ಉದ್ಯೋಗಾಕಾಂಕ್ಷಿಗಳ ಜೀವನದಲ್ಲಿ ಸಂದರ್ಶನ ಬಹು ಮುಖ್ಯವಾದ ಅಂಶ. ಸಂದರ್ಶನದಲ್ಲಿ ಸಂದರ್ಶಕರ ಪ್ರಶ್ನೆಗೆ
ಜಾಣ್ಮೆಯಿಂದ ಉತ್ತರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ದೇಹಭಾಷೆ. ಇಂತಹ ವೇಳೆ ದೇಹಭಾಷೆಯನ್ನು
ಸರಿಯಾದ ರೀತಿಯಲ್ಲಿ ಬಳಸಿದರೆ ಭವಿಷ್ಯ ಉಜ್ವಲವಾಗುತ್ತದೆ. ಸಂದರ್ಶನದ ವೇಳೆ ನಿಮಗೇನು ಬೇಕೆಂದು, ನಿಮ್ಮಲ್ಲಿನ ಜಾಣೆ
ಎಂತಹದೆಂದು, ನೀವೆಷ್ಟು ಕ್ರಿಯಾಶೀಲರು, ಸೃಜನಶೀಲರು ಎಂಬುದನ್ನು ನಿಮ್ಮ ಮಾತುಗಳಲ್ಲಿ ತಿಳಿಸಬಹುದು. ಆದರೆ ನಿಮ್ಮ
ದೇಹಭಾಷೆ ಇದಕ್ಕೆ ವಿರುದ್ದವಾಗಿದ್ದರೆ ಸಂದರ್ಶನ ವಿಫಲವಾಗುತ್ತದೆ. ದೇಹಭಾಷೆ ನಿಖರವಾಗಿಲ್ಲದಿದ್ದರೆ ನೀವೊಬ್ಬ
ವಿಶ್ವಾಸಾರ್ಹತೆಯಿಲ್ಲದ, ಅಭದ್ರತೆಯುಳ್ಳ ದುರಹಂಕಾರಿ ಎಂಬುದನ್ನು ತೋರಿಸಿದಂತಾಗುತ್ತದೆ. ಯಾವ ಸಂದರ್ಶಕರ
ತೀರ್ಮಾನಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದೋ ಗೊತ್ತಿಲ್ಲ. ಆದ್ದರಿಂದ ಸಂದರ್ಶನದ ದೇಹಭಾಷೆ ಹೀಗಿರಲಿ.
ಹಸ್ತಲಾಘವ : ಸಂದರ್ಶನದ ಕೊಠಡಿಯೊಳಗೆ ಪ್ರವೇಶಿಸಿದ ಕೂಡಲೇ ಅಲ್ಲಿನ ಸಂದರ್ಶಕರು ಕೈಕುಕಲು
ಮುಂದಾಗುವುದಕ್ಕಿಂತ ಮೊದಲು ನೀವು ಕೈಕುಲುಕಿ. ಇದು ನಿಮ್ಮಲ್ಲಿನ ಆತ್ಮವಿಶ್ವಾಸವನ್ನು ಮತ್ತು ಸಂದರ್ಶನಕ್ಕೆ ನೀವು
ಸಿದ್ದರಾಗಿದ್ದೀರಿ ಎಂಬುದನ್ನು ತೋರಿಸುತ್ತದೆ.
ಹೀಗೆ ಕೈಕುಲುಕುವಾಗ ನಿಮ್ಮ ಹೆಬ್ಬೆರಳು ಮತ್ತು ತೋರುಬೆರಳುಗಳ ನಡುವೆ 45 ಡಿಗ್ರಿ ಅಂತರ ಇರಲಿ. ನಿಮ್ಮ ಹೆಬ್ಬೆರಳು
ಮತ್ತು ತೋರುಬೆರಳಿನ ನಡುವಿನ ಚರ್ಮ ಕೈಕುಲುಕುವವರ ಕೈಗಳನ್ನು ಸ್ಪರ್ಶಿಸಲಿ. ಎಲ್ಲಾ ಬೆರಳುಗಳಿಂದ ಅವರ ಕೈಯನ್ನು
ಮುಚ್ಚಿ ಗಟ್ಟಿಯಾಗಿ ಹಿಡಿಯಿರಿ.
