Tuesday 11 June 2019

ಸಾಮಾನ್ಯ ಜ್ಞಾನ

ಚೋಳರಾಜ್, ಬಳ್ಳಾರಿ.

1.    ರಾಷ್ಟ್ರೀಯ ಯಕ್ಷಗಾನ ತರಬೇತಿ ಕೇಂದ್ರ ಕರ್ನಾಟಕದಲ್ಲಿ ಎಲ್ಲಿದೆ?

2.    ಎನ್.ಟಿ.ಪಿ.ಸಿ ನ (NTPC) ವಿಸ್ತೃತ ರೂಪವೇನು?

3.    ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?

4.    ಯುರೋಪಿನ ಯಾವ ನಗರವನ್ನು ಬಿಳಿಯ ನಗರ ಎಂದು ಕರೆಯುತ್ತಾರೆ?

5.    ಗಾಂಧೀಜಿಯವರನ್ನು ಕುರಿತು ಪ್ರಥಮ ಬಾರಿಗೆ ಕನ್ನಡದಲ್ಲಿ ಗ್ರಂಥವನ್ನು ರಚಿಸಿದವರು ಯಾರು?

6.    ಅಂಡಮಾನ್ ದ್ವೀಪಗಳಲ್ಲಿರುವ ಅತಿ ಎತ್ತರವಾದ ಶಿಖರ ಯಾವುದು?

7.    ಪರಾಗ ಸ್ಪರ್ಶಕ್ಕಾಗಿ ಕೀಟಗಳನ್ನು ಆಕರ್ಷಿಸುವ ಹೂವಿನ ಭಾಗ ಯಾವುದು?

8.    ಕಿವಿ ಪಕ್ಷಿಯ ತವರೂರು ಯಾವುದು?

9.    ಅಲಹಾಬಾದ್ ಬಳಿ ಗಂಗಾನದಿಯನ್ನು ಸೇರುವ ನದಿ ಯಾವುದು?

10.    ಬಳಸಿದ ವಿದ್ಯುಚ್ಚಕ್ತಿಯನ್ನು ಅಳತೆ ಮಾಡುವ ಸಾಧನ ಯಾವುದು?

11.    ಬಾಸ್ ಜಲಸಂಧಿ ಎಲ್ಲಿದೆ?

12.    ಪ್ರಸಿದ್ಧ ಬೃಹದೀಶ್ವರ ದೇವಸ್ಥಾನ ಎಲ್ಲಿದೆ?

13.    ಎರಡನೇಯದಾಗಿ ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾದಾಗ ಇದ್ದ ಮುಖ್ಯಮಂತ್ರಿ ಯಾರು?

14.    ಕನ್ನಡದ ಮೊದಲ ಪಾಕಶಾಸ್ತ್ರ ಕಾವ್ಯ ಯಾವುದು

15.    ಭಾರತದಲ್ಲಿರುವ ರಾವಿನದಿಗಿದ್ದ ಮೊದಲ ಹೆಸರೇನು?

16.    ಹೃದಯ ಬಡಿತದ ನಕ್ಷಾ ರೂಪದ ಚಿತ್ರಣ ನೀಡಲು ಬಳಸುವ ಸಾಧನ ಯಾವುದು?

17.    ಉಪಾಯ ಮಾಡುವುದಕ್ಕೆ ಹೆಸರಾದ ಕಾಡು ಪ್ರಾಣಿ ಯಾವುದು?

18.    ಅಂತರೀಕ್ಷಾದಲ್ಲಿ ಧೀರ್ಘಾವಧಿ ಇದ್ದು ಬಂದ ಪ್ರಥಮ ಗಗನ ಯಾತ್ರಿ ಯಾರು?

19.    ಚಾವುಂಡರಾಯನು ಸಂಸ್ಕøತದಲ್ಲಿ ರಚಿಸಿದ ಗ್ರಂಥ ಯಾವುದು? 

20.    1990 ರಲ್ಲಿ ಮೈಸೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?

21.    ಜ್ಯಾನ್ ಡೆವಿಡ್ ಪ್ರತಿಷ್ಟಿತ ಪ್ರಶಸ್ತಿ ಪಡೆದ ಕನ್ನಡದ ಪ್ರಥಮ ವಿಜ್ಞಾನಿ ಯಾರು?

22.    ರೆವರೆಂಡ್ ಎಫ್ ಕಿಟೆಲ್ ಅವರು ಮೂಲತಃ ಯಾವ ದೇಶದವರು?

23.     ವಿದ್ಯುತ್ ಇಸ್ತ್ರಿ ಪೆಟ್ಟಿಗೆಯಲ್ಲಿ ಕಾದು ಬಿಸಿಯಾಗಲು ಬಳಸುವ ವಸ್ತು ಯಾವುದು?

24.    ಜಯಸಿಂಹ ಎಂ.ಎಲ್. ಯಾವ ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?

25.    ಮಹಾವೀರನ ತಾಯಿಯ ಹೆಸರೇನು?

26.    ಋಗ್ವೇದದ ಪ್ರಕಾರ ನಮ್ಮ ಪುರಾಣಗಳೆಷ್ಟು?

27.    ಮೈಸೂರಿನಲ್ಲಿ ಮೊಟ್ಟ ಮೊದಲಿಗೆ ಬಾನುಲಿ ಕೇಂದ್ರವನ್ನು ಸ್ಥಾಪಿಸಿದವರು ಯಾರು?

28.    ನಗಿಸು ಅನಿಲ ಎಂದು ಯಾವುದನ್ನು ಕರೆಯುತ್ತಾರೆ?

29.    ಅಲಕಾನಂದಾ ಮತ್ತು ಮಂದಾಕಿನಿ ನದಿಗಳು ಸಂಗಮವಾಗುವ ಸ್ಥಳ ಯಾವುದು?

30.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.








ಉತ್ತರಗಳು:- 



Tuesday 20 September 2016

PDO ತರಗತಿಗಳು

        PDO ತರಗತಿಗಳು ಪ್ರಾರಂಭ.
* ದಿನಾಂಕ: 23-09-2016 ರಿಂದ ಪ್ರಾರಂಭ. *

* ಪತ್ರಿಕೆ 1 & 2. *


* ಅನುಭವಿ ಉಪನ್ಯಾಸಕರಿಂದ ಬೋಧನೆ *
* ಪ್ರತಿವಾರ ಮಾದರಿ ಪರೀಕ್ಷೆಗಳು.*
* ಸಾಮಾನ್ಯ ಜ್ಞಾನಕ್ಕೆ Short Cut Tricks *

* ಅವದಿ: 2 ತಿಂಗಳು. *
ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ:
 09886518398. 

Thursday 31 March 2016

ಸಾಮಾನ್ಯ ಜ್ಞಾನ



ಪ್ರಶ್ನೆಗಳು:
೧.    ರೋಮನ್ನರ ಎರಡು ಮುಖಗಳ ಯಾವ ದೇವತೆಯ ಹೆಸರಿನಿಂದ ಜನವರಿ ತಿಂಗಳಿಗೆ ಹೆಸರನ್ನಿಡಲಾಗಿದೆ?

೨.    ಐ.ಎಫ್.ಆರ್.ಐ (IFRI)ನ ವಿಸ್ತೃತ ರೂಪವೇನು?

೩.    ನವಗಿರಿನಂದ ಇದು ಯಾರ ಕಾವ್ಯನಾಮಗಿದೆ?

೪.    ಭೂಮಿಗೆ ಅತಿ ಸಮೀಪದಲ್ಲಿರುವ ಸೌರವ್ಯೂಹದಾಚೆಗಿನ ನಕ್ಷತ್ರ ಯಾವುದು?

೫.    ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲಕ್ಯ ದೊರೆ ಯಾರು?

೬.    ಐಸ್ ಕ್ರೀಂ ಬೇಗ ಗಡ್ಡೆಕಟ್ಟಲು ಏನನ್ನು ಬೆರೆಸುತ್ತಾರೆ?

೭.    ಶಿಲೀಂಧ್ರಗಳ ಅಧ್ಯಯನಕ್ಕೆ ಆಂಗ್ಲ ಭಾಷೆಯಲ್ಲಿ ಏನೆಂದು ಕರೆಯುತ್ತಾರೆ?

೮.    ಕುತುಬ್ ಮಿನಾರ್ ಆವರಣದಲ್ಲಿರುವ ಅಲೈ ದರ್ವಾಜ್ ಸುಂದರ ಬಾಗಿಲನ್ನು ಕಟ್ಟಿಸಿದ ಸುಲ್ತಾನ್ ಯಾರು?

೯.    ಕಿಂಡರ್ ಗಾರ್ಟನ್ ಕಲ್ಪನೆ ನೀಡಿದವರು ಯಾರು?

೧೦.    ಹತ್ತು ಸಾವಿರ ಚಿಮಣಿಗಳ ಕಣಿವೆ ಏಂದು ಕರೆಯಲ್ಪಡುವ ಉತ್ತರ ಅಮೇರಿಕದ ಪ್ರಾಂತ್ಯ ಯಾವುದು?

೧೧.    ಹ್ಯೂಗಿನ್ಸ್ ಉಪಕರಣವನ್ನು ಟೈಟಾನ್ ಉಪಗ್ರಹಕ್ಕೆ ಕೊಂಡೊಯ್ದ ಕ್ಷಿಪಣಿ ನೌಕೆ ಯಾವುದು?

೧೨.    ಕನ್ನಡದಲ್ಲಿ ವೈದ್ಯ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಲೇಖಕಿ ಯಾರು?

೧೩.    ಮನುಷ್ಯನ ದೇಹದಲ್ಲಿರುವ ಕ್ರೋಮೋಜೋಮಗಳ ಸಂಖ್ಯೆ ಎಷ್ಷು?

೧೪.    ಈಸ್ಟ್‌ನ್ನು ಬಳಸಿ ಮೊದಲಿಗೆ ಬ್ರೇಡ್ಡನ್ನು ತಯಾರಿಸಿದ ದೇಶ ಯಾವುದು?

೧೫.    ಹೈಕೋರ್ಟಿನ ನ್ಯಾಯಾಧೀಶರರನ್ನು ನೇಮಿಸುವರು ಯಾರು?

೧೬.    ನೆಲದ ಶುಚಿತ್ವಕ್ಕೆ ಬಳಸುವ ಫೆನಾಯಿಲ್‌ನ ರಾಸಾಯನಿಕ ಹೆಸರೇನು?

೧೭.    ಮೈಸೂರು ವಿಶ್ವವಿಧ್ಯಾನಿಲಯ ಪ್ರಾಂರಭವಾದ ವರ್ಷ ಯಾವುದು?

೧೮.    ಅಕಾಂಕಾಗ್ವೆ ಶಿಖರ ಯಾವ ಖಂಡದಲ್ಲಿದೆ?

೧೯.    ನೆಪ್ಟೂನ್ ಗ್ರಹದ ಪತ್ತೆಗೆ ಕಾರಣವಾದ ನಿಯಮ ಯಾವುದು?

೨೦.    ತಮಿಳರು ಪ್ರಾರಂಭದಲ್ಲಿ ಬಳಸುತ್ತಿದ್ದ ಲಿಪಿ ಯಾವುದು?

೨೧.    ಥೋರಿಯಂ ಅಧಿಕವಾಗಿ ದೊರೆಯುವ ರಾಜ್ಯ ಯಾವುದು?

೨೨.    ಗಿರೀಶ ಕಾರ್ನಾಡರ ತುಘಲಕನ ಪಾತ್ರದಿಂದ ಖ್ಯಾತರಾಗಿದ್ದ ನಟ ಯಾರು?

೨೩.    ಮಾನವನ ಉಗುರುಗಳು ಯಾವುದರಿಂದ ರೂಪಗೊಂಡಿವೆ?

೨೪.    ಕೌರು ಬಾಹ್ಯಾಕಾಶ ಸಂಸ್ಥೆ ಎಲ್ಲಿದೆ?

೨೫.    ಬಹುದಿನದ ಭಾರತೀಯ ಸಂಪಾದಕತ್ವದ ಪತ್ರಿಕೆಯಾದ ಬಂಗಾಳಿ 
ನಿಯತಕಾಲಿಕೆ ಸಂವದ್ ಕೌಮುದಿಯನ್ನು ಪ್ರಾರಂಭಿಸಿದವರು ಯಾರು?
೨೬.    ಪ್ರಾಚ್ಯ ಸ್ಮಾರಕಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದವರು ಯಾರು?

೨೭.    ದೇವನಾಂಪ್ರಿಯ ಅಶೋಕನೆಂದು ಸೂಚಿಸುವ ಶಾಸನ ಯಾವುದು?

೨೮.    ಕನ್ನಡದಲ್ಲಿ ಗಜಾಷ್ಟಕ ಎಂಬ ಕೃತಿಯನ್ನು ರಚಿಸಿದ ಶಿವಮಾರನಿಗೆ ಇದ್ದ ಬಿರುದು ಯಾವುದು?

೨೯.    ಪ್ರಧಾನಿ ನೇತೃತ್ವದಲ್ಲಿ ಮಂತ್ರಿ ಮಂಡಲವಿರಬೇಕೆಂದು ಯಾವ ವಿಧಿ ತಿಳಿಸುತ್ತದೆ?

೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
                            




















ಉತ್ತರಗಳು
೧.    ಜಾನಸ್
೨.    ಇಂಡಿಯನ್ ಫಾರೆಸ್ಟ್ ರಿಸರ್ಚ್ ಇನ್ಸ್‌ಸ್ಟಿಟ್ಯೂಟ್
೩.    ಎಂ.ರಂಗರಾಯ
೪.    ಪ್ರಾಕ್ಸಿಮಾ ಸೆಂಟಾರಿ
೫.    ವಿಕ್ರಮಾದಿತ್ಯ
೬.    ಜಿಲೆಟಿನ್
೭.    ಮೈಕೋಲಜಿ
೮.    ಅಲ್ಲಾ – ಉದ್ – ದಿನ್ – ಖಿಲ್ಜಿ
೯.    ಫ್ರೊಬೇಲ್
೧೦.    ಆಲಾಸ್ಕ್
೧೧.    ಕ್ಯಾಸಿನಿ
೧೨.    ಡಾ||ಅನುಪಮಾ ನಿರಂಜನ
೧೩.    ೪೬
೧೪.    ಈಜಿಪ್ಟ್
೧೫.    ರಾಷ್ಟ್ರಪತಿ
೧೬.    ಕಾರ್ಬಾಲಿಕ್ ಆಮ್ಲ
೧೭.    ೧೯೧೬
೧೮.    ದಕ್ಷಿಣ ಅಮೇರಿಕಾ
೧೯.    ವಿಶ್ವವ್ಯಾಪಿ ಗುರುತ್ವ ನಿಯಮ
೨೦.    ಬ್ರಾಹ್ಮಿಲಿಪಿ
೨೧.    ಕೇರಳ
೨೨.    ಸಿ.ಆರ್.ಸಿಂಹ
೨೩.    ಕೊರೋಟಿನ್ ಎಂಬ ಮೃತ ಪ್ರೋಟಿನಗಳಿಂದ
೨೪.    ಫ್ರೆಂಚ್ ಗಯಾನಾ
೨೫.    ಸತ್ಯನಂದ ಅಗ್ನೀಹೋತ್ರಿ
೨೬.    ಕರ್ಜನ್
೨೭.    ಮಸ್ಕಿ ಶಾಸನ
೨೮.    ಸೈಗೊಟ್ಟ ಶಿವಕುಮಾರ
೨೯.    ೭೪
೩೦.    ದೇವುಡು ನರಸಿಂಹಶಾಸ್ತ್ರಿ 

Friday 29 January 2016

11 ಜನವರಿ 2016 ಪ್ರಚಲಿತ ಘಟನೆಗಳು.



11 ಜನವರಿ 2016 ಪ್ರಚಲಿತ ಘಟನೆಗಳು.


  1. ಇತ್ತೀಚಿಗೆ ನಿಧನರಾದ ಮರಿಯಾ ತೆರೆಸಾ ಡಿ.ಫಿಲಿಪ್ಪಿಸ್’ ಯಾವ ಕ್ರಿಡೆಗೆ ಸಂಭಂಧಿಸಿದ್ದಾರೆ?

  2. ರಗ್ಬಿ,
    ಪಾರ್ಮುಲ ಒನ್,
    ಟೆನ್ನಿಸ್,
    ಬ್ಯಾಸ್ಕೆಟ್ ಬಾಲ್,

  3. 2016 ರ 19 ವರ್ಷದೊಳಗಿನ ವಿಶ್ವಕಪ್ ಯಾವ ದೇಶದಲ್ಲಿ ನಡೆಯಲಿದೆ?

  4. ಭಾರತ,
    ಬಾಂಗ್ಲಾದೇಶ,
    ಇಂಗ್ಲೆಂಡ್,
    ಆಸ್ಟ್ರೇಲಿಯಾ,

  5. ಭಾರತದ ಹಾಕಿ ತಂಡದ ಈಗಿನ ನಾಯಕ ಯಾರು?

  6. ಸರ್ದಾರ್ ಸಿಂಗ್
    ಸರ್ದಾರ್ ಪಠಾಣ್
    ಸರ್ದಾರ್ ಪಟೇಲ್
    ಮುಖೇಶ್ ಪಠಾಣ್

  7. "T 20 ALL STARS LEAGUE" ಎಲ್ಲಿ ನಡೆಯಲಿದೆ?

  8. ಭಾರತ
    ಯು ಎಸ್ ಎ
    ರಷ್ಯಾ
    ಆಪ್ರಿಕಾ

  9. ಭಾರತದ ರಾಷ್ಟ್ರಿಯಾ ಕಾಂಗ್ರೆಸ್’ನ ಪ್ರಥಮ ಅದಿವೇಶನ ಎಲ್ಲಿ ನಡೆಯಿತು?

  10. ಕೋಲ್ಕತ್ತಾ
    ಬಾಂಬೆ
    ಹೈದರಾಬಾದ್
    ಲಖನೌ

  11. ಪಠಾಣ್ ಕೋಟ್ ವಾಯುನೆಲೆ ದಾಳಿಯ ಮಾಸ್ಟರಮೈಂಡ್ ಜೈಸ್ ಎ ಮೋಹಮ್ಮದ್ (GEM) ಉಗ್ರಗಾಮಿ ಸಂಘಟನೆಯ ಮುಖ್ಯಸ್ತ ಯಾರು?

  12. ಅಬ್ದುಲ್ ರೆಹಮಾನ್
    ಮೌಲನಾ ಮಸೂದ್ ಅಜ್ಹರ್
    ಅಜರ್ ಅಷ್ಟಕ್
    ಮೌಲಾನಾ ರೆಹಮಾನ ಅಜರ್

  13. ಕಾಂಗ್ರೆಸ್ ಅದ್ಯಕ್ಷ ಸೋನಿಯಾಗಾಂಧಿ & ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರು ಕುರಿತ ವಿವದಾತ್ಮಕ ಲೇಖನ ಪ್ರಕಟಿಸಿದ್ದ

  14. ಸಂಜಯ್ ನಿರುಪಮ್
    ಸಂದೇಶ್ ಪವಾರ್
    ಸಂಜಯ್ ಶ್ಯಾಮ್
    ಸುರೇಶ್ ಕಾಪಾಡಿಯಾ

  15. ಜಲ್ಲಿಕಟ್ಟು ಕ್ರೀಡೆಯು ಯಾವ ರಾಜ್ಯದಲ್ಲಿ ಪ್ರಚಲಿತದಲ್ಲಿದೆ?

