಡ್ಸ್ ಮತ್ತು ಇಂಗ್ಲೆಂಡಿನ ಗ್ರೆಗ್ ಥಾಮಸ್ ನಡುವೆ. ಗ್ರೆಗ್ ಥಾಮಸ್ ಎಸೆಯುತ್ತಿದ್ದ ಬೆಂಕಿಯುಂಡೆಗಳನ್ನು ಎದುರಿಸಲು ವಿವ್ ಪರದಾಡುತ್ತಿದ್ದರು. ಆಗ ಒಂದು ಬೌನ್ಸರ್ ಎಸೆದ ಗ್ರೆಗ್, ಅದನ್ನು ಆಡದೆ ಬಿಟ್ಟಾಗ, ಆತ ಹೇಳಿದ್ದು " ಅದನ್ನು ಬಾಲ್ ಎನ್ನುತ್ತಾರೆ, ಅದು ಕೆಂಪಗಿರುತ್ತದೆ, ಚರ್ಮದಿಂದ ಮಾಡಿರುತ್ತಾರೆ, ಐದು ಔನ್ಸ್ ತೂಕವಿರುತ್ತದೆ" ಎಂದನು. ಮುಂದಿನ ಬಾಲ್ನಲ್ಲಿ ವಿವ್ ಸಿಕ್ಸರ್ ಬಾರಿಸಿದ!, ಬಾಲ್ ಎತ್ತ ಹೋಯಿತು ಎಂದು ಬೌಲರ್ ಗ್ರೆಗ್ ನೋಡಿದಾಗ. ವಿವ್ ಹೇಳಿದ್ದು "ಗ್ರೆಗ್, ನಿನಗೆ ಬಾಲ್ ಹೇಗಿರುತ್ತದೆ ಎಂದು ಚೆನ್ನಾಗಿ ಗೊತ್ತು!, ಹೋಗು ಹುಡುಕಿಕೊಂಡು ಬಾ", ದಿನ ವಿವ್ ಬೌಲರ್ಗಳನ್ನು ಚೆಂಡಾಡಿದರು.

17. ಅದು 1992, 18 ವರ್ಷದ ಸಚಿನ್ ಕಾಂಗರೂ ಬೌಲರ್ಗಳನ್ನು ಮೈದಾನದ ಮೂಲೆ ಮೂಲೆಗೆ ಓಡುವಂತೆ ಮಾಡುತ್ತಿದ್ದ. ಆಗ ಕಾಂಗರೂ ಬೌಲರ್ ಕ್ರೆಗ್ ಮೆಕ್ ಡರ್ಮೊಟ್ಟ್  ಕೋಪದಿಂದ ಸಚಿನ್ ಬಳಿಗೆ ಹೋಗಿ " ಬ್ಯಾ***  ****ಡ್ ಪರ್ಥ್ಗೆ ಬಾ, ನಾನು ಅಲ್ಲಿ ನಿನ್ನನ್ನು ವಿಚಾರಿಸಿಕೊಳ್ಳುತ್ತೇನೆ" ಎಂದನು. ಮುಂದಿನ ಟೆಸ್ಟ್ ವೇಗದ ಬೌಲರ್ಗಳ ಸ್ವರ್ಗವಾಗಿದ್ದ ಪರ್ಥ್ನಲ್ಲಿ, ಕ್ರೆಗ್ ಎಸೆದ ಮೊದಲ ಎಸೆತವನ್ನೆ ಸಿಕ್ಸರ್ಗೆ ಬಾರಿಸಿದ ಸಚಿನ್, ಇನ್ನು ಮುಂದಿನ ಓವರುಗಳಲ್ಲಿ ಬೌಂಡರಿಗಳ ಸುರಿಮಳೆ! ಸಚಿನ್ ಟೆಸ್ಟ್ನಲ್ಲಿ ಸೆಂಚೂರಿ ಬಾರಿಸಿದ!


18. ಆಗ ಅದೇ ಕಾಂಗರೂ ತಂಡದಲ್ಲಿದ್ದ ಮರ್ವ್ ಹ್ಯೂಸ್, ನಾಯಕ ಅಲನ್ ಬಾರ್ಡರ್ಬಳಿ ಹೋಗಿ ಹೇಳಿದ್ದು, " ಎಬಿ, ಕುಳ್ಳ ನೀನು ಹೊಡೆದ ರನ್ಗಳಿಗಿಂತ ಹೆಚ್ಚು ರನ್ ಹೊಡ���ಯುತ್ತಾನೆ" ಭವಿಷ್ಯವು ನಿಜ ಆಯಿತು ಎಂದು ಬೇರೆ ಹೇಳಬೇಕಿಲ್ಲ.

19. ಇನ್ನು ರಾಹುಲ್ ದ್ರಾವಿಡ್ ಬ್ಯಾಟಿಂಗಿಗೆ ಬರುತ್ತಿದ್ದಾಗ ಸ್ಟೀವ್ ವಾ ತನ್ನ ಬೌಲರ್ಗಳಿಗೆ ಹೇಳಿದ್ದು, "ಮೊದಲು ದ್ರಾವಿಡ್ ಔಟ್ ಮಾಡಿ, ಇಲ್ಲವಾದಲ್ಲಿ ಕನಿಷ್ಠ ಆತನ ಜೊತೆಗೆ ಬ್ಯಾಟ್ ಮಾಡುವ ಉಳಿದ ಹತ್ತು ಜನರನ್ನು ಔಟ್ ಮಾಡಿ!!"​ 

      

No comments:

Post a Comment

Thanking You For Your Valuable Comment. Keep Smile