ಹಗುರವಾದ ಕೈಕುಲುವಿಕೆಯನ್ನು ತಪ್ಪಿಸಿ. ಹಗುರವಾದ ಕೈಕುಲುಕುವಿಕೆಯಿಂದ ನೀವು ಅಧೀರರು, ಅನಿಶ್ಚಿತತೆ
ಅನುಭವಿಸುವವರು ಎಂಬುದನ್ನು ತೋರಿಸುತ್ತದೆ. ಅಂತೆಯೇ ಎರಡೂ ಕೈಗಳಿಂದ ಕೈಕುಲುಕಬೇಡಿ. ಅದು ನೀವು ತುಂಬಾ
ಪ್ರಬಲರು ಅಥವಾ ಅಭದ್ರತೆ ಸರಿದೂಗಿಸಲು ಪ್ರಯತ್ನಿಸುವವರು ಎಂಬುದನ್ನು ಸಾಬೀತುಪಡಿಸಿದಂತಾಗುತ್ತದೆ.
ಬೆವರನ್ನು ತಪ್ಪಿಸಿ : ನೀವು ಹೆಚ್ಚಾಗಿ ಬೆವರುತ್ತೀರಾ? ಹಾಗಿದ್ದರೆ ಸಂದರ್ಶನ ಕೊಠಡಿ ತಲುಪುವುದಕ್ಕಿಂತ ಮೊದಲು ಮುಖ
ತೊಳೆದುಕೊಂಡು ರಿಫ್ರೆಶ್ ಆಗಿ. ಕರವಸ್ತ್ರದಿಂದ ಕೈಗಳನ್ನು ಒಣಗಿಸಿಕೊಳ್ಳಿ. ಸಂದರ್ಶನ ಕೊಠಡಿಯಲ್ಲಿ ಹಣೆ ಮತ್ತು ಕೈಗಳಲ್ಲಿನ
ಬೆವರನ್ನು ಕೈಗಳಿಂದ ಒರೆಸಬೇಡಿ. ಕರವಸ್ತ್ರ ಬಳಸಿ. ಹಸ್ತಲಾಘವ ನೀಡುವಾಗ ನಿಮ್ಮ ಕೈಗಳು ಒದ್ದೆಯಾಗಿದ್ದರೆ ನೀವು
ಅಧೀರರು, ಅನಿಶ್ಚಿತರು, ನರದೌರ್ಬಲ್ಯದಿಂದ ಬಳಲುವವರು ಎಂಬುದು ತಿಳಿಯುತ್ತದೆ.
ಕಣ್ಣುಗಳ ಸಂಪರ್ಕವಿರಲಿ : ಸಂದರ್ಶಕರೊಂದಿಗೆ ಸಂಭಾಷಣೆ ನಡೆಸುವಾಗ ನಿರಂತರವಾಗಿ ಕಣ್ಣುಗಳ ಸಂಪರ್ಕವಿರಲಿ.
ಸಂಭಾಷಣೆ ವೇಳೆ ಅತ್ತಿತ್ತ ನೋಡುತ್ತಿದ್ದರೆ ನೀವು ಅಸುರಕ್ಷಿತರು, ಅಪ್ರಾಮಾಣಿಕರು, ಅಸಡ್ಡೆಯುಳ್ಳವರು ಎಂಬುದು
ತಿಳಿಯುತ್ತದೆ. ಸಂದರ್ಶಕರು ಏಕಕಾಲದಲ್ಲಿ ನಿಮ್ಮೊಂದಿಗೆ ಸಂಭಾಷಿಸುತ್ತಾರೆ. ಅಂತಹ ವೇಳೆ ಎಲ್ಲರೊಂದಿಗೂ ನೇರ
ನೋಟದೊಂದಿಗೆ ಮಾತನಾಡಿ. ಪ್ರತಿಯೊಬ್ಬ ಸಂದರ್ಶಕರನ್ನು ಸಮಭಾವದಿಂದ ಗೌರವಿಸಿ. ಪ್ರಶ್ನೆಗೆ ಉತ್ತರಿಸುವಾಗ
ದೃಷ್ಟಿಯನ್ನು ದೂರ ಹಾಯಿಸಬೇಡಿ ಅಥವಾ ಕೆಳಗೆ ನೋಡಬೇಡಿ. ಪ್ರಶ್ನೆ ಕೇಳಿದವರ ಕಡೆ ನೋಟ ಹರಿಸಿ ಉತ್ತರಿಸಿ. ಕಣ್ಣುಗಳ
ಸಂಪರ್ಕದೊಂದಿಗೆ ಮಾತನಾಡುವುದರಿಂದ ನೀವು ಪ್ರಾಮಾಣಿಕರು ಹಾಗೂ ವೃತ್ತಿಯನ್ನು ಹೆಚ್ಚು ಪ್ರೀತಿಸುವವರು ಎಂಬುದು
ತಿಳಿಯುತ್ತದೆ.