  16. ಮಹಾರಾಷ್ಟ್ರ
    ತಮಿಳುನಾಡು
    ಮದ್ಯಪ್ರದೇಶ
    ದೆಹಲಿ

  17. ಗುಜರಾತ್ ನ ಫತೇಧಾರ್ ಅನಾಮತ್ ಆಂದೊಲನ ಸಮಿತಿ (PAS) ಸಂಚಾಲಕ ಯಾರು?

  18. ಅಮೀರ್ ಪಟೇಲ್
    ಹರೀಶ್ ರಾಯ್
    ಹಾರ್ಡಿಕ್ ಪಟೇಲ್
    ರಮೇಶ್ ಪಟೇಲ್

  19. ವಿಶ್ವ ಹಿಂದಿ ದಿನ ವನ್ನಾಗಿ ಯಾವ ದಿನದಂದು ಆಚರಿಸುತ್ತಾರೆ?

  20. ಜನವರಿ 10
    ಡಿಸೆಂಬರ್ 24
    ಮಾರ್ಚ್ 11
    ಸೆಪ್ಟಂಬರ್ 14

Monday 25 January 2016

10 ಜನವರಿ 2016 ಪ್ರಚಲಿತ ಘಟನೆಗಳು



10 ಜನವರಿ 2016


  1. ಪ್ರಸಿದ್ದ ಲೇಖಕಿ “ ತಸ್ಲೀಮ ಸಸ್ರೀನ್” ಯಾವ ದೇಶದ ಲೇಖಕಿ ಯಾಗಿದ್ದಾರೆ?

  2. ಬಾಂಗ್ಲಾದೇಶ
    ಪಾಕಿಸ್ತಾನ್
    ಶ್ರೀಲಂಕ
    ಅಫಗಾನಿಸ್ತಾನ್.

  3. 14 ಬಾಲ್ ಗಳಲ್ಲಿ 50 ರನ್ ಗಳಿಸಿ ವಿಶ್ವದ ಎರಡನೇ ಅತಿ ವೇಗದ ಅರ್ಧಶತಕ ಧಾಖಲಿಸಿದವರು ಯಾರು?

  4. ಎಂ.ಎಸ್. ಧೋನಿ.
    ಕ್ರಿಸ್ ಗೇಲ್
    ಕೊಲಿನ್ ಮನ್ರೋ.
    ಆರ್. ಅಶ್ವಿನ್.

  5. NSG ಯ ವಿಸ್ರೃತ ರೂಪ ಏನು?

  6. NATIONAL SECURITY GROUP.
    NATIONAL STUDENT GROUP.
    NATIONAL SECURITY GUARD
    NATIONAL SCIENCE GROUP

  7. BCCI ಆಡಳಿತ ಸುಧಾರಣೆಯ ರಚಿಸಿದ ಸಮಿತಿಯ ಹೆಸರು?

  8. ರವೀಂದ್ರನ್ ಸಮಿತಿ.
    ನಾರಾಯಣ ಸಮಿತಿ.
    R. M. ಲೋದ ಸಮಿತಿ.
    ಕೇಳ್ಕರ್ ಸಮಿತಿ.

  9. ಇತ್ತೀಚೆಗೆ ಜಮ್ಮು & ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ (Governer Rule) ಸಂವಿಧಾನದ ಯಾವ ವಿಧಿಯ ಮೂಲಕ ಜಾರಿಗೆ ಬಂದಿ

  10. ವಿಧಿ 91 (1)
    ವಿಧಿ 92 (1)
    ವಿಧಿ 93 (1)
    ವಿಧಿ 96 (1)

  11. ಇತ್ತೀಚೆಗೆ ಈ ಕೆಳಗಿನ ಯಾವ ದೇಶವು ಯುನಿಸೆಫ್ (UNICEF) ನ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾಗಿದೆ?

  12. ಮಾಲ್ಡೀವ್ಸ್.
    ಭೂತಾನ್
    ನೇಪಾಳ್
    ಪಾಕಿಸ್ತಾನ್.

  13. ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಭಾರತದ ಯಾವ ರಾಜ್ಯದಲ್ಲಿ ನಡೆಯಲಿದೆ?

  14. ಹರಿಯಾಣ
    ಪಂಜಾಬ್
    ಛತ್ತಿಸ್ ಗಡ್
    ಗುಜರಾತ್.

  15. ಈ ಕೆಳಗಿನ ಯಾವ ಉಕ್ಕು ತಯಾರಿಕ ಘಟಕಕ್ಕೆ “ಏಕಿಕೃತ ಅತ್ಯುತ್ತಮ ಪ್ರದರ್ಶನ ಉಕ್ಕು ತಯಾರಿಕಾ ಘಟಕ” ಎಂದು ಪ್ರಧಾನ ಮಂತ್ರಿ

  16. ಭಿಲಾಯ್ ಉಕ್ಕು ಘಟಕ.
    ವಿಶ್ವೇಶ್ವರಯ್ಯ ಉಕ್ಕು ಘಟಕ.
    ಟಾಟ ಉಕ್ಕು ಘಟಕ
    ಯಾವುದು ಅಲ್ಲ.

  17. ಇತ್ತೀಚೆಗೆ BHEL ಯಾವ ರಾಜ್ಯದಲ್ಲಿ 520 ಮೆಗಾವ್ಯಾಟ್ ಕಲ್ಲಿದ್ದಲು ಆಧಾರಿತ ಉಷ್ಣ ವಿಧ್ಯುತ್ ಘಟಕವನ್ನು ಸ್ಥಾಪಿಸಲು ಕೈ

  18. ರಾಜಸ್ಥಾನ
    ಹರಿಯಾಣ
    ಆಂದ್ರಪ್ರದೇಶ
    ಕರ್ನಾಟಕ

  19. ನಗರಾಭಿವೃಧ್ದಿ ಸಚಿವಾಲಯವು “ ಸ್ವಚ್ಚ ಭಾರತ್ ಮಿಷನ್” ನ ಪ್ರಗತಿಯನ್ನು ವರಧಿಮಾಡಲು ಯಾವ ಮಂಡಳಿಯನ್ನು ನೇಮಿಸಿದೆ?

  20. ಭಾರತೀಯ ಬಾರ್ ಮಂಡಳಿ.
    ಭಾರತೀಯ ಪುನರ್ವಸತಿ ಮಂಡಳಿ
    ಭಾರತದ ಗುಣಮಟ್ಟ ಮಂಡಳಿ.
    ಆರ್ಥಿಕ ಸಲಹಾ ಮಂಡಳಿ.

Sunday 24 January 2016

9 ಜನವರಿ 2016

1. ಇಸ್ರೋ ಇತ್ತೀಚೆಗೆ ಸಿಂಗಾಪುರದ ಎಷ್ಟು ಉಪಗ್ರಹಗಳನ್ನು ಉಡಾವಣೆ ಮಾಡಿತು?
           a)   5        b) 4        c) 6        d)  7
2.  ಹುರುನ್ ಇಂಡಿಯಾ ಸಂಸ್ಥೆ ಸಮೀಕ್ಷೆಯ ವರದಿ ಪ್ರಕಾರ ಭಾರತದಲ್ಲಿ ಧಾನದಲ್ಲಿ ಮೊದಲ ಸ್ಥಾನದಲ್ಲಿರುವವರು ಯಾರು?
a)  ಅಜೀಂ ಪ್ರೇಮ್ ಜೀ.     b) ನಾರಯಣ ಮೂರ್ತಿ   
c) ನಂದನ್ ನೀಲಕಣಿ        d) ಕೆ. ದಿನೇಶ್.
3. ಇತ್ತೀಚೆಗೆ ಹೈಡ್ರೋಜನ್ ಬಾಂಬ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಿ ಜಗತ್ತನ್ನೆ ತಲ್ಲಣಗೊಳಿಸಿದ ದೇಶ ಯಾವುದು?
a) ದಕ್ಷಿಣ ಕೋರಿಯಾ             b) ಇರಾನ್   
c) ಉತ್ತರ ಕೋರಿಯಾ           d) ಇರಾಕ್ 
4. ವಿಫ್ರೋ ಕಂಪನಿಯು ಫೆಭ್ರವರಿ 1 ರಿಂದ  ಜಾರಿಗೆ ಬರುವಂತೆ ಯಾರನ್ನು ಹೊಸ ಮುಖ್ಯ ನಿರ್ವಹಣಾಧಿಕಾರಿಯಾಗಿ (CEO) ನೇಮಿಸಿದೆ?
a) ಎಚ್. ಎಂ. ಶಿನಪ್ರಕಾಶ           b) ಬಿ. ಎಂ. ಭಾನುಮೂರ್ತಿ     
c)  ಎಮ್. ಬಿ. ಪರಮೇಶ್.           d) ಜಿ.ಎಚ್. ಶಾಂತಿ ಪ್ರಕಾಶ್.
5. ಭಾರತೀಯ ಸ್ವರ್ಧಾ ಆಯೋಗದ ಅಧ್ಯಕ್ಷರನ್ನಾಗಿ ಯಾರನಮ್ನು ನೇಮಿಸಲಾಗಿದೆ?
a) ಪಿ.ಕೆ ಮೆಹ್ತಾ.                           b) ಡಿ.ಕೆ. ಸಿಕ್ರಿ.    
c) ಎನ್. ಎಸ್. ಪರಮೇಶ್             d) ಯಾರು ಅಲ್ಲ.
6. ಭಾರತದ ಯಾವ ವಿಮಾನ ನಿಲ್ದಾಣವು ಸಂಪೂರ್ಣ ಸೌರವಿಧ್ಯುತ್ ನಿಂದ  ಕಾರ್ಯ ನಿರ್ವಹಿಸುತ್ತದೆ.
a) ಬೆಂಗಳೂರು ವಿಮಾನ ನಿಲ್ದಾಣ     b) ದೆಹಲಿ ವಿಮಾನ ನಿಲ್ದಾಣ    
c) ಕೊಚ್ಚಿ ವಿಮಾನ ನಿಲ್ದಾಣ.             d) ಮುಂಬೈ ವಿಮಾನ ನಿಲ್ದಾಣ.
7.   14 ಬನಾಲ್ ಗಳಲ್ಲಿ 50 ರನ್ ಗಳಿಸಿ ವಿಶ್ವದ ಎರಡನೇ ಅತೀ ವೇಗದ ಅರ್ಧ ಶತಕ ದಾಖಲಿಸಿದವರು ಯಾರು?
a) ಯುವರಾಜ್ ಸಿಂಗ್                      b)  ಕೊಲಿನ್ ಮನ್ರೋ.   
c) ಎಂ.ಎಸ್. ದೋನಿ.                       d) ಆರ್. ಅಶ್ವಿನ್. 
                                   *****************

  
  
  
   
  
  









ಉತ್ತರಗಳು: 

1- C,     2-A      3-C     4-B     5-B       6-C       7-B

Monday 11 January 2016

ಸಾಮಾನ್ಯ ಜ್ಞಾನ

                                                  ಪ್ರಶ್ನೆಗಳು

1.    ಸಳನಿಗೆ ಹುಲಿಯನ್ನು ಕೊಲ್ಲಲು ಆಜ್ಞಾಪಿಸಿದ ಜೈನ ಮುನಿಯ ಹೆಸರೇನು?

2.    ಪಿ.ಎಮ್.ಯು.ಪಿ.ಇ.ಪಿ. ನ ವಿಸ್ತøತರೂಪವೇನು?

3.    ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರಾಗಿದ್ದಾರೆ?

4.    ಬಾಹ್ಯಾಕಾಶದಿಂದ ಬರುವತರಾಂಗಾಂತರ ವಿಕಿರಣಗಳ ಹೆಸರೇನು?

5.    ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಇರುವ ಪರ್ವತ ಶ್ರೇಣಿ ಯಾವುದು?

6.    ಕತ್ತಲಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ ಯಾವುದು?

7.    ಪ್ರಪಂಚದಲ್ಲಿ ಅತ್ಯಂತ ಕಡಿಮೆ ಮರಣ ಪ್ರಮಾಣವುಳ್ಳ ರಾಷ್ಟ್ರ ಯಾವುದು?

8.    ಸಂಭವಾಮಿಯುಗೇಯುಗೇ ಇದು ಭಗವದ್ಗೀತೆಯು ಎಷ್ಟನೇ ಅಧ್ಯಾಯದಲ್ಲಿದೆ?

9.    ಕೋಗಿಲೆ ಹೊರಡಿಸುವ ಸ್ವರ ಯಾವುದು?

10.    ಕ್ವಿಟ್ ಇಂಡಿಯಾ ಚಳುವಳಿ ನಡೆದ ವರ್ಷ ಯಾವುದು?

11.    ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ ಎಲ್ಲಿದೆ?

12.    ಬಹಮನಿ ಅರಸರ ಕಾಲದಲ್ಲಿ ಖಗೋಳ ಮತ್ತು ಗಣಿತದಲ್ಲಿ 

ಪಂಡಿತರಾಗಿದ್ದವರು ಯಾರು?

13.    ಎತ್ತರದ ಜಲಪಾತಗಳಲ್ಲೊಂದಾದ ಊಟಿಗೋರ್ಡ್ ಜಲಪಾತ ಯಾವ ರಾಷ್ಟ್ರದಲ್ಲಿದೆ?

14.    ಬೆಂಗಳೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯಜ್ಞಾನ ವಿಜ್ಞಾನ ಸಹಿತಂ 

ಎಂಬುದಾಗಿದೆ ಈ ವಾಕ್ಯ ಯಾವ ಗ್ರಂಥದಲ್ಲಿ ಬರುತ್ತದೆ?

15.    ಪ್ರತಿಮಾ ಲೋಕದಲ್ಲೊಂದು ಪಯಣ ಇದು ಯಾವ ಕಲಾವಿದರ ಕುರಿತು

 ಸಾಕ್ಷ್ಯಾ ಚಿತ್ರವಾಗಿದೆ?

16.    ಬ್ರಿಟನ್ನ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಎಷ್ಟು ಕೋಣೆಗಳಿವೆ?

17.    ಸಾಂಚಿ ಮ್ಯೂಸಿಯಂ ಎಲ್ಲಿದೆ?

18.    12000ಸೆ ವರೆಗಿನ ಉಷ್ಣತೆಯನ್ನು ಅಳೆಯುವ ಸಾಧನ ಯಾವುದು?

19.    ಜೀವಕೋಶದ ಮೂಲ ಘಟಕಕ್ಕೆ ಜೀವಕೋಶ ಎಂದು ಹೆಸರಿಸಿದವರು ಯಾರು?

20.    ಸಾಹಾ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಜಿಕ್ಸ್ ಎಲ್ಲಿದೆ?

21.    ಯುರೋಪಿನ ಆಟದ ಮೈದಾನವೆಂದು ಯಾವ ರಾಷ್ಟ್ರವನ್ನು ಕರೆಯುತ್ತಾರೆ?

22.    ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ದರ್ಬಾರಿ ಕಾನಡ ರಾಗವನ್ನು

 ಸಾಂಪ್ರದಾಯಕವಾಗಿ ಯಾವ ಹೊತ್ತಿನಲ್ಲಿ ಹಾಡುತ್ತಾರೆ?

23.    ಯುರೇನಸ್ ಗ್ರಹವನ್ನು ಮೊಟ್ಟಮೊದಲು ದೂರದರ್ಶಕದಲ್ಲಿ ಗುರುತಿಸಿದವರು ಯಾರು?

24.    ಕೋಲ್ಕತ್ತಾ ನಗರವನ್ನು ಮೊದಲು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?

25.    ಒಂಟಿಕೊಂಬಿನ ಘೆಂಡಾಮೃಗಗಳು ಹೆಚ್ಚು ಸಂಖ್ಯೆಯಲ್ಲಿ ಇರುವ ರಾಷ್ಟ್ರೀಯ

 ಅಭಯಾರಣ್ಯ ಯಾವುದು?

26.    ಗಣಿತ ಶಾಸ್ತ್ರದಲ್ಲಿಯ ಸಾಧನೆಗೆ ನೀಡುವ ಅತ್ಯುತ್ತಮ ಬಹುಮಾನ 
ಯಾವುದು?

27.    ಕನಸುಗಳ ಗುಟ್ಟನ್ನು ಅರಿಯುವ ಸಿದ್ಧಾಂತವನ್ನು ನಿರೂಪಿಸಿದ 

ಮನೋವಿಜ್ಞಾನಿ ಯಾರು?

28.    ಗೀತಾ ನಾಡಕರ್ಣಿ ಇವರು ಯಾವಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?

29.    ಸ್ಪೇನ್ ರಾಷ್ಟ್ರದ ರಾಷ್ಟ್ರೀಯ ಕ್ರೀಡೆ ಯಾವುದು?

30.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.








ಉತ್ತರಗಳು
1.    ಸುದತ್ತಾಚಾರ್ಯ
2.    ಪ್ರೈಮ್ ಮಿನಿಸ್ಟರ್ ಅರ್ಬನ್ ಪಾವರ್ಟಿ ಇಂಡಿಕೇಷನ್ ಪ್ರೋಗ್ರಾಂ
3.    ಮೇಘಾಲಯ
4.    ಕಾಸ್ಮಿಕ್ ಕಿರಣ
5.    ಸಾತ್ಪುರ ಪರ್ವತ ಶ್ರೇಣಿ
6.    ರಕ್ತಾತೀತ ವಿಕಿರಣ
7.    ಟೊಂಗೋ
8.    ನಾಲ್ಕನೇ ಅಧ್ಯಾಯ
9.    ಪಂಚಮ
10.    1942
11.    ವಿಶಾಖ ಪಟ್ಟಣ
12.    ಬಕ್ಷಿ ಮತ್ತು ಷರೀಫ್
13.    ನಾರ್ವೆ
14.    ಮಹಾಭಾರತ
15.    ಕೆ.ಕೆ.ಹೆಬ್ಬಾರ್
16.    602 ಕೋಣೆಗಳು
17.    ಭೋಪಾಲ್
18.    ಪ್ಲಾಟಿನಂ ರೋಧ ಉಷ್ಣತಾ ಮಾಪಕ
19.    ರಾಬರ್ಟ್ ಹುಕ್
20.    ಕೋಲ್ಕತ್ತಾ
21.    ಸ್ವಿಡ್ಜರ್ಲ್ಯಾಂಡ್
22.    ಮಧ್ಯರಾತ್ರಿ
23.    ವಿಲಿಯಂ ಹರ್ಷಲ್
24.    ಪೋರ್ಟ್ ವಿಲಿಯಂ
25.    ಕಾಜಿರಂಗ
26.    ಫೀಲ್ಡ್ ಮೆಡಲ್
27.    ಸಿಗ್ಮಂಡ್ ಫ್ರಾಯ್ಡ್
28.    ಟೇಬಲ್ ಟೆನ್ನಿಸ್
29.    ಬುಲ್ ಫೈಟಿಂಗ್
30.    ಶ್ರೀ ಅರವಿಂದ ಘೋಷ (ಭಾರತೀಯ ತತ್ವಜ್ಞಾನಿ)

Saturday 9 January 2016

8 ಜನವರಿ 2016 ಪ್ರಚಲಿತ ಘಟನೆಗಳು

1) ಹೈಕೋರ್ಟ್ ನ್ಯಾಯಧೀಶರ ಸಂಬಳ ಹಾಗೂ ಇತರ ಭತ್ಯೆಗಳನ್ನು ಯಾವ ನಿಧಿಯಿಂದ ಭರಿಸಲಾಗತ್ತದೆ?
a)   ಭಾರತದ ಸಂಚಿತ ನಿಧಿ          b)  ರಾಜ್ಯದ ಸಂಚಿತ ನಿಧಿ  
c)   ಕಂಟಿನ್ಜೆನ್ಸಿ ಫಂಡ್                  d)  ಸಾರ್ವಜನಿಕ ಖಾತೆ.

