- ಅಟಕಾಮಾ ಮರುಭೂಮಿ ದಕ್ಷಿಣ ಅಮೇರಿಕಾ ಭೂಖಂಡದಲ್ಲಿರುವ ಒಂದು ವಿಶಾಲ ಪೂರ್ಣ ಒಣಭೂಮಿ. ಈ ಪ್ರದೇಶವು ಮಳೆಯನ್ನು ಕಾಣದ ಪ್ರದೇಶವಾಗಿದೆ.
- ಅಟಕಾಮಾ ಮರುಭೂಮಿಯು ಆ್ಯಂಡಿಸ್ ಪರ್ವತಗಳ ಪಶ್ಚಿಮ ಭಾಗದಲ್ಲಿ ಶಾಂತ ಮಹಾಸಾಗರದ ಕರಾವಳಿಗೆ ಹೊಂದಿಕೊಂಡಿರುವ ಸುಮಾರು ೬೦೦ ಮೈಲಿ (೯೬೬ ಕಿ.ಮೀ.) ಅಗಲದ ಪಟ್ಟಿ.
- ಅಧ್ಯಯನಗಳ ಪ್ರಕಾರ ಅಟಕಾಮಾ ಮರುಭೂಮಿಯು ಜಗತ್ತಿನ ಅತ್ಯಂತ ಒಣ ಮರುಭೂಮಿಯಾಗಿದೆ. ಒಂದು ಅಂದಾಜಿನ ಪ್ರಕಾರ ಇದು ಕ್ಯಾಲಿಫೋರ್ನಿಯಾದ ಸಾವಿನ ಕಣಿವೆಗಿಂತ ೫೦ ಪಟ್ಟು ಹೆಚ್ಚು ಶುಷ್ಕಪ್ರದೇಶ.
- ಅಟಕಾಮಾ ಮರುಭೂಮಿಯ ವಿಸ್ತೀರ್ಣ ಸುಮಾರು ೧೮೧,೩೦೦ ಚದರ ಕಿ.ಮೀ. ಚಿಲಿ ದೇಶದ ಉತ್ತರಭಾಗದಲ್ಲಿ ಹಬ್ಬಿರುವ ಅಟಕಾಮಾ ಮರುಭೂಮಿಯ ಹೆಚ್ಚಿನ ಭಾಗ ಉಪ್ಪಿನ ಗುಡ್ಡಗಳು, ಮರಳು ಮತ್ತು ಲಾವಾ ಹರಿವಿನಿಂದುಂಟಾಗಿರುವ ಗಟ್ಟಿ ಬೆಂಗಾಡು.
- ಪೂರ್ವದ ಆಂಡೆಸ್ ಪರ್ವತಗಳು ಮತ್ತು ಪಶ್ಚಿಮದ ಚಿಲಿಯ ಕರಾವಳಿ ಬೆಟ್ಟಸಾಲುಗಳ ನಡುವೆ ಸಿಲುಕಿರುವ ಅಟಕಾಮಾ ಮರುಭೂಮಿಗೆ ಮಳೆಯ ಹನಿ ಕೂಡ ಬೀಳದಂತೆ ಇವೆರಡು ಪರ್ವತಸಾಲುಗಳು ತಡೆಯೊಡ್ಡಿವೆ. ಹೀಗಾಗಿ ಅಟಕಾಮಾ ಮರುಭೂಮಿಯು ಪೂರ್ಣವಾಗಿ ಬಂಜರು ಪ್ರದೇಶವಾಗಿದ್ದು ಹೆಚ್ಚಿನ ಜೀವಸೆಲೆ ಇಲ್ಲಿಲ್ಲ.
- ಹೆಚ್ಚಿನ ಭಾಗದ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ ಕೇವಲ ಒಂದು ಮಿಲಿಮೀಟರ್ ಆಗಿದ್ದರೆ ಇಲ್ಲಿನ ಅನೇಕ ಹವಾಮಾನ ವೀಕ್ಷಣಾ ಕೇಂದ್ರಗಳಲ್ಲಿ ದಶಕಗಳ ಕಾಲ ಹನಿ ಮಳೆ ಸಹ ದಾಖಲಾಗಿಲ್ಲ.
- ೧೫೭೦ ರಿಂದ ೧೯೭೧ರವರೆಗೆ ಗಣನೀಯ ಮಳೆ ಅಟಕಾಮಾ ಮರುಭೂಮಿಯಲ್ಲಿ ಬಿದ್ದಿಲ್ಲವೆಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಇಂತಹ ಶುಷ್ಕ ವಾತಾವರಣದ ಕಾರಣದಿಂದಾಗಿ ಅಟಕಾಮಾ ಮರುಭೂಮಿಯ ಅತ್ಯುನ್ನತ ಪ್ರದೇಶ ೬೮೮೫ ಮೀ. ಗಳಷ್ಟು ಎತ್ತರದಲ್ಲಿದ್ದರೂ ಸಹ ಅಲ್ಲಿ ಯಾವುದೇ ಹಿಮನದಿಗಳಾಗಲಿ ಯಾ ನೀರಿನ ಇನ್ನಾವುದೇ ಮೂಲವಾಗಲಿ ಇಲ್ಲ.
- ಸಾಗರಕ್ಕೆ ಸಮೀಪದಲ್ಲಿರುವ ಮರುಭೂಮಿಯ ಭಾಗಗಳು ಆಗೊಮ್ಮೆ ಈಗೊಮ್ಮೆ ಸಾಗರದ ಕಡೆಯಿಂದ ಗಾಳಿಯೊಡನೆ ತೇಲಿಬರುವ ನೀರಿನಂಶ ( ಸಾಗರದ ಮಂಜು) ಪಡೆಯುತ್ತಿದ್ದು ಈ ಅಲ್ಪ ತೇವಾಂಶವು ಕೆಲತಳಿಯ ಕಳ್ಳಿ ಮತ್ತು ಆಲ್ಗೇಗಳಂತಹ ಸಸ್ಯಗಳಿಗೆ ಜೀವನಾಧಾರವಾಗಿದೆ.
- ಉಳಿದ ಭಾಗಗಳು ಮಂಗಳ ಗ್ರಹದ ಮೇಲ್ಮೈಯನ್ನು ಬಲುಮಟ್ಟಿಗೆ ಹೋಲುತ್ತವೆ. ಅಟಕಾಮಾ ಮರುಭೂಮಿಯಲ್ಲಿ ಜನವಸತಿ ಬಲು ವಿರಳ. ಕೆಲವೊಂದು ಒಯಸಿಸ್‌ಗಳಿದ್ದು ಅವುಗಳ ಆಸುಪಾಸಿನಲ್ಲಿ ಅಲ್ಪ ಜನವಸತಿಯಿದೆ.
- ತಾಮ್ರ, ಬೆಳ್ಳಿ ಮತ್ತು ನೈಟ್ರೇಟ್ ನಿಕ್ಷೇಪಗಳು ಇಲ್ಲಿ ಪತ್ತೆಯಾಗಿದ್ದು ಇವುಗಳ ಗಣಿಗಾರಿಕೆಯಲ್ಲಿ ತೊಡಗಿರುವ ಕೆಲ ಜನರು ಸಹ ಅಟಕಾಮಾ ಮರುಭೂಮಿಯಲ್ಲಿ ವಾಸಿಸುತ್ತಾರೆ.
Friday, 30 January 2015
ಅಟಕಾಮಾ ಮರುಭೂಮಿ
Subscribe to:
Post Comments (Atom)
No comments:
Post a Comment
Thanking You For Your Valuable Comment. Keep Smile