ನೇರವಾಗಿ ಕುಳಿತುಕೊಳ್ಳಿ : ನಿಮಗೆ ಮೀಸಲಾದ ಆಸನದಲ್ಲಿನ ಬೆನ್ನಾಸರೆಗೆ ಒರಗಿ ನೇರವಾಗಿ ಸ್ಥಿರವಾಗಿ ಕುಳಿತುಕೊಳ್ಳಿ.
ಹಗುರವಾಗಿ ಅಥವಾ ಒಂದುಕಡೆ ವಾಲಿದಂತೆ ಕುಳಿತರೆ ಅದು ನಿಮ್ಮ ಅಸ್ಥಿರತೆಯನ್ನು ಅಸಡ್ಡೆಯನ್ನು ಎತ್ತಿ ತೋರಿಸುತ್ತದೆ.
ನಿಮ್ಮ ಭುಜಗಳನ್ನು ಸಾಮಾನ್ಯ ಮಟ್ಟಕ್ಕಿಂತ ಕೆಳಗಿರಲಿ. ಅಂತೆಯೇ ಸಂದರ್ಶಕರ ಸ್ಥಳವನ್ನು ಗೌರವಿಸಿ.
ಸ್ಥಿರವಾಗಿರಿ: ಕುಳಿತುಕೊಂಡಾಗ ನಿಮ್ಮ ಕಾಲುಗಳನ್ನು ಅಲುಗಾಡಿಸದೇ ಸ್ಥಿರವಾಗಿ ಕುಳಿತುಕೊಳ್ಳಿ. ಮಾತಿನ ಚಲನೆ ಹಾಗೂ
ಔಪಚಾರಿಕ ಭಂಗಿಯ ನಡುವೆ ಸಮತೋಲನ ಇರಲಿ. ಅನಾವಶ್ಯಕವಾಗಿ ಕೈಗಳನ್ನು ಚಲಿಸುವುದು ಅಥವಾ ಚಲಿಸದೇ
ಇರುವುದು ಸರಿಯಲ್ಲ. ಇದು ವ್ಯಕ್ತಿ ಗೊಂದಲದಲ್ಲಿದ್ದಾನೆ ಎಂಬುದನ್ನು ಹೇಳುತ್ತದೆ. ಆದ್ದರಿಂದ ಮಾತಿನ ಲಯಕ್ಕೆ ತಕ್ಕಂತೆ
ಕೈಗಳ ಚಲನೆ ಇರಲಿ.
ನಿರಾಳವಾಗಿರಿ : ನಿಮ್ಮ ಮಾತುಗಳು ಸಹಜವಾಗಿರಲಿ, ಹಿತ ಮಿತವಾಗಿರಲಿ. ಹೆಚ್ಚು ಆವೇಶಭರಿತರಾಗಬೇಡಿ. ಮಾನಸಿಕ
ಒತ್ತಡವನ್ನು ಸಮ ಮಟ್ಟದಲ್ಲಿ ಕಾಯ್ದುಕೊಳ್ಳಿ. ಅತೀಯಾದ ಒತ್ತಡ ಪ್ರದರ್ಶಿಸಬೇಡಿ. ಇದರಿಂದ ನೀವು ಉದಾಸೀನರೆಂಬುದು
ತಿಳಿಯುತ್ತದೆ.
ಒಪ್ಪಿಗೆಗೆ ಮಾತ್ರ ತಲೆದೂಗಿ : ಸಂದರ್ಶಕರು ಏನು ಹೇಳುತ್ತಾರೆ ಎಂಬುದನ್ನು ಅರ್ಥೈಸಿಕೊಳ್ಳದೇ ಅನಾವಶ್ಯಕವಾಗಿ
ತಲೆದೂಗಬೇಡಿ. ಅನಾವಶ್ಯಕವಾಗಿ ತಲೆದೂಗುವುದು ಅವಿಧೇಯತೆ ಮತ್ತು ಅಪ್ರಾಮಾಣಿಕತೆಯ ಸಂಕೇತ.
ಪ್ರಮುಖಾಂಶಗಳನ್ನು ಅರ್ಥಮಾಡಿಕೊಂಡಾಗ ಮತ್ತು ಅವರ ಹೇಳಿಕೆಯನ್ನು ಒಪ್ಪಿಕೊಂಡಾಗ ಮಾತ್ರ ತಲೆದೂಗಿ.