2)  "Anything but Khamosh" ಇದು ಯಾರ ಜೀವನ ಚರಿತ್ರೆಯಾಗಿದೆ?
a)  ಶತೃಘ್ನ ಸಿನ್ಹಾ.                b)  ಯಶವಂತ್ ಸಿನ್ಹಾ   
c)  ಕೀರ್ತಿ ಆಜಾದ್              d)  L.K ಅಡ್ವಾನಿ.

3) ಭಾರತ & ಪ್ರಾನ್ಸ್ ನಡುವೆ ರಾಜಸ್ಥಾನದಲ್ಲಿ 8 ಜನವರಿ 2016 ರಂದು ಪ್ರಾರಂಭವಾದ ಭಯೋತ್ಪಾದನ-ದಂಗೆಯ ಸಮರಭ್ಯಾಸ ಹೆಸರೇನು?
a)  ಹ್ಯಾಂಡ್-ಇನ್-ಹ್ಯಾಂಡ್ 2016.
b)  ಮಿಶ್ರಾ ಶಕ್ತಿ - 2016.    
c)   ಶಕ್ತಿ - 2016 
d)  ಗ್ರೀನ್ ಹಂಟ್.

4) "ನೀತಿ ಆಯೋಗದ" ಮುಖ್ಯ ಕಾರ್ಯನಿರ್ವಹಣಾದಿಕಾರಿಯಾಗಿ (CEO) ಯಾರು ನೇಮಕವಾದರು.
a)  ಸಿಂಧುಶ್ರೀ  ಖುಲ್ಲರ್                 b) ಅಶೋಕ್ ಮಿಶ್ರ.  
c)  ಅಮಿತಾಭ್  ಕಾಂತ್                d)  ಗುರ್ಬಿರ್ ಗ್ರವಾಲ್.

5) "TFA" ನ ವಿಸ್ತ್ರತ ರೂಪ ಏನು?
a)  Trade Facilitation Agreement      
b)  Trade Formation  Agreement  
c)   Trading  Formation Agreement
d)  Trading  Facilitation Agreement.


6) ಇತ್ತೀಚೆಗೆ " ಪಂಜಾಬ್ ನ ಪಠಾಣ್ ಕೋಟ್" ವಾಯುನೆಲೆಯ ಮೇಲಿನ ದಾಳಿಯನ್ನು ಚದುರಿಸಲು ನಡೆಸಿದ ಕಾರ್ಯಚರಣೆಯ ಹೆಸರೇನು?
a)  ಆಪರೇಷನ್ ವಿಜಯ್        b)  ಆಪರೇಷನ್ ಭಾಗ್
c)  ಆಪರೇಷನ್ ಜಾಗ್           d)  ಆಪರೇಷನ್ ಧಾಂಗ್.


7)  ಈ ಕೆಳಗಿನ ಯಾವ ಯೋಜನೆಯು SC, ST, & ಮಹಿಳೆಯರ ಉದ್ಯಮಶೀಲತೆಯನ್ನು ಹೆಚ್ಚಿಸಲು 2016 ಜನವರಿ 6 ರಂದು ಕೇಂದ್ರ ಸಚಿವ ಸಂಪುಟವು ಅನುಮೋದಿಸಿತು.
a)  Make in India          b)  Stand up India. 
c)  Digital India            d)   Invent in India.


8)  ಪಂಜಾಬ್ ಪಠಾಣ್ ಕೋಟ್  ಈ ಕೆಳಗಿನ ಯಾವ ರಾಜ್ಯಗಳು " ಸಭೆ ಸೇರವ ಕೇಂದ್ರ ಬಿಂದು"(Meeting Point) ಆಗಿದೆ.
1. ಜಮ್ಮು & ಕಾಶ್ಮೀರ್.
2. ಪಂಜಾಬ್.
3. ಹರಿಯಾಣ.
4. ಹಿಮಾಚಲ್ ಪ್ರದೇಶ.
5. ಉತ್ತರ ಖಂಡ್.
a)  1, 2, 5.              b)   1, 2, 4.   
c)  2, 3, 4.              d)   2, 3, 5.

9) ಈ ಕೆಳಗಿನ ಯಾವ ಹೇಳಿಕೆಯು ಕೇಂದ್ರಿಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ಬಗ್ಗೆ ಸರಿಯಾಗಿದೆ.
1. ಇದು ಶಾಸನಬದ್ದ ಸಂಸ್ಥೆಯಾಗಿದ್ದು, ಮಾಹಿತಿ & ಪ್ರಸಾರ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
2. ಇದರ ಕೇಂದ್ರ ಕಛೇರಿ ನವದೆಹಲಿ ಯಲ್ಲಿದೆ.
a)   1 ಮಾತ್ರ ಸರಿ.                   b)  2 ಮಾತ್ರ ಸರಿ
c)   1 & 2 ಸರಿಯಾಗಿದೆ           d) ಯಾವುದು ಅಲ್ಲ.

10) ರಸ್ತೆ ಸಾರಿಗೆ & ಹೆದ್ದಾರಿ ಸಚಿವಾಲಯವು 2020 ರ ವೇಳೆಗೆ ಯಾವ ರೀತಿಯ "ಹೊಗೆ ಹೊರ ಸೂಸುವಿಕೆಯ" ನಿಯಮಗಳನ್ನು ಅಳವಡಿಸಿಕೊಳ್ಳಲು ನಿರ್ಧಾರ ಮಾಡಿದೆ?
        a)  BSIV                b)  BSV 
        c)  BSVI                d) BSVII
                                                    *********








ಉತ್ತರಗಳು:
1-B,  2-A,  3-C,  4-C,  5-A,  6-D,  7-B,  8-B, 9-C, 10-B.


ಈ ಪ್ರಶ್ನೇಗಳು ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ನಿಮ್ಮ ಪ್ರೀತಿ ಪಾತ್ರರ ಜೊತೆ ಹಂಚಿಕೊಳ್ಳಲು Share ಮಾಡಿ.



ನಿಮ್ಮ ಸಲಹೆಗಳಿಗೆ ಮುಕ್ತ ಸ್ವಾಗತ.


7 ಜನವರಿ 2016

1)  "ಆರ್ಥಿಕ ಗುಪ್ತಚರ ಮಂಡಳಿ" (Economic Intelligence Council) ಯ  ಅಧ್ಯಕ್ಷರು ಯಾರಾಗಿರುತ್ತಾರೆ?
a)  ಹಣಕಾಸು ಮಂತ್ರಿ          b)  ಪ್ರಧಾನಮಂತ್ರಿ
c)  RBI ಗವರ್ನರ್             d) ಹಣಕಾಸು ಕಾರ್ಯದರ್ಶಿ

2)  ಸಿರಿಲ್ ವರ್ಮಾ ಈ ಕೆಳಗಿನ ಯಾವ ಕ್ರೀಡೆಗೆ ಸಂಬಂದಿಸಿದೆ?
a)  ಕ್ರಿಕೆಟ್                  b) ಬ್ಯಾಸ್ಕೆಟ್ ಬಾಲ್
c)   ಪುಟ್ಬಾಲ್             d)  ಬ್ಯಾಡ್ಮಿಂಟನ್.

3) "The Country of First Boy" ಕೃತಿಯ ಲೇಖಕರು ಯಾರು?
a)  ರವಿ ಕಂಬೂರ್          b)   ಅಮರ್ತ್ಯಸೇನ್
c)  ಕೌಶಿಕ್ ಬಸು            d)  ವಿಕ್ರಮ್ ಸೇಠ್.

4)  2017-2018 ರಲ್ಲಿ ನಡೆಯುವ 105 ನೇ "ಭಾರತೀಯ ವಿಜ್ಞಾನ ಸಮ್ಮೇಳನ" ದ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?
a)   ಅಶೋಕ್ ಕುಮಾರ್ ಸಕ್ಸೆನಾ      b) ಅಚ್ಯುತಾ ಸುಮಂತಾ   
c)   ನಿತ್ಯಾ ಫ್ರೈಜಾ                           d)  ವಿನಾಯಕ್ ಕುಮಾರ್.

5) ವಿಶ್ವವಿಖ್ಯಾತ "ಆಕ್ಸ್ ಫರ್ಡ್ ಯುನಿವರ್ಸಿಟಿ" ಯ ಮೊದಲ ಮಹಿಳಾ ಉಪಕುಲಪತಿ(VC)ಯಾಗಿ ನೇಮಕಗೊಂಡವರು....
a) ಪಿನ್ನಿ ಜೇಮ್ಸ್                     b) ಲೂಯಿ ರಿಚರ್ಡ್ ಸನ್  
c)  ಕ್ಯಾಥರಿನ್ ಸ್ಟೀಲ್ಹರ್           d) ಲಿಂಡಾ ಗ್ರಾಟನ್.

6) ಈ ಕೆಳಗಿನ ಯಾವ ರಾಜ್ಯಗಳು " ಸ್ಥಳೀಯ ಪಂಚಾಯತ್ ಚುನಾವಣೆ" ಯಲ್ಲಿ ಸ್ವರ್ಧಿಸುವ  ಅಭ್ಯರ್ಥಿಗಳಿಗೆ ಕನಿಷ್ಟ ಶೈಕ್ಷಣಿಕ ಅರ್ಹತೆಯನ್ನು ನಿಗಧಿಪಡಿಸಿವೆ ?
a)   ರಾಜಸ್ಥಾನ  &  ಬಿಹಾರ   
b)   ಬಿಹಾರ  & ಹರ್ಯಾಣ
c)    ರಾಜಸ್ಥಾನ  & ಹರ್ಯಾಣ
d)  ಬಿಹಾರ್ & ಗುಜರಾತ್.

7)ಇತ್ತೀಚೆಗೆ ನಿಧನರಾದ " ಮುಪ್ತಿ ಮಹಮ್ಮದ್ ಸೈಯದ್"  ಜಮ್ಮು & ಕಾಶ್ಮೀರದಲ್ಲಿ ಯಾವ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದರು?
a)  J&K People Democratic Party, 1964.
b)  J&K National Panthers Party, 1982.
c)  J&K People Democratic Party, 1999.
d)  J&K National Conference, 1939.

8) ಯಾವ ದೇಶವು 6, ಜನವರಿ 2016 ರಂದು ತನ್ನ ಮೊದಲ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದೆ?
a)   ಉತ್ತರ ಕೊರಿಯಾ.       b) ಇಸ್ರೇಲ್
c)   ಚೀನಾ                        d) ರಷ್ಯಾ.

9) ಇಸ್ರೋ ಸಂಸ್ಥೆಯು ಈ ಕೆಳಗಿನ ಯಾವ ಸ್ಥಳದಲ್ಲಿ " ಬಾಹ್ಯಕಾಶ ಪಾರ್ಕ್" ದೇಶದ ಮೋದಲ ಸ್ಥಾಪಿಸಲು ನಿರ್ಧರಿಸಿದೆ?
a)  ಹೈದ್ರಾಬಾದ್         b)  ಚೆನೈ   
c)  ಬೆಂಗಳೂರು          d)  ಮುಧುರೈ.

10) ಸರಿಯಾದ ಹೇಳಿಕೆಯನ್ನು ಗುರ್ತಿಸಿ.
      1. " ಅಕಾಂಗುವ ಪರ್ವತವು " ಪಶ್ಚಿಮ ಗೋಳಾರ್ಧ ಹಾಗೂ ದಕ್ಷಿಣ   ಗೋಳಾರ್ದ ಅತಿ ಎತ್ತರದ ಪರ್ವತವಾಗಿದೆ.
      2.  " ಅಕಾಂಗುವ ಪರ್ವತವು" ಚಿಲಿ ದೇಶದಲ್ಲಿದೆ.
a)  1 ಮಾತ್ರ ಸರಿ.       b) 2 ಮಾತ್ರ ಸರಿ
c)  1 & 2 ಸರಿ.           d)  ಯಾವುದು ಅಲ್ಲ.
                                                   **********










ಉತ್ತರಗಳು:
1-A,   2-D,   3-B,   4-B,   5-B,   6-C,    7-C,   8-A,   9-C,  10-A.

ಈ ಪ್ರಶ್ನೇಗಳು ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ನಿಮ್ಮ ಪ್ರೀತಿ ಪಾತ್ರರ ಜೊತೆ ಹಂಚಿಕೊಳ್ಳಿ.



ನಿಮ್ಮ ಸಲಹೆಗಳಿಗೆ ಮುಕ್ತ ಸ್ವಾಗತ.


6 ಜನವರಿ 2016

1) ಇತ್ತೀಚೆಗೆ "ಭಾರತದ ಗೃಹ ಸಚಿವರಾದ ರಾಜ್ ನಾಥ್ ಸಿಂಗ್" ರವರು CAPF ನಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿಯನ್ನು ಅನುಮೋದಿಸಿದರು. ಹಾಗದರೆ CAPF ನ ವಿಸ್ತ್ರತ ರೂಪ ಏನು ?
a)  Central Army Police force 
b)  Central Armed Polic Forces  
c)  Central Aimed Police force
d)   ಯಾವುದು ಅಲ್ಲ.

2) ಇತ್ತೀಚೆಗೆ "ವಿಶ್ವದಾಖಲೆ" ಮಾಡಿದ "ಪ್ರಣವ್ ಧನವಾಡೆ " ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
   a)  ಪುಟ್ಬಾಲ್     b)ಹಾಕಿ      c)   ಕ್ರಿಕೆಟ್       d)  ಕಬಡ್ಡಿ.

3) "ವಿಶ್ವ ಜೈವಿಕ ಇಂಧನ" ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
a)  ಆಗಷ್ಟ್ 7,           b) ಆಗಷ್ಟ್  10.  
c)  ಆಗಷ್ಟ್ 12.         d)  ಆಗಷ್ಟ್  15.

4) " ಕಾಕತೀಯ ಉಷ್ಣ ವಿಧ್ಯುತ್ ಸ್ಥಾವರ" ಇರುವ ರಾಜ್ಯ......
a)  ಆಂದ್ರ ಪ್ರದೇಶ.      b)  ತೆಲಂಗಾಣ   
c)   ಕರ್ನಾಟಕ             d)   ತಮಿಳುನಾಡು.

5) " GO SET A WATCHMAN "   ಈ ಕಾದಂಬರಿಯ ಲೇಖಕ ಯಾರು?
a)   ಸಿಂಧಿಯಾ ಲಾರ್ಡ್        b)  ಬಿಲ್ ಕ್ಲೇಗ್ 
c)   ಮಾರ್ಲನ್  ಜೇಮ್ಸ್       d)  ಹಾರ್ಪರ್ ಲೀ.

6)  " ಅಭೇಧ್ಯ ಕಾರಂಜಿ' (Fountain of Oneness) ಈ ಕೆಳಗಿನ ಯಾವ ನಗರದಲ್ಲಿದೆ?
a)  ಅಜ್ಮೀರ್.     b)  ದೆಹಲಿ
c)  ಆಗ್ರಾ         d) ಖುಜುರಾಹೋ.

7) 27 ವರ್ಷಗಳ ನಂತರ  ಭಾರತವು ಯಾವ ದೇಶದೊಂದಿಗೆ ಪುನಃ ಬಸ್ ಸಂಚಾರವನ್ನು ಪುನಾರಾರಂಬಿಸಿದೆ?
a)   ಬಾಂಗ್ಲದೇಶ          b)   ಪಾಕಿಸ್ತಾನ    
c)   ಭೂತಾನ್             d)    ನೇಪಾಳ.

8)   2015 ಡಿಸೆಂಬರ್ 30 ರಂದು IUPAC ಯು ಆವರ್ತಕೋಷ್ಠಕದಲ್ಲಿ ನಾಲ್ಕು ಹೊಸ ದಾತುಗಳನ್ನು ಸೇರಿಸಲಾಗಿದೆ. ಈ ಕೇಳಗಿನ ಯಾವ ಧಾತುವು ಹೊಸದಾಗಿ ಸೇರ್ಪಡೆಯಾಗಿಲ್ಲದ ಧಾತುವಾಗಿದೆ?
a)  ಧಾತು  116         b) ಧಾತು  115 
c)  ಧಾತು 117          d) ಧಾತು   118.











ಉತ್ತರಗಳು:
1-B,  2-C,  3-B,  4-B,  5-D,  6-B,  7-D,  8-A.
                          
ಈ ಪ್ರಶ್ನೇಗಳು ನಿಮಗೆ ಉಪಯುಕ್ತ ಅನಿಸಿದ್ದಲ್ಲಿ ನಿಮ್ಮ ಪ್ರೀತಿ ಪಾತ್ರರ ಜೊತೆ ಹಂಚಿಕೊಳ್ಳಿ.



ಸಲಹೆಗಳಿಗೆ ಮುಕ್ತ ಸ್ವಾಗತ.

Thursday 7 January 2016

5 ಜನವರಿ 2016

1. ಇತ್ತೀಚೆಗೆ " ಆವರ್ತ ಕೋಷ್ಟಕ " ದಲ್ಲಿ ಎಷ್ಟು ಧಾತುಗಳನ್ನು ಸೇರಿಸಲಾಗಿದೆ?
          a)  2   b)   3    c)     4   d)    5


2. ಕೇವಲ 323 ಎಸೆತಗಳಲ್ಲಿ  1009 ರನ್ ಬಾರಿಸಿದ ಮುಂಬೈನ 15 ವರ್ಷದ ಬಾಲಕನ ಹೆಸರು....
a)  ರಜತ್ ಭಾಟಿಯ          b)  ಪೃಥ್ವಿ ಸಹ  
c)   ಪ್ರಣವ್ ಧನವಾಡೆ.     d)  ರಾಹುಲ್.

3.  ಭಾರತದ ಸುಪ್ರಿಂಕೋರ್ಟ್ ನ 38 ನೇ ನ್ಯಾಯಧೀಶರಾಗಿದ್ದ ಯಾರು ಜನವರಿ 4 ರಂದು ನಿಧನರಾದರು.
a)  ಗಜೇಂದ್ರಗಡ್ಕರ್             b)   ಎಸ್.ಎಂ.  ಸಿಕ್ರಿ.   
c)  ಎಸ್. ರಂಜನ್ ದಾಸ್.     d)  ಎಸ್. ಎಚ್. ಕಪಾಡಿಯಾ.

4. ISRO ಸಂಸ್ಥೆಯು PSLV-SSo ಉಪಗ್ರಹದೊಂದಿಗೆ ಎಷ್ಟು ಸೂಕ್ಷ್ಮ ುಪಗ್ರಹಗಳನ್ನು ಕಳುಹಿಸಲು ನಿರ್ಧರಿಸಿದೆ.
      a)  8    b)   7    c)     6     d)    9.

