ಪ್ರಶ್ನೆಗಳು:
೧. ರೋಮನ್ನರ ಎರಡು ಮುಖಗಳ ಯಾವ ದೇವತೆಯ ಹೆಸರಿನಿಂದ ಜನವರಿ ತಿಂಗಳಿಗೆ ಹೆಸರನ್ನಿಡಲಾಗಿದೆ?
೨. ಐ.ಎಫ್.ಆರ್.ಐ (IFRI)ನ ವಿಸ್ತೃತ ರೂಪವೇನು?
೩. ನವಗಿರಿನಂದ ಇದು ಯಾರ ಕಾವ್ಯನಾಮಗಿದೆ?
೪. ಭೂಮಿಗೆ ಅತಿ ಸಮೀಪದಲ್ಲಿರುವ ಸೌರವ್ಯೂಹದಾಚೆಗಿನ ನಕ್ಷತ್ರ ಯಾವುದು?
೫. ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲಕ್ಯ ದೊರೆ ಯಾರು?
೬. ಐಸ್ ಕ್ರೀಂ ಬೇಗ ಗಡ್ಡೆಕಟ್ಟಲು ಏನನ್ನು ಬೆರೆಸುತ್ತಾರೆ?
೭. ಶಿಲೀಂಧ್ರಗಳ ಅಧ್ಯಯನಕ್ಕೆ ಆಂಗ್ಲ ಭಾಷೆಯಲ್ಲಿ ಏನೆಂದು ಕರೆಯುತ್ತಾರೆ?
೮. ಕುತುಬ್ ಮಿನಾರ್ ಆವರಣದಲ್ಲಿರುವ ಅಲೈ ದರ್ವಾಜ್ ಸುಂದರ ಬಾಗಿಲನ್ನು ಕಟ್ಟಿಸಿದ ಸುಲ್ತಾನ್ ಯಾರು?
೯. ಕಿಂಡರ್ ಗಾರ್ಟನ್ ಕಲ್ಪನೆ ನೀಡಿದವರು ಯಾರು?
೧೦. ಹತ್ತು ಸಾವಿರ ಚಿಮಣಿಗಳ ಕಣಿವೆ ಏಂದು ಕರೆಯಲ್ಪಡುವ ಉತ್ತರ ಅಮೇರಿಕದ ಪ್ರಾಂತ್ಯ ಯಾವುದು?
೧೧. ಹ್ಯೂಗಿನ್ಸ್ ಉಪಕರಣವನ್ನು ಟೈಟಾನ್ ಉಪಗ್ರಹಕ್ಕೆ ಕೊಂಡೊಯ್ದ ಕ್ಷಿಪಣಿ ನೌಕೆ ಯಾವುದು?
೧೨. ಕನ್ನಡದಲ್ಲಿ ವೈದ್ಯ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಲೇಖಕಿ ಯಾರು?
೧೩. ಮನುಷ್ಯನ ದೇಹದಲ್ಲಿರುವ ಕ್ರೋಮೋಜೋಮಗಳ ಸಂಖ್ಯೆ ಎಷ್ಷು?
೧೪. ಈಸ್ಟ್‌ನ್ನು ಬಳಸಿ ಮೊದಲಿಗೆ ಬ್ರೇಡ್ಡನ್ನು ತಯಾರಿಸಿದ ದೇಶ ಯಾವುದು?
೧೫. ಹೈಕೋರ್ಟಿನ ನ್ಯಾಯಾಧೀಶರರನ್ನು ನೇಮಿಸುವರು ಯಾರು?
೧೬. ನೆಲದ ಶುಚಿತ್ವಕ್ಕೆ ಬಳಸುವ ಫೆನಾಯಿಲ್‌ನ ರಾಸಾಯನಿಕ ಹೆಸರೇನು?
೧೭. ಮೈಸೂರು ವಿಶ್ವವಿಧ್ಯಾನಿಲಯ ಪ್ರಾಂರಭವಾದ ವರ್ಷ ಯಾವುದು?
೧೮. ಅಕಾಂಕಾಗ್ವೆ ಶಿಖರ ಯಾವ ಖಂಡದಲ್ಲಿದೆ?
೧೯. ನೆಪ್ಟೂನ್ ಗ್ರಹದ ಪತ್ತೆಗೆ ಕಾರಣವಾದ ನಿಯಮ ಯಾವುದು?
೨೦. ತಮಿಳರು ಪ್ರಾರಂಭದಲ್ಲಿ ಬಳಸುತ್ತಿದ್ದ ಲಿಪಿ ಯಾವುದು?