ಕೈಗಳನ್ನು ಕಟ್ಟಬೇಡಿ : ಸಂದರ್ಶಕರ ಎದುರು ಕೈಕಟ್ಟಿ ಕೂರಬೇಡಿ. ಕೈಕಟ್ಟುವುದು ನಿಮ್ಮಲ್ಲಿನ ವಿಶ್ವಾರ್ಹತೆ ಮತ್ತು ಆಸಕ್ತಿಯ
ಕೊರತೆಯನ್ನು ಎತ್ತಿ ತೋರುತ್ತದೆ. ಕೈಗಳು ನಿಮ್ಮ ತೊಡೆಯ ಮೇಲಿರಲಿ ಅಥವಾ ಟೇಬಲ್ ಮೇಲಿರಲಿ. ಇದು ಸಂಭಾಷಣೆಗೆ
ಮುಕ್ತವಾಗಿ ಕೈಗಳನ್ನು ಚಲಿಸಲು ಸಹಾಯಕವಾಗುತ್ತದೆ. ಹಾಗೂ ಇತರರ ಮಾತುಗಳನ್ನು ಆಸಕ್ತಿಯಿಂದ ಕೇಳುತ್ತೀರಿ
ಎಂಬುದನ್ನು ತಿಳಿಸುತ್ತದೆ.
ಬೆರಳುಗಳನ್ನು ಹಿಸುಕಬೇಡಿ : ಸಂದರ್ಶಕರ ಎದುರು ಪದೇ ಪದೇ ಬೆರಳುಗಳನ್ನು ಹಿಸುಕಬೇಡಿ. ಇದು ನಿಮ್ಮಲ್ಲಿನ ಅಸ್ಥಿರತೆ
ಹಾಗೂ ಅಸ್ಪಷ್ಟತೆಯ ಸಂಕೇತ. ಬೆರಳುಗಳಿಂದ ಮೇಜಿನ ಮೇಲೆ ಕುಟ್ಟಬೇಡಿ, ಲಯಬದ್ದ ಚಲನೆಯನ್ನು ಮಾಡಬೇಡಿ. ಇದು
ಸಂದರ್ಶಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಒಟ್ಟಾರೆ ಬೆರಳುಗಳಿಂದ ಯಾವುದೇ ರೀತಿಯ ಶಬ್ದ ಉಂಟಾಗದಂತೆ
ಎಚ್ಚರವಹಿಸಿ.
ಅನಪೇಕ್ಷಿತ ಶಬ್ದ ಬೇಡ : ಕೆಲವರು ಮಾತನಾಡುವಾಗ ಗಂಟಲು, ನಾಲಿಗೆ, ತುಟಿ, ಮೂಗುಗಳಿಂದ ವಿಚಿತ್ರ ಶಬ್ದ
ಹೊರಡಿಸುತ್ತಾರೆ. ಇದು ನೋಡುಗರಿಗೆ ಕೇಳುಗರಿಗೆ ಅಸಹ್ಯವನ್ನುಂಟು ಮಾಡುತ್ತದೆ. ಆದ್ದರಿಂದ ಮಾತನಾಡುವಾಗ ವಿಚಿತ್ರ
ಶಬ್ದಗಳನ್ನು ಹೊರಡಿಸಬೇಡಿ. ಸ್ವಾಭಾವಿಕವಾಗಿ ಮಾತನಾಡಿ. ಪದೇ ಪದೇ ಗಲ್ಲ, ತುಟಿ, ಕೆನ್ನೆ, ಮೂಗು, ಕಿವಿಗಳನ್ನು
ಕೆರೆಯುವುದು, ಕಣ್ಣೊರೆಸಿಕೊಳ್ಳುವುದು ಮಾಡಬೇಡಿ. ಇದು ನಿಮ್ಮ ಅವಿಶ್ವಾಸವನ್ನು ವೃತ್ತಿಯಲ್ಲಿನ ನಿರಾಸಕ್ತಿಯನ್ನು
ಸೂಚಿಸುತ್ತದೆ.
ಮೇಲಿನ ಅಂಶಗಳನ್ನು ಪಾಲಿಸಿ ನಿಮ್ಮದೇ ಅದ ದೇಹಭಾಷೆ ಬೆಳೆಸಿಕೊಂಡರೆ ನೀವೊಬ್ಬ ಅತ್ಯುತ್ತಮ ಅಭ್ಯರ್ಥಿ
ಎಂಬುದನ್ನು ಸಾಬೀತುಪಡಿಸಬಹುದು ಜೊತೆಗೆ ವೃತ್ತಿಯಲ್ಲಿ ಯಶಸ್ಸು ಗಳಿಸಬಹುದು.