5.   ______ ಸಮಿತಿಯು IPL ಹಗರಣದ ಬಗ್ಗೆ ಜನವರಿ 2016 ರಲ್ಲಿ ವರಧಿ ಸಲ್ಲಿಸಿತು.
a)  ನ್ಯಾ. ಎ. ಪಿ. ಷಾ.       b)     ನ್ಯಾ.  ಆರ್.ಎಮ್. ಲೋಧ
c)   ನ್ಯಾ. ಎಮ್. ಬಿ. ಷಾ.       d)  ನ್ಯಾ. ಠಾಕೂರ್ ಸಿಂಗ್.

6.   ಇತ್ತೀಚೆಗೆ ಯಾವ ಬ್ಯಾಂಕ್ ತನ್ನ ನಿಯಮ & ನಿಭಂದನೆಗಳನ್ನು ಉಲ್ಲಂಘಿಸಿದ್ದಾಕ್ಕಾಗಿ RBI ಬ್ಯಾಂಕ್ ಒಂದು ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ?
a)  HDFC   BANK        b)   STATE BANK OF MYSORE  
c)  AXIS BANK           d)    STATE BANK OF TRAVANCORE.

7.  1)  HAL ನ ಕೇಂದ್ರ ಕಛೇರಿ ಬೆಂಗಳೂರಿನಲ್ಲಿದೆ.
     2)  HAL  ಯು ತನ್ನ ಹೆಲಿಕ್ಯಾಪ್ಟರ್ ತಯಾರಿಕ ಘಟಕವನ್ನು ತುಮಕೂರಿನಲ್ಲಿ ಪ್ರಾರಂಬಿಸಿದೆ.
     3)   HAL ನ ಪ್ರಸ್ತುತ ನಿರ್ದೇಶಕರು   Mr. T. ಸುವರ್ಣರಾಜು ಆಗಿದ್ದಾರೆ.

a)  2 & 3 ಮಾತ್ರ ಸರಿ.
b)  1  & 3  ಮಾತ್ರ ಸರಿ.
c)   1,  2,  & 3  ಸರಿ. 
d)  1  &  2 ಮಾತ್ರ ಸರಿ. 
                                        ************













ಉತ್ತರಗಳು:

1-C,  2-C,  3-D,  4-A,  5-B,  6-C, 7-C.

Wednesday 6 January 2016

KPSC ತಾ೦ತ್ರಿಕೇತರ ಹುದ್ದೆಗೆ ಇ೦ಗ್ಲಿಷ್, ಕ೦ಪ್ಯೂಟರ್ ಕಡ್ಡಾಯ

ಕನಾ೯ಟಕ ಲೋಕಸೇವಾ ಆಯೋಗ ನಡೆಸುವ ತಾ೦ತ್ರಿಕೇತರ ಸಿ ಗು೦ಪಿನ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಇ೦ಗ್ಲಿಷ್ ಹಾಗೂ ಕ೦ಪ್ಯೂಟರ್ ಜ್ಞಾನ ಕಡ್ಡಾಯಗೊಳಿಸಿದೆ. 

ಕ೦ಪ್ಯೂಟರ್ ಶಿಕ್ಷಣದ ಬಗ್ಗೆ ಅರಿವಿಲ್ಲದ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರು ಈ ಕ್ರಮದಿ೦ದ ಸಕಾ೯ರಿ ಉದ್ಯೋಗದಿ೦ದ ವ೦ಚಿತರಾಗುವ ಆತ೦ಕ ಎದುರಾಗಿದೆ.

ಸಕಾ೯ರದ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿರುವ ಎ, ಬಿ, ಸಿ ಹುದ್ದೆಗಳ ನೇರ ನೇಮಕಾತಿಗೆ ಸ೦ಬ೦ಧಿಸಿ ದ೦ತೆ ಕನಾ೯ಟಕ ಸಕಾ೯ರಿ ಸೇವಾ ನಿಯಮ (ಸ್ಪಧಾ೯ತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) ಜಾರಿಗೊಳಿಸಿ 2015ರ ಡಿ.31ರ೦ದು ಸಕಾ೯ರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. 

ಸಿ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಸಕಾ೯ರ ಗ್ರಾಮೀಣ ಪ್ರದೇಶ ಅಭ್ಯಥಿ೯ಗಳನ್ನು ಕತ್ತಲೆಗೆ ದೂಡಿದೆ. ಈ ಹುದ್ದೆಗಳ ನೇಮಕಾತಿಗೆ ಸ೦ಬ೦ಧಿಸಿದ೦ತೆ 200 ಅ೦ಕಗಳಿಗೆ 2 ವಿಷಯಗಳ ಪರೀಕ್ಷೆ ನಿಗದಿ ಮಾಡಿದೆ.

ಮೊದಲ ಪತ್ರಿಕೆಯಲ್ಲಿ 100 ಅ೦ಕಗಳಿಗೆ ಸಾಮಾನ್ಯ ಜ್ಞಾನ, 2ನೇ ಪತ್ರಿಕೆಯಲ್ಲಿ 35 ಅ೦ಕಗಳಿಗೆ ಸಾಮಾನ್ಯ ಕನ್ನಡ, 35 ಅ೦ಕಗಳಿಗೆ ಸಾಮಾನ್ಯ ಇ೦ಗ್ಲಿಷ್, 30 ಅ೦ಕಗಳಿಗೆ ಕ೦ಪ್ಯೂಟರ್ ಜ್ಞಾನದ ಪ್ರಶ್ನೆಗಳಿರಲಿವೆ. ಇ೦ಗ್ಲಿಷ್, ಕ೦ಪ್ಯೂಟರ್ ಜ್ಞಾನ ಕಡ್ಡಾಯ ಎ೦ಬುದನ್ನು ಪರೋಕ್ಷವಾಗಿ ಹೇರಲಾಗಿದೆ. ಇದರಿ೦ದ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಹಿನ್ನಡೆಯಾಗಲಿದೆ. 

ಇದರ ಜತೆಗೆ ತಪ್ಪು ಉತ್ತರಗಳಿಗೆ ಋಣಾತ್ಮಕ ಮೌಲ್ಯಮಾಪನ ಮಾಡಿ ಪ್ರತಿ ತಪ್ಪಿಗೆ 0.25 ಅ೦ಕವನ್ನು ಅಭ್ಯಥಿ೯ ಪಡೆದ ಅ೦ಕಗಳಿ೦ದ ದ೦ಡನೆಯಾಗಿ ವಿಧಿಸುವ ನಿಯಮ ರೂಪಿಸಲಾಗಿದೆ. ಈ ಋಣಾತ್ಮಕ ಮೌಲ್ಯಮಾಪನ ಗ್ರಾಮೀಣ ಅಭ್ಯಥಿ೯ಗಳಿಗೆ ಮಾರಕವಾಗಿದೆ. 

ಯುಪಿಎಸ್ಸಿಯಲ್ಲಿ ಇ೦ಗ್ಲಿಷ್ ಕಡ್ಡಾಯಗೊಳಿಸಿದ್ದಕ್ಕೆ ಉತ್ತರ ಭಾರತದ ಅಭ್ಯಥಿ೯ಗಳು ಖ೦ಡಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಇ೦ಗ್ಲಿಷ್ ಕಡ್ಡಾಯ ಕೈಬಿಡಲಾಗಿತ್ತು. ಹೀಗಾಗಿ ಹಿ೦ದಿ ಭಾಷಿಕ ರಾಜ್ಯಗಳ ಅಭ್ಯಥಿ೯ಗಳು ಐಎಎಸ್, ಐಪಿಎಸ್ ಪರೀಕ್ಷೆಯಲ್ಲಿ ಹೆಚ್ಚಿನ ಸ೦ಖ್ಯೆಯಲ್ಲಿ ಯಶಸ್ಸು ಗಳಿಸುತ್ತಿದ್ದಾರೆ. 

ಇದನ್ನು ರಾಜ್ಯ ಸಕಾ೯ರ ನಿದಶ೯ನವಾಗಿ ತೆಗೆದುಕೊ೦ಡು ಸಾವ೯ಜನಿಕ ಮತ್ತು ಸಕಾ೯ರದ ಆಡಳಿತಾತ್ಮಕ ಹಿತದೃಷ್ಟಿಯಿ೦ದ ನೂತನ ತಿದ್ದುಪಡಿ ನಿಯಮಾವಳಿ ಹಿ೦ಪಡೆದು, ಇ೦ಗ್ಲಿಷ್, ಕ೦ಪ್ಯೂಟರ್ ಜ್ಞಾನವಿಲ್ಲದ ಗ್ರಾಮೀಣ ಅಭ್ಯಥಿ೯ಗಳ ಬೆ೦ಬಲಕ್ಕೆ ನಿಲ್ಲಬೇಕೆ೦ದು ಕನ್ನಡ ಪರ ಸ೦ಘಟನೆಗಳು ಆಗ್ರಹಿಸಿವೆ.


                                                                 ***************

Tuesday 5 January 2016

4 ಜನವರಿ 2016

1)  " ವಿಶ್ವ ಬ್ರೈಲ್ ಲಿಪಿ" ಯ ದಿನ ಯಾವ ದಿನಾಂಕದಂದು ಆಚರಿಸಲಾಗುತ್ತದೆ.

a)  3ನೇ ಜನವರಿ        b)  4ನೇ ಜನವರಿ   
c)  5ನೇ ಜನವರಿ       d)  6ನೇ ಜನವರಿ

2)  ಸೌತ್ ಏಷಿಯನ್ ಪುಟ್ಬಾಲ್ ಪೆಡೆರೆಷನ್ (SAFF) 2016 ರ ಟ್ರೋಫಿ ಗೆದ್ದ ರಾಷ್ರ್ಟ ಯಾವುದು ?

a) ನೇಪಾಳ                 b)  ಅಫಘಾನಿಸ್ತಾನ್   
c)  ಬಾಂಗ್ಲ ದೇಶ          d) ಇಂಡಿಯಾ

3)   ಯಾವ " ಕಾನೂನು ಸುವ್ಯವಸ್ಥೆ ಸಂಸ್ಥೆಯು " 2 ಜನವರಿ 2016 ರಂದು ದೇಶದ ದೊಡ್ಡ ನಗದು ದರೋಡೆ ಪ್ರಕರಣ ಪರಿಹರಿಸಿ " ಲಿಮ್ಕಾ ಬುಕ್ ಆಫ್ ರೆಕಾರ್ಡ್ "  ದಾಖಲಿಸಲ್ಪಟ್ಟಿತು.

a)   CRPF    b) CBI     c) ದೆಹಲಿ ಪೋಲಿಸ್    d) ಮಹಾರಾಷ್ರ್ಟ ಪೋಲಿಸ್.

4)    (1)   ರಾಷ್ರ್ಟೀಯ ಭದ್ರತಾ  ಗಾರ್ಡ್ (NSG)ಯು ಗೃಹ ಸಚಿವಾಲಯದಲ್ಲಿನ  ವಿಶೇಷ ಪಡೆಯಾಗಿದೆ.
       (2)    NSG, RAF, & COBRA ಪಡೆಗಳು CRPF ನ ಅಡಿಯಲ್ಲಿ  ಕಾರ್ಯನಿರ್ವಹಿಸುತ್ತವೆ.

a) 1 ಮಾತ್ರ ಸರಿ. 
b) 2 ಮಾತ್ರ  ಸರಿ.   
c) 1 & 2 ಸರಿ. 
d) ಯಾವುದು ಅಲ್ಲ.

5)  ಇತ್ತೀಚೆಗೆ ಸುದ್ದಿಯಲ್ಲಿರುವ ಪಠಾಣ್ ಕೋಟ್ ಸ್ಥಳವು ಯಾವ ರಾಜ್ಯದಲ್ಲಿದೆ.

a)  ಪಂಜಾಬ್         b)  ಹರಿಯಾಣ     
c)  ದೆಹಲಿ             d) ಹಿಮಾಚಲ್ ಪ್ರದೇಶ್.









ಉತ್ತರಗಳು:
1-B,   2-D,   3-C,   4-A,  5-A.  

3 ಜನವರಿ 2016

1)  "ರಿಯಾಲ್ " ಯಾವ ದೇಶದ ಕರೆನ್ಸಿಯಾಗಿದೆ ?

a) ತೈವಾನ್   b)  ಸೌದಿ ಅರೇಬಿಯಾ  
c)  ಓಮನ್     d) ಈಜಿಪ್ಟ್.

2)  ಈ ಕೆಳಗಿನ ಯಾವ ಸಮೂಹವು " ಈಥೆನಾಲ್ ಪ್ಲಾಂಟ್"  ಸ್ಥಾಪಿಸಲು 500 ಕೋಟಿ ಬಂಡವಾಳ ಹೂಡಲಿದೆ.

a) ಟಾಟ ಸಮೂಹ           b)  ಅಧಾನಿ ಸಮೂಹ  
c)  ಓಯಸಿಸ್ ಸಮೂಹ    d) ರಿಲಯನ್ಸ್ ಸಮೂಹ.

3)   " ಮೌಂಟ್ ಅಕಾಂಗುವ " ಪರ್ವತ ಇರುವ ದೇಶ.

a)    ಚಿಲಿ               b)  ಅರ್ಜೈಂಟೈನಾ  
c)   ಬ್ರೇಜಿಲ್          d)  ಮೆಕ್ಸಿಕೋ.

4)  " ಇ-ಮೋಟರ್ ವಿಮಾ ಪಾಲಿಸಿಗಳು " ಸ್ವೀಕರಿಸಲು ಪ್ರಾರಂಭಿಸಿದ ಭಾರತದ ಮೊದಲ ರಾಜ್ಯ.

a)  ಪಶ್ಚಿಮ ಬಂಗಾಳ.       b)  ರಾಜಸ್ತಾನ   
c)  ತೆಲಂಗಾಣ                d) ಕರ್ನಾಟಕ.

5) "ಸೈಯದ್ ಮುಸ್ತಕ್ ಅಲಿ ಟ್ರೋಫಿ " ಯಾವ ಕ್ರೀಡೆಗೆ  ಸಂಬಂಧಿಸಿದೆ.

a)  ಹಾಕಿ                    b)   ಕ್ರಿಕೆಟ್     
c)  ಬಾಡ್ಮಿಂಟನ್         d)   ಟೆನ್ನಿಸ್.   













ಉತ್ತರಗಳು:

1-B,  2-C,  3-B,  4-C,  5-B.


2 ಜನವರಿ 2016

1 )  BHEL (Bharat Heavy Electrical Ltd)  ಯ MD ಆಗಿ ನೇಮಕಗೊಂಡವರು______

a)   ವಿನಾಯಕ್  ಬನ್ಸಾಲ್.    b)   ವಿಜಯ್ ಕೇಳ್ಕರ್  
c)   ಆತುಲ್ ಸಾಬ್ತಿ               d)  ಸಂತೋಷ್ ಕುಮಾರ್.

2.  ಕೆಳಗಿನ ಯಾವ ಸ್ಥಳದಲ್ಲಿ 2016 ಜನವರಿಯಲ್ಲಿ " ಅರ್ದಕುಂಭಮೇಳ" ಪ್ರಾ ರಂಭವಾಯಿತು.

a)   ಹರಿದ್ವಾರ     b)  ಉಜ್ಜೈನ್     c) ನಾಸಿಕ್     d)  ಅಲಹಾಬಾದ್.

3.   ಇತ್ತೀಚೆಗೆ ಯಾವ ನಗರದಲ್ಲಿ " ಭಾರತೀಯ ವಿಜ್ಞಾನ ಸಮಾವೇಶ" ನಡೆಯಿತು.

a) ವಿಶಾಖ ಪಟ್ಟಣ    b)   ಅಲಹಾಬಾದ್.    
c)  ಮೈಸೂರು        d)  ಬೆಂಗಳೂರು.

4.  ಅರುಣಿಮಾ ಸಿನ್ಹಾ  ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ.

a) ಪತ್ರಕರ್ತರು.           b)  ರಾಜಕೀಯ     
c)  ಪರ್ವತರೋಹಿ        d)  ಯಾವುದು ಇಲ್ಲ.

5.  ಯಾವ ರಾಜ್ಯವು " ರಾಜ ರಾಣಿ ಸಂಗೀತ  ಉತ್ಸವ " ವನ್ನು ಆಚರಿಸುತ್ತದೆ.

a)  ಮೀಜೋರಾಂ.        b)  ನಾಗಲ್ಯಾಂಡ್ 
c)   ತಮಿಳುನಾಡು        d)  ಓಡಿಶಾ.









ಉತ್ತರಗಳು:
1-C,   2-A,   3-C,   4-C,  5-D.

1 ಜನವರಿ 2016

1)   ಈ ಕೆಳಗಿನ ಯಾರು ನೀತಿ ಆಯೋಗದ ಪದನಿಮಿತ್ತ (ex-Officio) ಸದಸ್ಯರಾಗಿರುತ್ತಾರೆ.
a)  ಕೇಂದ್ರ ಹಣಕಾಸು ಸಚಿವ        b)  ಕೇಂದ್ರ ಗೃಹ ಸಚಿವ    
c)  ಮಾನವ ಸಂಪನ್ಮೂಲ ಸಚಿವ   d)   ಕೇಂದ್ರ ಕೃಷಿ ಸಚಿವ
a)  a,  b   
b)  b,  c,  &  d.
c)  a,  c  
d)  a,  b,  &  d.

2) ಕೆಳಗಿನ ಯಾರನ್ನು  2015 ನೇ ವರ್ಷದ ಬಿಸಿಸಿಐ " ವರ್ಷದ ಕ್ರಿಕೆಟಿಗ"  ಎಂದು ಹೆಸರಿಸಲಾಯಿತು.

a)  ರೋಹಿತ್ ಶರ್ಮಾ. 
b)  ಆರ್. ಅಶ್ವೀನ್.
c)  ವಿರಾಟ್ ಕೊಹ್ಲಿ.
d)  ಎಂ. ಎಸ್. ದೋನಿ

3)  ASEAN ECONOMIC  COMMUNITY  ಯಲ್ಲಿ ಎಷ್ಟು ಸದಸ್ಯ ದೇಶಗಳಿವೆ.

         a)  7    b)   10    c)   12      d)    14.

4)  ಕೆಳಗಿನ ಯಾವ ಸಂಘಟನೆಯು " ನಯೀ ಮಂಜಿಲ್  ಯೋಜನೆ" ಗೆ 50 ದಶಲಕ್ಷ ಡಾಲರ್ ಸಾಲವನ್ನು ವಿಸ್ತರಿಸಿದೆ.

a) ವಿಶ್ಚ ಬ್ಯಾಂಕ್.                                             b)    IMF   
c)  ASIAN DEVELOPMENT BANK      d)   UNICEF.


5)  INDEX OF EIGHT CORE INDUSTRIES ಗಳಲ್ಲಿ ಯಾವುದಕ್ಕೆ ಅತಿ ಹೆಚ್ಚಿನ ಒತ್ತು ನೀಡಲಾಗಿದೆ.

a)   ಕಲ್ಲಿದ್ದಲು ಉತ್ಪಾದನೆ     b)   ವಿದ್ಯುತ್  ಉತ್ಪಾದನೆ. 
c)   ರಸಗೊಬ್ಬರ ಉತ್ಪಾದನೆ.    d) ಉಕ್ಕು ಉತ್ಪಾದನೆ.