೨೧. ಥೋರಿಯಂ ಅಧಿಕವಾಗಿ ದೊರೆಯುವ ರಾಜ್ಯ ಯಾವುದು?
೨೨. ಗಿರೀಶ ಕಾರ್ನಾಡರ ತುಘಲಕನ ಪಾತ್ರದಿಂದ ಖ್ಯಾತರಾಗಿದ್ದ ನಟ ಯಾರು?
೨೩. ಮಾನವನ ಉಗುರುಗಳು ಯಾವುದರಿಂದ ರೂಪಗೊಂಡಿವೆ?
೨೪. ಕೌರು ಬಾಹ್ಯಾಕಾಶ ಸಂಸ್ಥೆ ಎಲ್ಲಿದೆ?
೨೫. ಬಹುದಿನದ ಭಾರತೀಯ ಸಂಪಾದಕತ್ವದ ಪತ್ರಿಕೆಯಾದ ಬಂಗಾಳಿ
ನಿಯತಕಾಲಿಕೆ ಸಂವದ್ ಕೌಮುದಿಯನ್ನು ಪ್ರಾರಂಭಿಸಿದವರು ಯಾರು?
೨೬. ಪ್ರಾಚ್ಯ ಸ್ಮಾರಕಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದವರು ಯಾರು?
೨೭. ದೇವನಾಂಪ್ರಿಯ ಅಶೋಕನೆಂದು ಸೂಚಿಸುವ ಶಾಸನ ಯಾವುದು?
೨೮. ಕನ್ನಡದಲ್ಲಿ ಗಜಾಷ್ಟಕ ಎಂಬ ಕೃತಿಯನ್ನು ರಚಿಸಿದ ಶಿವಮಾರನಿಗೆ ಇದ್ದ ಬಿರುದು ಯಾವುದು?
೨೯. ಪ್ರಧಾನಿ ನೇತೃತ್ವದಲ್ಲಿ ಮಂತ್ರಿ ಮಂಡಲವಿರಬೇಕೆಂದು ಯಾವ ವಿಧಿ ತಿಳಿಸುತ್ತದೆ?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು
೧. ಜಾನಸ್
೨. ಇಂಡಿಯನ್ ಫಾರೆಸ್ಟ್ ರಿಸರ್ಚ್ ಇನ್ಸ್‌ಸ್ಟಿಟ್ಯೂಟ್
೩. ಎಂ.ರಂಗರಾಯ
೪. ಪ್ರಾಕ್ಸಿಮಾ ಸೆಂಟಾರಿ
೫. ವಿಕ್ರಮಾದಿತ್ಯ
೬. ಜಿಲೆಟಿನ್
೭. ಮೈಕೋಲಜಿ
೮. ಅಲ್ಲಾ – ಉದ್ – ದಿನ್ – ಖಿಲ್ಜಿ
೯. ಫ್ರೊಬೇಲ್
೧೦. ಆಲಾಸ್ಕ್
೧೧. ಕ್ಯಾಸಿನಿ
೧೨. ಡಾ||ಅನುಪಮಾ ನಿರಂಜನ
೧೩. ೪೬
೧೪. ಈಜಿಪ್ಟ್
೧೫. ರಾಷ್ಟ್ರಪತಿ
೧೬. ಕಾರ್ಬಾಲಿಕ್ ಆಮ್ಲ
೧೭. ೧೯೧೬
೧೮. ದಕ್ಷಿಣ ಅಮೇರಿಕಾ
೧೯. ವಿಶ್ವವ್ಯಾಪಿ ಗುರುತ್ವ ನಿಯಮ
೨೦. ಬ್ರಾಹ್ಮಿಲಿಪಿ
೨೧. ಕೇರಳ
೨೨. ಸಿ.ಆರ್.ಸಿಂಹ
೨೩. ಕೊರೋಟಿನ್ ಎಂಬ ಮೃತ ಪ್ರೋಟಿನಗಳಿಂದ
೨೪. ಫ್ರೆಂಚ್ ಗಯಾನಾ
೨೫. ಸತ್ಯನಂದ ಅಗ್ನೀಹೋತ್ರಿ
೨೬. ಕರ್ಜನ್
೨೭. ಮಸ್ಕಿ ಶಾಸನ
೨೮. ಸೈಗೊಟ್ಟ ಶಿವಕುಮಾರ
೨೯. ೭೪
೩೦. ದೇವುಡು ನರಸಿಂಹಶಾಸ್ತ್ರಿ