ಜಾತ್ಯತೀತ ನಾಡಿಗೆ ಪ್ರಜ್ಞಾಪೂರ್ವಕ ನಡಿಗೆ_
ಭಾರತವು ವಿವಿಧ ಧರ್ಮಗಳ ಮತ್ತು ಜಾತಿಗಳ ಆಗರವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ನಾನು ನಿಮಗೆ ವಿನೂತನ ಚಿಂತನೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದೇನೆ. ಅದೇನೆಂದರೆ, ಬಹುತೇಕ ಧರ್ಮಗಳ ಮತ್ತು ಜಾತಿಗಳ ಪದಗಳಲ್ಲಿ ಸಮಾಜವನ್ನು ಬೆಸೆಯುವ ಸಾರವಿರುತ್ತದೆ. ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನು ಇಂದು ಎಲ್ಲರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಈ ಕೆಳಗೆ ವಿವಿಧ ಧರ್ಮಗಳ ಹಾಗೂ ಜಾತಿಗಳ ಪದಗಳ ಒಳ ಸಾರವನ್ನು ನಾವು ಹೇಗೆ ಗ್ರಹಿಸಿ ಸಮಾಜವನ್ನು ನೋಡಬೇಕೆಂಬ ಅನ್ವೈಕೆಯ ದೃಷ್ಟಿಕೋನವನ್ನು ತಿಳಿಸಲು ಪ್ರಯತ್ನಿಸಿದ್ದೇನೆ.
1. ಇಸ್ಲಾಮ್ ಎಂಬ ಅರಬಿ ಪದದ ಅರ್ಥ ‘ಶಾಂತಿ’, ‘ಸಮರ್ಪಣೆ’ ಎಂದಾಗಿದೆ.
ನಾವೆಲ್ಲರು ಸಮಾಜದ ಶಾಂತಿಗಾಗಿ ಸಮರ್ಪಿತರಾಗಿರುವುದರಿಂದ ನಾವೂ ಸಹ ಮುಸಲ್ಮಾನರು.
2. ವೀರಶೈವ ಅಥವಾ ಲಿಂಗಾಯತ ಎಂದರೆ ಜ್ಞಾನದಲ್ಲಿ ರಮಿಸುವ ಶಿವಭಕ್ತ ಎಂದು.
ನಾವೂ ಸಹ ಜ್ಞಾನದಲ್ಲಿ ರಮಿಸುವ ಸಮಾಜಶಿವನ ಭಕ್ತರು.
3. ‘ಹೊಲೆಯ’ ಎಂಬ ಪದದ ಮೂಲ ‘ಹೊಲ’ವೇ ಹೊರತು ಹೊಲಸು ಎಂದಲ್ಲ. ಇದಕ್ಕೆ ಸಾಕ್ಷಿಯಾಗಿ ಕರ್ನಾಟಕ ಗೆಜೆಟಿಯರ್ (vol 3, Castes and tribes in mysore) ನಲ್ಲಿ Holeya means owner of land ಎಂದಿದೆ. ಅಲ್ಲದೆ 1901 ರ ಜನಗಣತಿ ವರದಿ ಹೀಗೆ ಹೇಳುತ್ತದೆ, HOLA is the canarese name for a dry crop field and HOLEYA means man of such field!
ಸಾಮಾಜಿಕ ಹೊಲದ ನಿವಾಸಿಗಳಾಗಿರುವ ನಾವೂ ಸಹ ಹೊಲೆಯರು.
4. ಕುರುಬ ಎಂದರೆ ಹುಡುಕುವ ಅಥವ ಪಡೆಯುವ ಎಂದಾಗುತ್ತದೆ.
ಮೂಲಭೂತ ಅವಶ್ಯಕತೆಗಳಿಗಾಗಿ ಮತ್ತು ಜ್ಞಾನಕ್ಕಾಗಿ ಸದಾ ಹುಡುಕಾಡುವ ನಾವೂ ಸಹ ಕುರುಬರು.
5. ಜೈನ ಎಂದರೆ 'ಜಿನ'ಎಂಬ ಶಬ್ದವಾಗಿದ್ದು ಜಿನ ಎಂದರೆ' ಗೆದ್ದವನು' ಎಂದು ಹೇಳಬಹುದು. ಕರ್ಮದ ಕಟ್ಟನ್ನು ಮುರಿದು ಸಂಸಾರವನ್ನು ದಾಟಿ ಮುಕ್ತಿಯನ್ನು ಪಡೆಯುವ ಮಾರ್ಗವೇ ಜೈನವಾಗಿದೆ.
ಸಮ ಸಮಾಜದ ಒಳಿತಿಗಾಗಿ ಪೂರ್ವಾಪರವಿಲ್ಲದೆ ಶ್ರಮವಹಿಸುತ್ತಿರುವ ನಾವೂ ಸಹ ಜೈನರು.
----------
ಚೋಳರಾಜ್. ಬಳ್ಳಾರಿ.

No comments:
Post a Comment
Thanking You For Your Valuable Comment. Keep Smile