ಉತ್ತರಗಳು:
1.  d    2.  c    3.   b   4.  a    5.  b.

                                    ***************

ಸಾಮಾನ್ಯ ಜ್ಞಾನ 2

೧    ಭಾರತದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿ ಯಾರು?
೨    ಮದರ್ ತೆರೆಸಾರವರು ಮೂಲತಃ ಯಾವ ದೇಶದವರು ?
೩    ಬೌದ್ದರ ಸಂಕೇತದಲ್ಲಿ ಕಾಣಬರುವ ಚಕ್ರ  ಏನನ್ನು ಸೂಚಿಸುತ್ತದೆ?
೪    ಭಾರತದಲ್ಲಿ ಭರತನಾಟ್ಯಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲಿಗ ಯಾರು?
೫    ಭಾರತೀಯ ಚಿತ್ರರಂಗದ ರೂವಾರಿ, ಎಂದು ಯಾರನ್ನು ಕರೆಯುತ್ತಾರೆ?
೬    ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೇಡಿನ ಪ್ರಧಾನಿಯಾಗಿದ್ದವರು ಯಾರು?
೭    ಎಲ್ಲೋರಾದ ಕೈಲಾಸ ದೇವಾಲಯಗಳನ್ನು ಕಟ್ಟಿಸಿದ ರಾಷ್ಟ್ರಕೂಟರ ದೊರೆ ಯಾರು?
೮    ಭಾರತದಲ್ಲಿ  ಹೋಂರೂಲ್ ಚಳುವಳಿಯನ್ನು ಆರಂಭಿಸಿದವರು ಯಾರು?
೯    ಲಾರ್ಡ್ ಡಾಲ್‌ಹೌಸಿಯಿಂದ ಮೊದಲ ಬಾರಿಗೆ ದೂರವಾಣಿ ಸಂಪರ್ಕ ಪಡೆದ ಭಾರತದ ಎರಡು ಸ್ಥಳಗಳು ಯಾವುವು?
೧೦    ೨೦೦೮ ರ ಬೀಜಿಂಗ್ ಒಲಂಪಿಕ್ಸ್‌ನಲ್ಲಿ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಪಡೆದ ಭಾರತೀಯ ಯಾರು?
೧೧    ಗರೀಬಿ ಹಟಾವೊ ಕಾರ್ಯಕ್ರಮವನ್ನು ಯಾವ ಪ್ರಧಾನಿ ಮಂತ್ರಿ ಆರಂಭಿಸಿದವರು ಯಾರು?
೧೨    ಭಾರತದ ರಿಸರ್ವ ಬ್ಯಾಂಕಿನ ಪ್ರಧಾನ ಕಛೇರಿ ಎಲ್ಲಿದೆ?
೧೩    ಭಾರತದಲ್ಲಿ ಶ್ವೇತಕ್ರಾಂತಿಯ ಹರಿಕಾರ ಯಾರು?
೧೪    ಲೈಫ್ ಇನ್ಸೂರೆನ್ಸ್ ಆಫ್ ಇಂಡಿಯಾ  (ಎಲ್.ಐ.ಸಿ)  ಪ್ರಾರಂಭವಾದ ವರ್ಷ ಯಾವುದು?
೧೫    ಭಾರತದಲ್ಲಿ ಮೊದಲ ಸತ್ಯಾಗ್ರಹ ಅಭಿಯಾನ ಯಾವುದು?
೧೬    ಭಾರತದ ಸಂವಿಧಾನವನ್ನು ಮೊದಲ ಬಾರಿಗೆ ತಿದ್ದುಪಡಿ ಮಾಡಿದ ವರ್ಷ ಯಾವುದು?
೧೭    ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಯಾವ ಪತ್ರಿಕೆ ಆರಂಭಿಸಿದವರು?
೧೮    ಭಾರತದ ಪುನರುತ್ಥಾನದ ತಂದೆ ಎಂದು ಯಾರಿಗೆ ಹೇಳುವರು?
೧೯    ಸತ್ಯ ಮೇವ ಜಯತೆ ಯುಕ್ತಿಯನ್ನು ಯಾವ ಉಪನಿಷತ್ತಿನಿಂದ ಆರಿಸಿಕೊಳ್ಳಲಾಗಿದೆ?
೨೦    ಅತೀ ವೇಗವಾಗಿ ಓಡುವ ಸಸ್ತಿನಿ ಯಾವುದು?
೨೧    ತಮಿಳು ನಾಡಿನ ಪ್ರಥಮ ಮಹಿಳಾ ಮುಖ್ಯ ಮಂತ್ರಿ ಯಾರು?
೨೨    ಪ್ರಪಂಚದಲ್ಲಿ ಅತಿ ಹೆಚ್ಚು ದನಗಳನ್ನು ಹೊಂದಿರುವ ದೇಶ ಯಾವುದು?
೨೩    ’ಧಾನಾ’ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ?
೨೪    ಭಾರತದ ಅತೀ ಶ್ರೀಮಂತ ರಾಜ್ಯ ಯಾವುದು?
೨೫    ಭಾರತದ ಪೆಟ್ರೋಲಿಯಂ ಮೂಲ ಪುರುಷ ಯಾರು?
೨೬    ಮಾನವನಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?
೨೭    ಭಾಕ್ರಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
೨೮    ಬೋರಿವಿಲಿ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
೨೯    ಫೆದರ್ ವ್ಹೇಟ್ ಹೇವಿವ್ಹೇಟ್ ಇವುಗಳನ್ನು ಯಾವ ಕ್ರೀಡೆಯಲ್ಲಿ ನಾವು ಕಾಣುತ್ತೇವೆ?
೩೦    ಈ ಚಿತ್ರದಲ್ಲಿರುವವರನ್ನು ಗುರುತಿಸಿ?

ಉತ್ತರಗಳು
೧    ರಾಜೀವ್ ಗಾಂಧಿ
೨    ಆಲ್ಬೇನಿಯಾ
೩    ಜ್ಞಾನೋದಯ 
೪    ಟಿ.ಬಾಲಸರಸ್ವತಿ
೫    ದಾದಾ ಸಾಹೇಬ ಪಾಲ್ಕೆ
೬    ಕ್ಲೆಮೆಂಟ್ ಅಟ್ಲಿ
೭    ಒಂದನೇಯ ಕೃಷ್ಣ
೮    ಆನಿ ಬೆಸೆಂಟ್
೯    ಕಲ್ಕತ್ತಾ ಮತ್ತು ಆಗ್ರಾ
೧೦    ಸುಶೀಲ್ ಕುಮಾರ್ 
೧೧    ದಿ|| ಇಂದಿರಾ ಗಾಂಧಿ 
೧೨    ಮುಂಬೈ
೧೩    ಡಾ|| ವರ್ಗಿಸ್ ಕುರಿಯನ್ 
೧೪    ೧೯೫೬
೧೫    ಚಂಪಾರಣ್
೧೬    ೧೯೫೧
೧೭    ಇಂಡಿಯಾನ್ ಒಫಿಯನ್
೧೮    ರಾಜಾರಾಮ್ ಮೋಹನ್ ರಾಯ್
೧೯    ಮಂಡಕ ಉಪನಿಷತ್ತಿನಿಂದ ಆಯ್ದುಕೊಳ್ಳಲಾಗಿದೆ
೨೦    ಚಿರತೆ
೨೧    ಜಾನಕಿ
೨೨    ಭಾರತ
೨೩    ರಾಜಸ್ಥಾನ
೨೪    ಪಂಜಾಬ್
೨೫    ’ಧೀರುಬಾಯಿ ಅಂಬಾನಿ’
೨೬    ೪೬
೨೭    ಪಂಜಾಬ್
೨೮    ಮಹಾರಾಷ್ಟ್ರ
೨೯    ಬಾಕ್ಸಿಂಗ್ 
೩೦    ಕರ್ಣಂ ಮಲ್ಲೇಶ್ವರಿ 

Thursday 24 December 2015

ಸಾಮಾನ್ಯ ಜ್ಞಾನ 1

                                                  ಪ್ರಶ್ನೆಗಳು

1.    ಸಳನಿಗೆ ಹುಲಿಯನ್ನು ಕೊಲ್ಲಲು ಆಜ್ಞಾಪಿಸಿದ ಜೈನ ಮುನಿಯ ಹೆಸರೇನು?

2.    ಪಿ.ಎಮ್.ಯು.ಪಿ.ಇ.ಪಿ. ನ ವಿಸ್ತøತರೂಪವೇನು?

3.    ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ ಸೇರಿದವರಾಗಿದ್ದಾರೆ?

4.    ಬಾಹ್ಯಾಕಾಶದಿಂದ ಬರುವತರಾಂಗಾಂತರ ವಿಕಿರಣಗಳ ಹೆಸರೇನು?

5.    ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಇರುವ ಪರ್ವತ ಶ್ರೇಣಿ ಯಾವುದು?

6.    ಕತ್ತಲಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ ಯಾವುದು?

7.    ಪ್ರಪಂಚದಲ್ಲಿ ಅತ್ಯಂತ ಕಡಿಮೆ ಮರಣ ಪ್ರಮಾಣವುಳ್ಳ ರಾಷ್ಟ್ರ ಯಾವುದು?

8.    ಸಂಭವಾಮಿಯುಗೇಯುಗೇ ಇದು ಭಗವದ್ಗೀತೆಯು ಎಷ್ಟನೇ ಅಧ್ಯಾಯದಲ್ಲಿದೆ?

9.    ಕೋಗಿಲೆ ಹೊರಡಿಸುವ ಸ್ವರ ಯಾವುದು?

10.    ಕ್ವಿಟ್ ಇಂಡಿಯಾ ಚಳುವಳಿ ನಡೆದ ವರ್ಷ ಯಾವುದು?

11.    ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ ಎಲ್ಲಿದೆ?

12.    ಬಹಮನಿ ಅರಸರ ಕಾಲದಲ್ಲಿ ಖಗೋಳ ಮತ್ತು ಗಣಿತದಲ್ಲಿ 

ಪಂಡಿತರಾಗಿದ್ದವರು ಯಾರು?

13.    ಎತ್ತರದ ಜಲಪಾತಗಳಲ್ಲೊಂದಾದ ಊಟಿಗೋರ್ಡ್ ಜಲಪಾತ ಯಾವ ರಾಷ್ಟ್ರದಲ್ಲಿದೆ?

14.    ಬೆಂಗಳೂರು ವಿಶ್ವವಿದ್ಯಾಲಯದ ಧ್ಯೇಯ ವಾಕ್ಯಜ್ಞಾನ ವಿಜ್ಞಾನ ಸಹಿತಂ 

ಎಂಬುದಾಗಿದೆ ಈ ವಾಕ್ಯ ಯಾವ ಗ್ರಂಥದಲ್ಲಿ ಬರುತ್ತದೆ?

15.    ಪ್ರತಿಮಾ ಲೋಕದಲ್ಲೊಂದು ಪಯಣ ಇದು ಯಾವ ಕಲಾವಿದರ ಕುರಿತು

 ಸಾಕ್ಷ್ಯಾ ಚಿತ್ರವಾಗಿದೆ?

16.    ಬ್ರಿಟನ್ನ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಎಷ್ಟು ಕೋಣೆಗಳಿವೆ?

17.    ಸಾಂಚಿ ಮ್ಯೂಸಿಯಂ ಎಲ್ಲಿದೆ?

18.    12000ಸೆ ವರೆಗಿನ ಉಷ್ಣತೆಯನ್ನು ಅಳೆಯುವ ಸಾಧನ ಯಾವುದು?

19.    ಜೀವಕೋಶದ ಮೂಲ ಘಟಕಕ್ಕೆ ಜೀವಕೋಶ ಎಂದು ಹೆಸರಿಸಿದವರು ಯಾರು?

20.    ಸಾಹಾ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಜಿಕ್ಸ್ ಎಲ್ಲಿದೆ?

21.    ಯುರೋಪಿನ ಆಟದ ಮೈದಾನವೆಂದು ಯಾವ ರಾಷ್ಟ್ರವನ್ನು ಕರೆಯುತ್ತಾರೆ?

22.    ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ದರ್ಬಾರಿ ಕಾನಡ ರಾಗವನ್ನು

 ಸಾಂಪ್ರದಾಯಕವಾಗಿ ಯಾವ ಹೊತ್ತಿನಲ್ಲಿ ಹಾಡುತ್ತಾರೆ?

23.    ಯುರೇನಸ್ ಗ್ರಹವನ್ನು ಮೊಟ್ಟಮೊದಲು ದೂರದರ್ಶಕದಲ್ಲಿ ಗುರುತಿಸಿದವರು ಯಾರು?

24.    ಕೋಲ್ಕತ್ತಾ ನಗರವನ್ನು ಮೊದಲು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?

25.    ಒಂಟಿಕೊಂಬಿನ ಘೆಂಡಾಮೃಗಗಳು ಹೆಚ್ಚು ಸಂಖ್ಯೆಯಲ್ಲಿ ಇರುವ ರಾಷ್ಟ್ರೀಯ

 ಅಭಯಾರಣ್ಯ ಯಾವುದು?

26.    ಗಣಿತ ಶಾಸ್ತ್ರದಲ್ಲಿಯ ಸಾಧನೆಗೆ ನೀಡುವ ಅತ್ಯುತ್ತಮ ಬಹುಮಾನ 
ಯಾವುದು?

27.    ಕನಸುಗಳ ಗುಟ್ಟನ್ನು ಅರಿಯುವ ಸಿದ್ಧಾಂತವನ್ನು ನಿರೂಪಿಸಿದ 

ಮನೋವಿಜ್ಞಾನಿ ಯಾರು?

28.    ಗೀತಾ ನಾಡಕರ್ಣಿ ಇವರು ಯಾವಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?

29.    ಸ್ಪೇನ್ ರಾಷ್ಟ್ರದ ರಾಷ್ಟ್ರೀಯ ಕ್ರೀಡೆ ಯಾವುದು?

30.    ಈ ಚಿತ್ರದಲ್ಲಿರುವವರನ್ನು ಗುರುತಿಸಿ.








ಉತ್ತರಗಳು
1.    ಸುದತ್ತಾಚಾರ್ಯ
2.    ಪ್ರೈಮ್ ಮಿನಿಸ್ಟರ್ ಅರ್ಬನ್ ಪಾವರ್ಟಿ ಇಂಡಿಕೇಷನ್ ಪ್ರೋಗ್ರಾಂ
3.    ಮೇಘಾಲಯ
4.    ಕಾಸ್ಮಿಕ್ ಕಿರಣ
5.    ಸಾತ್ಪುರ ಪರ್ವತ ಶ್ರೇಣಿ
6.    ರಕ್ತಾತೀತ ವಿಕಿರಣ
7.    ಟೊಂಗೋ
8.    ನಾಲ್ಕನೇ ಅಧ್ಯಾಯ
9.    ಪಂಚಮ
10.    1942
11.    ವಿಶಾಖ ಪಟ್ಟಣ
12.    ಬಕ್ಷಿ ಮತ್ತು ಷರೀಫ್
13.    ನಾರ್ವೆ
14.    ಮಹಾಭಾರತ
15.    ಕೆ.ಕೆ.ಹೆಬ್ಬಾರ್
16.    602 ಕೋಣೆಗಳು
17.    ಭೋಪಾಲ್
18.    ಪ್ಲಾಟಿನಂ ರೋಧ ಉಷ್ಣತಾ ಮಾಪಕ
19.    ರಾಬರ್ಟ್ ಹುಕ್
20.    ಕೋಲ್ಕತ್ತಾ
21.    ಸ್ವಿಡ್ಜರ್ಲ್ಯಾಂಡ್
22.    ಮಧ್ಯರಾತ್ರಿ
23.    ವಿಲಿಯಂ ಹರ್ಷಲ್
24.    ಪೋರ್ಟ್ ವಿಲಿಯಂ
25.    ಕಾಜಿರಂಗ
26.    ಫೀಲ್ಡ್ ಮೆಡಲ್
27.    ಸಿಗ್ಮಂಡ್ ಫ್ರಾಯ್ಡ್
28.    ಟೇಬಲ್ ಟೆನ್ನಿಸ್
29.    ಬುಲ್ ಫೈಟಿಂಗ್
30.    ಶ್ರೀ ಅರವಿಂದ ಘೋಷ (ಭಾರತೀಯ ತತ್ವಜ್ಞಾನಿ)

Monday 21 December 2015

ಮಹದಾಯಿ - ಕಳಸಾ - ಭಂಡೂರ : ಏನಿದು ವಿವಾದ?



ಮಹದಾಯಿ - ಕಳಸಾ - ಭಂಡೂರ : ಏನಿದು ವಿವಾದ?

     (ಸಂಗ್ರಹ ಲೇಖನ)

           ಕರ್ನಾಟಕ ರಾಜ್ಯದ ಹುಬ್ಬಳ್ಳಿ ಭಾಗದ ಕುಡಿಯುವ ನೀರಿನ ಯೋಜನೆಯಾದ ಕಳಸಾ-ಭಂಡೂರಾ ಯೋಜನೆ ಬಗ್ಗೆ ನೆರೆಯ ಗೋವಾ ರಾಜ್ಯ ಎತ್ತಿದ್ದ ತಕರಾರು, ಕೊನೆಗೆ ಕೇಂದ್ರಸರ್ಕಾರ ನ್ಯಾಯಾಧಿಕರಣವೊಂದನ್ನು ರಚಿಸಲು ಕಾರಣವಾಗಿದೆ. ಒಂದು ಸರಿಯಾದ ರಾಷ್ಟ್ರೀಯ ಜಲನೀತಿಯಿಲ್ಲದೆ ಇಂಥಾ ಟ್ರಿಬ್ಯೂನಲ್‍ಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದು ಪ್ರಶ್ನಾರ್ಹವಾಗಿದೆ. ಕನ್ನಡಿಗರ ಪಾಲಿಗಂತೂ ಟ್ರಿಬ್ಯೂನಲ್‍ಗಳೆಂದರೇನೇ ದುಸ್ವಪ್ನದ ಹಾಗೆ, ನಮ್ಮಿಂದ ನಮ್ಮ ಪಾಲನ್ನು ಕಿತ್ತುಕೊಳ್ಳಲೆಂದೇ ಇರುವ ಹಾಗೆ, ನಮ್ಮ ಯೋಜನೆಗಳನ್ನು ತಡೆದು ವಿಳಂಬ ಮಾಡಿಸುವ ಒಂದು ತಂತ್ರದ ಹಾಗೆ ಕಾಣ್ತಾಯಿದೆ ಅನ್ನುವ ಅನುಮಾನಕ್ಕೆ ಕಾರಣವಾಗಿದೆ.
ಮಹದಾಯಿ ಹುಟ್ಟು ಮತ್ತು ಹರಿವು
        ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರದಿಂದ 18 ಕಿ.ಮೀ ದೂರದ ಪಶ್ಚಿಮ ಘಟ್ಟ ಸಾಲಿನ ಜಂಬೋತಿ ಎನ್ನುವಲ್ಲಿ ಹುಟ್ಟುವ ಮಹದಾಯಿ ನದಿ ಕರ್ನಾಟಕದಲ್ಲಿ 28.8 ಕಿ.ಮೀ ದೂರ ಹರಿದು ನೆರೆಯ ಗೋವಾ ರಾಜ್ಯವನ್ನು ಪ್ರವೇಶಿಸುತ್ತದೆ. ಗೋವಾದಲ್ಲಿ ಮಾಂಡೋವಿ ಎಂಬ ಹೆಸರಿಂದ ಕರೆಯಲಾಗುವ ಈ ನದಿಯು ಅಲ್ಲಿ 52 ಕಿ.ಮೀ ದೂರ ಸಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಇದರ ನದಿ ಪಾತ್ರದ ಹರವು ಒಟ್ಟು 2032 ಚದರ ಕಿ.ಮೀ ಆಗಿದ್ದು ಕರ್ನಾಟಕದಲ್ಲಿ ಇದು 452 ಚ.ಕಿ.ಮೀ ಇದೆ. ಈ ನದಿಯಲ್ಲಿ ವರ್ಷವೊಂದಕ್ಕೆ ಸರಾಸರಿ 210 ಟಿ.ಎಂ.ಸಿ ನೀರು ಸಿಗುತ್ತದೆ. ಇದರಲ್ಲಿ ಕರ್ನಾಟಕದ ಪಾಲು 45 ಟಿ.ಎಂ.ಸಿಯಾಗಿದೆ. ಈ ನದಿ ಪಶ್ಚಿಮ ದಿಕ್ಕಿಗೆ ಹರಿಯುತ್ತದೆ. ಇದಕ್ಕೆ ಅತಿ ಸಮೀಪದಲ್ಲೆ ಪೂರ್ವ ದಿಕ್ಕಿಗೆ ಹರಿಯುವ ಕನ್ನಡ ನಾಡಿನ, ವಿಶೇಷವಾಗಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆಸರೆಯಾಗಿರುವ ಮಲಪ್ರಭ ನದಿ ಹುಟ್ಟುತ್ತದೆ. ಇದು ಕಳಸಾ ಭಂಡೂರದಿಂದ 4 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಧಾರವಾಡ ಗದಗಗಳಂತಹ ಜನವಸತಿ ಪ್ರದೇಶಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುವ ಶೋಚನೀಯ ಸ್ಥಿತಿಯಿದೆ. ನಗರೀಕರಣದಿಂದ ಈ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದ್ದು, ಈ ಬೇಡಿಕೆಯನ್ನು ಪೂರೈಸಲೇ ಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಒಂದು ಮಹತ್ವದ ಯೋಜನೆಯನ್ನು ಆರಂಭಿಸಿತು.
ಕಳಸಾ-ಭಂಡೂರಾ ನಾಲೆ ಯೋಜನೆ ಮತ್ತು ವಿವಾದ
           1980ರ ಸುಮಾರಿನಲ್ಲಿ ನರಗುಂದ ರೈತ ಬಂಡಾಯದ ತರುವಾಯ ಅಂದಿನ ಮುಖ್ಯಮಂತ್ರಿ ಶ್ರೀ ಗುಂಡೂರಾವ್‍ರವರು ನೇಮಿಸಿದ್ದ ಬೊಮ್ಮಾಯಿ ಆಯೋಗ ಯೋಜನೆಯೊಂದನ್ನು ಜಾರಿಮಾಡಲು ಸಲಹೆ ನೀಡಿತು. ಮಹದಾಯಿ ನದಿಗೆ ಮತ್ತು ಅದರ ತೊರೆಗಳಿಗೆ ಹಲವಾರು ಕಡೆ ಅಣೆಕಟ್ಟೆಗಳನ್ನು ಕಟ್ಟಿ ನಾಲೆಗಳ ಮೂಲಕ ಮಲಪ್ರಭೆಗೆ 7.56 ಟಿ.ಎಂ.ಸಿಯಷ್ಟು ನೀರನ್ನು ಸರಬರಾಜು ಮಾಡುವುದೇ ಆ ಯೋಜನೆ. ಪಶ್ಚಿಮಕ್ಕೆ ಹರಿಯುತ್ತಿರುವ ಮಹದಾಯಿಯಿಂದ ಸ್ವಲ್ಪ ಮಟ್ಟಿನ ನೀರನ್ನು ಪೂರ್ವಕ್ಕೆ ಹರಿಸಿ ಮಲಪ್ರಭೆಗೆ ಪೂರೈಸುವುದೇ ಇದರ ಮೂಲ ಉದ್ದೇಶ. ಇದಕ್ಕಾಗೆ ಕಳಸ ಮತ್ತು ಭಂಡೂರ ಎಂಬ ಎರಡು ಕಡೆ ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತಿದೆ. ಸುರ್ಲಾ ನಾಲೆ, ಸಿಂಗಾರ್ ನಾಲೆ, ನೆರ್ಸೆ ನಾಲೆ, ಕಳಸ ನಾಲೆ, ಭಂಡೂರ ನಾಲೆ, ಹಲ್ತಾರ್ ನಾಲೆಗಳು ಈ ಯೋಜನೆಯ ಅಡಿಯಲ್ಲಿ ಬರಲಿವೆ. ಇದಕ್ಕಾಗಿ ಕರ್ನಾಟಕ ಸರ್ಕಾರ 2002ರಲ್ಲಿ ಕೇಂದ್ರದ ಮಂಜೂರಾತಿಯನ್ನು ಪಡೆದು ಕೆಲಸ ಕೈಗೆತ್ತಿಕೊಂಡಿತು. ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಬೊಮ್ಮಾಯಿಯವರ ಕಾಲದಲ್ಲಿ (1989) ಗೋವಾದ ಮುಖ್ಯಮಂತ್ರಿಗಳಾಗಿದ್ದ ಪ್ರತಾಪ್ ಸಿಂಗ್ ರಾಣೆಯವರ ಜೊತೆ ಮಾತುಕತೆ ನಡೆದಿದ್ದು ರಾಣೆಯವರು 45 ಟಿ.ಎಂ.ಸಿ ನೀರು ಬಳಸಲು ನಮ್ಮ ಅಡ್ಡಿಯೇನಿಲ್ಲ ಎಂದು ನುಡಿದಿದ್ದರು. ಆದರೆ ನಂತರ ಅಲ್ಲಿ ಅಧಿಕಾರಕ್ಕೆ ಬಂದ ಮನೋಹರ್ ಪರಿಕ್ಕರ್ ನೇತೃತ್ವದ ಬಿ.ಜೆ.ಪಿ ಸರ್ಕಾರ ಈ ಯೋಜನೆಗೆ ಕೊಂಕು ಎತ್ತಿತು. ಆಗ ರಾಜ್ಯದಲ್ಲಿ ಕಾಂಗ್ರೆಸ್‌ನ ಎಸ್.ಎಂ.ಕೃಷ್ಣಾ ಮುಖ್ಯಮಂತ್ರಿಗಳಾಗಿದ್ದರು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರ್ಕಾರ ಗೋವಾದ ಒತ್ತಡಕ್ಕೆ ಮಣಿದು ಆಗಲೆ ನೀಡಲಾಗಿದ್ದ ಒಪ್ಪಿಗೆಯನ್ನು ಹಿಂಪಡೆಯಿತು.
         ಆಗ ರಾಜ್ಯ ಸರ್ಕಾರ ತನ್ನದೆ ಹಣವನ್ನು ಹೂಡಿ ಈ ಯೋಜನೆಯನ್ನು ಮುಂದುವರೆಸಲು ನಿರ್ಧರಿಸಿತು ಮತ್ತು ರಾಷ್ಟ್ರೀಯ ಜಲ ಆಯೋಗ ಮತ್ತು ರಾಷ್ಟ್ರೀಯ ಪರಿಸರ ವಿಜ್ಞಾನ ಸಂಶೋಧನಾ ಸಂಸ್ಥೆ (ನ್ಯಾಷನಲ್ ಎನ್‌ವಿರಾನ್‌ಮೆಂಟಲ್ ಇಂಜಿನಿಯರಿಂಗ್ ರೀಸರ್ಚ್ ಇನ್‌ಸ್ಟಿಟ್ಯೂಟ್) ಗಳಿಂದ ಅನುಮತಿ ಪಡೆದಿರುವುದರಿಂದ ನೀರು ಹರಿಸಿಕೊಳ್ಳುತ್ತೇವೆ ಎನ್ನುವ ನಿಲುವು ತಾಳಿತು.
ಯೋಜನೆಗೆ ವಿರೋಧ ಮಾಡುತ್ತಿರುವ ಗೋವಾ
        ಈ ಸಂಬಂಧ ದಿನಾಂಕ 22.09.2006ರಂದು ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಮುಖ್ಯಮಂತ್ರಿಗಳಾದ ಕುಮಾರ ಸ್ವಾಮಿಯವರು ಭೂಮಿ ಪೂಜೆ ನೆರವೇರಿಸಿದರು. ಇದರಿಂದ ಕನಲಿದ ಗೋವಾ ಸರ್ಕಾರ ಸರ್ವೋಚ್ಛ ನ್ಯಾಯಾಲಯಕ್ಕೆ 15.11.2006ರಲ್ಲಿ ದೂರು ಸಲ್ಲಿಸಿ ಕರ್ನಾಟಕದ ಯೋಜನೆಗೆ ತಡೆ ಆದೇಶ ನೀಡಬೇಕೆಂದೂ, ಯೋಜನೆಯನ್ನು ರದ್ದು ಮಾಡಬೇಕೆಂದೂ ಕೋರಿತು. ಸರ್ವೋಚ್ಛ ನ್ಯಾಯಾಲಯವು ದಿನಾಂಕ 27.11.2006ರಂದು ಕರ್ನಾಟಕದ ಕಾಮಗಾರಿಗೆ ತಡೆ ನೀಡಲು ನಿರಾಕರಿಸಿತು.
        ಈ ವೇಳೆಗೆ ಮಹದಾಯಿ ಬಚಾವೋ ಅಭಿಯಾನದ ಹೆಸರಲ್ಲಿ ಗೋವಾದಲ್ಲಿ ಕರ್ನಾಟಕದ ಕುಡಿಯುವ ನೀರಿನ ಯೋಜನೆಯನ್ನು ವಿರೋಧಿಸಿ ಹೋರಾಟ ಆರಂಭವಾಯ್ತು. ಗೋವಾ ರಾಜ್ಯ ಈ ಯೋಜನೆಯಿಂದ ತನ್ನ ರಾಜ್ಯದ ಅರಣ್ಯ ಮತ್ತು ಜೀವಸಂಕುಲಕ್ಕೆ ಹಾನಿಯಾಗುತ್ತದೆ ಎನ್ನುವ ವಾದ ಮುಂದಿಟ್ಟಿತು. ನದಿಗೆ ತಿರುವು ನೀಡುವುದರಿಂದ ಗೋವಾದ ಜೀವನದಿಯಾದ ಮಾಂಡೊವಿ ಬತ್ತಿಹೋಗಲಿದೆ ಎಂಬ ವಾದ ಮುಂದಿಟ್ಟು ಅಲ್ಲಿನ ಜನರಲ್ಲಿ ಆಂದೋಲನವುಂಟು ಮಾಡುತ್ತಿದ್ದಾರೆ. ವಾಸ್ತವವಾಗಿ 210 ಟಿ.ಎಂ.ಸಿ ಪ್ರಮಾಣದ ನೀರು ದೊರೆಯುವ ನದಿ ಮಾಂಡೋವಿಯಲ್ಲಿ ದೊರೆಯುವ 21೦ ಟಿ.ಎಂ.ಸಿಯಲ್ಲಿ 7.56 ಟಿ.ಎಂ.ಸಿ ನೀರನ್ನು ತಿರುಗಿಸಿದರೆ ನದಿ ಬತ್ತಿಹೋಗುವುದೇ? 4 ಕಿ.ಮೀ ದೂರ ನಾಲೆ ತೋಡಿದರೆ ಅರಣ್ಯ ಸಂಪತ್ತು, ಅಲ್ಲಿನ ಜೀವಸಂಕುಲ ನಾಶವಾಗುವುದೆ? ಗೋವಾಕ್ಕೆ ಪರಿಸರದ ಬಗ್ಗೆ ಕಾಳಜಿಯಿದ್ದಲ್ಲಿ ಅದೇ ಮಾಂಡೋವಿಯ ದಂಡೆಯಲ್ಲಿ ಎರಡೆರಡು ವಿದ್ಯುತ್ ಉತ್ಪದನಾ ಘಟಕಗಳನ್ನು ಯಾಕೆ ತೆರೆಯುವ ಯೋಜನೆ ಹೊಂದಿದೆ?
              ಸದ್ಯಕ್ಕೆ ಸುಪ್ರಿಂಕೋರ್ಟಿನಲ್ಲಿ ಮಹದಾಯಿ ಯೋಜನೆ ಕುರಿತು ಪ್ರಕರಣದ ವಿಚಾರಣೆ ನಡೆಯುತ್ತಿದೆ. ತೀರ್ಪು ಹೊರಬರುವ ಮುನ್ನವೇ ಈಗ ಮತ್ತೆ ಗೋವಾ ಲಾಬಿಗೆ ಮಣಿದಿರುವ ಕೇಂದ್ರ ಸರಕಾರ ನ್ಯಾಯಾಧೀಕರಣ ರಚಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಮಹದಾಯಿ ನದಿಯ ನಮ್ಮ ಪಾಲಿನ 45 ಟಿಎಂಸಿ ನೀರಿನಲ್ಲಿ 7.56 ಟಿಎಂಸಿ ತೆಗೆದುಕೊಳ್ಳಲು ಇನ್ನೂ ಹತ್ತು ಹದಿನೈದು ವರುಷಗಳು ಕಾಯಬೇಕೆ?

ಅನುಷ್ಟಾನಗೊಳ್ಳದ ಮಹದಾಯಿ ತಿರುವು ಯೋಜನೆ :ಕೇಂದ್ರ-ರಾಜ್ಯ ಸರ್ಕಾರಗಳ ಹೊಣಗೇಡಿತನಕ್ಕೆ ಸಾಕ್ಷಿ
        ಇಲ್ಲಿಯವರೆಗೆ ಆಡಳಿತ ನಡೆಸಿದ ಕೇಂದ್ರ-ರಾಜ್ಯ ಸರ್ಕಾರಗಳು ಒಂದು ನೀರಿನ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಇಚ್ಛಾಶಕ್ತಿಯನ್ನು ತೋರದೆ ಯೋಜನೆಯ ಅನುಷ್ಠಾನಕ್ಕೆ ದಿವ್ಯ ನಿರ್ಲಕ್ಷ್ಯ, ನಿರಾಸಕ್ತಿ ತೋರಿದಲ್ಲಿ ಆ ಯೋಜನೆ ಹೇಗೆ ನೆನೆಗುದಿಗೆ ಬೀಳುತ್ತದೆ ಎಂಬುದಕ್ಕೆ ಮಹದಾಯಿ ತಿರುವು ಯೋಜನೆ ಒಂದು ಉದಾಹರಣೆ. ಜನರಿಗೆ ಅತ್ಯಂತ ಅಗತ್ಯವಾದ ಒಂದು ಕುಡಿಯುವ ನೀರಿನ ಯೋಜನೆ ಎರಡು-ಮೂರು ದಶಕ ಕಳೆದರೂ ಜಾರಿಯಾಗಲಿಲ್ಲ. ಅಷ್ಟೆ ಅಲ್ಲ ಸರ್ಕಾರಗಳು ಸಮಸ್ಯೆಯನ್ನು ಕ್ಲಿಷ್ಠಗೊಳಿಸಿವೆ; ಕಗ್ಗಾಂಟಾಗಿಸಿವೆ. ಜನಹಿತ ಮರೆತು ತಮ್ಮ ಹೊಣೆಗೇಡಿತನ ಮೆರೆದಿವೆ.
ಏನಿದು ಮಹದಾಯ ತಿರುವು ಯೋಜನೆ?
        ಈ ಪ್ರಶ್ನೆಗೆ ನೇರ ಉತ್ತರಕ್ಕೆ ಹೋಗದೆ ಮೊದಲು ಒಂದಿಷ್ಟು ಹಿಂದಕ್ಕೆ ಹೋಗಿ ಮಲಪ್ರಭಾ ನೀರಾವರಿ ಯೋಜನೆ ಕುರಿತು ತಿಳಿಯೋಣ. ಮೇಲಿಂದ ಮೇಲೆ ಬರಗಾಲಕ್ಕೆ ತುತ್ತಾಗುತ್ತಿದ್ದ ಗದಗ ಜಿಲ್ಲೆಯ ನರಗುಂದ, ರೋಣ, ಧಾರವಾಡ ಜಿಲ್ಲೆಯ ನವಲಗುಂದ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿ ಬೈಲಹೊಂಗಲ ತಾಲೂಕುಗಳಿಗೆ ನೀರಾವರಿಯ ಅಗತ್ಯತೆ ಇತ್ತು. ಈ ಭಾಗದ ಕುಡಿಯುವ ನೀರಿನ ಅಭಾವ ಹೇಳತೀರದಾಗಿತ್ತು.
            ಅದಕ್ಕಾಗಿ ರೂಪಗೊಂಡದ್ದು ಮಲಪ್ರಭಾ ನೀರಾವರಿ ಯೋಜನೆ. ಸವದತ್ತಿ ಹತ್ತಿರ `ನವಿಲು ತೀರ್ಥ ಬಳಿ ಮಲಪ್ರಭಾ ನದಿಗೆ ಅಣೆಕಟ್ಟೆ ನಿರ್ಮಿಸಿ 5.27 ಲಕ್ಷ ಎಕರೆ ಭೂಮಿಗೆ ನೀರು ಒದಗಿಸುವ ಯೋಜನೆ ಇದಾಗಿತ್ತು. ಯೋಜನೆಯ ಕಾರ್ಯ 1961 ರಲ್ಲಿ ಪ್ರಾರಂಭಗೊಂಡು 1972-73ರ ಸುಮಾರಿಗೆ ಪೂರ್ಣಗೊಂಡಿತು. ಈ ಜಲಾಶಯ 37 ಟಿಎಂಸಿ ನೀರಿನ ಸಂಗ್ರಾಹಕ ಸಾಮಥ್ರ್ಯ ಹೊಂದಿದೆ. ಆದರೆ ಇಲ್ಲಿಯವರೆಗೆ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು 3-4 ಬಾರಿ ಮಾತ್ರ. ಹೀಗಾಗಿ ಘೋಷಿಸಿದ ಕ್ಷೇತ್ರಗಳಿಗೆ ನಿರೀಕ್ಷಿಸಿದ ಪ್ರಮಾಣದಲ್ಲಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಇಷ್ಟಾಗಿ ರೋಣ ತಾಲೂಕಿನ 1.11 ಲಕ್ಷ ಎಕರೆ ಭೂಮಿಗೆ ನೀರು ಒದಗಿಸಲು ಘೋಷಿಸಿದ್ದರೂ ನೀರು ಲಭ್ಯವಾಗಿಲ್ಲ. ಮಲಪ್ರಭಾ ಜಲಾಶಯ(ರೇಣುಕಾಸಾಗರ)ದಲ್ಲಿ ನೀರಿನ ಸಂಗ್ರಹ ಕಡಿಮೆಯಾದ ಕಾರಣ ಮಳೆಯ ಕೊರತೆ ಒಂದು ಕಡೆಯ ಸಮಸ್ಯೆಯಾದರೆ, ನದಿ ನೀರು ಜಲಾಶಯ ತಲುಪುವ ಪೂರ್ವದಲ್ಲೇ ರೈತರಿಂದ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುವುದು ಇನ್ನೊಂದು ಕಡೆಯ ಸಮಸ್ಯೆ. ಇದರೊಂದಿಗೆ ಮಲಪ್ರಭಾ ಜಲಾಯನ ಪ್ರದೇಶ ಕಿರಿದಾಗಿದೆ.

        ನೀರಿನ ಕೊರತೆ ನೀಗಲು- ರೇಣುಕಾಸಾಗರದ ನೀರಿನ ಕೊರತೆಯನ್ನು ನೀಗಲು ಸಿದ್ಧವಾದ ಯೋಜನೆಯೇ ಮಹದಾಯಿ ತಿರುವು ಯೋಜನೆ. ಮಲಪ್ರಭಾ ನದಿಯಂತೆ ಮಹದಾಯಿ ನದಿ ಕೂಡಾ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನಲ್ಲಿ ಉಗಮವಾಗಿದೆ. ಸಹ್ಯಾದ್ರಿ ಬೆಟ್ಟದಲ್ಲಿ ಸಮುದ್ರ ಮಟ್ಟದಿಂದ 914 ಮೀ. ಎತ್ತರದಲ್ಲಿ ಹುಟ್ಟಿದ ಈ ನದಿ ಕರ್ನಾಟಕದಲ್ಲಿ 29 ಕಿ.ಮೀ. ಕ್ರಮಿಸಿ ಗೋವಾ ರಾಜ್ಯದಲ್ಲಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಗೋವಾದಲ್ಲಿ `ಮಾಂಡೋವಿ’ ಎಂದು ಹೆಸರು. ಮಹದಾಯಿ ನದಿಗೆ ಹಲತಾರಾ, ಕಳಸಾ, ಬಂಡೂರಿ, ಕಾರಂಜೋಳ, ಬೊಮ್ಮನರಿ ದೂದ ಸಾಗರ ಹೀಗೆ ಅನೇಕ ಉಪನದಿಗಳಿಂದ ಕೂಡಿದ ನದಿ ಕಣಿವೆ ಆಗಿದೆ. ಇದು ಹೆಚ್ಚು ಮಳೆಬೀಳುವ ಪ್ರದೇಶವಾಗಿದ್ದು ಸರಾಸರಿ 3,134 ಮಿಲಿಮೀಟರ್ ಮಳೆ ಬೀಳುತ್ತದೆ. ಮಹಾದಾಯಿ ನದಿ ಕಣಿವೆಯಿಂದ ಕಾಲುವೆ ಮೂಲಕ ಮಲಪ್ರಭಾ ನದಿಗೆ ನೀರು ವರ್ಗಾಯಿಸುವುದೇ ಈ ಯೋಜನೆಯ ಉದ್ದೇಶ.
ಗೋವಾದ ವಿರೋಧ - 1978ರಲ್ಲಿಯೇ ಈ ಯೋಜನೆ ಸಿದ್ಧವಾದರೂ ಕಾರ್ಯರೂಪಕ್ಕೆ ಬರಲಿಲ್ಲ. ಇದನ್ನೊಂದು ಜಲವಿದ್ಯುತ್ ಯೋಜನೆಯಾಗಿ ಮಾರ್ಪಡಿಸಿ ಮಹಾದಾಯಿ ಜಲಾಯನ ಪ್ರದೇಶದಿಂದ 9 ಟಿಎಂಸಿ ನೀರನ್ನು ಮಲಪ್ರಭಾಗೆ ವರ್ಗಯಿಸಿ ವಿದ್ಯುತ್ ಉತ್ಪಾದನೆಗೂ ಯೋಜಿಸಲಾಗಿತ್ತು. (5-11-1988)1988 ರಲ್ಲಿ ಇದಕ್ಕೆ ಕರ್ನಾಟಕ ಸರ್ಕಾರ ಅನುಮೋದನೆ ನೀಡಿತು. ಆದರೆ ಗೋವಾ ಸರ್ಕಾರದ ತೀವ್ರ ವಿರೋಧದಿಂದ ಯೋಜನೆಗೆ ತಡೆಯಾಯಿತು. ಮಹಾದಾಯಿ 2,032 ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಅದರಲ್ಲಿ ಕರ್ನಾಟಕದ ಪಾಲು 412 ಚ.ಕಿ.ಮೀ. ಕೇಂದ್ರದ ಜಲ ಆಯೋಗದ ಸಮೀಕ್ಷೆಯಂತೆ ನದಿಯಲ್ಲಿ ಒಟ್ಟು 210 ಟಿಎಂಸಿ ನೀರು ಲಭ್ಯವಿದ್ದು ಕರ್ನಾಟಕ 45 ಟಿಎಂಸಿ ನೀರಿನ ಪಾಲಿನ್ನು ಹೊಂದಿದೆ. ಗೋವಾ ಸರ್ಕಾರ ಮಹದಾಯಿ ನದಿಗೆ ಜಲವಿದ್ಯುತ್ ಆಗಲಿ, ಇತರ ಇನ್ನಾವುದೆ ಯೋಜನೆಯನ್ನೂ ರೂಪಿಸಿಲ್ಲ. ಕರ್ನಾಟಕ ತನ್ನ ಪಾಲಿನ ನೀರು ಪಡೆಯಲು ಯೋಜನೆ ರೂಪಿಸಿದರೂ ಅದಕ್ಕೆ ಗೋವಾ ಆತಂಕ ಒಡ್ಡುತ್ತಿದೆ. `ತಾನೂ ತಿನ್ನ ಪರರಿಗೂ ಕೂಡ’ ಎನ್ನುವ ನೀತಿ ಇದೆ ಅಲ್ಲವೆ?
ಕಳಸಾ-ಬಂಡೂರಿ ಯೋಜನೆ :
               ಕಳಸಾ ಹಳ್ಳವು ಕರ್ನಾಟಕದಲ್ಲಿ ಹುಟ್ಟಿ ದಕ್ಷಿಣಾಭಿಮುಖವಾಗಿ ಹರಿದು ಗೋವಾದಲ್ಲಿ ಮಹದಾಯಿ ನದಿಯನ್ನು ಸೇರುತ್ತದೆ. ಕರ್ನಾಟಕದಲ್ಲಿ 24 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದ್ದು ಕೆಲವು ಉಪ ಹಳ್ಳಗಳು ಕರ್ನಾಟಕದಲ್ಲಿ ಹುಟ್ಟಿ ಗೋವಾದಲ್ಲಿ ಕಳಸಾ ಹಳ್ಳವನ್ನು ಸೇರುತ್ತವೆ. ಈ ಹಳ್ಳದಿಂದ 3.56 ಟಿಎಂಸಿ ನೀರನ್ನು ಪಡೆಯುವ ಉದ್ದೇಶದಿಂದ ಯೋಜನೆ ತಯಾರಿಸಲಾಗಿದೆ. ಕಳಸಾ ಯೋಜನೆಗೆ ಎರಡು ಅಣೆಕಟ್ಟೆಗಳನ್ನು ನಿರ್ಮಿಸುವುದು.
(1) ಕಳಸಾ ಹಳ್ಳಕ್ಕೆ ಅಣೆಕಟ್ಟು ಹಾಗೂ 4.8 ಕಿ.ಮಿ. ಉದ್ದದ ಕಾಲುವೆ ನಿರ್ಮಾಣ.
(2) ಹಳತಾರ ಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಅಲ್ಲಿ ಸಂಗ್ರಹವಾದ ನೀರನ್ನು 5.5 ಕಿ.ಮೀ. ಉದ್ದದ ಕಾಲುವೆಯ ಮೂಲಕ ಕಳಸಾ ಅಣೆಕಟ್ಟೆಗೆ ಸಾಗಿಸುವುದು.
           ಇದರ ಒಟ್ಟು ವೆಚ್ಚ ಯೋಜನೆ ರೂಪಿಸಿದಾಗ 44 ಕೋಟಿ ರೂ.ಗಳು. ಆದರೆ ಈಗ ಅದರ ವೆಚ್ಚ 428 ಕೋಟಿ ರೂ.ಗಳು. ಇಲ್ಲಿಯವರೆಗೆ ಮಾಡಿದ ವೆಚ್ಚ 125 ಕೋಟಿ ರೂ.ಗಳು. ಆದರೂ ಯೋಜನೆ ಅಪೂರ್ಣವಾಗಿದೆ.
        ಬಂಡೂರಿ ಮಹದಾಯಿ ನದಿಯ ಇನ್ನೊಂದು ಉಪನದಿ. ಸಿಂಗಾರ ನಾಲಾ ಹಾಗೂ ವಾಟಿ ನಾಲಾಗಳಿಗೆ ಅಣೆಕಟ್ಟು ಕಟ್ಟಿ ಸಂಗ್ರಹವಾದ ನೀರನ್ನು ಬಂಡೂರಿ ಜಲಾಶಯಕ್ಕೆ ವರ್ಗಯಿಸುವುದು ಇಲ್ಲಿ ಸಂಗ್ರಹವಾದ 4 ಟಿಎಂಸಿ ನೀರನ್ನು ಕಾಲುವೆ ಮೂಲಕ ಮಲಪ್ರಭಾ ನದಿಗೆ ವರ್ಗಯಿಸುವುದು. ಬಂಡೂರ ನಾಲಾ ಯೋಜನೆಗೊಳಪಡುವ ಜಲಾನಯನ ಪ್ರದೇಶ 32.25 ಚ.ಕಿ.ಮೀ. ಇದರಿಂದ ಒಟ್ಟು 380 ಹೆಕ್ಟೇರ್ ಭೂಮಿ ಮುಳುಗಡೆ ಆಗಲಿದೆ. ಇದರ ವೆಚ್ಚ ಯೋಜನೆ ತಯಾರಿಸುವಾಗ 49 ಕೋಟಿ ರೂ.ಗಳು. ಈಗ ಅದರ ವೆಚ್ಚ 370 ಕೋಟಿ ರೂ. ಆಗಿದೆ.
        ಈ ಎರಡೂ ಯೋಜನೆಗಳಿಂದ ಒಟ್ಟು 7.56 ಟಿಎಂಸಿ ನೀರು ಲಭ್ಯವಾಗಲಿದೆ. ಇದುವೆ ಕಳಸಾ-ಬಂಡೂರಿ ನಾಲಾ ಯೋಜನೆ. ಯೋಜನೆಯ ಅನುಷ್ಠಾನ ತಡವಾಗುವುದರಿಂದ ನಿರ್ಮಾಣ ವೆಚ್ಚದ ಏರಿಕೆಯಾಗುತ್ತದೆ ಎನ್ನುವುದು ಮೇಲಿನ ಅಂಕಿಅಂಶಗಳಿಂದ ವೇದ್ಯವಾಗುತ್ತದೆ. ಈ ಹಣ ಬಡ ಬೋರೇಗೌಡನ ಹೆಗಲಿಗೆ ಭಾರವಾಗದೆ?
ಯಾಕೆ ಈ ಯೋಜನೆಗಳು?
ಗೋವಾ ಸರ್ಕಾರದ ನಿರಂತರ ವಿರೋಧದಿಂದಾಗಿ ಮಹದಾಯಿ ತಿರುವು ಯೋಜನೆ ಅನುಷ್ಠಾನಗೊಳ್ಳಲಿಲ್ಲ. ಆದರೆ ರೇಣುಕಾಸಾಗರದಲ್ಲಿ ನೀರಿನ ಕೊರತೆ ನೀಗಲು ಮಹದಾಯಿ ನದಿ ಕೊಳ್ಳದಿಂದ ಸ್ವಲ್ಪ ನೀರನ್ನು ವರ್ಗಯಿಸಲೇಬೇಕೆಂಬ ಉದ್ದೇಶದಿಂದ ಕಳಸಾ-ಬಂಡೂರಿ ನಾಲಾ ಯೋಜನೆ ರೂಪಿಸಲಾಯಿತು. ಗೋವಾ ಗಡಿಯಿಂದ ಈಚೆಗೆ ಈ ಎರಡು ನಾಲೆಗಳಿಗೆ ಆಣೆ ಕಟ್ಟಿ ನಿರ್ಮಿಸಿ ನೀರು ಪಡೆಯುವ ಯೋಜನೆ ಇದಾಗಿದೆ. ಇದಕ್ಕೂ ಗೋವಾದ ತಕರಾರು ಇದೆ.
ಒಂದು ಹಂತದಲ್ಲಿ ಗೋವಾ ಮತ್ತು ಕರ್ನಾಟಕ ಸರ್ಕಾರಗಳ ನಡುವೆ ಜಲವಿದ್ಯುತ್ ಯೋಜನೆಗೆ ಒಪ್ಪಂದವಾಗಿತ್ತು. ದಿ. 10-9-1996 ರಂದು ಗೋವಾ ಸರ್ಕಾರದ ನೀರಾವರಿ ಮಂತ್ರಿ ಹಾಗೂ ಕರ್ನಾಟಕದ ಸರ್ಕಾರದ ನೀರಾವರಿ ಸಚಿವರ ಒಂದು ಸಭೆ ನಡೆದು ಜಲವಿದ್ಯುತ್ ಯೋಜನೆ ಮತ್ತು ಕಳಸಾ-ಹರತಾರ ನದಿಗಳಿಂದ ನೀರು ವರ್ಗವಣೆ ಕುರಿತು ಚಚರ್ೆಯಾಗಿ ಕಳಸಾ ಯೋಜನೆಯಿಂದ 1.5 ಟಿಎಂಸಿ ನೀರನ್ನು ಮಾಂಡೋವಿ ಯೋಜನೆಗೆ ಹರಿಸುವ ಕರಾರಿನೊಂದಿಗೆ ಈ ಯೋಜನೆಗೆ ಒಪ್ಪಂದವಾಯಿತು. ಆದರೆ 5-3-1997 ರಂದು ಗೋವಾ ಸರ್ಕಾರ ನೀರು ವರ್ಗಯಿಸುವುದಕ್ಕೆ ಒಪ್ಪಿಗೆ ಆಗಿಲ್ಲ ಎಂದು ತಿಳಿಸಿತು.
ಗೋವಾದ ವಾದವೇನು?
(1) ಮಹದಾಯಿ ನೀರಿನ ಕೊರತೆಯನ್ನು ಅನುಭವಿಸುತ್ತಿರುವ ಒಂದು ಕಣಿವೆ ಪ್ರದೇಶವಾಗಿದೆ. ಆದ್ದರಿಂದ ನೀರಿನ ಕೊರತೆ ಇರುವ ಕಣಿವೆಯಿಂದ ನೀರನ್ನು ಬೇರೆಡೆಗೆ ವರ್ಗಯಿಸುವುದು ಸೂಕ್ತವಲ್ಲ.
(2) ಮಹದಾಯಿ ನದಿ ನೀರನ್ನು ಬೇರೆಡೆಗೆ ವರ್ಗಯಿಸಿದರೆ ಪಶ್ಚಿಮ ಘಟ್ಟದ ಪರಿಸರದ ಮೇಲೆ ತೀವ್ರ ಪರಿಣಾಮ ಉಂಟಾಗುವುದು.

           ಆದರೆ ಅಧ್ಯಯನಗಳು ಮತ್ತು ಸಮೀಕ್ಷೆಗಳು ಗೋವಾದ ವಾದದಲ್ಲಿರುವ ಪೊಳ್ಳುತನವನ್ನು ಎತ್ತಿತೋರಿಸಿವೆ. ಕೇಂದ್ರ ಸರ್ಕಾರದ ಸಲಹೆಯಂತೆ ಕರ್ನಾಟಕ ಸರ್ಕಾರ ಮಾಡಿಕೊಂಡ ಮನವಿ ಮೇರೆಗೆ ಮಧ್ಯಪ್ರವೇಶದ ನಾಗಪೂರದಲ್ಲಿರುವ `ನೀರಿ’ ಅಧ್ಯಯನ ನಡೆಸಿ ಮಹದಾಯಿ ತಿರುವು ಯೋಜನೆಯಿಂದ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲವೆಂದೂ ಮತ್ತು ಮಹದಾಯಿ ಕಣಿವೆ ನೀರಿನ ಕೊರತೆ ಇರುವ ಪ್ರದೇಶ ಅಲ್ಲವೇ ಅಲ್ಲವೆಂದೂ ತಿಳಿಸಿತು. ಅದರಂತೆ ರಾಷ್ಟ್ರೀಯ ನೀರಿನ ಅಭಿವೃದ್ಧಿ ಸಂಸ್ಥೆ ಹಾಗೂ ಕೇಂದ್ರ ಜಲ ಆಯೋಗಗಳು ಕೂಡಾ ಅಧ್ಯಯನ ನಡೆಸಿ ಗೋವಾದ ವಾದದಲ್ಲಿ ಹುರುಳಿಲ್ಲ ಎಂಬುದನ್ನು ತಿಳಿಸಿವೆ. ಆದರೆ ಗೋವಾ ಸರಕಾರ ಮಾತ್ರ ಈ ಯಾವ ವರದಿಯನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ ಅಷ್ಟೆ.
ಕಳಸಾ-ಬಂಡೂರಿ ನಾಲಾ ಯೋಜನೆಗೆ ಕೇಂದ್ರದ ಒಪ್ಪಿಗೆ ಹಾಗೂ ತಡೆ:
    ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಹಾಗೂ ಇತರ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರನ್ನು ಪೂರೈಸಲು ಈ ಯೋಜನೆ ಅಗತ್ಯ ಎಂಬುದನ್ನು ಕರ್ನಾಟಕ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ ದಿ. 30-4-2001 ರಂದು ಯೋಜನೆಗೆ ತನ್ನ ತಾತ್ವಿಕ ಒಪ್ಪಿಗೆ ನೀಡಿತು. ಅದರೊಂದಿಗೆ ಕೆಲವು ಕರಾರುಗಳನ್ನು ವಿಧಿಸಿತು.
(1) 7.56 ಟಿಎಂಸಿ ನೀರನ್ನು ಕೇವಲ ಮಾನ್ಸೂನ್ ಮಳೆಗಾಲದಲ್ಲಿ ಮಾತ್ರ ವರ್ಗಯಿಸುವುದು.
(2) ನೀರನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ಕುಡಿಯಲು ಮಾತ್ರ ಬಳಸುವುದು.
(3) ಅಂತರರಾಜ್ಯ ನೀರಿನ ಹಂಚಿಕೆಯಾದಾಗ ಕರ್ನಾಟಕದ ಪಾಲಿನಲ್ಲಿ ಈ 7.56 ಟಿಎಂಸಿ ನೀರನ್ನು ಹೊಂದಾಣಿಕೆ ಮಾಡಿಕೊಳ್ಳುವುದು.
(4) ಕರ್ನಾಟಕವು ಕೇಂದ್ರ ಜಲ ಆಯೋಗಕ್ಕೆ ಈ ಯೋಜನೆಗಳ ಎಲ್ಲ ತಾಂತ್ರಿಕ ಮಾಹಿತಿ ಒದಗಿಸುವುದು. ಕರ್ನಾಟಕವು ಭವಿಷ್ಯದಲ್ಲಿ ಹೆಚ್ಚಿನ ನೀರನ್ನು ವರ್ಗಯಿಸುವುದಿಲ್ಲ ಎಂಬುದನ್ನು ನೀಲಿ ನಕ್ಷೆಗಳಿಂದ ಖಾತ್ರಿ ಮಾಡಿಕೊಳ್ಳುವುದು.
(5) ಕೇಂದ್ರ ಜಲ ಆಯೋಗ ತಂತ್ರಜ್ಞರು, ಅಧಿಕಾರಿಗಳ ಯೋಜನಾ ಸ್ಥಳದ ಪರಿವೀಕ್ಷಣೆಗೆ ಮತ್ತು
(6) ಗೋವಾ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳ ತಂಡ ಭೇಟಿ ಮಾಡಬಯಸಿದರೆ ಅವರ ಪರಿವೀಕ್ಷಣೆಗೆ ಅನುಮತಿಸುವುದು ಹಾಗೂ ಅನುಕೂಲ ಮಾಡಿಕೊಡುವುದು.
(7) ಉದ್ದೇಶಿತ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕವು ಅಂಗೀಕೃತ ವಿಧಾನಗಳನ್ನು ಬಳಸುವುದು.
ಕೇಂದ್ರ ಜಲ ಆಯೋಗ ನೀಡಿದ ತಾತ್ವಿಕ ಒಪ್ಪಿಗೆ ಕರ್ನಾಟಕದ ಜನತೆಯನ್ನು ಬಹುಕಾಲ ಸಂತಸ ಪಡಿಸಲಿಲ್ಲ. ಗೋವಾ ಸರ್ಕಾರದ ಹಠಮಾರಿತನ, ವಿರೋಧ ಹಾಗೂ ಆಕ್ಷೇಪಣೆಗಳಿಗೆ ಒಪ್ಪಿಗೆ ನೀಡಿದ 5 ತಿಂಗಳಲ್ಲೇ ಕೇಂದ್ರ ಅಸ್ತು ಎಂದಿತು. ಅಂದರೆ ದಿ. 19-9-2002 ರಂದು ಕೇಂದ್ರ ಜಲ ಆಯೋಗ ತಾತ್ವಿಕ ಒಪ್ಪಿಗೆಗೆ ತಡೆಯಾಜ್ಞೆ ನೀಡಿತು.
ಕರ್ನಾಟಕದ ಮನವಿ-ಪತ್ರ
ಕರ್ನಾಟಕದಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಕಾಂಗ್ರೆಸ್ ಸರ್ಕಾರ ಗೋವಾದ ಮುಖ್ಯಮಂತ್ರಿಗೆ ಪತ್ರಬರೆದು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಅವಶ್ಯಕತೆಯನ್ನು ಮನವರಿಕೆ ಮಾಡಲು ಪ್ರಯತ್ನಿಸಿದರು. ಜಲ ಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ ತಡೆಯಾಜ್ಞೆ ತೆರವುಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದರು. ಅದು ಫಲ ನೀಡಲಿಲ್ಲ. ಕೇಂದ್ರದ ಜಲಸಂಪನ್ಮೂಲ ಸಚಿವರಾಗಿದ್ದ ಅಜರ್ುನ ತರಣ ಸೇಥಿ ಅವರು ದಿ. 20-12-2002 ರಂದು ಮಹದಾಯಿ ನೀರಿನ ವಿವಾದ ಕುರಿತು ಚಚರ್ಿಸಲು ದೆಹಲಿಯಲ್ಲಿ ಅಂತರ ರಾಜ್ಯ ಸಭೆ ಕರೆದರು. ಅಂತರರಾಜ್ಯ ನದಿ ನೀರು ಹಂಚಿಕೆ ವಿವಾದ ಕಾಯ್ದೆ 1956ರ 3ನೇ ವಿಧಿ ಪ್ರಕಾರ ಈ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ಕರ್ನಾಟಕದ ಜಲಸಂಪನ್ಮೂಲ ಸಚಿವರಾಗಿದ್ದ ಎಚ್.ಕೆ. ಪಾಟೀಲ, ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕ್ಕರ ಜಲಸಂಪನ್ಮೂಲ ಸಚಿವ ಫಿಲಿಫ್ ರೋಡ್ರಿಗ್ಸ್ ಭಾಗವಹಿಸಿದ್ದರು. ಇವರಲ್ಲದೆ ಕೇಂದ್ರ ಹಾಗೂ ಎರಡೂ ರಾಜ್ಯಗಳ ಅನೇಕ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಗೋವಾದ ಮುಖ್ಯಮಂತ್ರಿ ಅದೇ ಮೊಂಡುವಾದ ಮುಂದಿಟ್ಟರು. ಮಹದಾಯಿ ಕಣಿವೆಯಲ್ಲಿ ನೀರಿನ ಲಭ್ಯತೆಯ ನಿಖರವಾದ ಅಂದಾಜು ಇಲ್ಲದಿರುವುದು, ಕಣಿವೆ ನೀರು ಕಣಿವೆ ಒಳಗೆ ಬಳಕೆಯಾದರೆ ಅದರ ಮರುಬಳಕೆ ಸಾಧ್ಯವೆಂಬುದು, ಅಧ್ಯಯನ ವರದಿಗಳ ಬಗೆಗೆ ಅವಿಶ್ವಾಸ, ಪರಿಸರದ ಮೇಲಾಗುವ ದುಷ್ಪರಿಣಾಮ ಈ ಅಂಶಗಳನ್ನು ಒಳಗೊಂಡು ಅವರು ವಾದ ಮಂಡಿಸಿದರು.
ಕರ್ನಾಟಕದ ವಾದ
        ಕರ್ನಾಟಕದ ಜಲಸಂಪನ್ಮೂಲ ಸಚಿವರು ವಸ್ತುನಿಷ್ಠವಾದ ವರದಿ ಮಂಡಿಸಿದರು. ನದಿ ಕಣಿವೆಯಿಂದ ನೀರಿನ ವರ್ಗವಣೆ ಮಾಡಿದರೆ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ ಎಂಬ `ನೀರಿ’ ವರದಿ ಪ್ರಸ್ತಾಪ ಮಾಡಿದರು. ಅದು ಅಲ್ಲದೆ ಈ ಹಿಂದೆ ಇಂಥ ವಿವಾದಗಳಲ್ಲಿ ತಾತ್ವಿಕ ಒಪ್ಪಿಗೆ ನೀಡಿದ ಅನೇಕ ಉದಾಹರಣೆಗಳನ್ನು ನೀಡಿದರು.
ಉದಾ : (1) ಕೇಂದ್ರ ಜಲಸಂಪನ್ಮೂಲ ಮಂತ್ರಾಲಯ 1997 ರಲ್ಲಿ ಬೆಂಗಳೂರು ನಗರಕ್ಕೆ 9.46 ಟಿಎಂಸಿ ನೀರಿನ ವರ್ಗವಣೆಗೆ ಅನುಮತಿಸಿದ್ದು.
(2) 1998 ರಲ್ಲಿ ಹೊಗೆನಕಲ್(ತಮಿಳುನಾಡು)ಗೆ ಕುಡಿಯುವ ನೀರಿಗಾಗಿ ಕಾವೇರಿ ನದಿಯಿಂದ 1.4 ಟಿಎಂಸಿ ನೀರು ವರ್ಗವಣೆಗೆ ಅನುಮತಿಸಿದ್ದು ಮುಂತಾದ ಅನೇಕ ಉದಾಹರಣೆಗಳನ್ನು ನೀಡಿದರು.
        ಕರ್ನಾಟಕದ ಬೇಡಿಕೆ ಎಷ್ಟೇ ನೈಜವಾಗಿದ್ದರೂ ಅದನ್ನು ಒಪ್ಪದ ಮನಸ್ಸುಗಳು ಅಲ್ಲಿದ್ದವು. ತನ್ನ ಮೊಂಡುವಾದವೆ ಗೆಲ್ಲಬೇಕೆಂಬ ಗೋವಾ ಸರ್ಕಾರ, ಇಚ್ಛಾಶಕ್ತಿಯನ್ನು ಮೆರೆಯದ, ನಿಣರ್ಾಯಕ ಪಾತ್ರವಹಿಸದ ಕೇಂದ್ರ ಜಲಸಂಪನ್ಮೂಲ ಮಂತ್ರಾಲಯ.. ಇವುಗಳ ಒಟ್ಟು ಫಲಶೃತಿಯಾಗಿ ಸಭೆ ನಿರರ್ಥಕತೆವಾದಂತಾಯಿತು.

ಜನ ಚಳುವಳಿ
        ಈ ಸಮಯದಲ್ಲಿ ಕಳಸ-ಬಂಡೂರಿ ನಾಲೆಗಳ ಜೋಡಣೆಗೆ ಒತ್ತಾಯಿಸಿ ಕರ್ನಾಟಕದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಚಳುವಳಿಗಳು ನಡೆದವು. ಕಳಸಾ -ಬಂಡೂರಿ ನಾಲಾ ಜೋಡಣಾ ಹೋರಾಟ ಹಾಗೂ ರೈತ ನಾಗರಿಕ ಹಿತರಕ್ಷಣಾ, ಕೇಂದ್ರ ಸಮಿತಿ ಹೋರಾಟಕ್ಕೆ ನೇತೃತ್ವ ನೀಡಿತು. ಚಳುವಳಿಯ ಪ್ರಖರತೆ ಎಷ್ಟಿತ್ತೆಂದರೆ ಇನ್ನೊಂದು ನರಗುಂದ ರೈತ ಬಂಡಾಯದ ಎಲ್ಲ ಲಕ್ಷಣಗಳು ತೋರಿದವು. ಅದೇ ವೇಳೆಯಲ್ಲಿ ಕರ್ನಾಟಕದ ಬಿಜೆಪಿ ಮುಖಂಡರು “ಕಳಸಾ-ಬಂಡೂರಿ ನಾಲಾ ಜೋಡಣೆಗೆ ಎಸ್.ಎಂ. ಕೃಷ್ಣಾ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಬೊಬ್ಬೆ ಹಾಕಿ ತಿರುಗಾಡಿದರು. ಆದರೆ 2004 ರಲ್ಲಿ ಸಾರ್ವತ್ರಿಕ ಚುನಾವಣೆಗಳು ಹತ್ತಿರ ಬಂದಂತೆ ಹೋರಾಟದ ತೀವ್ರತೆ ಕಡಿಮೆ ಆಗಿ, ಹೋರಾಟ ಸಮಿತಿಯ ಮುಖಂಡರೊಬ್ಬರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ,ಅದು ದಕ್ಕದಾದಾಗ ಜೆಡಿ(ಎಸ್) ಪಕ್ಷದ ಅರ್ಭಥಿಯಾಗಿ ವಿಧಾನ ಸಭೆಗೆ ಸ್ವರ್ಧಿಸಿದರು. ಹೋರಾಟ ತನ್ನ ಬಿಸಿ ಕಳೆದುಕೊಂಡಿತು.ಚುನಾವಣೆ ನಂತರ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿ(ಎಸ್) ಸಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆಗ ಬಿಜೆಪಿ ಕಳಸಾ ಬಂಡೂರಿ ಹೋರಾಟವನ್ನು ಕೈಗೆತ್ತಿಕೊಂಡಿತು. ಬಿಜೆಪಿ ಮತ್ತು ಜೆಡಿ ಜಂಟಿಯಾಗಿ ನವಿಲು ತೀರ್ಥದಲ್ಲಿ ಬೃಹತ್ ಸಮಾವೇಶ,ನಂತರ ತಾಲೂಕ್ ಸ್ಥಳಗಳಲ್ಲಿ ಧರಣಿ ನಡೆಸಲಾಯಿತು.ಸಂಸದರ ಒಂದು ನಿಯೋಗ ಕೇಂದ್ರಕ್ಕೆ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ವಿನಂತಿಸಿಕೊಂಡಿತು.(ಮೊದಲು ಕೇಂದ್ರದ ಮಧ್ಯಪ್ರವೇಶ ಬೇಕಾಗಿಲ್ಲವೆಂದು ವಾದಿಸುತ್ತಿದ್ದ ಜನ ಇವರು)ರಾಜ್ಯದಲ್ಲಿ ಜೆಡಿ(ಎಸ್)-ಬಿಜೆಪಿ ಸಮಿಶ್ರ ಸರ್ಕಾರ ರಚನೆಯಾಗುವುದರೊಂದಿಗೆ ಕಳಸಾ ಬಂಡೂರಿ ಹೋರಾಟ ಅನಾಥವಾಯಿತು.
ನ್ಯಾಯಾಧಿಕರಣ ನೇಮಕ :
        ಗೋವಾ ಸರ್ಕಾರ ಕೇಂದ್ರ ಜಲಸಂಪನ್ಮೂಲ ಸಚಿವರಿಗೆ ದಿ. 9-7-2002 ರಂದು ಪತ್ರ ಬರೆದು ನ್ಯಾಯಾಧಿಕರಣ ರಚಿಸುವಂತೆ ಕೇಳಿಕೊಂಡಿತು. ಅದಲ್ಲದೆ 2006ರಲ್ಲಿ ಸರ್ವೋಚ್ಛ ನ್ಯಾಯಾಲಯದಲ್ಲಿ ದೂರು ದಾಖಲಿಸಿ ಕಳಸಾ ಬಂಡೂರಿ ಕಾಮಗಾರಿ ತಡೆಯುವಂತೆ ಹಾಗೂ ನ್ಯಾಯಾಧಿಕರಣ ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕೆಂದು ವಿನಂತಿಸಿತು. ನವೆಂಬರ್ 2006ರಲ್ಲಿ ಕೇಂದ್ರ ಮಂತ್ರಾಲಯ ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿ “ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಲು ಅಸಾಧ್ಯ ಎಂಬ ಅಭಿಪ್ರಾಯ ಈ ಮಂತ್ರಾಲಯದ್ದಾಗಿದೆ. ಮುಂದಿನ ಕ್ರಮವನ್ನು 1956ರ ಅಂತರರಾಜ್ಯ ಜಲವಿವಾದ ಕಾಯ್ದೆ ಮೇರೆಗೆ ಕ್ರಮ ಜರುಗಿಸಲಾಗುವುದು.” ಎಂದು ತಿಳಿಸಿತು. ಕೇಂದ್ರ ಸರ್ಕಾರ ನವೆಂಬರ್ 16, 2010 ರಂದು `ಮಹದಾಯಿ ಜಲವಿವಾದ ನ್ಯಾಯಾಧಿಕರಣ’ ರಚಿಸಿತು. ಹೀಗಾಗಿ ಕಳಸಾ ಬಂಡೂರಿ ನಾಲಾ ಯೋಜನೆ ಈಗ ನ್ಯಾಯಾಧಿಕರಣದ ಅಂಗಳದಲ್ಲಿದೆ.
 ಕೆಲವು ಪ್ರಶ್ನೆಗಳು :
        ರಾಜಕಾರಣವನ್ನು ಹೊರಗಿಟ್ಟು, ವಿಶಾಲ ದೃಷ್ಠಿಯಿಂದ ಸಮಸ್ಯೆಯ ಗಂಭೀರತೆಯನ್ನು ಮನಗಂಡು, ಪರಿಹಾರ ಕಂಡುಕೊಳ್ಳಲು ಸಾಧ್ಯವಿರಲಿಲ್ಲವೆ? ಈ ಪ್ರಶ್ನೆ ಆಯಾ ಸರ್ಕಾರಗಳ ಕೆಲವು ವರ್ತನೆಗಳನ್ನು ಕೆದಕುವಂತೆ ಮಾಡುತ್ತದೆ. ಈಗಾಗಲೇ ಪ್ರಸ್ತಾಪಿಸಿದಂತೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವಿದ್ದಾಗ ಗೋವಾದ ಬಿಜೆಪಿ ಸರ್ಕಾರದ ಮೇಲೆ ಒತ್ತಡ ತಂದು, ಮನವೊಲಿಸಿ ನೀರು ವರ್ಗಯಿಸಲು ಅನುಮತಿ ಸಿಗುವಂತೆ ಮಾಡುವುದಾಗುವಂತಿರಲಿಲ್ಲವೆ? ಎರಡು ನಾಲೆಗಳ ಜೋಡಣೆಯಿಂದ ಮಹದಾಯಿ ಕಣಿವೆಯಲ್ಲಿ ನೀರಿನ ಕೊರತೆಯಂತೂ ಆಗುತ್ತಿರಲಿಲ್ಲ. ಕರ್ನಾಟಕದ ಜನತೆ ಕೇಳುತ್ತಿರುವುದು ಕೇವಲ ನೀರಿನ ಹಂಚಿಕೆಯ ಪ್ರಶ್ನೆ ಅಲ್ಲ. ತಮ್ಮ ಹಕ್ಕಿನ ಪ್ರಶ್ನೆ.

        ಎಸ್.ಎಂ. ಕೃಷ್ಣ ಸರ್ಕಾರ ನದಿ ಜೋಡಣೆಗೆ ಮುತುವಜರ್ಿ ವಹಿಸಿತ್ತು. ನಂತರ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ 19-9-2002 ರಂದು ನೀಡಿದ ತಾತ್ವಿಕ ಒಪ್ಪಿಗೆಯ ತಡೆಯಾಜ್ಞೆಯನ್ನು ತೆರವುಗೊಳಿಸಲು ಮಾಡಿದ ಪ್ರಯತ್ನಗಳೇನು? ಪ್ರಯತ್ನಗಳು ನಡೆದಿದ್ದಲ್ಲಿ ಫಲಶೃತಿ ಏನು? ಕರ್ನಾಟಕದ ಜನತೆ ತಿಳಿಯಬೇಡವೇ? ಗೋವಾದ ವಿಧಾನ ಸಭೆಗೆ ಚುನಾವಣೆ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಚುನಾವಣಾ ಭಾಷಣ ಮಾಡುತ್ತಾ ಕಳಸಾ ಬಂಡೂರಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಭರವಸೆ ನೀಡಿದರು. ಅದು ಕೇವಲ ಮತ ಸೆಳೆಯುವ ಗಿಮಿಕ್ಕಾಗಿತ್ತೆ ಅಥವಾ ಅವರ ಮನದಾಳದಲ್ಲಿ ಕರ್ನಾಟಕಕ್ಕೆ ಪೆಟ್ಟು ಕೊಡುವುದೇ ಆಗಿತ್ತಾ? ಜನ ಇಂಥ ಕೆಟ್ಟ ರಾಜಕೀಯದಿಂದ ಬೇಸತ್ತಿದ್ದಾರೆ. ಈ ಎರಡೂ ರಾಜಕೀಯ ವೇದಿಕೆಗಳ ಧೋರಣೆ ಕಾರ್ಯವೈಖರಿ ಒಂದೇ ಆಗಿರುವಾಗ ಜನರು ನೀರಿನ ಪ್ರಶ್ನೆಯ ಇತ್ಯರ್ಥಕ್ಕಾಗಿ ಬದಲಿ ಹೋರಾಟದ ಪಥ ತುಳಿಯುವುದೇ ಲೇಸು.